BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಎಂಪ್ರೆಸ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನೆ
  • ಮಾನವ ಕಳ್ಳ ಸಾಗಾಣಿಕೆ, ಹಕ್ಕುಗಳ ಉಲ್ಲಂಘನೆ: ನ್ಯಾ.ಹವಲೆ
  • ನಾಲ್ಕು ದಿನಕ್ಕೊಮ್ಮೆ ನೀರು: ಶಾಲೆಯ ಬಿಸಿಯೂಟಕ್ಕೂ ತಟ್ಟಿದ ಸಂಕಷ್ಟ
  • ಶನಿವಾರ, ಭಾನುವಾರವೂ ಎಸ್‌ಐಆರ್ ಪ್ರಕ್ರಿಯೆ
  • ದೇಶದ ಶಿಕ್ಷಣ ವ್ಯವಸ್ಥೆ ರಾಜಕಾರಣದಷ್ಟೇ ಕಲುಷಿತಗೊಂಡಿದೆ
  • ಕೊಲ್ಲಾಪುರದಮ್ಮ, ಕರುಗಲ್ಲಮ್ಮ ಜಾತ್ರಾ ಮಹೋತ್ಸವ
  • ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಸಂಘಟನ್ ಅಭಿಯಾನ
  • ಸಾಮಾನ್ಯ ಜ್ಞಾನ ಹೆಚ್ಚಲು ರಸಪ್ರಶ್ನೆ ಸ್ಪರ್ಧೆಗಳು ಸಹಕಾರಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನಾಲ್ಕು ದಿನಕ್ಕೊಮ್ಮೆ ನೀರು: ಶಾಲೆಯ ಬಿಸಿಯೂಟಕ್ಕೂ ತಟ್ಟಿದ ಸಂಕಷ್ಟ
news

ನಾಲ್ಕು ದಿನಕ್ಕೊಮ್ಮೆ ನೀರು: ಶಾಲೆಯ ಬಿಸಿಯೂಟಕ್ಕೂ ತಟ್ಟಿದ ಸಂಕಷ್ಟ

ದಸೂಡಿಯಲ್ಲಿ ತಿಂಗಳಿAದ ತೀವ್ರ ಜಲಕ್ಷಾಮ, ಹದಿನೈದು ದಿನದಿಂದ ಟ್ಯಾಂಕರ್ ನೀರೇ ಗತಿ
By News Desk BenkiyabaleUpdated:July 31, 2026 4:52 pm

ಹುಳಿಯಾರು: ಹುಳಿಯಾರು ಸಮೀಪದ ದಸೂಡಿ ಗ್ರಾಮದಲ್ಲಿ ಕಳೆದೊಂದು ತಿಂಗಳಿAದ ಕುಡಿಯುವ ನೀರಿನ ತೀವ್ರ ಅಭಾವ ಸೃಷ್ಟಿಯಾಗಿದ್ದು, ಗ್ರಾಮಸ್ಥರು ಜಲಕ್ಷಾಮದಿಂದ ಕಂಗೆಟ್ಟಿದ್ದಾರೆ. ಸುಮಾರು ೮೫೦ ಕ್ಕೂ ಹೆಚ್ಚು ಮನೆಗಳು ಹಾಗೂ ೫,೦೦೦ ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ದೊಡ್ಡ ಗ್ರಾಮದಲ್ಲಿ ಈಗ ನೀರಿಗಾಗಿ ಅಹಾಕಾರ ಮುಗಿಲು ಮುಟ್ಟಿದೆ.
ಗ್ರಾಮದ ಬನಶಂಕರಿ ದೇವಸ್ಥಾನದ ಬಳಿ, ರಂಗನಾಥಪ್ಪ ಅವರ ಮನೆಯ ಹತ್ತಿರ, ಬಾಳೆಗೊಂದಿ ಹಳ್ಳ, ಆಸ್ಪತ್ರೆಯ ಮುಂಭಾಗ, ಕೆ.ಕೆ.ಕುಮಾರಣ್ಣ ಅವರ ಮನೆಯ ಹತ್ತಿರ ಹಾಗೂ ಅರಳಿಮರದ ಬಳಿ ಹೀಗೆ ಒಟ್ಟು ಆರು ಸಾರ್ವಜನಿಕ ಕೊಳವೆಬಾವಿಗಳಿದ್ದವು. ಇವುಗಳ ಮೂಲಕವೇ ಇಡೀ ಗ್ರಾಮಕ್ಕೆ ಇಷ್ಟೂ ದಿನ ನೀರು ಪೂರೈಸಲಾಗುತ್ತಿತ್ತು. ಆದರೆ, ಪ್ರಕೃತಿಯ ಮುನಿಸೋ ಅಥವಾ ಅಂತರ್ಜಲದ ಅತಿಯಾದ ಬಳಕೆಯೋ, ನಾಲ್ಕು ಕೊಳವೆಬಾವಿಗಳಲ್ಲಿ ನೀರು ಸಂಪೂರ್ಣವಾಗಿ ಬರಿದಾಗಿದ್ದು, ಉಳಿದ ಎರಡು ಕೊಳವೆ ಬಾವಿಗಳ ಲ್ಲಿಯೂ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ.
೧೫ ದಿನಗಳಿಂದ ಟ್ಯಾಂಕರ್ ಆಸರೆ: ಪಂಚಾಯಿತಿಯವರು ತಕ್ಕಮಟ್ಟಿಗೆ ನೀರಿರುವ ಕೊಳವೆಬಾವಿಯಿಂದ ಓವರ್‌ಹೆಡ್ ಟ್ಯಾಂಕ್‌ಗೆ ನೀರು ತುಂಬಿಸಿ, ಮೂರು-ನಾಲ್ಕು ದಿನಕ್ಕೊಮ್ಮೆ ಒಂದೊAದು ಬೀದಿಗೆ ನೀರು ಹರಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಕಳೆದ ೧೫ ದಿನಗಳಿಂದ ಈ ಆಸರೆಯೂ ಕಸಿದುಕಂಡAತಾಗಿದ್ದು, ಈಗ ಖಾಸಗಿ ಕೊಳವೆಬಾವಿಗಳಿಂದ ಟ್ಯಾಂಕರ್ ಮೂಲಕ ನೀರು ತರಿಸಿ ಸರಬರಾಜು ಮಾಡುವುದು ಅನಿವಾರ್ಯವಾಗಿದೆ. ಆದರೂ ಸುತ್ತಮುತ್ತಲ ಜಮೀನು ಹಾಗೂ ಕೊಳವೆಬಾವಿಗಳಲ್ಲೂ ನೀರು ಸಿಗದಿರುವುದು ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
ಶಾಲೆಗಳಿಗೂ ಆವರಿಸಿದ ಜಲಕಂಠಕ: ನೀರಿನ ಅಭಾವದ ಬಿಸಿ ಕೇವಲ ಮನೆಗಳಿಗಷ್ಟೇ ಅಲ್ಲದೆ ಶಾಲೆಗಳಿಗೂ ತಟ್ಟಿದೆ. ಶಾಲೆಯಲ್ಲಿ ಬಿಸಿಊಟ ತಯಾರಿಸಲು ನೀರಿಲ್ಲದೆ, ಅಕ್ಕಪಕ್ಕದ ಜಮೀನುಗಳಲ್ಲಿ ’ಮೋಟಾರ್ ಲೈನ್ ಥ್ರೀ ಫೇಸ್ ಕರೆಂಟ್’ ಬಂದಾಗ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೋಗಿ ನೀರು ತಂದು ಸ್ಟಾಕ್ ಮಾಡಿಕೊಳ್ಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಪಕ್ಕದ ಉಮ್ಲಾನಾಯ್ಕನತಾಂಡ್ಯ, ಬಲ್ಲಪ್ಪನಹಟ್ಟಿಯಲ್ಲೂ ಕೂಡ ನೀರಿದ ತಾತ್ವರ ಇದೆ.
ದಸೂಡಿಯಲ್ಲಿದ್ದ ’ಶುದ್ಧ ಕುಡಿಯುವ ನೀರಿನ ಘಟಕ’ ಕೂಡ ನೀರಿನ ಕೊರತೆಯಿಂದಾಗಿ ನಿಷ್ಕಿçಯಗೊಳ್ಳುವ ಹಂತ ತಲುಪಿದೆ. ಬೆಳಿಗ್ಗೆ ಕೇವಲ ೩೦ ರಿಂದ ೪೦ ಕ್ಯಾನ್ ನೀರು ಫಿಲ್ಟರ್ ಆದರೆ ದೊಡ್ಡ ವಿಷಯ ಎಂಬAತಾಗಿದೆ. ಇದರಿಂದಾಗಿ ಗ್ರಾಮಸ್ಥರು ಕುಡಿಯಲು ಮತ್ತು ಅಡುಗೆ ಮಾಡಲು ದಿನವೂ ಖಾಸಗಿ ಕೊಳವೆಬಾವಿಗಳಿಂದ ನೀರು ಹೊತ್ತು ತರುತ್ತಿದ್ದಾರೆ. ಕರೆಂಟ್ ಬಂದಾಗ ಅಕ್ಕಪಕ್ಕದ ಜಮೀನು ಮಾಲೀಕರನ್ನು ಕಾಡಿ-ಬೇಡಿ, ಸುಡುವ ಬಿಸಿಲಿನಲ್ಲಿ ಸಾಲು ನಿಂತು ನೀರು ತರುವುದು ಇಲ್ಲಿನ ಮಹಿಳೆಯರು ಮತ್ತು ಮಕ್ಕಳ ದಿನಚರಿಯಾಗಿದೆ.
ಬೇಸಿಗೆಯ ನೀರಿನ ಸಮಸ್ಯೆ ನಿವಾರಿಸಲು ತಾಲೂಕಿನಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚನೆ ಮಾಡಿದ್ದು ಹದಿನೈದು ದಿನಕ್ಕೊಮ್ಮೆ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುತ್ತದೆ. ಆದರೆ ದಸೂಡಿ ನೀರಿನ ಸಮಸ್ಯೆ ಈ ಸಮಿತಿಗೆ ತಿಳಿದಿದೆಯೋ ಅಥವಾ ತಿಳಿದೂ ಸ್ಪಂಧಿಸದೆ ನಿರ್ಲಕ್ಷಿö್ಯಸಿದ್ದಾರೋ ತಿಳಿಯದಾಗಿದೆ. ಗ್ರಾಪಂ ಪಿಡಿಒ ಅವರಿಗೆ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಹಾಗಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಎಚ್ಚೆತ್ತುಕೊಂಡು ದಸೂಡಿ ಗ್ರಾಮಕ್ಕೆ ಶಾಶ್ವತ ನೀರಿನ ಸೌಕರ್ಯ ಒದಗಿಸದಿದ್ದರೆ, ಮುಂಬರುವ ದಿನಗಳಲ್ಲಿ ರಸ್ತೆಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

(Visited 1 times, 1 visits today)
Chikkanayakanahalli kannada news karnataka local news Tumkur mahanagara palike tumkur news ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ಹುಳಿಯಾರು
Previous Articleಶನಿವಾರ, ಭಾನುವಾರವೂ ಎಸ್‌ಐಆರ್ ಪ್ರಕ್ರಿಯೆ
Next Article ಮಾನವ ಕಳ್ಳ ಸಾಗಾಣಿಕೆ, ಹಕ್ಕುಗಳ ಉಲ್ಲಂಘನೆ: ನ್ಯಾ.ಹವಲೆ
News Desk Benkiyabale

Related Posts

ಎಂಪ್ರೆಸ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನೆ

July 31, 2026 4:55 pm news

ಮಾನವ ಕಳ್ಳ ಸಾಗಾಣಿಕೆ, ಹಕ್ಕುಗಳ ಉಲ್ಲಂಘನೆ: ನ್ಯಾ.ಹವಲೆ

July 31, 2026 4:53 pm news

ಶನಿವಾರ, ಭಾನುವಾರವೂ ಎಸ್‌ಐಆರ್ ಪ್ರಕ್ರಿಯೆ

July 31, 2026 4:50 pm news
ತಾಜಾ ಸುದ್ಧಿಗಳು
news

ಎಂಪ್ರೆಸ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನೆ

July 31, 2026 4:55 pm
news

ಮಾನವ ಕಳ್ಳ ಸಾಗಾಣಿಕೆ, ಹಕ್ಕುಗಳ ಉಲ್ಲಂಘನೆ: ನ್ಯಾ.ಹವಲೆ

July 31, 2026 4:53 pm
news

ನಾಲ್ಕು ದಿನಕ್ಕೊಮ್ಮೆ ನೀರು: ಶಾಲೆಯ ಬಿಸಿಯೂಟಕ್ಕೂ ತಟ್ಟಿದ ಸಂಕಷ್ಟ

July 31, 2026 4:52 pm
news

ಶನಿವಾರ, ಭಾನುವಾರವೂ ಎಸ್‌ಐಆರ್ ಪ್ರಕ್ರಿಯೆ

July 31, 2026 4:50 pm
news

ದೇಶದ ಶಿಕ್ಷಣ ವ್ಯವಸ್ಥೆ ರಾಜಕಾರಣದಷ್ಟೇ ಕಲುಷಿತಗೊಂಡಿದೆ

July 30, 2026 5:34 pm
news

ಕೊಲ್ಲಾಪುರದಮ್ಮ, ಕರುಗಲ್ಲಮ್ಮ ಜಾತ್ರಾ ಮಹೋತ್ಸವ

July 30, 2026 5:31 pm
Our Youtube Channel
Our Picks

ಎಂಪ್ರೆಸ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನೆ

July 31, 2026 4:55 pm

ಮಾನವ ಕಳ್ಳ ಸಾಗಾಣಿಕೆ, ಹಕ್ಕುಗಳ ಉಲ್ಲಂಘನೆ: ನ್ಯಾ.ಹವಲೆ

July 31, 2026 4:53 pm

ನಾಲ್ಕು ದಿನಕ್ಕೊಮ್ಮೆ ನೀರು: ಶಾಲೆಯ ಬಿಸಿಯೂಟಕ್ಕೂ ತಟ್ಟಿದ ಸಂಕಷ್ಟ

July 31, 2026 4:52 pm

ಶನಿವಾರ, ಭಾನುವಾರವೂ ಎಸ್‌ಐಆರ್ ಪ್ರಕ್ರಿಯೆ

July 31, 2026 4:50 pm

ದೇಶದ ಶಿಕ್ಷಣ ವ್ಯವಸ್ಥೆ ರಾಜಕಾರಣದಷ್ಟೇ ಕಲುಷಿತಗೊಂಡಿದೆ

July 30, 2026 5:34 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಎಂಪ್ರೆಸ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನೆ

By News Desk BenkiyabaleJuly 31, 2026 4:55 pm

ತುಮಕೂರು: ನಗರದ ಮಧ್ಯಭಾಗದಲ್ಲಿರುವ ಶತಮಾನವನ್ನು ಕಂಡಿರುವ ಎಂಪ್ರೆಸ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ೨೦೨೬-೨೭ನೇ ಶೈಕ್ಷಣಿಕ ಸಾಲಿನ ಸಾಂಸ್ಕöÈತಿಕ,…

ಮಾನವ ಕಳ್ಳ ಸಾಗಾಣಿಕೆ, ಹಕ್ಕುಗಳ ಉಲ್ಲಂಘನೆ: ನ್ಯಾ.ಹವಲೆ

July 31, 2026 4:53 pm

ನಾಲ್ಕು ದಿನಕ್ಕೊಮ್ಮೆ ನೀರು: ಶಾಲೆಯ ಬಿಸಿಯೂಟಕ್ಕೂ ತಟ್ಟಿದ ಸಂಕಷ್ಟ

July 31, 2026 4:52 pm

ಶನಿವಾರ, ಭಾನುವಾರವೂ ಎಸ್‌ಐಆರ್ ಪ್ರಕ್ರಿಯೆ

July 31, 2026 4:50 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.