ತುಮಕೂರು: ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ ಕ್ರಾಂತಿಕಾರಿ ಸ್ವಾತಂತ್ರ÷್ಯ ಹೋರಾಟಗಾರ ಅತೀ ಚಿಕ್ಕ ವಯಸ್ಸಿನಲ್ಲೇ ದೇಶಕ್ಕಾಗಿ ಪ್ರಾಣಕೊಟ್ಟ ವೀರ ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಆಲೋಚನೆ ಹಾಗು ಸಿದ್ದಾಂತಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರು ಸ್ವಾತಂತ್ರ÷್ಯ ಹೋರಾಟದ ಸಂದರ್ಭದಲ್ಲಿ ನೇರವಾಗಿ ಮುಖಾಮುಖಿಯಾಗಿ ಭೇಟಿಯಾದ ಉಲ್ಲೇಖಗಳಿಲ್ಲದಿದ್ದರೂ ಇಬ್ಬರ ಆಲೋಚನೆಗಳು ಮತ್ತು ಸಿದ್ಧಾಂತಗಳಲ್ಲಿ ಆಳವಾದ ವೈಚಾರಿಕ ಸಾಮ್ಯತೆ ಇತ್ತು ಎಂದು ತಿಳಿಸಿದರು.
ಸಾಮಾಜಿಕ ಸಮಾನತೆ ಮತ್ತು ಶೋಷಣೆ ಮುಕ್ತ ಭಾರತದ ನಿರ್ಮಾಣಕ್ಕಾಗಿ ಇಬ್ಬರೂ ಪರಸ್ಪರ ಪೂರಕವಾದ ನಿಲುವುಗಳನ್ನು ಹೊಂದಿದ್ದವರಾಗಿದ್ದರು, ಅವರಿಬ್ಬರ ನಡುವಿದ್ದ ಪ್ರಮುಖ ವೈಚಾರಿಕ ಸಂಬAಧಗಳು ಮತ್ತು ದೃಷ್ಟಿಕೋನಗಳು ಅಸ್ಪöÈಶ್ಯತೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಒಮ್ಮತ ಭಗತ್ ಸಿಂಗ್ ಅವರ ನಿಲುವು ಕೇವಲ ೧೭ನೇ ವಯಸ್ಸಿನಲ್ಲಿ ಭಗತ್ ಸಿಂಗ್ ಅವರು ಅಸ್ಪöÈಶ್ಯತೆಯ ಸಮಸ್ಯೆ ಎಂಬ ಪ್ರಸಿದ್ಧ ಲೇಖನವನ್ನು ಬರೆದಿದ್ದರು ಅದರಲ್ಲಿ ದಲಿತರು ಮತ್ತು ಶೋಷಿತರು ಸಂಘಟಿತರಾಗಬೇಕು ತಮಗಾಗಿ ಪ್ರತ್ಯೇಕ ಹಕ್ಕುಗಳನ್ನು ಕೇಳಬೇಕು ಮತ್ತು ಶಿಕ್ಷಣ ಪಡೆಯಬೇಕು ಎಂದು ಪ್ರತಿಪಾದಿಸಿದ್ದರು ಇದು ಡಾ. ಅಂಬೇಡ್ಕರ್ ಅವರ ಶಿಕ್ಷಿತರಾಗಿ ಸಂಘಟಿತರಾಗಿ ಹೋರಾಡಿ ಎಂಬ ತತ್ವಕ್ಕೆ ಹತ್ತಿರವಾಗಿತ್ತು ಎಂದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯ ಉಪಾಧ್ಯಕ್ಷ ಇಂದ್ರಕುಮಾರ್ ಡಿ.ಕೆ ಮಾತನಾಡುತ್ತಾ ಅಮರ ಕ್ರಾಂತಿಕಾರಿ, ಭಾರತಾಂಬೆಯ ವೀರ ಪುತ್ರ ಭಗತ್ ಸಿಂಗ್ ಮಾತೃಭೂಮಿಯ ಸ್ವಾತಂತ್ರ÷್ಯಕ್ಕಾಗಿ ಹೋರಾಡುತ್ತಲೇ ನೇಣುಗಂಬವೇರಿದ ಅವರ ಅಪ್ರತಿಮ ತ್ಯಾಗ, ಶೌರ್ಯ ಹಾಗೂ ದೇಶಪ್ರೇಮ ಪ್ರತಿಯೊಬ್ಬ ಭಾರತೀಯನಲ್ಲಿ ರಾಷ್ಟçಭಕ್ತಿಯ ಕಿಚ್ಚನ್ನು ಎಂದೆAದಿಗೂ ಪ್ರಜ್ವಲಿಸುತ್ತಿರುತ್ತದೆ, ಭಾರತದ ಯುವಜನರ ಹೃದಯದಲ್ಲಿ ದೇಶಭಕ್ತಿಯ ಕಿಡಿ ಹೊತ್ತಿಸಿದ ಕ್ರಾಂತಿಕಾರಿ ಭಗತ್ ಸಿಂಗ್, ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಲು ಧೈರ್ಯ, ತ್ಯಾಗ ಮತ್ತು ಅಚಲ ದೇಶಭಕ್ತಿಯಿಂದ ಹೋರಾಡಿದ ಅವರ ಬದುಕು ಹಾಗೂ ಆದರ್ಶಗಳು ಇಂದಿನ ಪೀಳಿಗೆಗೂ ಸದಾ ಸ್ಫೂರ್ತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಅಧ್ಯಕ್ಷರು ಎನ್. ಕೆ ನಿಧಿ ಕುಮಾರ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರು ಇಂದ್ರುಕುಮಾರ್ ಡಿ.ಕೆ, ಸಂವಿಧಾನ ರಕ್ಷಣಾ ಕ್ರಾಂತಿ ಸೇನೆ ವೇದಿಕೆ ರಾಜ್ಯದ್ಯಕ್ಷರಾದ ಪ್ರಕಾಶ್ ಎಚ್. ಪಿ, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ರಾಮಾಂಜನೇಯ, ಮುಖಂಡರುಗಳಾದ ಇಲ್ಲಾಸ್ ಅಹ್ಮದ್, ಮೋಹಿನ್ ಅಹಮದ್, ಇಮ್ರಾನ್ ಅಹಮದ್, ಜೆಬಿನೇಷನ್, ಹನುಮನರಸಯ್ಯ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿರಿದ್ದರು.
(Visited 1 times, 1 visits today)





