
ಪಾವಗಡ: ನೆರೆ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಕೋವಿಡ್-೧೯ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಗಡಿ ತಾಲೂಕಾದ ತಾಲೂಕು ಆಡಳಿತ ತೀವ್ರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ತಹಶೀಲ್ದಾರ್ ಅವರ ಕಟ್ಟುನಿಟ್ಟಿನ ಆದೇಶದ ಮೇರೆಗೆ ತಾಲೂಕಿನ ಐದು ಪ್ರಮುಖ ಗಡಿ ಭಾಗಗಳಲ್ಲಿ ತಕ್ಷಣದಿಂದಲೇ ಹೊಸ ಚೆಕ್‌ಪೋಸ್ಟ್ಗಳನ್ನು ಕಾರ್ಯಗತಗೊಳಿಸಲಾಗಿದೆ.
ಆಂಧ್ರಪ್ರದೇಶದಿAದ ಪಾವಗಡ ತಾಲೂಕಿನೊಳಗೆ ಪ್ರವೇಶಿಸುವ ಪ್ರತಿಯೊಬ್ಬ ಸಾರ್ವಜನಿಕರನ್ನು ಹಾಗೂ ವಾಹನಗಳನ್ನು ಗಡಿಯಲ್ಲಿಯೇ ತಡೆದು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ
ತಾಲೂಕಿನ ಗಡಿಭಾಗದ ಐದು ಕಡೆಗಳಲ್ಲಿ ತೆರೆಯಲಾಗಿರುವ ಈ ತನಿಖಾ ಕೇಂದ್ರಗಳ ಸಂಪೂರ್ಣ ಜವಾಬ್ದಾರಿಯನ್ನು ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿದೆ. ಆರೋಗ್ಯ ಇಲಾಖೆಯ ನಿರ್ದೇಶನದಂತೆ ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಸಾರ್ವಜನಿಕರ ಥರ್ಮಲ್ ಸ್ಕಿçÃನಿಂಗ್ ನಡೆಸುತ್ತಿದ್ದಾರೆ
ತಾಲೂಕಿನ ಪ್ರಮುಖ ಗಡಿ ಪ್ರದೇಶಗಳಾದ ರಾಜವಂತಿ, ಕೊಡಮೊಡಗು, ನಾಗಲಾಪುರ ಹಾಗೂ ಪೋತಗಾನಹಳ್ಳಿ ಗ್ರಾಮಗಳ ಸಂಪರ್ಕ ರಸ್ತೆಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಗಡಿ ದಾಟುವ ಮುನ್ನ ಪ್ರತಿಯೊಬ್ಬರ ಆರೋಗ್ಯ ಸ್ಥಿತಿಗತಿ ಹಾಗೂ ಅಗತ್ಯ ಮಾಹಿತಿಗಳನ್ನು ಸಿಬ್ಬಂದಿ ದಾಖಲಿಸಿಕೊಳ್ಳುತ್ತಿದ್ದಾರೆ.
ನೆರೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿರುವುದರಿAದ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ. ಗಡಿ ದಾಟಿ ಬರುವ ಸಾರ್ವಜನಿಕರು ಯಾವುದೇ ವಾಗ್ವಾದಕ್ಕೆ ಇಳಿಯದೆ ತಪಾಸಣಾ ಸಿಬ್ಬಂದಿಯೊAದಿಗೆ ಸಹಕರಿಸಬೇಕು. ಸಾರ್ವಜನಿಕರು ತುರ್ತು ಕೆಲಸಗಳಿಲ್ಲದೆ ಅನಗತ್ಯವಾಗಿ ಅಂತರರಾಜ್ಯ ಪ್ರಯಾಣ ಮಾಡಬಾರದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

