ಪಾವಗಡ: ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮಳೆ ಹಾಗೂ ದುರಸ್ತಿ ಕಾಮಗಾರಿಗಳಿಂದ ಉಂಟಾಗಿರುವ ಗುಂಡಿಗಳನ್ನು ಮುಚ್ಚುವುದು ಹಾಗೂ ಶಾಲಾ ವಲಯಗಳಲ್ಲಿ ಹಂಪ್ಸ್ ಅಳವಡಿಸಿ ಸೂಚನಾ ಪಲಕಗಳನ್ನು ಅಳಬಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಳಗದವತಿಯಿಂದ ಗುರುವಾರ ಲೋಕೋಪಯೋಗಿ ಇಲಾಖೆ ಗೆ ಮುತ್ತಿಗೆ ಹಾಕಿ ಮನವಿ ಸಲಿಸಿದ ಘಟನೆ ಗುರುವಾರ ಜರುಗಿತು.
ಮನವಿ ಸಲ್ಲಿಸಿ ತಾಲ್ಲೂಕು ಘಟಕದ ಅದ್ಯಕ್ಷ ಅಂಜನೇಯಲು ಮಾತನಾಡಿ, ಪಟ್ಟಣದ ತುಮಕೂರು ರಸ್ತೆಯ ಮಾರ್ಗದ ಕಣೀವೇನಹಳ್ಳಿ ಗೇಟ್ ಬಳಿ ಕಳೆದ 3 ತಿಂಗಳ ಹಿಂದೆ ನೀರಿನ ಪೈಪ್ ಕಾಂಗಾರಿಗಾಗಿ ರಸ್ತೆಯನ್ನು ಅಗೆದಿದ್ದು, ಅದರೆ ಕಾಂಗಾರಿಯನ್ನು ಸಂಪೂರ್ಣವಾಗಿ ಮಾಡದೇ ರಸ್ತೆಯಲ್ಲಿ ಗುಂಡಿ ಬಿದ್ದು ಇಲ್ಲಿಯವರೆಗೂ 10 ರಿಂದ 15 ಅಪಘಾತಗಳಾಗಿದ್ದು, ಇಬ್ಬರು ಮರಣ ಹೊಂದಿದ್ದಾರೆ, ಕಳೆದ ಭಾನುವಾರ ಸರ್ಕಾರಿ ಪ್ರೌಢಶಾಲೆಯ ಸಮಾಜ ಶಿಕ್ಷಕರಾದ ಶಿವಕುಮಾರ್ ತಮ್ಮ ಪುತ್ರನ ಜೊತೆ ಬೈಕ್ ನಲ್ಲಿ ಪಾವಗಡ ಕ್ಕೆ ಆಗಮಿಸುತ್ತಿರುವಾಗ ಇದೇ ಸ್ಥಳದಲ್ಲಿ ಅಪಘಾತವಾಗಿ ಸಾವು ಬದುಕಿನ ನಡುವೆ ತುಮಕೂರಿನ ಸರ್ಕಾರಿ ಅಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಷ್ಟಾದರೂ ತಮ್ಮ ಇಲಾಖೆಯಿಂದ ಗುಂಡಿಯನ್ನು ಮುಚ್ಚಿಲ್ಲಾ ಕೊನೆಗೆ ಕಣೀವೇನಹಳ್ಳಿ ಗ್ರಾಮಸ್ಥರೆ ಗುಂಡಿಯನ್ನು ಮುಚ್ಚಿದ್ದಾರೆ. ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಶಿರಾ ರಸ್ತೆ, ಬಳ್ಳಾರಿ ರಸ್ತೆಯ ಹಿಂದೂಪುರ ಮಾರ್ಗಳಲ್ಲಿ ಎಲ್ಲಂದರಲ್ಲೆ ವಿವಿಧ ಯೋಜನೆಗಳಿಂದ ರಸ್ತೆಯನ್ನು ಅಗೆದು ಅರ್ದಕ್ಕೆ ಬಿಟ್ಟಿದ್ದಾರೆ ಮತ್ತು ಮಳೆಯ ಕಾರಣದಿಂದಲೂ ಗುಂಡಿಗಳು ಬಿದ್ದಿವೆ ಗುರುಕುಲ ಶಾಲಾ ಮುಂಭಾಗದ ರಸ್ತೆಯಲ್ಲಿ ವಾಹನಗಳು ಅತಿ ವೇಗ ಸಂಚರಿಸುತ್ತಿದ್ದು ಪ್ರತಿದಿನ ಸಣ್ಣಪುಟ್ಟ ಅಪಘಾತಗಳಾಗಿತ್ತಿದ್ದು, ಹೆಚ್ಚಿನ ಅಪಘತಗಳಾಗುವ ಮುನ್ನಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಗುಂಡಿಗಳನ್ನು ಮುಚ್ಚುವ ದುರಸ್ತಿ ಕಾರ್ಯಕ್ಕೆ ಮುಂದಾಗದೆ ಇದ್ದ ಪಕ್ಷದಲ್ಲಿ ಕಛೇರಿ ಮುಂಭಾಗ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಹೆಚ್ಚರಿಸಿದರು.
ಈ ವೇಳೇ ಸಂಘಟನೆಯ ತಾಲ್ಲೂಕು ಉಪಾಧ್ಯಕ್ಷ ಎಸ್. ಅಕ್ಕಲಪ್ಪ, ಕಾರ್ಯಾಧ್ಯಕ್ಷರಾದ ಶರತ್ಬಾಬು, ವೇಣು, ಜಗನ್ನಾಥಚಾರಿ ಮತ್ತಿತರಿದ್ದರು.
(Visited 1 times, 1 visits today)





