ತುಮಕೂರು: ಕೇವಲ ಶೇ. ೧೦೦ ರಷ್ಟು ಫಲಿತಾಂಶದ ಹಿಂದೆ ಬೀಳದೆ, ಶೇ. ೧೦೦ ರಷ್ಟು ಪ್ರಾಮಾಣಿಕ ಪರಿಶ್ರಮವನ್ನು ಹಾಕಿ ವಿದ್ಯಾರ್ಥಿಗಳಲ್ಲಿ ನೈತಿಕತೆ ಮತ್ತು ಕೌಶಲ್ಯ ಬೆಳೆಸುವ ಕಾಯಕವೇ ನಿಜವಾದ ಶಿಕ್ಷಕ ವೃತ್ತಿ ಎಂದು ವಿ ಆರ್ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ. ರಘು ವಿ. ಅಭಿಪ್ರಾಯಪಟ್ಟಿದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಹಾಗೂ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸೆ. ೫ ರಂದು ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳನ್ನು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತಗೊಳಿಸದೆ, ಅವರಲ್ಲಿ ಜೀವನೋಪಯುಕ್ತ ಕೌಶಲ್ಯಗಳನ್ನು ತುಂಬುವ ಜವಾಬ್ದಾರಿ ಶಿಕ್ಷಕರ ಮೇಲಿದೆ.ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿದಾಗ ಅವರಿಗೆ ಧೈರ್ಯ ತುಂಬಿ, ಸರಿಯಾದ ಮಾರ್ಗದರ್ಶನ ನೀಡುವುದೇ ನಿಜವಾದ ಗುರುವಿನ ಲಕ್ಷಣ ಎಂದರು.
ಕೇವಲ ಪಾಠ ಮಾಡಿ ಮುಗಿಸುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳ ವೈಯಕ್ತಿಕ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವ ಗುಣವನ್ನು ಶಿಕ್ಷಕರು ರೂಢಿಸಿಕೊಳ್ಳಬೇಕು. ಕೇವಲ ಅಂತಿಮ ಫಲಿತಾಂಶದ ಶೇಕಡಾವಾರು ಪ್ರಮಾಣಕ್ಕಿಂತ, ಬೋಧನೆಯಲ್ಲಿ ಹಾಕುವ ನೂರಕ್ಕೆ ನೂರರಷ್ಟು ಪರಿಶ್ರಮ ಮುಖ್ಯವಾಗುತ್ತದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತುಮಕೂರು ವಿವಿಯ ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ತುಮಕೂರು ವಿವಿ ಪ್ರಭಾರ ಕುಲಪತಿಗಳಾದ ಪ್ರೊ. ನಾಗಭೂಷಣ ಹೆಚ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ನಿರ್ದೇಶಕರಾದ ಪ್ರೊ. ಪರಶುರಾಮ ಕೆ.ಜಿ. ಸ್ವಾಗತಿಸಿದರು ಹಾಗೂ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಸಂಚಾಲಕರಾದ ಡಾ. ಸುದೀಪ್ ಕುಮಾರ್ ಆರ್. ಉಪಸ್ಥಿತರಿದ್ದರು. ಡಾ. ಚೇತನ್ ಪ್ರತಾಪ್ ಕೆ. ಎನ್. ನಿರೂಪಿಸಿದರು. ಡಾ. ರೇಣುಕಾ ಹೆಚ್. ಆರ್. ಅವರು ವಂದಿಸಿದರು.
(Visited 1 times, 1 visits today)





