BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ
  • ಕ್ರೀಡೆಯಿ0ದ ಶಿಸ್ತು, ಛಲ, ಸಮರ್ಪಣೆ ಬೆಳೆಸಿಕೊಳ್ಳಿ: ತಹಶೀಲ್ದಾರ್
  • ಮಹಿಳೆಯರಿಗೆ ಶೇ. ೫೦ ರಷ್ಟು ಪ್ರಾತಿನಿಧ್ಯ
  • ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಕೊರತೆಗಳಿಲ್ಲ
  • ನಗರದಲ್ಲಿ ಅ. ೧೧ ರಿಂದ ೨೧ರವರೆಗೆ ದಸರಾ ಉತ್ಸವ
  • ಸಾಧನೆಗೆ ಶ್ರೀಮಂತಿಕೆ, ಬಡತನ ಮುಖ್ಯವಲ್ಲ, ಗುರಿ ಸಾಧಿಸುವ ಕಿಚ್ಚು ಮುಖ್ಯ
  • ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂಡಿಯಾ ಮೈತ್ರಿಕೂಟದ ಪ್ರತಿಭಟನೆ
  • ಕನ್ನಡ ಭವನದಲ್ಲಿ ಮೂಡಲಪಾಯ ಬಯಲಾಟದ ಕಲರವ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಉಪಮುಖ್ಯಮಂತ್ರಿಗಳ ಮೇಲಿನ ಆರೋಪ ಸರಿಯಲ್ಲ
news

ಉಪಮುಖ್ಯಮಂತ್ರಿಗಳ ಮೇಲಿನ ಆರೋಪ ಸರಿಯಲ್ಲ

By News Desk BenkiyabaleUpdated:July 10, 2026 11:58 am

ತುಮಕೂರು: ಕರ್ನಾಟಕ ರಾಜ್ಯ ಸರ್ಕಾರದ ಸನ್ಮಾನ್ಯ ಉಪಮುಖ್ಯಮಂತ್ರಿಗಳು, ಕಂದಾಯ ಸಚಿವರು, ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಛಲವಾದಿ ಸಮುದಾಯದ ಕಣ್ಮಣಿಗಳು, ಸರಳ ಸಜ್ಜನಿಕೆಯ ಹಿರಿಯ ರಾಜಕಾರಣಿಗಳಾದ ಸನ್ಮಾನ್ಯ ಶ್ರೀ ಡಾ.ಜಿ.ಪರಮೇಶ್ವರ್ ರವರ ವಿರುದ್ದ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಹೋರಾಟಗಾರರೆಂದು ಬಿಂಬಿಸಿಕೊಳ್ಳುತ್ತಿರುವ ಹಂದ್ರಾಳು ನಾಗಭೂಷಣ್ ರವರ ವಿರುದ್ದ ಸಂಬAಧಪಟ್ಟ ಅಧಿಕಾರಿಗಳು ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಛಲವಾದಿ ಮುಖಂಡರು ಇಂದು ಆಗ್ರಹಿಸಿದ್ದಾರೆ.
ಛಲವಾದಿ ಮಹಾಸಭಾ ಸಂಘಟನೆಯ ಸದಸ್ಯರುಗಳು ಇಂದು ನಗರದ ಪಾಲಿಕೆ ಆವರಣದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಯ ಮುಂಭಾಗದಲ್ಲಿ ಸಭೆ ಸೇರಿ ಡಾ|| ಜಿ.ಪರಮೇಶ್ವರ್ ರವರು ತುಮಕೂರು ಜಿಲ್ಲೆಗೆ ತಮ್ಮದೇ ಆದ ವಿಶಿಷ್ಠ ಕೊಡುಗೆಗಳನ್ನು ನೀಡುತ್ತಾ ಬರುತ್ತಿದ್ದಾರೆ, ಜೊತೆಗೆ ಅವರು ಪ್ರಸ್ತುತದ ಸರ್ಕಾರದಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ರಾಜ್ಯ ಸರ್ಕಾರದಿಂದ ಸಾವಿರಾರು ಕೋಟಿ ಅನುದಾನವನ್ನು ತಂದು ತಮ್ಮ ದೂರದೃಷ್ಟಿಯಿಂದ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದಲ್ಲಿ ಹಲವಾರು ಮಹತ್ತರವಾದ ಖಾತೆಗಳು ಮತ್ತು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ, ಆದರೆ ಇದನ್ನು ಸಹಿಸದ ಹಂದ್ರಾಳು ನಾಗಭೂಷಣ್ ಅವರು ಡಾ|| ಜಿ.ಪರಮೇಶ್ವರ್ ಅವರ ಹೆಸರಿಗೆ ಕಳಂಕ ತರುವಂತಹ ಹೇಳಿಕೆಗಳನ್ನು ಕೊಡುವುದು, ಪೋಸ್ಟರ್ ಗಳನ್ನು ಹಾಕುವುದು, ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾದ ಸಂದೇಶಗಳನ್ನು ಪೋಸ್ಟ್ ಮಾಡುತ್ತಿರುವುದು, ಮಸಿ ಬಳಿಯುವುದಾಗಿ ಬೆದರಿಕೆ ಹಾಕುವುದು ಸೇರಿದಂತೆ ಅವರನ್ನು ತೇಜೋವಧೆ ಮಾಡುತ್ತಿದ್ದಾರೆ, ಇಂತಹ ವ್ಯಕ್ತಿಯನ್ನು ನಮ್ಮ ಸಮಾಜದಲ್ಲಿ ಇರುವುದಕ್ಕೆ ಯೋಗ್ಯತೆಯೇ ಇಲ್ಲ, ಇವರನ್ನು ಗಡಿಪಾರು ಮಾಡಬೇಕು ಜೊತೆಗೆ ಪೊಲೀಸರು ಇತನ ಮೇಲೆ ರೌಡಿ ಶೀಟ್ ತೆರೆದು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕೆಂದು ಛಲವಾದಿ ಮಹಾಸಭಾ ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿಗಳು ಹಾಗೂ ವಕೀಲರಾದ ಟಿ.ಆರ್. ನಾಗೇಶ್ ಗಂಭೀರ ಆರೋಪವನ್ನು ಮಾಡಿದರು.
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್. ಕೆ. ನಿಧಿಕುಮಾರ್ ಮಾತನಾಡುತ್ತಾ ಈ ಹಿಂದೆ ತುಮಕೂರು ಜಿಲ್ಲಾಧಿಕಾರಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀನಿವಾಸ್‌ರವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಒಬ್ಬ ಛಲವಾದಿ ಸಮುದಾಯದ ಅಧಿಕಾರಿಯನ್ನು ಸರಿಯಾಗಿ ಕಾರ್ಯನಿರ್ವಹಣೆ ಮಾಡಲು ಬಿಡದೇ ಇಲ್ಲಿಂದ ವರ್ಗಾವಣೆ ಮಾಡಲು ಕೆಲವು ಕಾಣದ ಕೈ ಜೊತೆ ಸೇರಿ ಪಿತೂರಿ ಮಾಡಿ ಅವರನ್ನು ವರ್ಗಾವಣೆ ಮಾಡಿಸಿರುತ್ತಾರೆ, ಜೊತೆಗೆ ಡಾ.ಜಿ.ಪರಮೇಶ್ವರ್ ರವರ ವಿರುದ್ಧ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತಾರೆ. ಸದರಿ ಪ್ರಕರಣದ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುತ್ತದೆ. ಈ ನಕಲಿ ಹೋರಾಟಗಾರನ ವಿರುದ್ದ ಕೆಲವು ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಹಲವಾರು ದೂರುಗಳ ಸಹ ದಾಖಲಾಗಿರುತ್ತವೆ ಆದ ಪ್ರಯುಕ್ತ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವ ಈ ಹಂದ್ರಾಳ್ ನಾಗಭೂಷಣ್ ವಿರುದ್ದ ಸಂಬAಧಪಟ್ಟ ಅಧಿಕಾರಿಗಳು, ಪೊಲೀಸ್ ಇಲಾಖೆಯವರು ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿಗಳು ಹಾಗೂ ವಕೀಲರಾದ ಟಿ.ಆರ್. ನಾಗೇಶ್, ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್. ಕೆ. ನಿಧಿಕುಮಾರ್, ಮುಖಂಡರುಗಳಾದ ಗುರುಪ್ರಸಾದ್ ಟಿ.ಆರ್, ರಜನಿಕಾಂತ್ (ವಕೀಲರು), ಆಟೋ ನರಸಿಂಹಮೂರ್ತಿ, ದಿಬ್ಬೂರು ಭೈರೇಶ್, ವಕ್ಕೋಡಿ ಗಿರೀಶ್, ಆಟೋ ಕುಮಾರ್, ಇಂದ್ರಕುಮಾರ್ ಡಿ.ಕೆ, ರಂಗಸ್ವಾಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

(Visited 1 times, 1 visits today)
dcm dr.g.parameshwar Koratagere local news tumkur tumkur news
Previous Articleಕನಿಷ್ಠ ವೇತನ, ಪಿಎಫ್-ಇ.ಎಸ್.ಐ ಮಿತಿ ರದ್ದುಗೊಳಿಸಿ: ಸಿಐಟಿಯು ಪ್ರತಿಭಟನೆ
Next Article ಜು.೧೯ರಂದು ಚಿತ್ರದುರ್ಗದಲ್ಲಿ ಭೋವಿ ಜನೋತ್ಸವ: ಡಾ.ಎಂ.ರಾಮಪ್ಪ
News Desk Benkiyabale

Related Posts

ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ

October 08, 2026 6:05 pm news

ಕ್ರೀಡೆಯಿ0ದ ಶಿಸ್ತು, ಛಲ, ಸಮರ್ಪಣೆ ಬೆಳೆಸಿಕೊಳ್ಳಿ: ತಹಶೀಲ್ದಾರ್

October 08, 2026 6:03 pm news

ಮಹಿಳೆಯರಿಗೆ ಶೇ. ೫೦ ರಷ್ಟು ಪ್ರಾತಿನಿಧ್ಯ

October 08, 2026 6:02 pm news
ತಾಜಾ ಸುದ್ಧಿಗಳು
news

ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ

October 08, 2026 6:05 pm
news

ಕ್ರೀಡೆಯಿ0ದ ಶಿಸ್ತು, ಛಲ, ಸಮರ್ಪಣೆ ಬೆಳೆಸಿಕೊಳ್ಳಿ: ತಹಶೀಲ್ದಾರ್

October 08, 2026 6:03 pm
news

ಮಹಿಳೆಯರಿಗೆ ಶೇ. ೫೦ ರಷ್ಟು ಪ್ರಾತಿನಿಧ್ಯ

October 08, 2026 6:02 pm
news

ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಕೊರತೆಗಳಿಲ್ಲ

October 08, 2026 6:01 pm
news

ನಗರದಲ್ಲಿ ಅ. ೧೧ ರಿಂದ ೨೧ರವರೆಗೆ ದಸರಾ ಉತ್ಸವ

October 08, 2026 5:59 pm
news

ಸಾಧನೆಗೆ ಶ್ರೀಮಂತಿಕೆ, ಬಡತನ ಮುಖ್ಯವಲ್ಲ, ಗುರಿ ಸಾಧಿಸುವ ಕಿಚ್ಚು ಮುಖ್ಯ

October 07, 2026 5:33 pm
Our Youtube Channel
Our Picks

ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ

October 08, 2026 6:05 pm

ಕ್ರೀಡೆಯಿ0ದ ಶಿಸ್ತು, ಛಲ, ಸಮರ್ಪಣೆ ಬೆಳೆಸಿಕೊಳ್ಳಿ: ತಹಶೀಲ್ದಾರ್

October 08, 2026 6:03 pm

ಮಹಿಳೆಯರಿಗೆ ಶೇ. ೫೦ ರಷ್ಟು ಪ್ರಾತಿನಿಧ್ಯ

October 08, 2026 6:02 pm

ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಕೊರತೆಗಳಿಲ್ಲ

October 08, 2026 6:01 pm

ನಗರದಲ್ಲಿ ಅ. ೧೧ ರಿಂದ ೨೧ರವರೆಗೆ ದಸರಾ ಉತ್ಸವ

October 08, 2026 5:59 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ

By News Desk BenkiyabaleOctober 08, 2026 6:05 pm

ಪಾವಗಡ: ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆಹಾರ ಕಲಬೆರಕೆ ತಡೆಗಟ್ಟುವ ನಿಟ್ಟಿನಲ್ಲಿ ತಹಸೀಲ್ದಾರ್ ವೈ. ರವಿ ನೇತೃತ್ವದ ಅಧಿಕಾರಿಗಳ…

ಕ್ರೀಡೆಯಿ0ದ ಶಿಸ್ತು, ಛಲ, ಸಮರ್ಪಣೆ ಬೆಳೆಸಿಕೊಳ್ಳಿ: ತಹಶೀಲ್ದಾರ್

October 08, 2026 6:03 pm

ಮಹಿಳೆಯರಿಗೆ ಶೇ. ೫೦ ರಷ್ಟು ಪ್ರಾತಿನಿಧ್ಯ

October 08, 2026 6:02 pm

ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಕೊರತೆಗಳಿಲ್ಲ

October 08, 2026 6:01 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.