BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ವೀರ ವನಿತೆ ಝಾನ್ಸಿಯ ರಾಣಿ ಅವರ ಜಯಂತಿ ಆಚರಣೆ
  • ಕೊರಟಗೆರೆ ಜನರ ಆಶೀರ್ವಾದವೇ ನನ್ನ ಶಕ್ತಿ; ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಡಿಸಿಎಂ
  • ಬಸವಣ್ಣನವರ ಅವಹೇಳನ: ವೀರಶೈವ ಲಿಂಗಾಯತ ಮಹಾಸಭಾ ಆಕ್ರೋಶ
  • ನಾರಾಯಣಗುರು ನಿಗಮಕ್ಕೆ ಹಣಕೊಡಿ, ಪ್ರತಿಮೆ ಸ್ಥಾಪಿಸಿ
  • ಬಡವರಿಗೆ ನಿವೇಶನ ಹಂಚಿಕೆಗೆ ಒಕ್ಕೊರಲ ಆಗ್ರಹ
  • ಮೊಬೈಲ್ ಗುಲಾಮಗಿರಿ ಬಿಟ್ಟು, ಪುಸ್ತಕ, ಪ್ರಕೃತಿಯೊಂದಿಗೆ ಅನುಸಂಧಾನ ಬೆಳೆಸಿ
  • ಹಳ್ಳಿಗಾಡಿನ ಮಕ್ಕಳು ಅತ್ಯಂತ ಧೈರ್ಯ ಶಾಲಿಗಳು, ಆತ್ಮವಿಶ್ವಾಸ ಉಳ್ಳವರು
  • ಚಿಕ್ಕನಾಯಕನಹಳ್ಳಿ ಕನ್ನಡ ಸಾಹಿತ್ಯ ಪರಂಪರೆಗೆ ತನ್ನದೇ ಆದ ಕೊಡುಗೆ ನೀಡಿದೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕೊರಟಗೆರೆ ಜನರ ಆಶೀರ್ವಾದವೇ ನನ್ನ ಶಕ್ತಿ; ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಡಿಸಿಎಂ
news

ಕೊರಟಗೆರೆ ಜನರ ಆಶೀರ್ವಾದವೇ ನನ್ನ ಶಕ್ತಿ; ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಡಿಸಿಎಂ

ಪAಚ ಗ್ಯಾರಂಟಿ ಯೋಜನೆಗಳಿಗೆ ೧.೬೨ ಲಕ್ಷ ಕೋಟಿ ವೆಚ್ಚ; ರಾಜ್ಯದಲ್ಲಿ ೧೫ ಲಕ್ಷ ನಿವೇಶನ ವಿತರಿಸಲು ನಿರ್ಧಾರ
By News Desk BenkiyabaleUpdated:November 21, 2026 5:32 pm
ಕೊರಟಗೆರೆ: ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಆಡಳಿತ ವ್ಯವಸ್ಥೆಯನ್ನೇ ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಉದ್ದೇಶದಿಂದ ರಾಜ್ಯ ಸರ್ಕಾರ ?ಪ್ರಜಾಸೇವೆ? ಅಭಿಯಾನವನ್ನು ಆರಂಭಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವೆ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವುದು ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ. ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಿ, ಅಧಿಕಾರಿಗಳ ಮೂಲಕ ಅಂದೇ ಸಂಜೆ ವೇಳೆಗೆ ಸಾಧ್ಯವಾದಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಖ್ಯಮAತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರಜಾಸೇವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ತುಮಕೂರು ಜಿಲ್ಲೆಯ ತಿಪಟೂರು, ಗುಬ್ಬಿ, ಕುಣಿಗಲ್ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಕಾರ್ಯಕ್ರಮಗಳು ನಡೆದಿದ್ದು, ಇದೀಗ ಕೊರಟಗೆರೆಯಲ್ಲಿ ಆಯೋಜಿಸಲಾಗಿದೆ. ಜಿಲ್ಲಾಧಿಕಾರಿಗಳು, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಲಭ್ಯವಿದ್ದು, ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಆದ್ಯತೆ ನೀಡಲಾಗುತ್ತಿದೆ. ಕನಿಷ್ಠ ಶೇ.೫೦ರಷ್ಟು ಅರ್ಜಿಗಳಿಗಾದರೂ ಪರಿಹಾರ ಕಲ್ಪಿಸಲು ಸಾಧ್ಯವಾದರೆ ಅಭಿಯಾನದ ಉದ್ದೇಶ ಸಾರ್ಥಕವಾಗಲಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ೧.೬೨ ಲಕ್ಷ ಕೋಟಿ ವೆಚ್ಚ: ಚುನಾವಣೆಯ ಸಂದರ್ಭದಲ್ಲಿ ಜನರಿಗೆ ನೀಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಸರ್ಕಾರ ಈಡೇರಿಸಿದೆ. ವಿರೋಧ ಪಕ್ಷಗಳು ಯೋಜನೆಗಳ ಜಾರಿ ಕುರಿತು ಟೀಕೆ ಮಾಡಿದ್ದರೂ, ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿವರ್ಷ ಸುಮಾರು ೫೦ ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಈವರೆಗೆ ಒಟ್ಟು ೧.೬೨ ಲಕ್ಷ ಕೋಟಿ ಖರ್ಚು ಮಾಡಲಾಗಿದೆ. ಬಸವಣ್ಣನವರ ನುಡಿದಂತೆ ನಡೆ ತತ್ವದಂತೆ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು.
ರಾಜ್ಯದಲ್ಲಿ ೧೫ ಲಕ್ಷ ನಿವೇಶನ ವಿತರಣೆ ಗುರಿ: ರಾಜ್ಯದಲ್ಲಿ ನಿವೇಶನರಹಿತ ಬಡ ಕುಟುಂಬಗಳಿಗೆ ೧೫ ಲಕ್ಷ ನಿವೇಶನಗಳನ್ನು ವಿತರಿಸಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ೨೦*೩೦ ಅಡಿ ಅಳತೆಯ ನಿವೇಶನಗಳನ್ನು ನೀಡಲಾಗುತ್ತಿತ್ತು. ಇನ್ನು ಮುಂದೆ ೩೦*೪೦ ಅಡಿ ಅಳತೆಯ ನಿವೇಶನಗಳನ್ನು ಒದಗಿಸಲು ಉದ್ದೇಶಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ೨೦ ಸಾವಿರ ನಿವೇಶನಗಳನ್ನು ಸಿದ್ಧಪಡಿಸುವ ಕಾರ್ಯ ಕೈಗೊಳ್ಳಲಾಗಿದೆ. ಗ್ರಾಮಸಭೆಗಳ ಮೂಲಕ ಅರ್ಹ ನಿವೇಶನರಹಿತ ಕುಟುಂಬಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.
ರೈತರಿಗೆ ಒಂದೇ ದಾಖಲೆಯಲ್ಲಿ ಭೂಮಿಯ ಸಮಗ್ರ ಮಾಹಿತಿ: ರೈತರು ತಮ್ಮ ಜಮೀನಿಗೆ ಸಂಬAಧಿಸಿದ ಪಹಣಿ, ಆಕಾರ್‌ಬಂದ್, ನಕಾಶೆ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾದ ಪರಿಸ್ಥಿತಿಯಿದೆ. ಇದಕ್ಕೆ ಪರಿಹಾರವಾಗಿ ಹೊಸ ಮಾದರಿಯ ನಮೂನೆ ೧೬ಎ ಪಹಣಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ರೈತರ ವೈಯಕ್ತಿಕ ವಿವರಗಳು, ಬೆಳೆ ಮಾಹಿತಿ, ಆಧಾರ್ ಮಾಹಿತಿ, ಭಾವಚಿತ್ರ ಸೇರಿದಂತೆ ಭೂಮಿಗೆ ಸಂಬAಧಿಸಿದ ಹಲವು ಮಾಹಿತಿಗಳು ಒಂದೇ ದಾಖಲೆಯಲ್ಲಿ ಲಭ್ಯವಾಗಲಿವೆ. ಇದರಿಂದ ರೈತರಿಗೆ ಭೂದಾಖಲೆಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.
ಅಭಿವೃದ್ಧಿ ಕಾರ್ಯಗಳೇ ಟೀಕೆಗಳಿಗೆ ಉತ್ತರ: ಸರ್ಕಾರದಲ್ಲಿ ಹಣವಿಲ್ಲ, ರಾಜ್ಯ ದಿವಾಳಿಯಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಗಳಿಗೆ ಅಭಿವೃದ್ಧಿ ಕಾಮಗಾರಿಗಳೇ ಉತ್ತರವಾಗಿವೆ. ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ೪,೫೦೦ ಎಲೆಕ್ಟಿçಕ್ ಬಸ್‌ಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ೬ ಸಾವಿರ ಕೋಟಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ೧೬ ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಕೊರಟಗೆರೆ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ೨೫ ಕೋಟಿ ಅನುದಾನ ಒದಗಿಸಲಾಗಿದೆ ಎಂದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಆದ್ಯತೆ: ತುಮಕೂರು ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ತುಮಕೂರು ನಗರದಲ್ಲಿ ೧೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ವಾಸವಿದ್ದು ಶಿಕ್ಷಣ ಪಡೆಯುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಒದಗಿಸಲು ಸರ್ಕಾರ ಬದ್ಧವಾಗಿದೆ. ೧೯೯ ಕೋಟಿ ವೆಚ್ಚದಲ್ಲಿ ಸರ್ಕಾರಿ ಜಿಲ್ಲಾಸ್ಪತ್ರೆ ನಿರ್ಮಾಣವಾಗುತ್ತಿದೆ. ಕೊರಟಗೆರೆಯಲ್ಲಿ ?೪೨ ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, ತೋವಿನಕೆರೆಯಲ್ಲಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ. ಕೋಳಾಲ ಆಸ್ಪತ್ರೆಯನ್ನು ಉನ್ನತೀಕರಿಸಲಾಗುವುದು ಎಂದರು.
ತುಮಕೂರು ಜಿಲ್ಲೆಯಲ್ಲಿ ೪೧೬ ಭಾರತ್ ಜೋಡೋ ಯುವ ಸಂಘಗಳು: ಯುವಜನರಲ್ಲಿ ನಾಯಕತ್ವ, ಶಿಸ್ತು, ಸಾಮಾಜಿಕ ಜವಾಬ್ದಾರಿ ಹಾಗೂ ಸಾಂಸ್ಕöÈತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ ೧೦೦ ಯುವಜನರನ್ನು ಒಳಗೊಂಡ ಸಂಘ ರಚಿಸುವ ಉದ್ದೇಶವಿದೆ. ಪ್ರತಿ ಸಂಘಕ್ಕೆ ವಾರ್ಷಿಕ ೧೦ ಲಕ್ಷ ಅನುದಾನ ನೀಡುವ ಯೋಜನೆ ರೂಪಿಸಲಾಗಿದೆ. ರಾಜ್ಯ ಸರ್ಕಾರ ಇದಕ್ಕಾಗಿ ೧,೦೦೦ ಕೋಟಿ ಮೀಸಲಿಟ್ಟಿದ್ದು, ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ೪೧೬ ಸಂಘಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಬರ ಪರಿಹಾರಕ್ಕೆ ಕೇಂದ್ರದ ನೆರವಿನ ನಿರೀಕ್ಷೆ: ರಾಜ್ಯದಲ್ಲಿ ಬರಗಾಲದಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬರದಿಂದ ಉಂಟಾದ ನಷ್ಟಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರಕ್ಕೆ ೨೨ ಸಾವಿರ ಕೋಟಿ ನೆರವು ಕೋರಲಾಗಿದೆ. ರಾಜ್ಯ ಸರ್ಕಾರ ತನ್ನ ವತಿಯಿಂದ ಅರ್ಹ ರೈತರಿಗೆ ಪರಿಹಾರ ನೀಡುವ ಕ್ರಮ ಕೈಗೊಂಡಿದೆ. ರೈತರಿಗೆ ಒಟ್ಟು ೫ ಸಾವಿರ ಪರಿಹಾರ ಒದಗಿಸುವುದಾಗಿ ತಿಳಿಸಲಾಗಿದ್ದು, ರಾಜ್ಯದ ಪಾಲಿನ ೨,೫೦೦ ರೂ. ಈಗಾಗಲೇ ವಿತರಿಸಲಾಗಿದೆ. ಕೇಂದ್ರದ ಪಾಲಿನ ೨,೫೦೦ ರೂ. ಬಿಡುಗಡೆಗೂ ಒತ್ತಾಯಿಸಲಾಗುತ್ತಿದೆ ಎಂದರು.
(Visited 1 times, 1 visits today)
Congress dcm dr.g.parameshwar kannada news karnataka Koratagere local news tumkur news ಕೊರಟಗೆರೆ: ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು:
Previous Articleಬಸವಣ್ಣನವರ ಅವಹೇಳನ: ವೀರಶೈವ ಲಿಂಗಾಯತ ಮಹಾಸಭಾ ಆಕ್ರೋಶ
Next Article ವೀರ ವನಿತೆ ಝಾನ್ಸಿಯ ರಾಣಿ ಅವರ ಜಯಂತಿ ಆಚರಣೆ
News Desk Benkiyabale

Related Posts

ವೀರ ವನಿತೆ ಝಾನ್ಸಿಯ ರಾಣಿ ಅವರ ಜಯಂತಿ ಆಚರಣೆ

November 21, 2026 5:33 pm news

ಬಸವಣ್ಣನವರ ಅವಹೇಳನ: ವೀರಶೈವ ಲಿಂಗಾಯತ ಮಹಾಸಭಾ ಆಕ್ರೋಶ

November 20, 2026 5:32 pm news

ನಾರಾಯಣಗುರು ನಿಗಮಕ್ಕೆ ಹಣಕೊಡಿ, ಪ್ರತಿಮೆ ಸ್ಥಾಪಿಸಿ

November 20, 2026 5:31 pm news
ತಾಜಾ ಸುದ್ಧಿಗಳು
news

ವೀರ ವನಿತೆ ಝಾನ್ಸಿಯ ರಾಣಿ ಅವರ ಜಯಂತಿ ಆಚರಣೆ

November 21, 2026 5:33 pm
news

ಕೊರಟಗೆರೆ ಜನರ ಆಶೀರ್ವಾದವೇ ನನ್ನ ಶಕ್ತಿ; ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಡಿಸಿಎಂ

November 21, 2026 5:32 pm
news

ಬಸವಣ್ಣನವರ ಅವಹೇಳನ: ವೀರಶೈವ ಲಿಂಗಾಯತ ಮಹಾಸಭಾ ಆಕ್ರೋಶ

November 20, 2026 5:32 pm
news

ನಾರಾಯಣಗುರು ನಿಗಮಕ್ಕೆ ಹಣಕೊಡಿ, ಪ್ರತಿಮೆ ಸ್ಥಾಪಿಸಿ

November 20, 2026 5:31 pm
news

ಬಡವರಿಗೆ ನಿವೇಶನ ಹಂಚಿಕೆಗೆ ಒಕ್ಕೊರಲ ಆಗ್ರಹ

November 20, 2026 5:29 pm
news

ಮೊಬೈಲ್ ಗುಲಾಮಗಿರಿ ಬಿಟ್ಟು, ಪುಸ್ತಕ, ಪ್ರಕೃತಿಯೊಂದಿಗೆ ಅನುಸಂಧಾನ ಬೆಳೆಸಿ

November 20, 2026 5:28 pm
Our Youtube Channel
Our Picks

ವೀರ ವನಿತೆ ಝಾನ್ಸಿಯ ರಾಣಿ ಅವರ ಜಯಂತಿ ಆಚರಣೆ

November 21, 2026 5:33 pm

ಕೊರಟಗೆರೆ ಜನರ ಆಶೀರ್ವಾದವೇ ನನ್ನ ಶಕ್ತಿ; ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಡಿಸಿಎಂ

November 21, 2026 5:32 pm

ಬಸವಣ್ಣನವರ ಅವಹೇಳನ: ವೀರಶೈವ ಲಿಂಗಾಯತ ಮಹಾಸಭಾ ಆಕ್ರೋಶ

November 20, 2026 5:32 pm

ನಾರಾಯಣಗುರು ನಿಗಮಕ್ಕೆ ಹಣಕೊಡಿ, ಪ್ರತಿಮೆ ಸ್ಥಾಪಿಸಿ

November 20, 2026 5:31 pm

ಬಡವರಿಗೆ ನಿವೇಶನ ಹಂಚಿಕೆಗೆ ಒಕ್ಕೊರಲ ಆಗ್ರಹ

November 20, 2026 5:29 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ವೀರ ವನಿತೆ ಝಾನ್ಸಿಯ ರಾಣಿ ಅವರ ಜಯಂತಿ ಆಚರಣೆ

By News Desk BenkiyabaleNovember 21, 2026 5:33 pm

ತುಮಕೂರು: ದಬ್ಬಾಳಿಕೆಯ ಸಾಮ್ರಾಜ್ಯಶಾಹಿಯ ವಿರುದ್ಧ ಅಪ್ರತಿಮ ಧೈರ್ಯ, ಶೌರ್ಯಗಳಿಂದ ಹೋರಾಡಿ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದು, ಮಾತೃಭೂಮಿಯ ಸ್ವಾತಂತ್ರ÷್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅಪ್ರತಿಮ…

ಕೊರಟಗೆರೆ ಜನರ ಆಶೀರ್ವಾದವೇ ನನ್ನ ಶಕ್ತಿ; ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಡಿಸಿಎಂ

November 21, 2026 5:32 pm

ಬಸವಣ್ಣನವರ ಅವಹೇಳನ: ವೀರಶೈವ ಲಿಂಗಾಯತ ಮಹಾಸಭಾ ಆಕ್ರೋಶ

November 20, 2026 5:32 pm

ನಾರಾಯಣಗುರು ನಿಗಮಕ್ಕೆ ಹಣಕೊಡಿ, ಪ್ರತಿಮೆ ಸ್ಥಾಪಿಸಿ

November 20, 2026 5:31 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.