ತುಮಕೂರು: ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಕೌಶಲ್ಯವಿಕಾಸ ಕಾರ್ಯಕ್ರಮದ ಭಾಗವಾಗಿ ತಾಂತ್ರಿಕ ಶಿಕ್ಷಣ ಪಡೆದ ಮಕ್ಕಳಿಗೆ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಅಗತ್ಯವಿರುವ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸ್ಕಿಲ್ ಇಂಡಿಯಾ ಕೆಲಸ ಮಾಡುತ್ತಿದೆ ಎಂದು ಸ್ಕಿಲ್ ಇಂಡಿಯಾದ ಪಿಎಂಕೆವಿವೈನ ಸಂಚಾಲಕರಾದ ಧಾರವಾಡ ಐಐಟಿ ಪ್ರಾದ್ಯಾಪಕ ಅಬ್ದುಲ್ ತಿಳಿಸಿದ್ದಾರೆ.
ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ಹೆಚ್.ಎಂ.ಎಸ್. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಭಾರತ ಸರಕಾರದ ಸ್ಕಿಲ್ ಇಂಡಿಯದ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ತರಬೇತಿ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರೇರೆಯುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಧಾರವಾಡ ಐಐಟಿಯ ಮೇಲುಸ್ತುವಾರಿ ಯಲ್ಲಿ ನುರಿತ ತಜ್ಞರು ತರಬೇತಿಗೆ ಆಯ್ಕೆಯಾದ ಮಕ್ಕಳಿಗೆ ಕಂಪ್ಯೂಟರ್ ಸೈನ್ಸ್, ಮೇಕಾನಿಕಲ್, ಎಲೆಕ್ಟಾçನಿಕ್ ಅಂಡ್ ಕಮ್ಯುನಿಕೇಷನ್ ಹಾಗೂ ಎಐ(ಕೃತಕ ಬುದ್ದಿಮತ್ತೆ) ಈ ವಿಷಯಗಳಲ್ಲಿ ತರಬೇತಿ ನೀಡುವ ಮೂಲಕ ಅವರನ್ಬು ಕೌಶಲ್ಯಯುಕ್ತರನ್ನಾಗಿ ಪರಿರ್ವತಿಸಿ, ಉದ್ಯೋಗ ಒದಗಿಸುವ ಕೆಲಸ ಮಾಡುತ್ತಿದೆ. ಈ ವರ್ಷದಿಂದ ಪಿಎಂಕೆಇವಿವೈನ ಅಲ್ಪಸಂಖ್ಯಾತರ ಮಕ್ಕಳಿಗೆ ತರಬೇತಿ ನೀಡಲು ಹೆಚ್.ಎಂ.ಎಸ್. ಪಾಲಿಟೆಕ್ನಿಕ್ ಕಾಲೇಜು ಆಯ್ಕೆಯಾಗಿದ್ದು ಶೀಘ್ರದಲ್ಲಿಯೇ ತರಬೇತಿ ಆರಂಭವಾಗಲಿದೆ ಎಂದರು.
ಪಿಎAಕೆವಿವೈ ಕೌಶಲ್ಯ ತರಬೇತಿಗೆ ಈಗಾಗಲೇ ಐಟಿಐ,ಡಿಪ್ಲೋಮಾ ಕಲಿಯುತ್ತಿರುವ ವಿದ್ಯಾರ್ಥಿಗಳ ಜೊತೆಗೆ, ಐಟಿಐ,ಡಿಪ್ಲೋಮಾ ಕಲಿತು ಮನೆಯಲ್ಲಿರುವ ಪದವಿಧರರು ಪ್ರವೇಶ ಪಡೆಯುವ ಅವಕಾಶವಿದೆ.ತರಬೇತಿ ಅವಧಿಯಲ್ಲಿ ಕೌಶಲ್ಯ ತರಬೇತಿಯ ಜೊತೆಗೆ, ೧೦೦೦ ರೂ ಶಿಷ್ಯ ವೇತನ ದೊರೆಯಲಿದೆ.ತರಬೇತಿ ಪಡೆದ ಪ್ರತಿಯೊಬ್ಬರಿಗೂ ಸರ್ಟಿಫಿಕೇಟ್ ನೀಡಲಾಗುವುದು.ಈ ಸರ್ಟಿಫಿಕೇಟ್ ಗೆ ವಿಶ್ವದಾದ್ಯಂತ ಮಾನ್ಯತೆಯಿದ್ದು, ಭಾರತದಲ್ಲಿ ಅಲ್ಲದೆ ವಿದೇಶದಲ್ಲಿಯೂ ಉದ್ಯೋಗ ಪಡೆಯಬಹುದು.ಇದಕ್ಕೆ ಭಾರತ ಸರಕಾರದ ಸ್ಕಿಲ್ ಇಂಡಿಯಾ ಸಹಕಾರ ನೀಡಲಿದೆ. ಒಂದು ವರ್ಷಕ್ಕೆ ಐದು ನೂರು ಜನರಿಗೆ ತರಬೇತಿ ನೀಡುವ ಅವಕಾಶವಿದೆ.ಅಲ್ಪಸಂಖ್ಯಾತರ ಮಕ್ಕಳ ಜೊತೆ ಇತರೆ ಸಮುದಾಯದ ಮಕ್ಕಳು ಸಹ ತರಬೇತಿ ಪಡೆಯಲು ಅವಕಾಶವಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು.
ಹೆಚ್.ಎA.ಎಸ್. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ರಬ್ ಮಾತನಾಡಿ, ನಮ್ಮ ಸಂಸ್ಥೆ ಅಧ್ಯಕ್ಷರಾದ ಡಾ.ಎಸ್.ಷಪಿಅಹಮದ್ ಅವರ ನಿರಂತರ ಪ್ರಯತ್ನದ ಫಲವಾಗಿ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ತರಬೇತಿಗೆ ನಮ್ಮ ಸಂಸ್ಥೆ ಆಯ್ಕೆಯಾಗಿದೆ.ತಾಂತ್ರಿಕ ತಜ್ಞರು ನಮ್ಮ ಕಾಲೇಜಿಗೆ ಆಗಮಿಸಿ, ಇಲ್ಲಿನ ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿ,ಇಲ್ಲಿನ ಭೋಧಕ ಸಿಬ್ಬಂದಿಗಳ ಜೊತೆ ವಿಚಾರ ವಿನಿಮಯ ನಡೆಸಿ, ಒಪ್ಪಿಗೆ ಸೂಚಿಸಿದ್ದಾರೆ. ಇದು ತರಬೇತಿಯ ಜೊತೆಗೆ ಉದ್ಯೋಗವನ್ಬು ನೀಡುವ ಮಹತ್ವದ ಯೋಜನೆಯಾಗಿದ್ದು, ಒಂದು ವೇಳೆ ತರಬೇತಿ ನಂತರ ಉದ್ಯೋಗಕ್ಕೆ ಆಯ್ಕೆಯಾಗುವುದು ತಡವಾದಲ್ಲಿ, ಸುಮಾರು ಎರಡು ವರ್ಷಗಳ ವರೆಗೆ ಪಿಎಂಕೆವಿವೈ ಅಡಿಯಲ್ಲಿ ನಿರುದ್ಯೋಗ ಭತ್ಯೆ ಸಹ ದೊರೆಯಲಿದೆ. ಹಾಗಾಗಿ ಹಾಲಿ ಈ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ಎಂದಿನ ಕಲಿಕೆಗೆ ತದರೆಯಾಗದ ರೀತಿ ವಿಶೇಷ ತರಗತಿಗಳ ಮೂಲಕವೂ ಕಲಿಯಲು ಅವಕಾಶವಿದೆ.ಧಾರವಾಡ ಐಐಟಿ ಕಾಲೇಜಿನ ನುರಿತ ಪ್ರಾಧ್ಯಾಪಕರು ಪಠ್ಯಕ್ರಮ ರೂಪಿಸಲಿದ್ದಾರೆ. ಅಸಕ್ತ ಭೋಧಕರು ಸಹ ಶಿಕ್ಷಕರಾಗಿ ಗೌರವಧನದ ಆಧಾರದಲ್ಲಿ ಕಲಿಸಲು ಅವಕಾಶವಿದೆ.ಇದರ ಲಾಭ ಪಡೆದುಕೊಳ್ಳುವಂತೆ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್.ಎಂ.ಎಸ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ಷಪಿಅಹಮದ್, ಇಂದು ಕೌಶಲ್ಯ ಎಲ್ಲರಿಗೂ ಅಗತ್ಯವಿದೆ. ಪಿಎಂಕೆವಿವೈ ಜ್ಞಾನದ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗಿದ್ದು, ಇಂದಿನ ಕೈಗಾರಿಕೆಗಳ ಅಗತ್ಯಕ್ಕೆ ಅನುಗುಣವಾದ ಮಾನವ ಸಂಪನ್ಮೂಲವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸ್ಕಿಲ್ ಇಂಡಿಯಾ ಇಂತಹ ಕಾರ್ಯಕ್ರಮಗಳನ್ಬು ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ರೂಪಿಸಿದೆ. ಐಐಟಿ ಧಾರವಾಡ ಇದರ ನೂಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.ಅಲ್ಲಿನ ಶಿಕ್ಷಕರು ನಮ್ಮ ತರಬೇತಿ ಕೇಂದ್ರಕ್ಕೆ ಆಗಮಿಸಿ ಯುವಜನತೆಗೆ ಅಗತ್ಯ ಇರುವ ತಂತ್ರಜ್ಞಾನವನ್ನು ಬೋಧಿಸಲಿದ್ದಾರೆ. ಅಲ್ಲದೆ ನಮ್ಮ ಕಾಲೇಜಿನ ಟೀಚರ್ ಗಳಿಗೂ ಪಾಠ ಮಾಡಲು ಅವಕಾಶವಿದೆ. ಅದಕ್ಕೆ ತಕ್ಕ ಗೌರವಧನವನ್ನು ಸ್ಕಿಲ್ ಇಂಡಿಯಾ ಭರಿಸಲಿದೆ. ವಿದ್ಯಾವಂತರು ಉದ್ಯೋಗವಿಲ್ಲದೆ ಬರಿಗೈಯಲ್ಲಿ ಇರಬಾರದು ಎಂಬ ಉದ್ದೇಶ ಇದರ ಹಿಂದಿದೆ.ತರಬೇತಿ ಪಡೆಯುವ ಮಕ್ಕಳಿಗೆ ಹಾಸ್ಟಲ್ ಸೌಲಭ್ಯ ಸಹ ದೊರೆಯಲಿದೆ.ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳುವಂತೆ ತಿಳಿಸಿದರು.
ಉಪನ್ಯಾಸಕರಾದ ತಬರೀಜ್ ಮತ್ತಿತರರು ವೇದಿಕೆಯಲ್ಲಿದ್ದರು.
(Visited 1 times, 1 visits today)





