ತುಮಕೂರು: ಕಾಂಗ್ರೆಸ್ ಪಕ್ಷದ ವಕೀಲರ ಸೆಲ್‌ನವರು ಕೇವಲ ಲೆಟರ್‌ಹೆಡ್ ಪದಾಧಿಕಾರಿಗಳಾಗುವುದರಿಂದ ಯಾವುದೇ ಪ್ರಯೋಜನವಿಲ್ಲ.ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ತಾವೆಲ್ಲರೂ ಕಟಿಬದ್ದರಾಗಿ ಕೆಲಸ ಮಾಡಬೇಕೆಂದು ಕೆಪಿಸಿಸಿ ಲೀಗಲ್ ಸೆಲ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಧನಂಜಯ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕೀಲರ ಸೆಲ್‌ನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೆಪಿಸಿಸಿ ವಕೀಲರ ಸೆಲ್ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಧನಂಜಯ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ, ಸನ್ಮಾನ ಸ್ವೀಕರಿಸಿ ಮಾತನಾಡುತಿದ್ದ ಅವರು,ಪ್ರಜಾತಂತ್ರಕ್ಕೆ ಮಾರಕವಾಗಿರುವ ಎಸ್.ಐ.ಆರ್.ನಲ್ಲಿ ಆರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತ ರಾಗದಂತೆ ಕಾಪಾಡುವ ಗುರುತರ ಹೊಣೆಗಾರಿಕೆ ವಕೀಲರ ವಿಭಾಗದ ಮೇಲಿದೆ ಎಂದರು.
ನಾನು ಕೂಡು ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕೆ ಸೇರ್ಪಡೆಗೊಂಡು ಇಂದು ಕೆಪಿಸಿಸಿ ವಕೀಲರ ಸೆಲ್ ಅಧ್ಯಕ್ಷನಾಗಿದ್ದೇನೆ. ಅದಲ್ಲದೆ ಕೆಲವು ಅವಕಾಶಗಳು ಬಂದಾಗ ಕೊಂಚ ಎಡವಿದ್ದರ ಪರಿಣಾಮ, ಶಾಸಕನಾಗುವ ಅವಕಾಶದಿಂದ ವಚಿಚಿತನಾದೆ.ಹಾಗಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಒಂದೊಮ್ಮೆ ಅದು ಸಣ್ಣದೋ,ದೊಡ್ಡದೋ ಅವಕಾಶ ದೊರೆತಾಗ ನಿರ್ಲಕ್ಷ ಮಾಡಬೇಡಿ,ಸಣ್ಣ ಅವಕಾಶಗಳನ್ನು ನಿಮ್ಮನ್ನು ಕೆಪಿಸಿಸಿ, ಎಐಸಿಸಿ ಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತೇವೆ.೨೦೨೮ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.ಅಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಸಹ ವಕೀಲರ ಘಟಕ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕೆಪಿಸಿಸಿ ವಕೀಲರ ಘಟಕದ ರಾಜ್ಯಾಧ್ಯಕ್ಷ ಧನಂಜಯ ತಿಳಿಸಿದರು.
ವಕೀಲರ ಪರಿಷತ್ತಿನ ನಿರ್ದೇಶಕರಾದ ನಾರಾಯಣಸ್ವಾಮಿ ಮಾತನಾಡಿ, ಈ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟಿದ್ದು ಕಾಂಗ್ರೆಸ್,ಪAಚವಾರ್ಷಿಕ ಯೋಜನೆಗಳ ಮೂಲಕ ಜೀರೋ ದಿಂದ ಇಂದಿನ ಬೆಳವಣಿಗೆಯವರಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಇದೆಆರ್.ಟಿ.ಇ, ಆರ್.ಟಿ.ಐ,ಆಹಾರ ಭದ್ರತಾ ಕಾಯ್ದೆ, ವಕೀಲರ ರಕ್ಷಣಾ ಕಾಯ್ದೆ ಸೇರಿದಂತೆ ಹಲವಾರು ಜನರಪರ ಕಾಯ್ದೆಗಳಿಗೆ ಮುನ್ನುಡಿ ಬರೆದಿದ್ದು ಕಾಂಗ್ರೆಸ್.ಆದರೆ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ ಸರಕಾರಿ ಸಾಮ್ಯದ ಕಂಪನಿಗಳನ್ನು ಇಂದಿನ ಬಿಜೆಪಿ ಸರಕಾರ ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ದೇಶವನ್ನು ಮತ್ತಷ್ಟು ಅದೋಗತಿಗೆ ತಳ್ಳುತ್ತಿದೆ.ಇದರ ವಿರುದ್ದ ಹೋರಾಟವನ್ನು ವಕೀಲರ ವಿಭಾಗ ರೂಪಿಸಬೇಕಿದೆ ಎಂದರು.
ಕೆಪಿಸಿಸಿ ವಕೀಲರ ವಿಭಾಗದ ಆನಂತನಾಯ್ಕ್ ಮಾತನಾಡಿ, ನಾಗರಿಕರಿಗೆ ಮತದಾನ ಸೇರಿದಂತೆ ಹಲವಾರು ಹಕ್ಕುಗಳನ್ನು ನೀಡಿದ್ದು ಕಾಂಗ್ರೆಸ್ ಪಕ್ಷ.ಆದರೆ ಬಿಜೆಪಿ ಎಸ್.ಐ.ಆರ್ ಮೂಲಕ ಬಡವರು, ದಲಿತರು, ಹಿಂದುಳಿದ ವರ್ಗಗಳ ಮತದಾನದ ಹಕ್ಕನ್ನು ಕಸಿಯಲು ಹೊರಟಿದೆ.ತುಮಕೂರು ಜಿಲ್ಲೆಯಲ್ಲಿಯೂ ಸುಮಾರು ೨.೩೭ ಲಕ್ಷ ಮತದಾರರು ಪಟ್ಟಿಯಿಂದ ಹೊರಗೆ ಉಳಿಯುವ ಸಾಧ್ಯತೆ ಇದೆ. ಇಂತಹವರಿಗೆ ಕಾನೂನು ನೆರವು ನೀಡುವ ಮೂಲಕ ವಕೀಲರ ವಿಭಾಗ ಸಂವಿಧಾನವನ್ನು ಬಲಪಡಿಸುವ ಕೆಲಸ ಮಾಡಬೇಕೆಂದರು.
ಈಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಇಷ್ಟೊಂದು ಜನ ವಕೀಲರು ಆಗಮಿಸಿರುವುದು ಒಳ್ಳೆಯ ಬೆಳವಣಿಗೆ. ವಕೀಲರು ಸಂವಿಧಾನದ ರಕ್ಷಕರು, ಇತ್ತೀಚಿನ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಮಾಹಿತಿ ಹಕ್ಕನ್ನು ದುಬರ್ಳಕೆ ಮಾಡುತ್ತಿರುವುದು ಹೆಚ್ಚಾಗಿದ್ದು,ಇದರ ವಿರುದ್ದ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕೆಂದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ವಕೀಲರ ವಿಭಾಗದ ಅಧ್ಯಕ್ಷ ಸುರೇಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದಿವೆ.ಆದರೆ ವಕೀಲರ ವಿಭಾಗ ಸೇರಿದಂತೆ ಮಂಚೂಣಿ ಘಟಕಗಳ ಕಾರ್ಯಕರ್ತರು, ಮುಖಂಡರುಗಳಿಗೆ ಸರಿಯಾದ ಸ್ಥಾನಮಾನ ಪಕ್ಷದಲ್ಲಾಗಲಿ, ಸರಕಾರದ ನೇಮಕಗಳಲ್ಲಿ ದೊರೆತ್ತಿಲ್ಲ.ತುಮಕೂರು ಜಿಲ್ಲೆಯಲ್ಲಿ ಸುಮಾರು ೨೨ ಸರಕಾರಿ ವಕೀಲರು ಮತ್ತು ಸಹಾಯಕ ವಕೀಲರ ಹುದ್ದೆಗಳಲ್ಲಿ ಕಾಂಗ್ರೆಸೇತರರು ಕೆಲಸ ಮಾಡುತ್ತಿದ್ದು, ನಮ್ಮಲ್ಲಿಯೇ ಇರುವ ಚನ್ನಾಗಿ ಕಾನೂನು ತಿಳಿದಿರುವ, ಅದನ್ನು ನ್ಯಾಯಾಧೀಶರ ಮುಂದೆ ಮಂಡಿಸುವ ವಕೀಲರಿಗೆ ಅವಕಾಶ ಕಲ್ಪಿಸಬೇಕೆಂದು ಕೆಪಿಸಿಸಿ ವಕೀಲರ ಘಟಕದ ಅಧ್ಯಕ್ಷರಿಗೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ, ನಾನು ಕೂಡ ವಕೀಲನಾಗಿ ಹಲವು ವರ್ಷಗಳ ಕಾಲ ಪ್ರಾಕ್ಟೀಸ್ ಮಾಡಿದ್ದೇನೆ.ತದನಂತರ ಪಕ್ಷಕ್ಕೆ ಬಂದು,ತಳಮಟ್ಟದಿAದ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದೇನೆ.ಕೆಪಿಸಿಸಿ ಲೀಗಲ್ ಸೆಲ್ ಅಧ್ಯಕ್ಷರಾಗಿರುವ ಧನಂಜಯ ಅವರು ಚಿಕ್ಕನಾಯಕನಹಳ್ಳಿಯವರು, ಶಾಸಕರಾಗುವ ಅವಕಾಶವಿತ್ತು.ಸ್ವಲ್ಪದರಲ್ಲಿಯೇ ಕೈ ತಪ್ಪಿತ್ತು.ವಕೀಲರಿಗೂ ರಾಜಕೀಯಕ್ಕೂ, ಅದರಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಅವಿನಾಭಾವ ಸಂಭAಧವಿದೆ.ಮಹಾತ್ಮಗಾAಧಿ, ಡಾ.ಬಿ.ಆರ್.ಅಂಬೇಡ್ಕರ್, ನೆಹರು, ಸರದಾರ್ ವಲ್ಲಭಬಾಯಿ ಪಟೇಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ವಕೀಲರು. ಹಾಗಾಗಿಯೇ ಕಾಂಗ್ರೆಸ್ ಜನಪರ ಯೋಜನೆಗಳನ್ನು ಜಾರಿಗೆ ತರಲು ಕಾರಣವಾಗಿದೆ.೧೪೨ ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದ ಪ್ರವೃತ್ತಿಯನ್ನು ಇಂದಿನ ಯುವ ವಕೀಲರು ಮುಂದುವರೆಸಿಕೊAಡು ಹೋಗಬೇಕೆಂದರು.
ವಕೀಲರಾದ ಹಿರೇಹಳ್ಳಿ ಮಹೇಶ್, ಎಸ್ಸಿ ಸೆಲ್ ಅಧ್ಯಕ್ಷ ಬಿ.ಜಿ.ಲಿಂಗರಾಜು, ಷಣ್ಮುಗಪ್ಪ,ಮಧುಸೂಧನ್ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫೈಯಾಜ್, ಮಹೇಶ್,ಎಸ್ಟಿ ಸೆಲ್ ಅಧ್ಯಕ್ಷ ಕುಮಾರಸ್ವಾಮಿ, ಕಾರ್ಮಿಕ ಘಟಕದ ಸೈಯದ್ ದಾದಾಪೀರ್,ಸೇವಾದಳದ ಬೈಲಸ್ವಾಮಿ,ಒಬಿಸಿ ಘಟಕದ ಅನಿಲ್,ಅಲ್ಪಸಂಖ್ಯಾತರ ಘಟಕದ ಇರ್ಫಾನ್,ವಕೀಲರಾದ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
(Visited 1 times, 1 visits today)





