BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್
  • ಅಪ್ರತಿಮ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ ಆಚರಣೆ
  • ನಾಡಕಚೇರಿಗಳಲ್ಲಿ ಕಂದಾಯ ವಿಷಯ ಕುರಿತ ಅರ್ಜಿಗಳ ಪರಿಹಾರಕ್ಕೆ ವಿಶೇಷ ಕ್ರಮ: ಡಿಸಿ
  • ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಪ್ರತಿಭಟನೆ
  • ತುಮಕೂರು-ಅರಸೀಕೆರೆ ರೈಲು ಪ್ರಯಾಣಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಆದ್ಯತೆ
  • ಮುಂಬರುವ ವಿಧಾನಸಭೆ, ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಗೆಲ್ಲಬೇಕು
  • ಮೇವು ಬ್ಯಾಂಕ್, ಆಧಾರ್ ಕೇಂದ್ರ ಸ್ಥಾಪನೆಗೆ ಮನವಿ
  • ತುಮಕೂರು ದಸರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ಪೂರ್ವಸಿದ್ಧತೆಗೆ ಜಿಲ್ಲಾಧಿಕಾರಿ ಚಾಲನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಇದು ಸಂವಿಧಾನದತ್ತವಾಗಿ ಪಡೆವ ಹಕ್ಕನ್ನು ಕಸಿಯುವ ಬಿಜೆಪಿಯ ಕುತಂತ್ರ
news

ಇದು ಸಂವಿಧಾನದತ್ತವಾಗಿ ಪಡೆವ ಹಕ್ಕನ್ನು ಕಸಿಯುವ ಬಿಜೆಪಿಯ ಕುತಂತ್ರ

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಜಾಗೃತಿ ಅಭಿಯಾನ
By News Desk BenkiyabaleUpdated:June 29, 2026 5:30 pm

ತುಮಕೂರು: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್.ಐ.ಆರ್) ಎಂಬುದು ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಸಂವಿಧಾನದತ್ತವಾಗಿ ಪಡೆದಿರುವ ಮತದಾನದ ಹಕ್ಕನ್ನು ಕಸಿಯುವ ಬಿಜೆಪಿಯ ಕುತಂತ್ರವಾಗಿದ್ದು, ಇದನ್ನು ಎಲ್ಲರೂ ಒಗ್ಗೂಡಿ, ಹಿಮ್ಮೆಟ್ಟಿಸುವ ಕೆಲಸ ಆಗಬೇಕಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ತಿಳಿಸಿದ್ದಾರೆ.
ನಗರದ ಮದರ್ ಷಾ ಷಾದಿ ಮಹಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್‌ನ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬ್ಲಾಕ್ ೧ ಮತ್ತು ೨ರ ಬಿ.ಎಲ್.ಎ-೨ ಗಳಿಗೆ ಹಮ್ಮಿಕೊಂಡಿದ್ದ ಎಸ್.ಐ.ಆರ್. ಕುರಿತ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಇದೇ ಜೂನ್ ೩೦ರಿಂದ ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ಬಿಲ್.ಎಲ್.ಓಗಳು ಪ್ರತಿ ಮನೆ ಮನೆಗೆ ಬಂದು ಮತದಾರರ ನೊಂದಣಿ ಅರ್ಜಿ ಭರ್ತಿ ಮಾಡಿಸುವ ಕೆಲಸ ಮಾಡಲಿದ್ದು, ಈ ವೇಳೆ ಪಕ್ಷದ ವತಿಯಿಂದ ನೇಮಕಗೊಂಡಿರುವ ಬಿಎಲ್‌ಎ-೦೨ಗಳು ಹೆಚ್ಚಿನ ನಿಗಾವಹಿಸಿ, ಯಾವೊಬ್ಬ ಅರ್ಹ ಮತದಾರನು ಮತದಾರರ ಪಟ್ಟಿಯಿಂದ ಕೈ ಬಿಡದಂತೆ ನೋಡಿಕೊಳ್ಳಬೇಕು. ಇದು ನಿಮಗೆ ಪಕ್ಷ ವಹಿಸಿರುವ ಗುರುತರ ಜವಾಬ್ದಾರಿಯಾಗಿದೆ ಎಂದರು.
ಮುAದಿನ ಐವತ್ತು ವರ್ಷಗಳ ಕಾಲ ಈ ದೇಶದಲ್ಲಿ ನಾವೇ ಅಧಿಕಾರದಲ್ಲಿ ಇರಬೇಕೆಂಬ ದುರಾಸೆಯಿಂದ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಕ ಮತದಾರರಾದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಜಾತ್ಯಾತೀತರು, ಪ್ರಜಾಪ್ರಭುತ್ವವಾದಿಗಳ ಮತಗಳನ್ನು ಮತದಾರರ ಪಟ್ಟಿಯಿಂದಲೇ ಕೈ ಬಿಡುವ ಕೆಲಸವನ್ನು ಸಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಮೂಲಕವೇ ಮಾಡಿಸಲು ಹೊರಟಿದೆ. ಇದುವರೆಗೆ ಸುಮಾರು ೧೩ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್.ಐ.ಆರ್. ಪ್ರಕ್ರಿಯೆಯ ಮೂಲಕವೇ ಸುಮಾರು ೬.೫೦ ಕೋಟಿ ಮತದಾರರನ್ನು ಕೈ ಬಿಟ್ಟು, ಗೆಲುವುದು ಕಷ್ಟ ಅನ್ನುವಂತಹ ಪರಿಸ್ಥಿತಿ ಇದ್ದ ಬಿಹಾರ, ಪಶ್ಚಿಮ ಬಂಗಾಳಗಳಲ್ಲಿ ಗೆಲುವು ಸಾಧಿಸಿದೆ. ಅವರ ಮುಂದಿನ ಟಾರ್ಗೆಟ್ ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕವಾಗಿದೆ. ಹಾಗಾಗಿ ಕನ್ನಡಿಗರು ಎಚ್ಚೆತ್ತುಕೊಂಡು, ಈ ಷಡ್ಯಂತ್ರದ ವಿರುದ್ದ ಪ್ರತಿ ತಂತ್ರ ರೂಪಿಸಬೇಕಾಗಿದೆ ಎಂದು ಇಕ್ಬಾಲ್ ಅಹಮದ್ ನುಡಿದರು.
ಎಸ್.ಐ.ಆರ್ ಮೂಲಕ ಒಂದು ಸಲ ಮತದಾರರ ಪಟ್ಟಿಯಿಂದ ಹೆಸರು ಕೈ ಬಿಟ್ಟರೆ, ಸÀರ್ಕಾರದ ಪ್ರಕಾರ ಎರಡನೇ ದರ್ಜೆ ನಾಗರಿಕರರಾಗುವ ಕಾರಣ, ಸರ್ಕಾರದ ಯಾವುದೇ ಸವಲತ್ತುಗಳಿಗೂ ಅರ್ಹರಿರುವುದಿಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹ ಕೈ ತಪ್ಪಲಿವೆ.ಹಾಗಾಗಿ ಪ್ರತಿ ಪ್ರಜೆಯೂ ಎಸ್.ಐ.ಆರ್. ಬಗ್ಗೆ ಜಾಗೃತಿ ವಹಿಸಬೇಕಾಗಿದೆ. ಹಾಗೆಯೇ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಿಎಲ್‌ಓ-೦೨ಗಳು ಸಹ ಇದನ್ನು ಗಂಭೀರವಾಗಿ ಪರಿಗಣಿಸಿ, ಕೆಲಸ ಮಾಡಬೇಕಾಗಿದೆ. ಮುಂದೆ ಅಂತಹವರಿಗೆ ಪಕ್ಷ ಹಾಗೂ ಸರ್ಕಾರದಲ್ಲಿ ಸಹ ಸ್ಥಾನಮಾನಗಳಿಗೆ ಆರ್ಹತೆ ದೊರೆಯಲಿದೆ ಎಂದು ಇಕ್ಬಾಲ್ ಅಹಮದ್ ನುಡಿದರು.
ಕೆಪಿಸಿಸಿಯ ಎಸ್.ಐ.ಆರ್. ಪ್ರಕ್ರಿಯೆ ಉಸ್ತುವಾರಿ ಜಿ.ಮಂಜುನಾಥ್ ಮಾತನಾಡಿ, ಐಟಿ, ಇಡಿ, ಸಿಬಿಐ ಮೂಲಕ ಅಧಿಕಾರ ಹಿಡಿಯುವುದು ಕಷ್ಟವೆಂದು ಕಂಡ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಎಸ್.ಐ.ಆರ್ ಮೂಲಕ ಅಧಿಕಾರದಲ್ಲಿ ಮುಂದುವರೆಯಲು ಪ್ರಯತ್ನಿಸುತ್ತಿದೆ. ಅವರ ಗುರಿ ಕಾಂಗ್ರೆಸ್ ಪರವಾಗಿರುವ ಮತದಾರರನ್ನು ಪಟ್ಟಿಯಿಂದ ಕೈಬಿಡುವುದೇ ಆಗಿದೆ. ಇದಕ್ಕೆ ತಾಜಾ ಉದಾಹರಣೆ ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶ. ಕರ್ನಾಟಕದಲ್ಲಿಯೂ ಸುಮಾರು ೯೫ ಕ್ಷೇತ್ರಗಳನ್ನು ಎಸ್.ಐ.ಆರ್ ಮೂಲಕ ತಮ್ಮ ಪಕ್ಷದ ಪರ ಮಾಡಿಕೊಳ್ಳಲು ತಯಾರಿ ಮಾಡಿಕೊಂಡಿದೆ. ಒಂದು ವೇಳೆ ಬಿಜೆಪಿಯ ಹುನ್ನಾರ ಕೈಗೂಡಿದರೆ ಮುಂದಿನ ೫೦ ವರ್ಷಗಳ ಕಾಲ ಬೇರೆ ಪಕ್ಷಗಳಿಗೆ ಯಾವ ಅಧಿಕಾರವೂ ಇರುವುದಿಲ್ಲ. ಹಾಗಾಗಿ ಕೇರಳ ರೀತಿಯಲ್ಲಿ ನಾವುಗಳು ಸಹ ಎಚ್ಚೆತ್ತು ಕೆಲಸ ನಿರ್ವಹಿಸಬೇಕಾಗಿದೆ ಎಂದರು.
ಜಾಗೃತಕ ರ್ನಾಟಕದ ಆದಂ ಖಾನ್ ಮಾತನಾಡಿ, ಶುದ್ದ ಮತದಾರರ ಪಟ್ಟಿ ಬೇಕೆಂಬುದು ನಮ್ಮೆಲ್ಲರ ಆಶಯ. ಆದರೆ ಅದರ ನೆಪದಲ್ಲಿ ಕೆಲವರನ್ನು ಅಧಿಕಾರದಿಂದ ದೂರ ಇಡುವ ಹುನ್ನಾರವನ್ನು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ರೂಪಿಸಿವೆ. ಅದಕ್ಕಾಗಿ ಚುನಾವಣಾ ಆಯೋಗಕ್ಕೆ ಸುಫಾರಿ ನೀಡಿದೆ.ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಿಂದ ಹೊರ ಉಳಿಯದಂತೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು. ಬಿಎಲ್‌ಓ ೨ಗಳ ಪಾತ್ರ ಕುರಿತಂತೆ ಸವಿವರ ವಿವರಣೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ, ಹಿರಿಯರಾದ ರೇವಣ್ಣ ಸಿದ್ದಯ್ಯ, ನಜಾಯ್, ಅಸ್ಲಾಂಪಾಷ, ನಾಗಮಣಿ ಸೇರಿದಂತೆ ಹಲವರು ಎಸ್.ಐ.ಆರ್. ಕುರಿತು ಮಾತನಾಡಿದರು. ವೇದಿಕೆಯಲ್ಲಿ ಇರ್ಫಾನ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹೇಶ್, ಫಯಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಾತ, ಗುರು ಪ್ರಸಾದ್, ಪಾಲಿಕೆ ಮಾಜಿ ಸದಸ್ಯರಾದ ಜಿಯಾವುಲ್ಲಾ, ಇನಾಯಕ್ ಸೇರಿದಂತೆ, ನಗರ ಬ್ಲಾಕ್ ೧-೨ರ ಬಿಎಲ್‌ಎ -೦೨ ಗಳು ಭಾಗವಹಿಸಿದ್ದರು.

(Visited 1 times, 1 visits today)
blo's Congress kannada news krnataka local news SIR tumkauru
Previous Articleಬಾಹ್ಯ ಯಶಸ್ಸಿನ ಆತುರದಲ್ಲಿ ಅಂತರ್ಯದ ಯಶಸ್ಸು ಮರೆಯದಿರಿ
Next Article ದಲಿತರಿಂದ ಮಲಗುಂಡಿ ಸ್ವಚ್ಛಗೊಳಿಸಿದ ಕೃತ್ಯಕ್ಕೆ ಖಂಡನೆ
News Desk Benkiyabale

Related Posts

ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್

September 30, 2026 6:04 pm news

ಅಪ್ರತಿಮ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ ಆಚರಣೆ

September 30, 2026 6:02 pm news

ನಾಡಕಚೇರಿಗಳಲ್ಲಿ ಕಂದಾಯ ವಿಷಯ ಕುರಿತ ಅರ್ಜಿಗಳ ಪರಿಹಾರಕ್ಕೆ ವಿಶೇಷ ಕ್ರಮ: ಡಿಸಿ

September 30, 2026 6:01 pm news
ತಾಜಾ ಸುದ್ಧಿಗಳು
news

ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್

September 30, 2026 6:04 pm
news

ಅಪ್ರತಿಮ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ ಆಚರಣೆ

September 30, 2026 6:02 pm
news

ನಾಡಕಚೇರಿಗಳಲ್ಲಿ ಕಂದಾಯ ವಿಷಯ ಕುರಿತ ಅರ್ಜಿಗಳ ಪರಿಹಾರಕ್ಕೆ ವಿಶೇಷ ಕ್ರಮ: ಡಿಸಿ

September 30, 2026 6:01 pm
news

ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಪ್ರತಿಭಟನೆ

September 30, 2026 5:59 pm
news

ತುಮಕೂರು-ಅರಸೀಕೆರೆ ರೈಲು ಪ್ರಯಾಣಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಆದ್ಯತೆ

September 29, 2026 5:00 pm
news

ಮುಂಬರುವ ವಿಧಾನಸಭೆ, ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಗೆಲ್ಲಬೇಕು

September 29, 2026 4:58 pm
Our Youtube Channel
Our Picks

ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್

September 30, 2026 6:04 pm

ಅಪ್ರತಿಮ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ ಆಚರಣೆ

September 30, 2026 6:02 pm

ನಾಡಕಚೇರಿಗಳಲ್ಲಿ ಕಂದಾಯ ವಿಷಯ ಕುರಿತ ಅರ್ಜಿಗಳ ಪರಿಹಾರಕ್ಕೆ ವಿಶೇಷ ಕ್ರಮ: ಡಿಸಿ

September 30, 2026 6:01 pm

ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಪ್ರತಿಭಟನೆ

September 30, 2026 5:59 pm

ತುಮಕೂರು-ಅರಸೀಕೆರೆ ರೈಲು ಪ್ರಯಾಣಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಆದ್ಯತೆ

September 29, 2026 5:00 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್

By News Desk BenkiyabaleSeptember 30, 2026 6:04 pm

ಹುಳಿಯಾರು: ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಗ್ರಾಮದಲ್ಲಿನ ನೂತನವಾಗಿ ನಿರ್ಮಿಸಲಾಗಿರುವ ಬೋರನಕಣಿವೆ ಸರ್ಕಾರಿ ಐಟಿಐ ಕಾಲೇಜಿನ ಉದ್ಘಾಟನೆಗೊಂಡು ಇನ್ನೂ ಒಂದು ತಿಂಗಳು…

ಅಪ್ರತಿಮ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ ಆಚರಣೆ

September 30, 2026 6:02 pm

ನಾಡಕಚೇರಿಗಳಲ್ಲಿ ಕಂದಾಯ ವಿಷಯ ಕುರಿತ ಅರ್ಜಿಗಳ ಪರಿಹಾರಕ್ಕೆ ವಿಶೇಷ ಕ್ರಮ: ಡಿಸಿ

September 30, 2026 6:01 pm

ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಪ್ರತಿಭಟನೆ

September 30, 2026 5:59 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.