BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬಾಗಿಲು ತೆರೆದರೂ ಓಡದ ಶಿಬಿರಾರ್ಥಿಗಳು
  • ಬಾರಪ್ಪಾ ಮಳೆರಾಯ.. ನಿನ್ನ ನಂಬಿದ ರೈತರ ಗತಿಯೇನಪ್ಪಾ?
  • ವಿಷಪೂರಿತ ಕೀಟನಾಶಕ ಸೇವಿಸಿ ಕುರಿ, ಮೇಕೆ ಸಾವು: ಪರಿಹಾರ ಮಂಜೂರಾತಿ ಆದೇಶ ಪತ್ರ
  • ಅನ್ಯಾಯ ಪ್ರಶ್ನಿಸಿದ್ದಕ್ಕೆ ರೌಡಿಶೀಟ್ ಓಪನ್
  • ಮಹಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಮಾತು: ಆಕ್ರೋಶ
  • ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’
  • ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ
  • ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬಾರಪ್ಪಾ ಮಳೆರಾಯ.. ನಿನ್ನ ನಂಬಿದ ರೈತರ ಗತಿಯೇನಪ್ಪಾ?
news

ಬಾರಪ್ಪಾ ಮಳೆರಾಯ.. ನಿನ್ನ ನಂಬಿದ ರೈತರ ಗತಿಯೇನಪ್ಪಾ?

ಯುವರೈತನ ಹಾಡಿನಲ್ಲಿ ಅಡಗಿದೆ ಒಣಗಿದ ಭೂಮಿಯ ಆರ್ತನಾದ: ಜಾನುವಾರುಗಳ ಸಂಕಷ್ಟ
By News Desk BenkiyabaleUpdated:July 18, 2026 4:11 pm

ಹುಳಿಯಾರು: “ಬಾರಪ್ಪಾ ಮಳೆರಾಯ… ಯಾಕಪ್ಪಾ ಬರುತ್ತಿಲ್ಲ…” – ಈ ಸಾಲುಗಳು ಯಾವುದೋ ಸಿನೆಮಾ ಗೀತೆಯಲ್ಲ, ಬದಲಿಗೆ ಮುಗಿಲ ಕಡೆಗೆ ಕಣ್ಣು ನೆಟ್ಟು ಕುಳಿತಿರುವ ಕೋಟ್ಯಂತರ ಅನ್ನದಾತರ ಎದೆಯಾಳದಿಂದ ಹೊರಹೊಮ್ಮಿದ ಆಕ್ರಂದನ. ಮಳೆಯಿಲ್ಲದೆ ಕಂಗಾಲಾಗಿರುವ ಇಂದಿನ ಕೃಷಿ ಸ್ಥಿತಿಯನ್ನು ತಾಲೂಕಿನ ಹುಳಿಯಾರು ಹೋಬಳಿಯ ದೊಡ್ಡಬಿದ್ರೆ ಗ್ರಾಮದ ಯುವರೈತ ಹಾಗೂ ಹವ್ಯಾಸಿ ಗಾಯಕ ರಮೇಶ್ ಅವರು ತಮ್ಮದೇ ಶೈಲಿಯಲ್ಲಿ ಹಾಡು ಕಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊAಡಿದ್ದಾರೆ. ಪ್ರಸ್ತುತ ಈ ವಿಡಿಯೋ ಗ್ರಾಮೀಣ ಭಾಗದ ಕರುಣಾಜನಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತೆ ವೈರಲ್ ಆಗುತ್ತಿದೆ.
ಅಭಿವೃದ್ಧಿ ಹೆಸರಲ್ಲಿ ವಿನಾಶ: ರೈತನ ಮಾರ್ಮಿಕ ಪ್ರಶ್ನೆ: “ಮರಗಿಡವನ್ನ ಕಡಿದೆವಾ, ಅರಣ್ಯ ನಾಶ ಮಾಡೇವಾ… ಅಭಿವೃದ್ಧಿ ಹೆಸರಲ್ಲಿ ಸರ್ವನಾಶ ಮಾಡೇವಾ…” ಎಂದು ರಮೇಶ್ ಹಾಡಿನ ಆರಂಭದಲ್ಲೇ ಪರಿಸರ ನಾಶದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮಾನವನ ಸ್ವಾರ್ಥ, ಆಧುನಿಕತೆಯ ಹೆಸರಿನಲ್ಲಿ ನಡೆಯುತ್ತಿರುವ ಕಾಡಿನ ಅವಸಾನವೇ ಇಂದು ಮಳೆ ಕೈಕೊಡಲು ಮುಖ್ಯ ಕಾರಣ ಎಂಬುದನ್ನು ಈ ಯುವ ರೈತ ಅತ್ಯಂತ ಮಾರ್ಮಿಕವಾಗಿ ನೆನಪಿಸಿದ್ದಾರೆ. ಪ್ರಕೃತಿಯ ಮುನಿಸಿಗೆ ಇಡೀ ಜೀವಸಂಕುಲವೇ ಬೆಲೆ ತೆರುತ್ತಿದೆ ಎಂಬ ಸತ್ಯ ಅವರ ಹಾಡಿನ ಪ್ರತಿ ಸಾಲಿನಲ್ಲೂ ಎದ್ದು ಕಾಣುತ್ತದೆ.
ಮೇವಿಲ್ಲ, ನೀರಿಲ್ಲ: ಮೂಕಪ್ರಾಣಿಗಳ ಗೋಳು!: ರಮೇಶ್ ಅವರು ತಮ್ಮ ಹೊಲದಲ್ಲಿ ನಿಂತು, ದನಕರುಗಳನ್ನು ಹಿಡಿದುಕೊಂಡು ಹಾಡುತ್ತಿರುವ ದೃಶ್ಯ ಯಾವುದೇ ಸಹೃದಯಿ ಗ್ರಾಮೀಣ ಜನರನ್ನು ಕಣ್ಣೀರು ತರಿಸುವಂತಿದೆ. “ದನಕರುಗಳಿಗೆ ಮೇವಿಲ್ಲ, ಕೆರೆಕಟ್ಟೆಗಳಲ್ಲಿ ನೀರಿಲ್ಲ…” ಎನ್ನುವ ಸಾಲುಗಳು ಹಳ್ಳಿಗಳ ಇಂದಿನ ವಾಸ್ತವ ಸ್ಥಿತಿಯನ್ನು ಬಿಚ್ಚಿಡುತ್ತವೆ. ಹನಿ ಮಳೆಯೂ ಇಲ್ಲದೆ ಹಸಿರೆಲ್ಲ ಒಣಗಿ ಹೋಗಿದ್ದು, ಮೂಕಪ್ರಾಣಿಗಳಿಗೆ ತಿನ್ನಲು ಹುಲ್ಲು ಸಿಗುತ್ತಿಲ್ಲ. ಹಳ್ಳಿಗಳ ಜೀವಾಳವಾಗಿರುವ ಕೆರೆ, ಕಟ್ಟೆಗಳು, ಬಾವಿಗಳು ತಳ ಹಿಡಿದಿದ್ದು, ಕುಡಿಯುವ ನೀರಿಗೂ ಜಾನುವಾರುಗಳು ತತ್ತರಿಸುತ್ತಿವೆ. ರಮೇಶ್ ಹಂಚಿಕೊAಡಿರುವ ವಿಡಿಯೋದಲ್ಲಿ ತಲೆಯ ಮೇಲೆ ಒಣಗಿದ ಹುಲ್ಲಿನ ಮೂಟೆ ಹೊತ್ತು ಸಾಗುವ ರೈತ ಮಹಿಳೆಯ ಚಿತ್ರಣ, ಹಳ್ಳಿಗಳಲ್ಲಿ ಮೇವಿಗಾಗಿ ಪಡುತ್ತಿರುವ ಕಷ್ಟವನ್ನು ಸಾಬೀತುಪಡಿಸುತ್ತದೆ.
ಸ್ತಬ್ಧಗೊಂಡ ಕೃಷಿ ಚಟುವಟಿಕೆ: ರಮೇಶ್ ವಿಡಿಯೋದಲ್ಲಿ ಕಾಣಿಸುವಂತೆ ಇಡೀ ಭೂಮಿ ಒಣಗಿ ಬಂಜರಾಗಿದೆ. ಬಿತ್ತನೆಗೆ ಸಿದ್ಧವಾಗಬೇಕಿದ್ದ ಭೂಮಿ ಮಳೆಯಿಲ್ಲದೆ ಧೂಳೆಬ್ಬಿಸುತ್ತಿದೆ. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಕೈಯಲ್ಲಿ ನೇಗಿಲು ಹಿಡಿಯಬೇಕಾದ ರೈತರು, ಮುಗಿಲತ್ತ ಮುಖ ಮಾಡಿ ನಿಟ್ಟುಸಿರು ಬಿಡುತ್ತಿದ್ದಾರೆ. “ನೀ ಹಿಂಗೆ ಮಾಡಿದರೆ ರೈತರ ಗತಿಯೋ ಏನಪ್ಪಾ… ರೈತರ ಸ್ಥಿತಿಯೋ ಹೆಂಗಪ್ಪಾ…” ಎಂಬ ರಮೇಶ್ ಅವರ ಆಕ್ರಂದನ ಕೇವಲ ಒಬ್ಬ ರೈತನದ್ದಲ್ಲ, ಇಡೀ ಕೃಷಿ ಸಮುದಾಯದ ಆತಂಕವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದ ಕಳಕಳಿ: ಯುವ ರೈತ ರಮೇಶ್ ಅವರ ಈ ಹಾಡು ಕೇವಲ ಮನರಂಜನೆಯಲ್ಲ, ಅದು ವ್ಯವಸ್ಥೆಯ ವಿರುದ್ಧ ಮತ್ತು ಪ್ರಕೃತಿಯ ಮುನಿಸಿನ ವಿರುದ್ಧದ ಪ್ರತಿಭಟನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, “ರೈತನ ನೋವನ್ನು ಇಷ್ಟೊಂದು ಅರ್ಥಗರ್ಭಿತವಾಗಿ ಯಾರು ಹೇಳಲು ಸಾಧ್ಯವಿಲ್ಲ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ, ದೊಡ್ಡಬಿದ್ರೆಯ ಈ ಯುವ ರೈತನ ಹಾಡು ತಾಲೂಕಿನಲ್ಲಿ ತಲೆದೂರಿರುವ ಭೀಕರ ಬರ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಸರ್ಕಾರ ಹಾಗೂ ಸಂಬAಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಜಾನುವಾರುಗಳಿಗೆ ಮೇವಿನ ಬ್ಯಾಂಕ್ ತೆರೆಯುವುದು ಹಾಗೂ ರೈತರ ನೆರವಿಗೆ ಧಾವಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

(Visited 1 times, 1 visits today)
Chikkanayakanahalli kannada news karnataka local news tumakur tumkur tumkur news ಚಿಕ್ಕನಾಯಕನಹಳ್ಳಿ ಹುಳಿಯಾರು
Previous Articleವಿಷಪೂರಿತ ಕೀಟನಾಶಕ ಸೇವಿಸಿ ಕುರಿ, ಮೇಕೆ ಸಾವು: ಪರಿಹಾರ ಮಂಜೂರಾತಿ ಆದೇಶ ಪತ್ರ
Next Article ಬಾಗಿಲು ತೆರೆದರೂ ಓಡದ ಶಿಬಿರಾರ್ಥಿಗಳು
News Desk Benkiyabale

Related Posts

ಬಾಗಿಲು ತೆರೆದರೂ ಓಡದ ಶಿಬಿರಾರ್ಥಿಗಳು

July 18, 2026 4:13 pm news

ವಿಷಪೂರಿತ ಕೀಟನಾಶಕ ಸೇವಿಸಿ ಕುರಿ, ಮೇಕೆ ಸಾವು: ಪರಿಹಾರ ಮಂಜೂರಾತಿ ಆದೇಶ ಪತ್ರ

July 18, 2026 4:08 pm news

ಅನ್ಯಾಯ ಪ್ರಶ್ನಿಸಿದ್ದಕ್ಕೆ ರೌಡಿಶೀಟ್ ಓಪನ್

July 18, 2026 4:07 pm news
ತಾಜಾ ಸುದ್ಧಿಗಳು

ಬಾಗಿಲು ತೆರೆದರೂ ಓಡದ ಶಿಬಿರಾರ್ಥಿಗಳು

July 18, 2026 4:13 pm

ಬಾರಪ್ಪಾ ಮಳೆರಾಯ.. ನಿನ್ನ ನಂಬಿದ ರೈತರ ಗತಿಯೇನಪ್ಪಾ?

July 18, 2026 4:11 pm

ವಿಷಪೂರಿತ ಕೀಟನಾಶಕ ಸೇವಿಸಿ ಕುರಿ, ಮೇಕೆ ಸಾವು: ಪರಿಹಾರ ಮಂಜೂರಾತಿ ಆದೇಶ ಪತ್ರ

July 18, 2026 4:08 pm

ಅನ್ಯಾಯ ಪ್ರಶ್ನಿಸಿದ್ದಕ್ಕೆ ರೌಡಿಶೀಟ್ ಓಪನ್

July 18, 2026 4:07 pm

ಮಹಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಮಾತು: ಆಕ್ರೋಶ

July 18, 2026 4:05 pm

ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’

July 17, 2026 5:21 pm
Our Youtube Channel
Our Picks

ಬಾಗಿಲು ತೆರೆದರೂ ಓಡದ ಶಿಬಿರಾರ್ಥಿಗಳು

July 18, 2026 4:13 pm

ಬಾರಪ್ಪಾ ಮಳೆರಾಯ.. ನಿನ್ನ ನಂಬಿದ ರೈತರ ಗತಿಯೇನಪ್ಪಾ?

July 18, 2026 4:11 pm

ವಿಷಪೂರಿತ ಕೀಟನಾಶಕ ಸೇವಿಸಿ ಕುರಿ, ಮೇಕೆ ಸಾವು: ಪರಿಹಾರ ಮಂಜೂರಾತಿ ಆದೇಶ ಪತ್ರ

July 18, 2026 4:08 pm

ಅನ್ಯಾಯ ಪ್ರಶ್ನಿಸಿದ್ದಕ್ಕೆ ರೌಡಿಶೀಟ್ ಓಪನ್

July 18, 2026 4:07 pm

ಮಹಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಮಾತು: ಆಕ್ರೋಶ

July 18, 2026 4:05 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಬಾಗಿಲು ತೆರೆದರೂ ಓಡದ ಶಿಬಿರಾರ್ಥಿಗಳು

By News Desk BenkiyabaleJuly 18, 2026 4:13 pm

ಹುಳಿಯಾರು: ಮದ್ಯವೆಂಬ ಹೆಮ್ಮಾರಿಗೆ ತುತ್ತಾಗಿ ಬದುಕು ಕಳೆದುಕೊಳ್ಳುತ್ತಿದ್ದ ನೂರಾರು ಜೀವಗಳಿಗೆ ಹೊಸ ಭರವಸೆ ತುಂಬುವ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ…

ಬಾರಪ್ಪಾ ಮಳೆರಾಯ.. ನಿನ್ನ ನಂಬಿದ ರೈತರ ಗತಿಯೇನಪ್ಪಾ?

July 18, 2026 4:11 pm

ವಿಷಪೂರಿತ ಕೀಟನಾಶಕ ಸೇವಿಸಿ ಕುರಿ, ಮೇಕೆ ಸಾವು: ಪರಿಹಾರ ಮಂಜೂರಾತಿ ಆದೇಶ ಪತ್ರ

July 18, 2026 4:08 pm

ಅನ್ಯಾಯ ಪ್ರಶ್ನಿಸಿದ್ದಕ್ಕೆ ರೌಡಿಶೀಟ್ ಓಪನ್

July 18, 2026 4:07 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.