BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ
  • ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ
  • ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ
  • ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಪ್ರಜಾಸೇವಾ ಆಂದೋಲನ
  • ಜ್ಞಾನಾರ್ಜನೆ-ನೈತಿಕ ಮೌಲ್ಯಗಳೇ ವಿದ್ಯಾರ್ಥಿಗಳ ಬದುಕಿನ ದಿಕ್ಸೂಚಿ
  • ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು
  • ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಡಿವೈಎಫ್ ೧೦ನೇ ಜಿಲ್ಲಾ ಸಮ್ಮೇಳನ ಆಗ್ರಹ
  • ಕನ್ನಡದ ನಾಟಕ ಜಗತ್ತಿಗೆ ದೊಡ್ಡ ಇತಿಹಾಸವಿದೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ರಸ್ತೆ ಒತ್ತುವರಿ ವಿವಾದ ಬಗೆಹರಿಸಿದ ಅಧಿಕಾರಿಗಳು
news

ರಸ್ತೆ ಒತ್ತುವರಿ ವಿವಾದ ಬಗೆಹರಿಸಿದ ಅಧಿಕಾರಿಗಳು

ವಾರ್ಡ್ ನಂ. ೪ರಲ್ಲಿ ರಸ್ತೆ ಒತ್ತುವರಿ ವಿವಾದಕ್ಕೆ ತೆರೆ: ಐದು ದಿನದಲ್ಲಿ ತೆರವಿಗೆ ಒಪ್ಪಿಗೆ
By News Desk BenkiyabaleUpdated:July 14, 2026 3:56 pm

ಹುಳಿಯಾರು: ಇಲ್ಲಿನ ಬಾಲಾಜಿ ಥಿಯೇಟರ್ ಹಿಂಭಾಗದ ಇಂದಿರಾ ನಗರದ ೪ ನೇ ವಾರ್ಡಿನಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚರ್ಚೆಗೆ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ರಸ್ತೆ ಒತ್ತುವರಿ ಸಮಸ್ಯೆ ಕೊನೆಗೂ ಸೌಹಾರ್ದಯುತವಾಗಿ ಬಗೆಹರಿದಿದೆ.
ರಸ್ತೆ ಒತ್ತುವರಿ ಸಮಸ್ಯೆಯ ಹಿನ್ನೆಲೆ: ಇಂದಿರಾ ನಗರದ ವಾರ್ಡ್ ನಂ. ೪ ರಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ಅಜಗರ್ ಅವರ ಮನೆಯಿಂದ ಅಲೀಂಜಾನ್ ರವರ ಮನೆಯವರೆಗೆ ಹೊಸದಾಗಿ ರಸ್ತೆ ನಿರ್ಮಾಣ ಕಾಮಗಾರಿ ಮಂಜೂರಾಗಿತ್ತು. ಆದರೆ, ಸ್ಥಳೀಯ ನಿವಾಸಿಯೊಬ್ಬರು ತಮಗೆ ಸೇರಿದ ಸೈಟ್ ನಂ. ೧೨೭ ರ ನಿಗದಿತ ಅಳತೆಗಿಂತ ಹೆಚ್ಚಾಗಿ ರಸ್ತೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಂಪೌAಡ್ ಮತ್ತು ಮೆಟ್ಟಿಲು ನಿರ್ಮಿಸಿದ್ದರು. ಇದರಿಂದಾಗಿ ಕಳೆದ ೫-೬ ತಿಂಗಳುಗಳಿAದ ಮಂಜೂರಾಗಿದ್ದ ರಸ್ತೆ ಕಾಮಗಾರಿಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ಇದೇ ಕಾರಣಕ್ಕೆ ಈ ಹಿಂದೆ ಸುಮಾರು ೩ ರಿಂದ ೪ ಬಾರಿ ರಸ್ತೆ ಕಾಮಗಾರಿ ಸ್ಥಳಾಂತರಗೊAಡು ಸಾರ್ವಜನಿಕರಿಗೆ, ವೃದ್ಧರಿಗೆ ಹಾಗೂ ರೋಗಿಗಳಿಗೆ ಓಡಾಡಲು ತೀವ್ರ ತೊಂದರೆಯಾಗಿತ್ತು.
ಸ್ಥಳದಲ್ಲಿ ಸಾರ್ವಜನಿಕರ ಪ್ರತಿಭಟನೆ: ರಸ್ತೆ ಒತ್ತುವರಿ ಮಾಡಿಕೊಂಡಿದ್ದವರನ್ನು ತೆರವುಗೊಳಿಸಿದರೆ ನಾವೂ ಕೂಡ ಖುಲ್ಲಾ ಮಾಡಿಕೊಡುತ್ತೇವೆ ಎಂದು ಇತರ ಇಬ್ಬರು ನಿವಾಸಿಗಳು ಒಪ್ಪಿದ್ದರೂ, ಮುಖ್ಯವಾಗಿ ಒಬ್ಬರು ಮಾತ್ರ “ಎಲ್ಲರ ಮನೆಯನ್ನು ನಕ್ಷೆಯಂತೆ ಅಳತೆ ಮಾಡಿಸಿ, ಒತ್ತುವರಿಯಾಗಿದ್ದಲ್ಲಿ ನಂತರ ಬನ್ನಿ” ಎಂದು ಹಠ ಹಿಡಿದಿದ್ದರು. ಇದರಿಂದ ಆಕ್ರೋಶಗೊಂಡ ವಾರ್ಡಿನ ಸಾರ್ವಜನಿಕರು ಇಂದು ರಸ್ತೆಯಲ್ಲೇ ಜಮಾಯಿಸಿ, ಪ್ರತಿಭಟನೆ ನಡೆಸಿ “ನಮಗೆ ರಸ್ತೆ ಸಂಪರ್ಕ ಮಾಡಿಕೊಡಲೇಬೇಕು” ಎಂದು ಪಟ್ಟು ಹಿಡಿದರು.
ಅಧಿಕಾರಿಗಳ ಭೇಟಿ ಮತ್ತು ಪರಿಹಾರ: ಪ್ರತಿಭಟನೆಯ ತೀವ್ರತೆಯನ್ನು ಅರಿತು ಹುಳಿಯಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಇಂಜಿನಿಯರ್ ಮಂಜುನಾಥ್, ಪಟ್ಟಣ ಪಂಚಾಯಿತಿ ಮಾಜಿ ಕೌನ್ಸಿಲರ್ ರಾಘವೇಂದ್ರ ಹಾಗೂ ಹಾಲಿ ಕೌನ್ಸಿಲರ್ ಹೇಮಂತ್ ಕುಮಾರ್ ಅವರು ತಕ್ಷಣ ಸಿಬ್ಬಂದಿಯೊAದಿಗೆ ಸ್ಥಳಕ್ಕೆ ಆಗಮಿಸಿದರು.
ಸ್ಥಳದಲ್ಲಿದ್ದ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಅಧಿಕಾರಿಗಳು, ನಕ್ಷೆಯ ಪ್ರಕಾರ ಮನೆ ಹಾಗೂ ರಸ್ತೆಯ ಜಾಗವನ್ನು ಅಳತೆ ಮಾಡಿಸಿದರು. ಒತ್ತುವರಿಯಾಗಿರುವ ಭಾಗವನ್ನು ಇಂಜಿನಿಯರ್ ಮಂಜುನಾಥ್ ಅವರು ಮಾರ್ಕ್ ಮಾಡಿಸಿ, ತಕ್ಷಣವೇ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದರು. ತಪ್ಪಿದಲ್ಲಿ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊನೆಗೂ ಒಪ್ಪಿದ ನಿವಾಸಿಗಳು: ಅಧಿಕಾರಿಗಳ ಎಚ್ಚರಿಕೆ ಮತ್ತು ವಾದ-ವಿವಾದಗಳ ನಂತರ, ಒತ್ತುವರಿ ಮಾಡಿಕೊಂಡಿದ್ದ ನಿವಾಸಿಯು ಪರಿಸ್ಥಿತಿಯನ್ನು ಅರಿತು ತಾವೇ ಸ್ವತಃ ಒತ್ತುವರಿ ತೆರವುಗೊಳಿಸಲು ೫ ದಿನಗಳ ಕಾಲಾವಕಾಶ ಕೋರಿದರು. ಅದಕ್ಕೆ ಅಧಿಕಾರಿಗಳು ಸಮ್ಮತಿಸಿ ಗಡುವು ನೀಡಿದ್ದಾರೆ. ಇದರಿಂದಾಗಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಇಂದಿರಾ ನಗರದ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಸಾಧಿಕ್ ಸಾಬ್, ಮಂಜುನಾಥ್, ಜಾನಕಮ್ಮ, ಕೆಂಚಪ್ಪ, ವಿಶಾಲಾಕ್ಷಮ್ಮ, ದಾದಾಪೀರ್, ಅಲಮ್ಮಿ, ಜಾಫರ್ ಸಾಬ್, ಕಲೀಂ ಷರೀಷ್, ನೂರ್ ಜಾನ್, ಸಿದ್ದಿಕ್, ನಬಿ ಸೇರಿದಂತೆ ವಾರ್ಡಿನ ನಿವಾಸಿಗಳು ಉಪಸ್ಥಿತರಿದ್ದರು.

(Visited 1 times, 1 visits today)
kannada news local news tumakur tumkur ಜಿಲ್ಲಾಡಳಿತ ತುಮಕೂರು: ಹುಳಿಯಾರು
Previous Articleಯುವ ಮನಸ್ಸುಗಳನ್ನು ಸಂಗೀತದತ್ತ ಸೆಳೆಯುವ ನಿಟ್ಟಿನಲ್ಲಿ ತಾಯಂದಿರು ಮಾರ್ಗದರ್ಶನ ಅಗತ್ಯ: ಹಾಲಪ್ಪ
Next Article ೧೫ ಲಕ್ಷ ರೂ. ವಿಮೆ ಕ್ಲೆ0ಮ್ ಚೆಕ್ ವಿತರಣೆ
News Desk Benkiyabale

Related Posts

ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ

September 02, 2026 5:37 pm news

ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ

September 02, 2026 5:34 pm news

ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ

September 02, 2026 5:35 pm news
ತಾಜಾ ಸುದ್ಧಿಗಳು
news

ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ

September 02, 2026 5:37 pm
news

ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ

September 02, 2026 5:34 pm
news

ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ

September 02, 2026 5:35 pm
news

ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಪ್ರಜಾಸೇವಾ ಆಂದೋಲನ

September 02, 2026 5:30 pm
news

ಜ್ಞಾನಾರ್ಜನೆ-ನೈತಿಕ ಮೌಲ್ಯಗಳೇ ವಿದ್ಯಾರ್ಥಿಗಳ ಬದುಕಿನ ದಿಕ್ಸೂಚಿ

September 02, 2026 5:28 pm
news

ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು

September 01, 2026 5:08 pm
Our Youtube Channel
Our Picks

ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ

September 02, 2026 5:37 pm

ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ

September 02, 2026 5:34 pm

ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ

September 02, 2026 5:35 pm

ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಪ್ರಜಾಸೇವಾ ಆಂದೋಲನ

September 02, 2026 5:30 pm

ಜ್ಞಾನಾರ್ಜನೆ-ನೈತಿಕ ಮೌಲ್ಯಗಳೇ ವಿದ್ಯಾರ್ಥಿಗಳ ಬದುಕಿನ ದಿಕ್ಸೂಚಿ

September 02, 2026 5:28 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ

By News Desk BenkiyabaleSeptember 02, 2026 5:37 pm

ತುಮಕೂರು: ಕಾಡುಗೊಲ್ಲರು ಮೂಲತಃ ಬುಡಕಟ್ಟು ಸಮುದಾಯದವರಾಗಿದ್ದು, ವೈದಿಕ ಅಥವಾ ಶಿಷ್ಟ ಸಂಸ್ಕೃತಿಯ ಪ್ರಭಾವದಿಂದ ತನ್ನ ಮೂಲ ಸಂಸ್ಕೃತಿ ಹಾಗೂ ಆಚರಣೆಗಳನ್ನು…

ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ

September 02, 2026 5:34 pm

ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ

September 02, 2026 5:35 pm

ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಪ್ರಜಾಸೇವಾ ಆಂದೋಲನ

September 02, 2026 5:30 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.