BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಜೆಡಿಎಸ್ ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣಕ್ಕೆ ಖಂಡನೆ
  • ಶೀಘ್ರದಲ್ಲಿಯೇ ಆಸಕ್ತರಿಗೆ ಮಾಹಿತಿ ಹಕ್ಕು ಕಾಯ್ದೆಯ ಅರಿವು ಕಾರ್ಯಾಗಾರ
  • ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ
  • ಮಳೆ ನೀರಿನೊಂದಿಗೆ ಮನೆಗಳಿಗೆ ನುಗ್ಗಿದ ಚರಂಡಿ ಕಲುಷಿತ ನೀರು
  • ಬೋರ್ ವೆಲ್ ಹೆಚ್ವು ಆಳಕ್ಕೆ ಕೊರೆಯಬೇಕೆಂದು ಗ್ರಾಮಸ್ಥರ ಒತ್ತಾಯ
  • ಜಿಲ್ಲೆಯಲ್ಲಿ ೧೫೯ ಕೋಟಿ ಬೆಳೆ ನಷ್ಟ: ಕೇಂದ್ರ ತಂಡಕ್ಕೆ ಮನವರಿಕೆ
  • ಬೃಹತ್ ಮೂರ್ತಿಯ ಮೆರವಣಿಗೆ, ಆಕರ್ಷಕ ಕಲಾ ಪ್ರದರ್ಶನ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮುಂಬರುವ ವಿಧಾನಸಭೆ, ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಗೆಲ್ಲಬೇಕು
news

ಮುಂಬರುವ ವಿಧಾನಸಭೆ, ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಗೆಲ್ಲಬೇಕು

ಮುಂಬರುವ ಚುನಾವಣೆಗಳನ್ನು ಕಾಂಗ್ರೆಸ್ ಪ್ರಚಾರ ಸಮಿತಿ ಗಂಭೀರವಾಗಿ ಪರಿಗಣಿಸಬೇಕು
By News Desk BenkiyabaleUpdated:September 29, 2026 4:58 pm

ತುಮಕೂರು: ಕಾಂಗ್ರೆಸ್ ಪಕ್ಷ ೨೦೨೮ರ ವಿಧಾನಸಭೆ ಮತ್ತು ೨೦೨೯ರ ಲೋಕಸಭಾ ಚುನಾವಣೆಯನ್ನು ಗೆಲ್ಲಬೇಕೆಂದರೆ ನಮ್ಮ ಕಾರ್ಯಕ್ರಮಗಳು ಜನರಿಗೆ ತಲುಪಬೇಕು ಹಾಗೆಯೇ, ಕೇಂದ್ರದ ವೈಫಲ್ಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದಾಗ ಮಾತ್ರ ಸಾಧ್ಯ. ಹಾಗಾಗಿ ಮುಂಬರುವ ಚುನಾವಣೆಗಳನ್ನು ಕಾಂಗ್ರೆಸ್ ಪ್ರಚಾರ ಸಮಿತಿ ಗಂಭೀರವಾಗಿ ಪರಿಗಣಿಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಹಾಗೂ ಪ್ರಚಾರ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರಚಾರ ಸಮಿತಿಗೆ ಆಯ್ಕೆಯಾದ ಕಾರ್ಯಕರ್ತರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡುತಿದ್ದ ಅವರು,ಎಐಸಿಸಿ ಪ್ರಚಾರ ಸಮಿತಿಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ವರ್ಷದ ೩೬೫ ದಿನವೂ ಪಕ್ಷದ ಬಗ್ಗೆ ಪ್ರಚಾರ ಕೈಗೊಂಡರೆ ಮಾತ್ರ ನಮ್ಮ ಮುಂದಿರುವ ಆ ಎರಡು ದೊಡ್ಡ ಗುರಿಗಳನ್ನು ತಲುಪಲು ಸಾಧ್ಯ ಎಂದರು.
ರಾಜ್ಯದಲ್ಲಿ ಪ್ರಚಾರ ಸಮಿತಿಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ೪೧ ಜಿಲ್ಲೆಗಳಲ್ಲಿ ೪೦ ಜಿಲ್ಲೆಗಳ ಅಧ್ಯಕ್ಷರು, ೪೨೫ಬ್ಲಾಕ್‌ಗಳ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ.ಜಿಲ್ಲೆಯಿಂದ ತಾಲೂಕು, ಹೋಬಳಿ,ಬೂತ ಮಟ್ಟದವರೆಗೆ ಪ್ರಚಾರ ಸಮಿತಿ ಸಂಘಟಿಸಬೇಕಿದೆ.ಒAದು ಬೂತ್‌ಗೆ ಇಬ್ಬರಂತೆ ಪ್ರಚಾರ ಸಮಿತಿಯ ಸದಸ್ಯರು ನೇಮಕಗೊಂಡರೆ ೧.೨೦ ಲಕ್ಷ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಿದಂತಾಗುತ್ತದೆ.ಮೇಲಿನಿAದ ಒಂದು ಸಂದೇಶ ರವಾನೆಚಿiÀiÁದರೆ ಅದು ಬೂತ್ ಮಟ್ಟದವರಗೆ ತಲುಪಲು ಸಾಧ್ಯವಾಗಲಿದೆ.ಕಾಂಗ್ರೆಸ್ ಶೇ೧೦೦ ರಷ್ಟು ಕೆಲಸ ಮಾಡಿ ಶೇ೦೫ ರಷ್ಟು ಪ್ರಚಾರ ಪಡೆದರೆ, ಬಿಜೆಪಿ ಶೇ೦೫ರಷ್ಟು ಕೆಲಸ ಮಾಡಿ, ೧೦೦ ರಷ್ಟು ಪ್ರಚಾರ ಪಡೆಯುತ್ತಿದೆ.ಹಾಗಾಗಿ ಬಿಜೆಪಿಯ ಈ ಸುಳ್ಳು ಪ್ರಚಾರದ ವಿರುದ್ದ ನಿಜವಾದ ಕೆಲಸಗಾರರಾದ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗುವAತೆ ಕರೆ ನೀಡಿದರು.
ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಮುನೀರ್ ಮಾತನಾಡಿ, ಓಟ್ ಜೋರಿ ಎಂಬುದು ನಿನ್ನೆ ಮೊನ್ನೆ ಬಂದದಲ್ಲ,ಉತ್ತರ ಪ್ರದೇಶದ ಉಸ್ತುವಾರಿಯಾಗಿ ೨೦೦೮ರಲ್ಲಿ ಅಮಿತ್ ಷಾ ನೇಮಕಗೊಂಡಾಗಲೇ ಆರಂಭವಾಗಿದ್ದು, ಏಕಾಎಕಿ ಮತದಾರ ಸಂಖ್ಯೆ ಹೆಚ್ಚಳ ಮಾಡಿ,ಕಾಂಗ್ರೆಸ್‌ನ ಮತಗಳನ್ನು ಡಿಲೀಟ್ ಮಾಡಿ, ಚುನಾವಣೆಯಲ್ಲಿ ಹೆಚ್ಚು ಮತಗಳಿಸುವ ತಂತ್ರಗಾರಿಕೆಯನ್ನು ಆರಂಭಿಸಿ, ಆ ನಂತರದಲ್ಲಿ ಅದನ್ನು ಬೇರೆ ರಾಜ್ಯಗಳಿಗೂ ವಿಸ್ತರಿಸುವ ಕೆಲಸ ಮಾಡಿದರು.ರಾಷ್ಟಿçÃಯತೆ, ಧರ್ಮದ ಹೆಸರಿನಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ.ಈ ಅನ್ಯಾಯವನ್ನು ತಡೆಯದಿದ್ದರೆ ೨೦೨೮ರ ಕರ್ನಾಟಕ ವಿಧಾನಸಭೆ ಮತ್ತು ೨೦೨೯ರ ಲೋಕಸಭೆಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗಲಿದೆ.ಹಾಗಾಗಿ ನಾವೆಲ್ಲರೂ ಈಗಿನಿಂದಲೇ ಎಚ್ಚೆತ್ತು ಪಕ್ಷದ ಮತಗಳ ಜೊತೆಗೆ,ದಲಿತರು, ಆದಿವಾಸಿಗಳು,ಅಲ್ಪಸಂಖ್ಯಾತರ ಮತಗಳು ಅಳಿಸಿ ಹಾಕದಂತೆ ಎಚ್ಚರ ವಹಿಸಬೇಕು.ಈ ನಿಟ್ಟಿನಲ್ಲಿ ಪ್ರಚಾರ ಸಮಿತಿಯ ಜವಾಬ್ದಾರಿ ಹೆಚ್ಚಿದೆ ಎಂದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,ಪಕ್ಷದ ಕಾರ್ಯಕ್ರಮಗಳು, ಅವುಗಳ ಉಪಯೋಗಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಪ್ರಚಾರ ಸಮಿತಿ ಮಾಡಬೇಕಿದೆ.ಚುನಾವಣಾ ಆಯೋಗದ ಆಯುಕ್ತ ನೇಮಕಕ್ಕೆ ಇದುವರೆಗೂ ಇದ್ದ ನಿಯಮಾವಳಿಗೆ ತಿದ್ದುಪಡಿ ತಂದು,ತಮಗೆ ಬೇಕಾದವರನ್ನು ನೇಮಕ ಮಾಡಿ, ವಿರೋಧಪಕ್ಷಗಳ ಮತಗಳನ್ನು ಕದಿಯುವ ಕೆಲಸ ಮಾಡಲಾಗುತ್ತಿದೆ.ಚುನಾವಣಾ ಆಯೋಗದ ಮುಂದೆ ಲಕ್ಷಾಂತರ ಆಕ್ಷೆಪಣೆಗಳು ನ್ಯಾಯಕ್ಕಾಗಿ ಕಾಯುತ್ತಿವೆ.ಈ ಅಕ್ರಮಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗಿ, ಪ್ರಜಾಪ್ರಭುತ ಸಂಪೂರ್ಣ ಹಾಳಾಗುವ ಮುನ್ನ ಸರಿಪಡಿಸಬೇಕಿದೆ ಎಂದರು.
ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ,ಪ್ರಚಾರ ಸಮಿತಿ ಮತ್ತಷ್ಟು ಸಕ್ರಿಯವಾಗಿ ಕೆಲಸ ಮಾಡಬೇಕಿದೆ. ಇದೇ ಅಕ್ಟೋಬರ್ ೨೩ ರಂದು ನಡೆಯುವ ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿನ ಕಡೆಗೆ ಹೆಚ್ಚು ಪ್ರಚಾರ ಮಾಡಬೇಕಾಗಿದೆ ಎಂದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್,ಕಾಂಗ್ರೆಸ್ ಸಿದ್ದಾಂತಗಳಿಗೆ ಅನುಗುಣವಾಗಿ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದರ ಜೊತೆಗೆ,ಬಿಜೆಪಿಯ ಜನವಿರೋಧಿ ನೀತಿಗಳನ್ನು ಜನರ ಮುಂದಿಡುವ ಕಾರ್ಯವನ್ನು ಪ್ರಚಾರ ಸಮಿತಿ ಸಮರ್ಥವಾಗಿ ಜಿಲ್ಲೆಯಲ್ಲಿ ಮಾಡುತ್ತಿದೆ. ಈಗಾಗಲೇ ಜಿಲ್ಲೆಯ ೭ ತಾಲೂಕುಗಳಲ್ಲಿ ತಾಲೂಕು ಸಮಿತಿ ಮತ್ತು ಬೂತ್ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ.ಇಂದು ಆವರಿಗೆ ನೇಮಕಾತಿ ಪತ್ರ ನೀಡಿ, ಸಂಘಟನೆಗೆ ಬಲ ನೀಡಲಾಗುತ್ತಿದೆ.ಮಸೀದಿ, ಮಂದಿರ, ಹಿಂದು-ಮುಸ್ಲಿA ಹೆಸರಿನಲ್ಲಿ ದೇಶದ ಜನರ ಕಣ್ಣಿಗೆ ಮಣ್ಣೆರೆಚುತ್ತಿರುವ ಬಿಜೆಪಿಯ ದುರಾಡಳಿತವನ್ನು ಜನರ ಮುಂದಿಡುವ ಕೆಲಸ ಮತ್ತಷ್ಟು ಚುರುಕುಗೊಳ್ಳಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ವಹಿಸಿದ್ದರು.ವೇದಿಕೆಯಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್,ಕೆಪಿಸಿಸಿ ಉಪಾಧ್ಯಕ್ಷರಾದ ಮಂಜುನಾಥ್,ವಾಸುದೇವಮೂರ್ತಿ, ಆರ್.ರಾಮಕೃಷ್ಣ, ಮುಂಚೂಣಿ ಘಟಕದಗಳ ಮುಖಂಡರಾದ ಅನಿಲ್, ನಿಂಗರಾಜು, ದಾದಾಪೀರ್,ಸುರೇಶ್‌ರಾಜ್, ವಿಜಯಗೌಡ, ಇರ್ಫಾನ್, ಬೈಲಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫಯಾಜ್, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)
Congress kannada news karnataka local news tumakur tumkur tumkur news ಕಾಂಗ್ರೆಸ್ ತುಮಕೂರು:
Previous Articleಮೇವು ಬ್ಯಾಂಕ್, ಆಧಾರ್ ಕೇಂದ್ರ ಸ್ಥಾಪನೆಗೆ ಮನವಿ
Next Article ತುಮಕೂರು-ಅರಸೀಕೆರೆ ರೈಲು ಪ್ರಯಾಣಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಆದ್ಯತೆ
News Desk Benkiyabale

Related Posts

ಜೆಡಿಎಸ್ ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣಕ್ಕೆ ಖಂಡನೆ

October 05, 2026 5:34 pm news

ಶೀಘ್ರದಲ್ಲಿಯೇ ಆಸಕ್ತರಿಗೆ ಮಾಹಿತಿ ಹಕ್ಕು ಕಾಯ್ದೆಯ ಅರಿವು ಕಾರ್ಯಾಗಾರ

October 05, 2026 5:07 pm news

ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ

October 05, 2026 5:05 pm news
ತಾಜಾ ಸುದ್ಧಿಗಳು
news

ಜೆಡಿಎಸ್ ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣಕ್ಕೆ ಖಂಡನೆ

October 05, 2026 5:34 pm
news

ಶೀಘ್ರದಲ್ಲಿಯೇ ಆಸಕ್ತರಿಗೆ ಮಾಹಿತಿ ಹಕ್ಕು ಕಾಯ್ದೆಯ ಅರಿವು ಕಾರ್ಯಾಗಾರ

October 05, 2026 5:07 pm
news

ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ

October 05, 2026 5:05 pm
news

October 05, 2026 5:03 pm
news

ಮಳೆ ನೀರಿನೊಂದಿಗೆ ಮನೆಗಳಿಗೆ ನುಗ್ಗಿದ ಚರಂಡಿ ಕಲುಷಿತ ನೀರು

October 05, 2026 5:00 pm
news

ಬೋರ್ ವೆಲ್ ಹೆಚ್ವು ಆಳಕ್ಕೆ ಕೊರೆಯಬೇಕೆಂದು ಗ್ರಾಮಸ್ಥರ ಒತ್ತಾಯ

October 03, 2026 5:36 pm
Our Youtube Channel
Our Picks

ಜೆಡಿಎಸ್ ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣಕ್ಕೆ ಖಂಡನೆ

October 05, 2026 5:34 pm

ಶೀಘ್ರದಲ್ಲಿಯೇ ಆಸಕ್ತರಿಗೆ ಮಾಹಿತಿ ಹಕ್ಕು ಕಾಯ್ದೆಯ ಅರಿವು ಕಾರ್ಯಾಗಾರ

October 05, 2026 5:07 pm

ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ

October 05, 2026 5:05 pm

October 05, 2026 5:03 pm

ಮಳೆ ನೀರಿನೊಂದಿಗೆ ಮನೆಗಳಿಗೆ ನುಗ್ಗಿದ ಚರಂಡಿ ಕಲುಷಿತ ನೀರು

October 05, 2026 5:00 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಜೆಡಿಎಸ್ ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣಕ್ಕೆ ಖಂಡನೆ

By News Desk BenkiyabaleOctober 05, 2026 5:34 pm

ಪಾವಗಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಡಿಎಸ್ ಹಾಗೂ ಬಿಜೆಪಿ ವತಿಯಿಂದ ಸೋಮವಾರ ಪಾವಗಡ ಪಟ್ಟಣದಲ್ಲಿ  ಬೃಹತ್ ಪ್ರತಿಭಟನೆ ನಡೆಸಲಾಯಿತು.…

ಶೀಘ್ರದಲ್ಲಿಯೇ ಆಸಕ್ತರಿಗೆ ಮಾಹಿತಿ ಹಕ್ಕು ಕಾಯ್ದೆಯ ಅರಿವು ಕಾರ್ಯಾಗಾರ

October 05, 2026 5:07 pm

ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ

October 05, 2026 5:05 pm

October 05, 2026 5:03 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.