BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ
  • ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ
  • ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್
  • ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ
  • ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್
  • ಭೂಸ್ವಾಧೀನಕ್ಕೆ ಹಣದ ಬದಲು ಬದಲಿ ಭೂಮಿ ನೀಡಿ
  • ಪಂಚಾಯತಿ ಅಧಿಕಾರಿಗಳು ದಲಿತ ವಿರೋಧಿಗಳು: ಸಿದ್ದು ಸೂರನಹಳ್ಳಿ
  • ಶಿರಾ ತಾಲ್ಲೂಕಿಗೆ ಜಿಪಂ ಸಿಇಒ ಭೇಟಿ: ಕಾಮಗಾರಿಗಳ ಪರಿಶೀಲನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದವರು ವೀರಣ್ಣ
news

ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದವರು ವೀರಣ್ಣ

ಮಾಜಿ ಸಚಿವ ವೀರಣ್ಣ ಅವರಿಗೆ ನುಡಿ ನಮನ ಕಾರ್ಯಕ್ರಮ
By News Desk BenkiyabaleUpdated:August 31, 2026 5:14 pm

ತುಮಕೂರು: ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ. ಅದರಲ್ಲಿ ಸುಧಾರಣೆ ತರುವುದೇ ನಾವು ವೀರಣ್ಣನವರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವೀರಣ್ಣ ಅಭಿಮಾನಿ ಬಳಗ ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಗ್ರಂಥಾಲಯ ಸಭಾಂಗಣದಲ್ಲಿಆಯೋಜಿದ್ದ ವೀರಣ್ಣ ಅವರಿಗೆ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ವ್ಯವಸ್ಥೆ ಬಹಳ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ಅಭಿಪ್ರಾಯ ನನ್ನದು.ಆದರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ವ್ಯವಸ್ಥೆ ಸುಧಾರಣೆಯಾಗದೆ ನಾನು ಪ್ರಾಮಾಣಿಕ ಎಂದರೆ ಆತ್ಮ ವಂಚನೆಯಾಗುತ್ತದೆ ಎಂದರು.
ವೀರಣ್ಣ ನವರ ಪ್ರಾಮಾಣಿಕತೆ, ಬದ್ದತೆ, ಸರಳತೆ ಅಳವಡಿಸಿಕೊಳ್ಳುವುದು ಇಂದಿನ ರಾಜಕಾರಣಕ್ಕೆ ಕಷ್ಟ. ಹಾಗಾಗಿ ಚುನಾವಣಾ ವ್ಯವಸ್ಥೆ ಸುಧಾರಣೆಗೆ ಜನರು ಹೋರಾಟ ನಡೆಸಬೇಕಿದೆ. ೧೯೮೩ ನಾನು ವೀರಣ್ಣ ಸ್ನೇಹಿತರು, ವಿಧಾನಸಭೆಗೆ ತಪ್ಪಿಸಿಕೊಂಡವರಲ್ಲ. ಜನರ ಸಮಸ್ಯೆಗಳನ್ನು ಬಹಳ ಚನ್ನಾಗಿ ಮಾತನಾಡುತ್ತಿದ್ದರು. ನಾಯಕ ಸಮುದಾಯವನ್ನು ಪರಿಶಿಷ್ಟ ಪಂಗಡ ಸೇರಿದ್ದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಾಕಷ್ಟು ಅನುಕೂಲವಾಯಿತು. ಯಾವುದೇ ಖಾತೆ ನೀಡಿದರೂ ದಕ್ಷತೆಯಿಂದ ಕೆಲಸ ಮಾಡಿ, ಹೆಸರು ಮಾಡಿದರು. ವೀರಣ್ಣನವರನ್ನು ವಾಲ್ಮೀಕಿ ಸಮುದಾಯ ಮರೆಯುವಂತಿಲ್ಲ. ಅವರ ಆತ್ಮಕ್ಕೆ ಶಾಂತಿ ನೀಡುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ಸಿದ್ದರಾಮಯ್ಯ ನುಡಿದರು.
ಮಾಜಿ ಸಂಸದ ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾನ ಮನಸ್ಕರ ವೇದಿಕೆ ರಾಜ್ಯಾಧ್ಯಕ್ಷ ವಿ.ಎಸ್. ಉಗ್ರಪ್ಪ ಮಾತನಾಡಿ, ನನ್ನ ಬದುಕಿನ ಆದರ್ಶ ವ್ಯಕ್ತಿ ವೀರಣ್ಣ. ವಾರದ ಅನ್ನದ ವಿದ್ಯಾರ್ಥಿ ಯಾಗಿದ್ದ ನನಗೆ ಸೋಮವಾರದ ಊಟ ನೀಡಿದ್ದು ವೀರಣ್ಣ ಕುಟುಂಬ. ನಾಯಕ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೂ ಅದರ ಆಶಯ ಈಡೇರಿಲ್ಲ ಎಂಬ ಆತಂಕವಿತ್ತು. ಸಂವಿಧಾನದ ೯ನೇ ಷಡ್ಯೂಲ್‌ಗೆ ಸೇರಿಸಿದರೆ ವೀರಣ್ಣ ಅವರ ಆತ್ಮಕ್ಕೆ ನಿಜವಾಗಿಯೂ ಶಾಂತಿ ದೊರೆಯಲಿದೆ. ಇದಕ್ಕೆ ನಾಯಕರು ಮನಸ್ಸು ಮಾಡಬೇಕು ಎಂದರು.
ಪಕ್ಷ ನಿಷ್ಠೆಗೆ ಮತ್ತೊಂದು ಹೆಸರು ವೀರಣ್ಣ. ಪಕ್ಷ ಬದಲಿಸಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದರು. ಹಣ ಹಂಚಿ ಶಾಸಕರಾದವರಲ್ಲ. ಜನರ ಪ್ರೀತಿ, ವಿಶ್ವಾಸದಿಂದ ಮಾತ್ರ. ಸÀರ್ಕಾರವೇ ಚುನಾವಣಾ ವೆಚ್ಚ ಭರಿಸುವ ಕೆಲಸ ಆಗಬೇಕು. ಒನ್ ನೇಶನ್, ಒನ್‌ಎಲೆಕ್ಷನ್, ಮಹಿಳಾ ಮೀಸಲಾತಿ ಮಾತುಗಳ ನಡುವೆ, ಸ್ಟೇಟ್ಸ್ ಫಂಡ್‌ನಲ್ಲಿ ಚುನಾವಣೆ ನಡೆಯಬೇಕು.ಪ್ರಾಮಾಣಿಕರುರಾಜಕಾರಣಕ್ಕೆ ಬರಬೇಕು ಎಂದು ವಿ.ಎಸ್.ಉಗ್ರಪ್ಪ ತಿಳಿಸಿದರು.
ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ, ವೀರಣ್ಣ ವ್ಯಕ್ತಿತ್ವದ ಜೊತೆಗೆ, ರಾಜಕೀಯ, ಸಾಮಾಜಿಕ ಕಾಲಘಟ್ಟವನ್ನು ತೆರೆದಿಟ್ಟಿದೆ. ಮೌಲ್ಯಾಧಿಕಾರಣ, ಸಾಮಾಜಿಕ ನ್ಯಾಯ, ಆದರ್ಶಗಳು ಕುಂಟಿತಗೊAಡಿರುವ ಕಾಲದಲ್ಲಿ ವೀರಣ್ಣ ಅವರ ರಾಜಕೀಯ ಎಲ್ಲರಿಗೂ ಮಾದರಿ. ಬಿಟ್ಟಿ ಭಾಗ್ಯ ಅಣಕಿಸುವವರು ಬಡವರ ವಿರೋಧಿಗಳು, ದಕ್ಷತೆ, ಪ್ರಾಮಾಣಿಕತೆ, ಪಾರದರ್ಶಕತೆ, ನೈತಿಕತೆ, ಸರಳತೆ ಎಂಬ ಗ್ಯಾರಂಟಿಗಳನ್ನು ರಾಜಕೀಯ ನಾಯಕರು ಅಳವಡಿಸಿಕೊಂಡರೆ ರಾಜ್ಯ ಸುಭೀಕ್ಷವಾಗಲಿದೆ. ಯಾರಿಗೂ ಬೇಡದ ಸಣ್ಷ ಉಳಿತಾಯ ಖಾತೆಗೆ ಘನತೆ ತಂದುಕೊಟ್ಟರವರು ವೀರಣ್ಣ, ತನಗೆ ವಹಿಸಿದ ಜವಾಬ್ದಾರಿಯನ್ನು ದಕ್ಷತೆ ಯಿಂದ ನಿರ್ವಹಿಸಿದವರು. ಇಂತಹವರ ಸಂಖ್ಯೆ ಹೆಚ್ಚಬೇಕಿದೆ ಎಂದರು.
ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಂದ್ರ ಮಾತನಾಡಿ, ಗಾಂಧಿ ನಗರದಲ್ಲಿ ಅಕ್ಕಪಕ್ಕದ ಮನೆಯಲ್ಲಿದ್ದವರು. ಅವರ ಅನುಭವದ ಮಾತು ಗಳನ್ನು ಕೇಳಿ ಕಾನೂನು ಓದಿದವವ, ಅಲ್ಲದೆ ವಕೀಲ ವೃತ್ತಿಗೆ ಬೆನ್ನೆಲುಬಾಗಿ ನಿಂತವರು ವೀರಣ್ಣ. ವಕೀಲರ ವೃತ್ತಿಯನ್ನು ಸೇವೆ ಎಂಬAತೆ ಬದುಕಿ ದವರು. ನಾನು ಯಾರ ಬಳಿಯೂ ಕಿರಿಯ ವಕೀಲ ನಾಗಿ ಕೆಲಸ ಮಾಡದಿದ್ದರೂ ವಕೀಲನಾಗಿ ವೃತ್ತಿ ಬದುಕಿನಲ್ಲಿ ಯಶಸ್ಸು ಗಳಿಸಲು ವೀರಣ್ಣ ಕಾರಣ ಎಂದರು.
ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ವೀರಣ್ಣ ಅವರು ಎಂದಿಗೂ ಹಣದ ಹಿಂದೆ ಹೋದವರಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಪರವಾಗಿ ಕೆಲಸ ಮಾಡಿದವರು. ಹೆಚ್ಚು ಒಡನಾಟ ಇಟ್ಟುಕೊಂಡವ, ಮಗಳೆಂದರೆ ಅಚ್ಚುಮೆಚ್ಚು, ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ವೀರಣ್ಣ ಅವರೇ ಕಾರಣಕರ್ತರು. ನಾಯಕ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶ್ರಮಿಸಿದವರು. ಬಹಳ ವಿಚಾರಗಳಲ್ಲಿ ನಮಗೆ, ಅವರಿಗೂ ಸಾಮ್ಯತೆ ಇತ್ತು. ಹಠ ಬಿಡದೆ ಹಿಡಿದ ಕೆಲಸ ಮಾಡುತ್ತಿದ್ದರು.
ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿದರು. ಪ್ರಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾನ ಮನಸ್ಕರ ವೇದಿಕೆಯ ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ, ವೀರಣ್ಣ ಅವರ ಪ್ರಾಮಾಣಿಕತೆ, ಬದ್ದತೆ, ಸರಳತೆ ಇಂದಿನ ಯುವ ಪೀಳಿಗೆಗೆ ಮಾದರಿ ಎಂದರು.
ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಮಂತ್ರಿಗಳು ಮತ್ತು ಶಾಸಕರಾದ ಟಿ.ಬಿ.ಜಯಚಂದ್ರ, ಶಾಸಕರಾರ ಶ್ರೀನಿವಾಸ್, ಅಶೋಕ ಪಟ್ಟಣಶೆಟ್ಟಿ, ಮಾಜಿ ವಿಧಾನ ಪರಿಷತ್ ಡಾ.ಎಂ.ಆರ್.ಹುಲಿನಾಯ್ಕರ್, ಪತ್ರಕರ್ತರಾದ ಎಸ್. ನಾಗಣ್ಣ, ಸಾಹಿತಿ ನಾಡೋಜ ಬರಗೂರು ರಾಮ ಚಂದ್ರಪ್ಪ, ವಿ.ಎನ್.ಮೂರ್ತಿ, ನರಸಿಂಹಯ್ಯ, ಹೆಚ್.ಸಿ.ಹನುಮಂತಯ್ಯ, ಹಿರಿಯರು ಇದ್ದರು.

(Visited 1 times, 1 visits today)
Congress dcm dr.g.parameshwar ex minixter c.veeranna kannada news karnataka Koratagere tumakur tumkur tumkur news veeranna ಕಾಂಗ್ರೆಸ್ ತುಮಕೂರು:
Previous Articleಲೆಟರ್‌ಹೆಡ್ ಪದಾಧಿಕಾರಿಗಳಾಗುವುದರಿಂದ ಯಾವುದೇ ಪ್ರಯೋಜನವಿಲ್ಲ
Next Article ಗಂಗಸ0ದ್ರ ಕೆರೆ ಏರಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜ್ಯೋತಿಗಣೇಶ್ ಚಾಲನೆ
News Desk Benkiyabale

Related Posts

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm news

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm news

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm news
ತಾಜಾ ಸುದ್ಧಿಗಳು
news

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm
news

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm
news

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm
news

ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ

October 16, 2026 4:52 pm
news

ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್

October 15, 2026 6:04 pm
news

ಭೂಸ್ವಾಧೀನಕ್ಕೆ ಹಣದ ಬದಲು ಬದಲಿ ಭೂಮಿ ನೀಡಿ

October 15, 2026 6:02 pm
Our Youtube Channel
Our Picks

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm

ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ

October 16, 2026 4:52 pm

ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್

October 15, 2026 6:04 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

By News Desk BenkiyabaleOctober 16, 2026 5:16 pm

ತುಮಕೂರು: ಜಾಗತೀಕರಣದ ಪ್ರಭಾವದಿಂದ ಪ್ರಾದೇಶಿಕ ಅಸ್ಮಿತೆಗಳು ಅಳಿಸಿಹೋಗುವ ಆತಂಕ ಎದುರಾಗಿರುವ ಇಂದಿನ ಸಂದರ್ಭದಲ್ಲಿ ನಾಟಕಗಳು, ವಿವಿಧ ರಂಗರೂಪಗಳು ನಮ್ಮ ಮೂಲ…

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm

ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ

October 16, 2026 4:52 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.