ಪಾವಗಡ: ಧಾರ್ಮಿಕ ಭಾವನೆಗಳ ಹಾಗೂ ಸಾಂಸ್ಕöÈತಿಕ ಪರಂಪರೆಯ ಸಂಕೇತವಾಗಿರುವ ಗೌರಿ-ಗಣೇಶ ಹಬ್ಬದ ಆಚರಣೆಗೆ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಹಬ್ಬವನ್ನು ಸರ್ಕಾರದ ನಿಯಮಾವಳಿಗಳಿಗೆ ಒಳಪಟ್ಟು ಕಾನೂನುಬದ್ಧವಾಗಿ ಹಾಗೂ ಶಾಂತಿಯುತ ಸೌಹಾರ್ದಯುತವಾಗಿ ಆಚರಿಸಲು ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ವೈ ರವಿ ಯವರ ನಾಯಕತ್ವದಲ್ಲಿ ಅಧಿಕಾರಿಗಳ ಸಭೆ ಜರುಗಿತು. ಸಭೆಯಲ್ಲಿ ಹಬ್ಬದ ಆಯೋಜಕರಿಗೆ ಮಾರ್ಗದರ್ಶನ ನೀಡುವುದು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು.
ನಂತರ ತಹಶೀಲ್ದಾರ್ ರವರು ಮಾಧ್ಯಮದವರೊಂದಿಗೆ ಮಾತನಾಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಆಯೋಜಕರು ಅರ್ಜಿ ಸಲ್ಲಿಸಿದರೆ, ಸಂಬAಧಪಟ್ಟ ಅಧಿಕಾರಿಗಳು ಕಛೇರಿಯಲ್ಲೇ ಇದ್ದು ಪರಿಶೀಲಿಸಿ ತಕ್ಷಣ ಪರ್ಮಿಷನ್ ನೀಡಬೇಕು.ಪುರಸಭೆ ಅಥವಾ ಗ್ರಾಮ ಪಂಚಾಯಿತಿಯ ಮುಂಜಾಗ್ರತಾ ಅನುಮತಿ ಇಲ್ಲದೆ ಯಾವುದೇ ಫ್ಲೆಕ್ಸ್ ಅಥವಾ ಬ್ಯಾನರ್ಗಳನ್ನು ಹಾಕುವಂತಿಲ್ಲ.ಮೂರ್ತಿ ವಿಸರ್ಜನೆಯ ದಿನದಂದು ಅನಧಿಕೃತ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟವಾಗದಂತೆ ಅಬಕಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಗಣಪತಿ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆಯವರೆಗೆ ಯಾವುದೇ ರೀತಿಯ ಗಲಾಟೆ, ಘರ್ಷಣೆಗಳು ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು.
ಈ ಬಾರಿ ತಾಲೂಕಿನಲ್ಲಿ ಮಳೆ ಅಭಾವವಿರುವುದರಿಂದ ಕೆರೆ-ಕುಂಟೆಗಳಲ್ಲಿ ನೀರಿರುವುದಿಲ್ಲ. ಆದ್ದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ
ಕಣಿವೆ ನರಸಿಂಹ ಸ್ವಾಮಿ ದೇವಸ್ಥಾನದ ಹತ್ತಿರವಿರುವ ಕಲ್ಯಾಣಿ ಹಾಗೂ ಪುರಸಭೆಯಿಂದ ಹೊಸದಾಗಿ ನಿರ್ಮಿಸಲಾಗುವ ಅಗಸರಕುಂಟೆ ಹತ್ತಿರದ ನೀರಿನ ಹೊಂಡದಲ್ಲಿ ಮೂರ್ತಿ ವಿಸರ್ಜನೆ ಮಾಡಬೇಕು.ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನಿರ್ಮಿಸುವ ವಿಶೇಷ ನೀರಿನ ಹೊಂಡಗಳಲ್ಲೇ ವಿಸರ್ಜನೆ ಮಾಡತಕ್ಕದ್ದು ಯಾವುದೇ ಕಾರಣಕ್ಕೂ ತೆರೆದ ಬಾವಿಗಳಲ್ಲಿ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಬಾರದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಾಫರ್ ಷರೀಫ್, ತಾಲೂಕು ಪಂಚಾಯಿತಿ ವ್ಯವಸ್ಥಾಪಕರಾದ ಮಜೀದ್ ಖಾನ್, ಗ್ರಾಮೀಣ ವೃತ್ತ ಪೊಲೀಸ್ ನಿರೀಕ್ಷಕರಾದ ಕೊಟ್ರೇಶ್, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೃಷ್ಣಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿ, ಪುರಸಭೆ ಆರೋಗ್ಯ ನಿರೀಕ್ಷಕರಾದ ಶಂಸುದ್ದೀನ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚೇತನ್ ಕುಮಾರ್ ವಲಯ ಅರಣ್ಯಾಧಿಕಾರಿ ರಾಕೇಶ್, ಅಗ್ನಿಶಾಮಕ ದಳದ ವೆಂಕಟೇಶ್ ನಾಡಗೌಡ ಹರೀಶ್ ಕಂದಾಯ ವೃತ್ತ ನಿರೀಕ್ಷಕರಾದ ರಾಜಗೋಪಾಲ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.
(Visited 1 times, 1 visits today)





