ತುಮಕೂರು: ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ೭೫ ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ ಹಾಗೂ ಕಾಂಗ್ರೆಸ್ ಮುಖಂಡರು ಜಿಲ್ಲಾಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಹಂಪಲು ಹಾಗೂ ಬ್ರೆಡ್ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ, ಸವ್ಯಸಾಚಿ ಡಾ.ಜಿ.ಪರಮೇಶ್ವರ್ ಅವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಆಲೋಚನೆ ನಮಗಿತ್ತು. ಆದರೆ ಸ್ವತಃ ಡಾ.ಜಿ.ಪರಮೇಶ್ವರ್ ಅವರೇ ಬರದ ಹಿನ್ನೆಲೆಯಲ್ಲಿ ಈ ಬಾರಿ ಹುಟ್ಟು ಹಬ್ಬ ಆಚರಣೆ ಇಲ್ಲ ಸೂಚನೆ ನೀಡಿದ್ದರಿಂದ ಸರಳವಾಗಿ ಆಚರಿಸಲಾಗುತ್ತಿದೆ. ಡಾ.ಜಿ.ಪರಮೇಶ್ವರ್ ರಾಜಕಾರಣದಲ್ಲಿ ಅಜಾತ ಶತ್ರು ಆರು ಬಾರಿ ಶಾಸಕರಾಗಿ,ಮೂರು ಬಾರಿ ಗೃಹ ಸಚಿವರಾಗಿ ಎರಡು ಬಾರಿ ಉಪಮುಖ್ಯಮಂತ್ರಿ ಯಾಗಿ ಒಂದು ಕಪುö್ಪ ಚುಕ್ಕೆ ಇಲ್ಲದೆ, ಸ್ವಚ್ಚ ಮತ್ತು ಪಕ್ಷ ನಿಷ್ಠ ರಾಜಕಾರಣಿ, ಅವರಿಗೆ ಇನ್ನೂ ಹೆಚ್ಚಿನ ಜವಾಬ್ದಾರಿ ದೊರೆಯಲಿ ಎಂಬುದು ನನ್ನಂತಹ ಲಕ್ಷಾಂತರ ಅಭಿಮಾನಿಗಳ ಆಶಯವಾಗಿದೆ ಎಂದರು.
ಡಾ.ಜಿ.ಪರಮೇಶ್ವರ್ ಶಿಕ್ಷಣ ತಜ್ಞರಷ್ಠೆ ಅಲ್ಲ.ಒಳ್ಳೆಯ ಸಾಂಸ್ಕöÈತಿಕ ಸಂಘಟಕರು ಆಗಿದ್ದಾರೆ.ಮೈಸೂರು ದಸರಾ ರೀತಿಯಲ್ಲಿ ತುಮಕೂರು ದಸರಾವನ್ಬು ಕಳೆದ ಎರಡು ವರ್ಷಗಳಿಂದ ನಡೆಸುವ ಮೂಲಕ ಇಡೀ ಕರ್ನಾಟಕ ತುಮಕೂರು ಜಿಲ್ಲೆಯತ್ತಾ ನೋಡುವಂತೆ ಮಾಡಿದ್ದಾರೆ. ಕಲತ್ಪರು ನಗರ, ಶೈಕ್ಷಣಿಕ ಜಿಲ್ಲೆಯ ಜೊತೆಗೆ, ಕ್ರೀಡಾ ನಗರವಾಗಿಯೂ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಎಟಿಪಿ ರ್ಯಾಂಕಿAಗ್ ಟೆನ್ನಿಸ್ ಕ್ರೀಡಾಕೂಟ, ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ ಆಯೋಜಿಸಿ, ಜಿಲ್ಲೆಯನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಇಂತಹವರಿಗೆ ಹೆಚ್ಚಿನ ಅಧಿಕಾರ ಸಿಗಬೇಕೆಂಬುದು ನಮ್ಮಲ್ಲರ ಹಾರೈಕೆಯಾಗಿದೆ ಎಂದು ಆರ್.ರಾಮಕೃಷ್ಣ ತಿಳಿಸಿದರು
ಈ ವೇಳೆ ಡಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತ, ರವಿ, ಫಣಿ, ಸೌಭಾಗ್ಯಮ್ಮ, ಯಶೋಧ, ವಿಜಯಲಕ್ಷಿ÷್ಮ, ಜಾಕೀರ್, ಆದಿಲ್, ಲಕ್ಷಿ÷್ಮÃನಾರಾಯಣ, ಲಕ್ಷಿ÷್ಮ ದೇವಮ್ಮ ಮತ್ತಿತರರು ಪಾಲ್ಗೊಂಡಿದ್ದರು.
(Visited 1 times, 1 visits today)





