BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ
  • ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ
  • ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ
  • ನಾಡಿನಾದ್ಯಂತ ಸಂಭ್ರಮದ ವರಮಹಾಲಕ್ಷಿ ಹಬ್ಬ ಆಚರಣೆ
  • ಡಿ.ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆ
  • ರಾಜೀವ್‌ಗಾಂಧಿ ಹಾಗೂ ದೇವರಾಜು ಅರಸು ಅವರ ಜನ್ಮ ದಿನಾಚರಣೆ
  • ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ೨ ದಿನಗಳಿಂದ ಕಾದು ಕುಳಿತ ಗ್ರಾಹಕರು
  • ಈ ಬಾರಿ ಹಬ್ಬ ಬಲು ದುಬಾರಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕನಿಷ್ಠ ವೇತನ, ಪಿಎಫ್-ಇ.ಎಸ್.ಐ ಮಿತಿ ರದ್ದುಗೊಳಿಸಿ: ಸಿಐಟಿಯು ಪ್ರತಿಭಟನೆ
news

ಕನಿಷ್ಠ ವೇತನ, ಪಿಎಫ್-ಇ.ಎಸ್.ಐ ಮಿತಿ ರದ್ದುಗೊಳಿಸಿ: ಸಿಐಟಿಯು ಪ್ರತಿಭಟನೆ

By News Desk BenkiyabaleUpdated:July 10, 2026 11:56 am

ತುಮಕೂರು: ಕನಿಷ್ಠ ವೇತನ ಅಧಿಸೂಚನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು, ಪಿಎಫ್ ಮತ್ತು ಇಎಸ್‌ಐ ಮಿತಿಗಳನ್ನು ರದ್ದುಗೊಳಿಸಬೇಕು, ಭೂಕಂದಾಯ ವಸೂಲಿಯಲ್ಲಿ ನ್ಯಾಯಾಲಯದ ತೀರ್ಪುಗಳನ್ನು ತಕ್ಷಣ ಪಾಲಿಸಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ತುಮಕೂರು ಜಿಲ್ಲಾ ಸಮಿತಿಯು ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಸಿ ೩ ಗಂಟೆಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿ ಎದುರು ತಲುಪಿತು. ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಖಜಾಂಚಿ ಎ. ಲೋಕೇಶ್, ಪ್ರ.ಕಾರ್ಯದರ್ಶಿ ಜಿ. ಕಮಲ, ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ರಂಗಧಾಮಯ್ಯ, ಮಧುಸೂಧನ್ ಅವರ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಭಾಗವಹಿಸಿದ್ದರು.
ತುಮಕೂರು ಪೌರ ಕಾರ್ಮಿಕರ ಸಂಘದ ರಾಜೇಶ್, ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ಪ್ರಕಾಶ್, ತುಮಕೂರು ಮಹಾನಗರ ಪಾಲಿಕೆ ಕಸದ ಆಟೋ ಚಾಲಕರು ಮತ್ತು ಸಹಾಯಕರ ಸಂಘದ ಮಾರುತಿ, ಜಿಲ್ಲಾ ನೀರು ಸರಬರಾಜು ನೌಕರರ ಸಂಘದ ಕುಮಾರ್, ಸರ್ಕಾರಿ ಆಸ್ಪತ್ರೆ ಕಾರ್ಮಿಕರ ಸಂಘದ ರಂಗಮ್ಮ, ವಿವಿ ನೌಕರರ ಸಂಘದ ಲಕ್ಷಿö್ಮÃ, ಸಿಂಧೂರ್ ಪೋರ್ಜ ಕಾರ್ಮಿಕರ ಸಂಘದ ಗೋಪಾಲ್, ಉಮೇಶ್ ಮತ್ತು ಸಿಕೋಮಾ ಪೈ. ಲಿ ಕಾರ್ಮಿಕರ ಸಂಘದ ಪ್ರತಿನಿಧಿಗಳು ಮಾತನಾಡಿದರು.
ಕಾರ್ಮಿಕರ ಬೇಡಿಕೆಗಳು:
ಕನಿಷ್ಠ ವೇತನ ಅಧಿಸೂಚನೆಯ ಪೂರ್ಣ ಜಾರಿ: ಮೇ ೨೨, ೨೦೨೬ರ ಕನಿಷ್ಠ ವೇತನ ಅಧಿಸೂಚನೆಯನ್ನು ಪೂರ್ಣ ಪ್ರಮಾಣದಲ್ಲಿ ತಕ್ಷಣ ಜಾರಿಗೊಳಿಸಬೇಕು. ಕನಿಷ್ಠ ವೇತನವು ಕಾರ್ಮಿಕರ ಮಾನವೀಯ ಗೌರವದ ಪ್ರಶ್ನೆಯಾಗಿದ್ದು, ಯಾವುದೇ ಒತ್ತಡಕ್ಕೆ ಮಣಿದು ಅಧಿಸೂಚನೆಯನ್ನು ಹಿಂಪಡೆಯಬಾರದು.
ಇ.ಎಸ್.ಐ ಮತ್ತು ಇಪಿಎಫ್ ಮಿತಿಗಳ ರದ್ದು ಅಥವಾ ಪರಿಷ್ಕರಣೆ: ಪ್ರಸ್ತುತ ಇ.ಎಸ್.ಐ ಮಿತಿ ೨೧,೦೦೦ ಮತ್ತು ಇಪಿಎಫ್ ಮಿತಿ ೧೫,೦೦೦ ಇದೆ. ಕನಿಷ್ಠ ವೇತನ ಹೆಚ್ಚಳದಿಂದಾಗಿ ಅನೇಕ ಕಾರ್ಮಿಕರು ಈ ಮಿತಿಗಳನ್ನು ದಾಟಿ ಸಾಮಾಜಿಕ ಭದ್ರತೆಯ ವ್ಯಾಪ್ತಿಯಿಂದ ಹೊರಗುಳಿಯುತ್ತಿದ್ದಾರೆ. ಇ.ಎಸ್.ಐ ಅನಾರೋಗ್ಯ, ಹೆರಿಗೆ, ಅಂಗವೈಕಲ್ಯ ಸಮಯದಲ್ಲಿ ವೈದ್ಯಕೀಯ ನೆರವು ನೀಡುತ್ತದೆ; ಇಪಿಎಫ್ ವೃದ್ಧಾಪ್ಯದಲ್ಲಿ ಆಧಾರವಾಗುತ್ತದೆ. ಈ ಯೋಜನೆಗಳಿಂದ ಯಾರೂ ವಂಚಿತರಾಗಬಾರದು. ಮಿತಿಗಳನ್ನು ರದ್ದುಗೊಳಿಸಬೇಕು ಅಥವಾ ಕನಿಷ್ಠ ೩೦,೦೦೦ಕ್ಕೆ ಏರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.
೧೯ ವಲಯಗಳಿಗೆ ಕನಿಷ್ಠ ವೇತನ: ಗಾರ್ಮೆಂಟ್, ಬೀಡಿ, ಅಗರ್ಬತ್ತಿ, ತೋಟಗಾರಿಕೆ, ಸ್ಕೀಮ್ ನೌಕರರು, ಮಧ್ಯಾಹ್ನದ ಊಟದ ಸಿಬ್ಬಂದಿ, ಕೈಗಾರಿಕಾ ತ್ಯಾಜ್ಯ ಸಂಗ್ರಹ ಸೇರಿದಂತೆ ೧೯ ವಲಯಗಳು ಇನ್ನೂ ಕನಿಷ್ಠ ವೇತನದ ವ್ಯಾಪ್ತಿಗೆ ಬಂದಿಲ್ಲ. ಈ ವಲಯಗಳ ಕಾರ್ಮಿಕರು ದಿನಕ್ಕೆ ೧೦-೧೨ ಗಂಟೆಗಳ ಕಾಲ ಶ್ರಮಿಸುತ್ತಿದ್ದರೂ ಸಾಕಷ್ಟು ಕೂಲಿ ಸಿಗುತ್ತಿಲ್ಲ. ಈ ಎಲ್ಲಾ ವಲಯಗಳಿಗೂ ತಕ್ಷಣ ಕನಿಷ್ಠ ವೇತನ ಜಾರಿಗೊಳಿಸಬೇಕು.
ಸರ್ಕಾರವೇ ಮಾದರಿ ಉದ್ಯೋಗದಾತನಾಗಬೇಕು: ಸರ್ಕಾರವು ದೇಶದ ಅತಿದೊಡ್ಡ ಉದ್ಯೋಗದಾತನಾಗಿದ್ದು, ಅದು ಮಾದರಿ ಉದ್ಯೋಗದಾತನಾಗಿ ವರ್ತಿಸಬೇಕು. ಗುತ್ತಿಗೆ, ಔಟ್ಸೋರ್ಸಿಂಗ್, ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು, ಪುರಸಭೆಗಳು, ಸರ್ಕಾರಿ ಇಲಾಖೆಗಳು, ಮಂಡಳಿಗಳು, ನಿಗಮಗಳು ಮತ್ತು ಇತರ ಸರ್ಕಾರಿ ಸೇವೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರಿಗೆ ಇನ್ನೂ ಕನಿಷ್ಠ ವೇತನ ಜಾರಿಯಾಗಿಲ್ಲ. ಸರ್ಕಾರಿ ಆಸ್ಪತ್ರೆಗಳ ಸ್ವಚ್ಛತಾ ಕಾರ್ಮಿಕರು, ವಿಶ್ವವಿದ್ಯಾಲಯಗಳ ಗುತ್ತಿಗೆ ನೌಕರರು, ಮುನಿಸಿಪಾಲಿಟಿಯಲ್ಲಿ ತ್ಯಾಜ್ಯ ಸಂಗ್ರಹಕಾರರು, ನೀರು ಸರಬರಾಜು ಸಿಬ್ಬಂದಿ, ವಿವಿಧ ಇಲಾಖೆಗೆ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿ – ಇವರೆಲ್ಲರಿಗೂ ಸೂಚಿತ ವೇತನ ನೀಡಬೇಕು. ಸರ್ಕಾರವೇ ಕನಿಷ್ಠ ವೇತನವನ್ನು ಪಾಲಿಸದಿದ್ದರೆ, ಖಾಸಗಿ ಉದ್ಯೋಗದಾತರು ಅದನ್ನು ಅನುಸರಿಸಲು ಹೇಗೆ ಸಾಧ್ಯ?
ನ್ಯಾಯಾಲಯದ ತೀರ್ಪುಗಳ ತಕ್ಷಣ ಪಾಲನೆ: ಕಾರ್ಮಿಕ ಪ್ರಕರಣಗಳಲ್ಲಿ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ತಕ್ಷಣ ಪಾಲಿಸಬೇಕು. ಅಪಘಾತ, ಅನಾರೋಗ್ಯ, ಸೇವಾ ವೇತನ, ಉಪಧನ, ಪರಿಹಾರದ ಬಾಕಿಗಳಿಗೆ ಸಂಬAಧಿಸಿದ ಪ್ರಕರಣಗಳಲ್ಲಿ ಸಂತ್ರಸ್ತರಾಗಿರುವುದು ಹೆಚ್ಚಾಗಿ ವೃದ್ಧರು ಮತ್ತು ಮೃತರ ಕುಟುಂಬದ ವಿಧವೆಯರು. ನ್ಯಾಯಾಲಯಗಳು ಅವರ ಪರವಾಗಿ ತೀರ್ಪು ನೀಡಿದ್ದು, ಪರಿಹಾರದ ಮೊಬಲಗನ್ನು ಜಿಲ್ಲಾಡಳಿತವು ಭೂಕಂದಾಯ ಬಾಕಿಯಾಗಿ ಪರಿಗಣಿಸಿ ವಸೂಲಿಗೆ ಕ್ರಮ ವಹಿಸಬೇಕಾಗಿದೆ. ಆದರೆ ಜಿಲ್ಲಾಡಳಿತವು ಈ ಆದೇಶಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ವರ್ಷಗಟ್ಟಲೆ ವಿಳಂಬ ಮಾಡುತ್ತಿದೆ. ಬಾಕಿ ಇರುವುದು ಕೇವಲ ಹಣವಲ್ಲ; ಅದು ಅವರ ಬದುಕಿಗೆ ಬೆಂಬಲವಾಗಬೇಕಾದ ಆಸರೆ. ಈ ವೃದ್ಧರು ಮತ್ತು ವಿಧವೆಯರಿಗೆ ನ್ಯಾಯಾಲಯದ ತೀರ್ಪಿನ ಮೂಲಕ ದೊರೆತಿರುವ ಪರಿಹಾರವನ್ನು ತಕ್ಷಣ ಒದಗಿಸಲು ಭೂಕಂದಾಯ ಬಾಕಿ ಪ್ರಕರಣಗಳಲ್ಲಿ ತ್ವರಿತ ಕ್ರಮ ವಹಿಸಬೇಕು.
ಸ್ಕೀಮ್ ನೌಕರರಿಗೆ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ: ಅಂಗನವಾಡಿ, ಆಶಾ ಸಿಬ್ಬಂದಿ, ಮಧ್ಯಾಹ್ನದ ಊಟದ ಸಿಬ್ಬಂದಿಯAತಹ ಸರ್ಕಾರಿ ಯೋಜನೆಗಳ ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ, ಬಾಕಿ ಸಂಬಳ, ಇ.ಎಸ್.ಐ /ಪಿಎಫ್ ಸೌಲಭ್ಯಗಳು ಮತ್ತು ಕೆಲಸದ ಸ್ಥಳದ ಸುರಕ್ಷತೆಯ ಖಾತರಿ ನೀಡಬೇಕು.

(Visited 1 times, 1 visits today)
DC kannada news local news Protest tumakur tumkur Tumkur mahanagara palike tumkur news ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್
Previous Articleಪಡಿತರ ಅಕ್ಕಿ ಕಾಳಸಂತೆ ಜಾಲ ಭೇದ: ಲಕ್ಷಾಂತರ ಮೌಲ್ಯದ ಅಕ್ಕಿ, ವಾಹನ ಜಪ್ತಿ
Next Article ಉಪಮುಖ್ಯಮಂತ್ರಿಗಳ ಮೇಲಿನ ಆರೋಪ ಸರಿಯಲ್ಲ
News Desk Benkiyabale

Related Posts

ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ

August 21, 2026 7:05 pm news

ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ

August 21, 2026 7:03 pm news

ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ

August 21, 2026 7:02 pm news
ತಾಜಾ ಸುದ್ಧಿಗಳು
news

ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ

August 21, 2026 7:05 pm
news

ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ

August 21, 2026 7:03 pm
news

ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ

August 21, 2026 7:02 pm
news

ನಾಡಿನಾದ್ಯಂತ ಸಂಭ್ರಮದ ವರಮಹಾಲಕ್ಷಿ ಹಬ್ಬ ಆಚರಣೆ

August 21, 2026 1:49 pm
news

ಡಿ.ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆ

August 20, 2026 5:51 pm
news

ರಾಜೀವ್‌ಗಾಂಧಿ ಹಾಗೂ ದೇವರಾಜು ಅರಸು ಅವರ ಜನ್ಮ ದಿನಾಚರಣೆ

August 20, 2026 4:59 pm
Our Youtube Channel
Our Picks

ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ

August 21, 2026 7:05 pm

ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ

August 21, 2026 7:03 pm

ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ

August 21, 2026 7:02 pm

ನಾಡಿನಾದ್ಯಂತ ಸಂಭ್ರಮದ ವರಮಹಾಲಕ್ಷಿ ಹಬ್ಬ ಆಚರಣೆ

August 21, 2026 1:49 pm

ಡಿ.ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆ

August 20, 2026 5:51 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ

By News Desk BenkiyabaleAugust 21, 2026 7:05 pm

ತುಮಕೂರು: ಭ್ರಷ್ಟಾಚಾರ ಹಾಗೂ ಲಂಚ ಪ್ರಕರಣದಲ್ಲಿ ಸಿಲುಕಿದ್ದ ತುರುವೇಕೆರೆ ತಾಲೂಕಿನ ಮಾಯಸಂದ್ರ ನಾಡಕಚೇರಿ ವ್ಯಾಪ್ತಿಯ ತುಯಲಹಳ್ಳಿ ವೃತ್ತದ ಗ್ರಾಮ ಸಹಾಯಕ…

ಗೊರವನಹಳ್ಳಿ ಮಹಾಲಕ್ಷಿ ಸನ್ನಿಧಾನದಲ್ಲಿ ಭಕ್ತಸಾಗರ

August 21, 2026 7:03 pm

ಕೆರೆ ಪಕ್ಕದಲ್ಲೇ ಹೇಮಾವತಿ ಹರಿದರೂ ಸೋಮಲಾಪುರ ಕೆರೆಗೆ ನೀರಿಲ್ಲ

August 21, 2026 7:02 pm

ನಾಡಿನಾದ್ಯಂತ ಸಂಭ್ರಮದ ವರಮಹಾಲಕ್ಷಿ ಹಬ್ಬ ಆಚರಣೆ

August 21, 2026 1:49 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.