BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ
  • ಸಕಾಲಕ್ಕೆ ಮಳೆ ಇಲ್ಲದೇ ರೈತರು ಕಂಗಾಲು
  • ಪರಿಶಿಷ್ಟ ಪಂಗಡದ ಮೀಸಲಾತಿ ಕೈಬಿಟ್ಟಿರುವುದನ್ನ ಖಂಡಿಸಿದ ಗ್ರಾಮಸ್ಥರು ಮತದಾನದಿಂದ ದೂರವಿರುವುದಾಗಿ ಎಚ್ಚರಿಕೆ
  • ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಮನವಿ
  • ಗೃಹಬಳಕೆ ಸಿಲಿಂಡರ್‌ಗಳ ವಾಣಿಜ್ಯ ಬಳಕೆಗೆ ಕಾನೂನು ಕ್ರಮ
  • ತಂಬಾಕು ಮುಕ್ತ ಗ್ರಾಮಗಳನ್ನಾಗಿಸಲು ಎಡಿಸಿ ಸೂಚನೆ
  • ನಂದಿಹಳ್ಳಿ ಗ್ರಾಮದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಬಿ.ಸುರೇಶ್‌ಬಾಬು ಚಾಲನೆ
  • ಬರ ಪರಿಸ್ಥಿತಿ, ಮುಂಗಾರು ಹಂಗಾಮು, ಕುಡಿಯುವ ನೀರಿನ ನಿರ್ವಹಣೆ ಸಮರ್ಪಕವಾಗಿ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸಕಾಲಕ್ಕೆ ಮಳೆ ಇಲ್ಲದೇ ರೈತರು ಕಂಗಾಲು
news

ಸಕಾಲಕ್ಕೆ ಮಳೆ ಇಲ್ಲದೇ ರೈತರು ಕಂಗಾಲು

ತುರುವೇಕೆರೆ ವಿಧಾನಸಭಾ ಕ್ಷೇತ್ರವನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಒತ್ತಾಯ
By News Desk BenkiyabaleUpdated:August 06, 2026 6:15 pm

ತುರುವೇಕೆರೆ: ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಕೆರೆ ಕಟ್ಟೆಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ಕುಸಿದು ಬೋರ್ ವೆಲ್‌ಗಳಲ್ಲಿ ಕುಸಿದಿದೆ. ಕೂಡಲೇ ತುರುವೇಕೆರೆ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಹಾಗೂ ಹಲವಾರು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಮತ್ತು ಬಿಜೆಪಿ (ಎನ್‌ಡಿಎ) ವತಿಯಿಂದ ಆ ೧೦ ರ ಸೋಮವಾರದಂದು ಹೇಮಾವತಿ ಕಛೇರಿ ಮುಂಭಾಗ ಅಹೋ ರಾತ್ರಿ ಧರಣಿ ಮಾಡಲಾಗುವುದು ಎಂದು ಜೆಡಿಎಸ್ ನ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬರಗಾಲ ತಾಂಡವಾಡುತ್ತಿದೆ. ರೈತರ ಆರ್ಥಿಕ ಬೆಳೆಗಳಾದ ತೆಂಗು ಮತ್ತು ಅಡಿಕೆ ಮರಗಳು ನೀರಿಲ್ಲದೇ ಸೊರಗಿವೆ. ಈ ಮಧ್ಯೆ ಜಿಲ್ಲೆಯ ರೈತರಿಗೆ ಆಶಾಕಿರಣವಾಗಿರುವ ಹೇಮಾವತಿ ನೀರನ್ನು ಕೂಡಲೇ ಕಾಲುವೆಗಳ ಮೂಲಕ ಎಲ್ಲಾ ಕೆರೆ ಕಟ್ಟೆಗಳಿಗೆ ಹರಿಸಬೇಕು. ಹೇಮಾವತಿ ಡ್ಯಾಂ ನಲ್ಲಿ ಈಗಾಗಲೇ ಸುಮಾರು ೨೯ ಟಿಎಂಸಿ ನೀರಿದೆ. ಈ ಹಿಂದೆ ೧೯ ಟಿಎಂಸಿ ನೀರಿದ್ದ ವೇಳೆಯೇ ಕಾಲುವೆಗಳ ಮೂಲಕ ನೀರು ಹರಿಸಲಾಗಿತ್ತು. ಈಗ ಸಾಕಷ್ಟು ನೀರಿದ್ದರೂ ಸಹ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.
ಜಿಲ್ಲೆಯ ರೈತರ ಪಾಲಿಗೆ ಮಾರಕವಾಗಿರುವ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿಯನ್ನು ಕೂಡಲೇ ತಡೆ ಹಿಡಿಯಬೇಕು. ಯಾವುದೇ ಕಾರಣಕ್ಕೂ ಅದನ್ನು ಮುಂದುವರೆಸಬಾರದು. ಈ ಕುರಿತು ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಬೇಕು ಎಂದು ಮುಖಂಡರು ಆಗ್ರಹಿಸಿದರು. ರೈತರಿಗೆ ಬೆಸ್ಕಾಂ ಸರಿಯಾದ ರೀತಿಯಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಇದರಿಂದಾಗಿ ರೈತರ ಬದುಕು ದುಃಸ್ಥಿತಿಯಲ್ಲಿದೆ.
ರಾಜ್ಯದ ಬಹುಪಾಲು ಡ್ಯಾಂ ಗಳು ನೀರಿಲ್ಲದೇ ಬಣಗುಡುತ್ತಿವೆ. ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮ ಖಂಡನೀಯ. ರಾಜ್ಯದ ಜನತೆಯ ಹಿತಕ್ಕೆ ಮೊದಲು ಆಧ್ಯತೆ ನೀಡಬೇಕು. ರಾಜ್ಯದ ಎಲ್ಲಾ ಕೆರೆ ಕಟ್ಟೆಗಳನ್ನು ತುಂಬಿಸಿದ ನಂತರ ತಮಿಳುನಾಡಿಗೆ ನೀರು ಹರಿಸಲಿ ಎಂದು ಹೇಳಿದರು.
ತಾಲೂಕಿನ ಹಿತದೃಷ್ಠಿಯಿಂದ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಎಲ್ಲರೂ ಒಟ್ಟಾಗಿ ಹೋರಾಟಕ್ಕೆ ಸಹಕಾರ ನೀಡಬೇಕೆಂದು ಶಾಸಕರಾದ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಮಸಾಲಾ ಜಯರಾಮ್ ಮತ್ತು ಎಂ.ಡಿ.ಲಕ್ಷಿ÷್ಮÃನಾರಾಯಣ್ ಮನವಿ ಮಾಡಿಕೊಂಡರು.
ತಾಲೂಕಿನ ಹಿರಿಯ ರೈತ ಮುಖಂಡ ಅರಳೀಕೆರೆ ಶಿವಯ್ಯನವರು ತಾಲೂಕಿನ ಪ್ರಮುಖ ಕೆರೆ ಕಟ್ಟೆಗಳ ಸಾಂದ್ರತೆ ಮತ್ತು ಬಳಕೆಯ ಬಗ್ಗೆ ಸಭೆಗೆ ವಿವರ ನೀಡಿದರು. ಈ ವೇಳೆ ಜೆಡಿಎಸ್ ನ ತಾಲೂಕು ಅಧ್ಯಕ್ಷ ಸಾರಿಗೇಹಳ್ಳಿ ದೊಡ್ಡೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿಯ ಹಲವಾರು ನಾಯಕರು ಉಪಸ್ಥಿತರಿದ್ದರು.

(Visited 1 times, 1 visits today)
kannada news karnataka local news tumakur tumkur tumkur news ತುಮಕೂರು: ತುರುವೇಕೆರೆ
Previous Articleಪರಿಶಿಷ್ಟ ಪಂಗಡದ ಮೀಸಲಾತಿ ಕೈಬಿಟ್ಟಿರುವುದನ್ನ ಖಂಡಿಸಿದ ಗ್ರಾಮಸ್ಥರು ಮತದಾನದಿಂದ ದೂರವಿರುವುದಾಗಿ ಎಚ್ಚರಿಕೆ
Next Article ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ
News Desk Benkiyabale

Related Posts

ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ

August 06, 2026 6:19 pm news

ಪರಿಶಿಷ್ಟ ಪಂಗಡದ ಮೀಸಲಾತಿ ಕೈಬಿಟ್ಟಿರುವುದನ್ನ ಖಂಡಿಸಿದ ಗ್ರಾಮಸ್ಥರು ಮತದಾನದಿಂದ ದೂರವಿರುವುದಾಗಿ ಎಚ್ಚರಿಕೆ

August 06, 2026 6:14 pm news

ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಮನವಿ

August 06, 2026 6:12 pm news
ತಾಜಾ ಸುದ್ಧಿಗಳು
news

ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ

August 06, 2026 6:19 pm
news

ಸಕಾಲಕ್ಕೆ ಮಳೆ ಇಲ್ಲದೇ ರೈತರು ಕಂಗಾಲು

August 06, 2026 6:15 pm
news

ಪರಿಶಿಷ್ಟ ಪಂಗಡದ ಮೀಸಲಾತಿ ಕೈಬಿಟ್ಟಿರುವುದನ್ನ ಖಂಡಿಸಿದ ಗ್ರಾಮಸ್ಥರು ಮತದಾನದಿಂದ ದೂರವಿರುವುದಾಗಿ ಎಚ್ಚರಿಕೆ

August 06, 2026 6:14 pm
news

ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಮನವಿ

August 06, 2026 6:12 pm
news

ಗೃಹಬಳಕೆ ಸಿಲಿಂಡರ್‌ಗಳ ವಾಣಿಜ್ಯ ಬಳಕೆಗೆ ಕಾನೂನು ಕ್ರಮ

August 06, 2026 6:11 pm
news

ತಂಬಾಕು ಮುಕ್ತ ಗ್ರಾಮಗಳನ್ನಾಗಿಸಲು ಎಡಿಸಿ ಸೂಚನೆ

August 06, 2026 6:10 pm
Our Youtube Channel
Our Picks

ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ

August 06, 2026 6:19 pm

ಸಕಾಲಕ್ಕೆ ಮಳೆ ಇಲ್ಲದೇ ರೈತರು ಕಂಗಾಲು

August 06, 2026 6:15 pm

ಪರಿಶಿಷ್ಟ ಪಂಗಡದ ಮೀಸಲಾತಿ ಕೈಬಿಟ್ಟಿರುವುದನ್ನ ಖಂಡಿಸಿದ ಗ್ರಾಮಸ್ಥರು ಮತದಾನದಿಂದ ದೂರವಿರುವುದಾಗಿ ಎಚ್ಚರಿಕೆ

August 06, 2026 6:14 pm

ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಮನವಿ

August 06, 2026 6:12 pm

ಗೃಹಬಳಕೆ ಸಿಲಿಂಡರ್‌ಗಳ ವಾಣಿಜ್ಯ ಬಳಕೆಗೆ ಕಾನೂನು ಕ್ರಮ

August 06, 2026 6:11 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ

By News Desk BenkiyabaleAugust 06, 2026 6:19 pm

ತುಮಕೂರು: ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ೭೫ ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಕೆಪಿಸಿಸಿ…

ಸಕಾಲಕ್ಕೆ ಮಳೆ ಇಲ್ಲದೇ ರೈತರು ಕಂಗಾಲು

August 06, 2026 6:15 pm

ಪರಿಶಿಷ್ಟ ಪಂಗಡದ ಮೀಸಲಾತಿ ಕೈಬಿಟ್ಟಿರುವುದನ್ನ ಖಂಡಿಸಿದ ಗ್ರಾಮಸ್ಥರು ಮತದಾನದಿಂದ ದೂರವಿರುವುದಾಗಿ ಎಚ್ಚರಿಕೆ

August 06, 2026 6:14 pm

ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಮನವಿ

August 06, 2026 6:12 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.