BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ನೊಂದಣಿಗೆ ಆಗ್ರಹಿಸಿ ಪ್ರತಿಭಟನೆ
  • ಮಕ್ಕಳ ಉತ್ತಮ ಭವಿಷ್ಯವೇ ದೇಶದ ನಿಜವಾದ ಸ್ವಾತಂತ್ರ: ಕೃಷ್ಣಪ್ಪ
  • ಭಗತ್‌ಕ್ರಾಂತಿ ಸೇನೆಯಿಂದ ಭಕ್ತಿಯ ಪಂಜಿನ ಮೆರವಣಿಗೆ
  • ವಿಕಸಿತ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ನಿರ್ಣಾಯಕ
  • ೮೦ನೇ ಸ್ವಾತಂತ್ರ ದಿನದ ಅಂಗವಾಗಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಕೊಡುಗೆ
  • ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ
  • ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ
  • ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದಿರಿ: ಪ್ರಸಾದ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಭಗತ್‌ಕ್ರಾಂತಿ ಸೇನೆಯಿಂದ ಭಕ್ತಿಯ ಪಂಜಿನ ಮೆರವಣಿಗೆ
news

ಭಗತ್‌ಕ್ರಾಂತಿ ಸೇನೆಯಿಂದ ಭಕ್ತಿಯ ಪಂಜಿನ ಮೆರವಣಿಗೆ

By News Desk BenkiyabaleUpdated:August 15, 2026 5:28 pm

ತುಮಕೂರು: ೮೦ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಸಾಮರಸ್ಯ, ರಾಷ್ಟçಭಕ್ತಿ ಸಾರಲು ಭಗತ್ ಕ್ರಾಂತಿ ಸೇನೆಯಿಂದ ಶುಕ್ರವಾರ ರಾತ್ರಿ ನಗರದಲ್ಲಿ ಅಖಂಡ ಭಾರತ ಜಾಗೃತಿ ದಿವಸ್ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಡಿ.ಡಿ.ಪಿ.ಐ. ಕಛೇರಿ ಬಳಿ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ, ರಾಷ್ಟçಭಕ್ತಿ ಸಾರಲು, ಸಾಮರಸ್ಯ ಮೂಡಿಸಲು ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ವಿಶೇಷವಾಗಿ ಯುವ ಜನರಲ್ಲಿ ರಾಷ್ಟಾçಭಿಮಾನ ಬೆಳೆಯಬೇಕು. ದೇಶದ ರಕ್ಷಣೆ, ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಭಾರತ ಸ್ವಾತಂತ್ರö್ಯಕ್ಕಾಗಿ ತ್ಯಾಗ ಮಾಡಿದ ಹಲವಾರು ಮಹನೀಯರು ತ್ಯಾಗ ಮಾಡಿದ್ದಾರೆ, ಅವರ ಕೊಡುಗೆ ಸ್ಮರಿಸಬೇಕು. ಸ್ವಾತಂತ್ರö್ಯ ದಿನಾಚರಣೆಯನ್ನು ದೇಶದ ಐಕ್ಯತೆಯ ಸಂಕೇತವಾಗಿ ಸಂಭ್ರಮದಿAದ ಆಚರಿಸಬೇಕು ಎಂದರು.
ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಅತಿಥಿಯಾಗಿ ಭಾಗಹಿಸಿದ್ದರು. ಭಗತ್ ಕ್ರಾಂತಿ ಸೇನೆ ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ನೂರಾರು ಜನ ಪಂಜು ಬೆಳಗಿಸಿಕೊಂಡು ಮೆರವಣಿಗೆ ಸಾಗಿ ಸೋಮೇಶ್ವರ ಮುಖ್ಯರಸ್ತೆ, ಕೆಂಪಣ್ಣನ ಅಂಗಡಿ ಸರ್ಕಲ್ ಮುಖಾಂತರ ದೋಭಿ ಘಾಟ್ ರಸ್ತೆ, ಅಶೋಕ ನಗರ, ಬಿ.ಹೆಚ್. ರಸ್ತೆ, ಎಸ್.ಎಸ್. ಸರ್ಕಲ್ ಮೂಲಕ ತುಮಕೂರು ವಿಶ್ವವಿದ್ಯಾಲಯ ಬಳಿ ಬಂದರು.
ವಿಶ್ವವಿದ್ಯಾಲಯ ಮುಂಭಾಗ ನಡೆದ ಸಭಾ ಕಾರ್ಯಕ್ರಮದಲ್ಲಿ ಎಬಿವಿಪಿ ಮಂಗಳೂರು ವಿಭಾಗ ಪ್ರಮುಖರು, ಕನ್ನಡ ಉಪನ್ಯಾಸಕರಾದ ಡಾ.ಕೇಶವ ಬಂಗೇರ ಮಾತನಾಡಿ, ಹಿಂದೆ ಇದ್ದ ಭವ್ಯ ಭಾರತ ತುಂಡಾಗಿದ್ದು ಯಾವ ಆಧಾರದ ಮೇಲೆ ಎಂಬುದು ಹಾಗೂ ಯಾವ ತಪ್ಪು ನಿರ್ಧಾರಗಳ ಮೇಲೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಅಂದರೆ ಅಂದಿನ ನಮ್ಮ ರಾಷ್ಟ್ರ ನಾಯಕರ ತಪ್ಪು ನಿರ್ಧಾರಗಳ ಕಾರಣದಿಂದ ನಮ್ಮ ದೇಶ ಅಖಂಡವಾಗಿದ್ದ ಭಾರತ, ತ್ರಿಖಂಡವಾಗಿ ಎರಡು ಶತ್ರು ರಾಷ್ಟ್ರಗಳು ಉಗಮವಾದವು ಹಾಗೇ ನಮ್ಮ ದೇಶದ ಶಾಂತಿ, ನೆಮ್ಮದಿಗಳು ಭಂಗಗೊAಡವು ಎಂದರು.
ಭಯ, ಆತಂಕ, ಅಭದ್ರತೆಗಳು ಇಂದಿಗೂ ನಮ್ಮನ್ನು ಕಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಆಂತರಿಕವಾಗಿ ದೇಶ ವಿರೋಧಿಗಳಿಗೆ ಕುಮ್ಮಕ್ಕು ನೀಡುವಂತಹ ಕೆಲಸಗಳು ದೇಶವಾಸಿಗಳಿಂದಲೇ ಹವ್ಯಾಹತವಾಗಿ ನಡೆಯುತ್ತಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ದೇಶ ವಿರೋಧಿ ಚಟುವಟಿಕೆಗಳನ್ನು ಬಹಿರಂಗವಾಗಿ ಸಮರ್ಥನೆ ಮಾಡಿಕೊಳ್ಳುವವರನ್ನು ಸಹ ನಾವು ಕಾಣುತ್ತಿದ್ದೇವೆ. ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ವಿಕೃತ ದೇಶದ್ರೋಹಿ ಮನಸ್ಥಿತಿಗಳು ಹೆಚ್ಚುತ್ತಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ ಎಂದು ಹೇಳಿದರು.
ಇಂತಹ ಸಂದರ್ಭದಲ್ಲಿಯೂ ಕೂಡ ಇಂದಿನ ನಮ್ಮನ್ನಾಳುವ ನಾಯಕರುಗಳು, ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಿಲ್ಲ. ಇಂದಿಗೂ ದೇಶದ ರಕ್ಷಣೆಯ ಬಗ್ಗೆ, ಶಾಂತಿಯ ಬಗ್ಗೆ ನಿರ್ಲಕ್ಷ ಧೋರಣೆಯನ್ನು ತಾಳುತ್ತಿದ್ದಾರೆ. ಈ ಧೋರಣೆಗಳು ಮುಂದುವರಿದರೆ ಈ ದೇಶ ಮತ್ತೊಮ್ಮೆ ತುಂಡಾಗುವ ಹಂತ ತಲುಪುವ ಅಪಾಯವಿದೆ ಹಾಗೂ ದೇಶವಾಸಿಗಳು ಶಾಶ್ವತವಾಗಿ ಶಾಂತಿ-ನೆಮ್ಮದಿಯನ್ನು ಕಳೆದುಕೊಂಡು ಆಂತರಿಕ ಭಯದಿಂದ ಬದುಕಬೇಕಾದ ಕಾಲ ಬರುವ ಸೂಚನೆಗಳು ಗೋಚರಿಸುತ್ತಿವೆ ಎಂದು ತಿಳಿಸಿದರು.
ಮಾಜಿ ಸೈನಿಕ ಮಂಜುನಾಥ್ ಅರಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ನಗರ ಪಾಲಿಕೆ ಪೌರ ಕಾರ್ಮಿಕರಾದಎನ್.ಡಿ.ಬಸವರಾಜು, ರತ್ನಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭಗತ್ ಕ್ರಾಂತಿ ಸೇನೆ ಮುಖಂಡರಾದ ಆರಾಧ್ಯ ಮಂಚಲದೊರೆ, ಚೇತನ್, ಶ್ರೀನಿವಾಸಗೌಡ, ಹೇಮಂತ್, ರಾಕೇಶ್, ವಿನಯ್, ರಘು, ಅಜಯ್, ಪ್ರತೀಕ್, ಕೆಂಪರಾಜು, ಸತೀಶ್, ಮದನ್ ಪಟೇಲ್, ಅಭಿ, ಮಿಥುನ್, ಶಾಮಣ್ಣ, ಮುಖಂಡರಾದ ರವಿ ಚೆಂಗಾವರ, ನಿಸರ್ಗ ರಮೇಶ್, ಬಂಬೂ ಮೋಹನ್, ಪ್ರತಾಪ್, ಕಿರಣ್, ಕೇಬಲ್ ಬಸವರಾಜು ಮೊದಲಾದವರು ಭಾಗವಹಿಸಿದ್ದರು.

(Visited 1 times, 1 visits today)
bhagath kranthi sene kannada news karnataka local news tumakur tumkur tumkur news ತುಮಕೂರು:
Previous Articleವಿಕಸಿತ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ನಿರ್ಣಾಯಕ
Next Article ಮಕ್ಕಳ ಉತ್ತಮ ಭವಿಷ್ಯವೇ ದೇಶದ ನಿಜವಾದ ಸ್ವಾತಂತ್ರ: ಕೃಷ್ಣಪ್ಪ
News Desk Benkiyabale

Related Posts

ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ನೊಂದಣಿಗೆ ಆಗ್ರಹಿಸಿ ಪ್ರತಿಭಟನೆ

August 15, 2026 5:32 pm news

ಮಕ್ಕಳ ಉತ್ತಮ ಭವಿಷ್ಯವೇ ದೇಶದ ನಿಜವಾದ ಸ್ವಾತಂತ್ರ: ಕೃಷ್ಣಪ್ಪ

August 15, 2026 5:30 pm news

ವಿಕಸಿತ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ನಿರ್ಣಾಯಕ

August 15, 2026 5:26 pm news
ತಾಜಾ ಸುದ್ಧಿಗಳು
news

ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ನೊಂದಣಿಗೆ ಆಗ್ರಹಿಸಿ ಪ್ರತಿಭಟನೆ

August 15, 2026 5:32 pm
news

ಮಕ್ಕಳ ಉತ್ತಮ ಭವಿಷ್ಯವೇ ದೇಶದ ನಿಜವಾದ ಸ್ವಾತಂತ್ರ: ಕೃಷ್ಣಪ್ಪ

August 15, 2026 5:30 pm
news

ಭಗತ್‌ಕ್ರಾಂತಿ ಸೇನೆಯಿಂದ ಭಕ್ತಿಯ ಪಂಜಿನ ಮೆರವಣಿಗೆ

August 15, 2026 5:28 pm
news

ವಿಕಸಿತ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ನಿರ್ಣಾಯಕ

August 15, 2026 5:26 pm
news

೮೦ನೇ ಸ್ವಾತಂತ್ರ ದಿನದ ಅಂಗವಾಗಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಕೊಡುಗೆ

August 14, 2026 5:46 pm
news

ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ

August 14, 2026 5:45 pm
Our Youtube Channel
Our Picks

ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ನೊಂದಣಿಗೆ ಆಗ್ರಹಿಸಿ ಪ್ರತಿಭಟನೆ

August 15, 2026 5:32 pm

ಮಕ್ಕಳ ಉತ್ತಮ ಭವಿಷ್ಯವೇ ದೇಶದ ನಿಜವಾದ ಸ್ವಾತಂತ್ರ: ಕೃಷ್ಣಪ್ಪ

August 15, 2026 5:30 pm

ಭಗತ್‌ಕ್ರಾಂತಿ ಸೇನೆಯಿಂದ ಭಕ್ತಿಯ ಪಂಜಿನ ಮೆರವಣಿಗೆ

August 15, 2026 5:28 pm

ವಿಕಸಿತ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ನಿರ್ಣಾಯಕ

August 15, 2026 5:26 pm

೮೦ನೇ ಸ್ವಾತಂತ್ರ ದಿನದ ಅಂಗವಾಗಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಕೊಡುಗೆ

August 14, 2026 5:46 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ನೊಂದಣಿಗೆ ಆಗ್ರಹಿಸಿ ಪ್ರತಿಭಟನೆ

By News Desk BenkiyabaleAugust 15, 2026 5:32 pm

ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ(ರಿ) ವತಿಯಿಂದ ತುಮಕೂರು ಜಿಲ್ಲೆಯ ಸ್ಲಂ…

ಮಕ್ಕಳ ಉತ್ತಮ ಭವಿಷ್ಯವೇ ದೇಶದ ನಿಜವಾದ ಸ್ವಾತಂತ್ರ: ಕೃಷ್ಣಪ್ಪ

August 15, 2026 5:30 pm

ಭಗತ್‌ಕ್ರಾಂತಿ ಸೇನೆಯಿಂದ ಭಕ್ತಿಯ ಪಂಜಿನ ಮೆರವಣಿಗೆ

August 15, 2026 5:28 pm

ವಿಕಸಿತ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ನಿರ್ಣಾಯಕ

August 15, 2026 5:26 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.