ತುಮಕೂರು: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಹತ್ಯೆಗೀಡಾದ ಶ್ರೀ ಪರೆಂಬದೂರಿನಿAದ ಹೊರಟಿರುವ ರಾಜೀವ್ ಸದ್ಬಾವನ ರಥಯಾತ್ರೆ ತುಮಕೂರು ನಗರಕ್ಕೆ ಆಗಮಿಸಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ನೇತೃತ್ವದಲ್ಲಿ ಇಂದು ಸಿದ್ದಗಂಗಾ ಮಠದಲ್ಲಿ ರಥ ಯಾತ್ರೆಯನ್ನು ಬರಮಾಡಿಕೊಂಡು, ಬಿಳ್ಕೋಡಲಾಯಿತು.
ಈ ವೇಳೆ ಮಾತನಾಡಿದ ರಾಜೀವ್ ಗಾಂಧಿ ಸದ್ಭಾವನಾ ಜೋತಿ ಯಾತ್ರೆಯ ಆಯೋಜಕರಲ್ಲಿ ಒಬ್ಬರಾದ ಶ್ರೀನಿವಾಸ್ ಮಾತನಾಡಿ, ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೆ ದೇಶದ ಚುಕ್ಕಾಣಿ ಹಿಡಿದು, ದೇಶವನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಅಭಿವೃದ್ದಿ ಪಡಿಸಲು ಪಣತೊಟ್ಟರು.ಅದರ ಭಾಗವಾಗಿಯೇ ಇಂದು ದೇಶದಲ್ಲಿ ಐಟಿ, ಬಿಟಿ, ತಂತ್ರಜ್ಞಾನ ಕ್ರಾಂತಿಯಾಗಿ, ಎಲ್ಲರೂ ಕಂಪ್ಯೂಟರ್, ಮೊಬೈಲ್ ಬಳಸುವಂತಹ ವಾತಾವರಣ ನಿರ್ಮಾಣವಾಗಿದೆ. ಭಾರತದಷ್ಟೇ ಶಾಂತಿ ನೆಲೆಸಿದ್ದರೆ ಸಾಲದು, ನೆರೆ ಹೊರೆಯ ರಾಷ್ಟçಗಳಲ್ಲಿಯೂ ಶಾಂತಿ ನೆಲೆಸಬೇಕೆಂಬ ಕನಸು ಕಂಡಿದ್ದ ರಾಜೀವ್ ಗಾಂಧಿ ನೆರೆಯ ಶ್ರೀಲಂಕಾದಲ್ಲಿ ತಮಿಳರು ಮತ್ತು ಶ್ರೀಲಂಕಾ ನಿವಾಸಿಗಳ ನಡುವೆ ಇದ್ದ ಹೋರಾಟವನ್ನು ಕೊನೆಗಾಣಿಸಲು ಭಾರತದ ಶಾಂತಿ ಪಾಲನ ಪಡೆಯನ್ನು ಕಳುಹಿಸಿ, ಅಲ್ಲಿಯೂ ಶಾಂತಿ ನೆಲೆಸುವಂತೆ ಮಾಡಿದ್ದರು. ಆದರೆ ಇದೇ ಕಾರಣಕ್ಕೆ ಅವರು ಎಲ್ಟಿಟಿಇ ಮಾನವ ಬಾಂಬ್ ದಾಳಿಗೆ ತುತ್ತಾಗಬೇಕಾಯಿತು. ದೇಶಕ್ಕಾಗಿ ಅವರ ತಾಯಿಯ ರೀತಿಯಲ್ಲಿಯೇ ಪ್ರಾಣ ತೆತ್ತಿದ್ದು ವಿಪರ್ಯಾಸ. ಈ ವಿಚಾರವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರತಿವರ್ಷ ತಮಿಳುನಾಡಿನ ಶ್ರೀ ಪೆರಂಬದೂರಿನಿAದ ದೆಹಲಿಯವರೆಗೆ ರಾಜೀವ್ ಸದ್ಬಾವನಾ ರಥ ಯಾತ್ರೆ ನಡೆಸಲಾಗುತ್ತಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಭಾರತಕ್ಕಾಗಿ ತನ್ನ ತನು, ಮನ, ಪ್ರಾಣ ಎಲ್ಲವನ್ನೂ ಧಾರೆ ಎರೆದು ದೇಶದಲ್ಲಿ ಶಾಂತಿ ನೆಲೆಸಲು ಕಾರಣರಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸದ್ಭಾವನಾ ಜೋತಿ ರಥ ಯಾತ್ರೆ ತುಮಕೂರಿಗೆ ಆಗಮಿಸಿದೆ. ಸುಮಾರು ೯ ಸಾವಿರ ಕಿ.ಮಿ.ಸಂಚರಿಸಿ ಆಗಸ್ಟ್ ೧೯ ರಂದು ಸಂಜೆ ದೆಹಲಿ ತಲುಪಲಿದೆ. ಅ.೨೦ ರಂದು ದೆಹಲಿಯಲ್ಲಿ ಜೋತಿ ಯಾತ್ರೆಯ ಮುಕ್ತಾಯ ಸಮಾರಂಭ ಬಹಳ ಅದ್ದೂರಿಯಾಗಿ ನಡೆಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ, ಬೆಳಗಾಂ ಹೊರತು ಪಡಿಸಿದರೆ ತುಮಕೂರು ಎರಡನೇ ಅತಿ ದೊಡ್ಡ ಜಿಲ್ಲೆ. ಸುಮಾರು ೭ ಜನ ಕಾಂಗ್ರೆಸ್ ಶಾಸಕರನ್ನು ಹೊಂದಿದೆ. ಯುವ ಜನಾಂಗದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದ ಅವರು, ಯುವ ಜನರು ಸಹ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ೨೧ ವರ್ಷಕ್ಕೆ ಇದ್ದ ಮತದಾನದ ಹಕ್ಕನ್ನು ೧೮ ವರ್ಷಕ್ಕೆ ಇಳಿಸಿದಲ್ಲದೆ, ಸಂವಿಧಾನದ ೭೩-೭೪ನೇ ತಿದ್ದುಪಡಿಯ ಮೂಲಕ ಗ್ರಾಮೀಣ ಜನರಿಗೂ ರಾಜಕೀಯ ಅಧಿಕಾರ ಸಿಗುವಂತೆ ಮಾಡಿದರು. ಅಂತಹ ನಾಯಕರ ಹೆಸರಿನಲ್ಲಿ ಪ್ರತಿ ವರ್ಷ ರಾಜೀವ್ ಗಾಂಧಿ ಸದ್ಭಾವನಾ ಜೋತಿ ರಥ ಯಾತ್ರೆಯನ್ನು ಶ್ರೀನಿವಾಸ್ ಮತ್ತು ಅವರ ತಂಡ ಮಾಡುತ್ತಾ ಬಂದಿದೆ.ಇದಕ್ಕಾಗಿ ಅವರ ತಂಡವನ್ನು ಅಭಿನಂದಿಸುವುದಾಗಿ ತಿಳಿಸಿದರು.
ಈ ವೇಳೆ ಹಿರಿಯರಾದ ಹೆಚ್.ಸಿ. ಹನುಮಂತಯ್ಯ, ಕೆಂಪಣ್ಣ, ನರಸೀಯಪ್ಪ, ನಾಗರಾಜು, ಸಹೇರಾ, ಸೌಭಾಗ್ಯ, ಮಂಜುನಾಥ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
(Visited 1 times, 1 visits today)





