BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ರೈತರ ಬಗ್ಗೆ ಕಾಳಜಿ ಇಲ್ಲದ ಕುರುಡು ರಾಜ್ಯ ಸರ್ಕಾರ: ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ
  • ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ
  • ಕನ್ನೇರಿ ಪೂಜ್ಯರು ಮಠಾಧೀಶರ ವಿರುದ್ಧ ಬಳಸಿದ ಪದಗಳು ಸರಿ ಇಲ್ಲ: ಶ್ರೀ ಚಂದ್ರಶೇಖರಸ್ವಾಮಿಜಿ ಹೇಳಿಕೆ
  • ರೈತಾಪಿ ವರ್ಗದವರಿಗೆ ಸಹಾಯ ಮಾಡುವ ಶಕ್ತಿ ಸಹಕಾರಿ ಆಂದೋಲನಕ್ಕೆ ಇದೆ: ಶಾಸಕ ಕೆ.ಎನ್. ರಾಜಣ್ಣ ಹೇಳಿಕೆ
  • ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಲಿ
  • ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ
  • ಭೈರಪ್ಪನವರ ಕೃತಿಗಳು ಜೀವನಾನುಭವ, ತತ್ವಶಾಸ್ತçದ ಮಿಶ್ರಣ: ಡಾ. ಜಿ. ಬಿ. ಹರೀಶ್
  • ಯೋಗ ಮನೋದೈಹಿಕ ಆರೋಗ್ಯ ವೃದ್ಧಿಗೆ ಸಹಕಾರಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರು : ಬಿಡಿಎ ಅಧಿಕಾರಿಗಳ ಸೋಗಿನಲ್ಲಿ ಸಾರ್ವಜನಿಕರಿಗೆ ಲಕ್ಷಾಂತರ ಪಂಗನಾಮ!
Trending

ತುಮಕೂರು : ಬಿಡಿಎ ಅಧಿಕಾರಿಗಳ ಸೋಗಿನಲ್ಲಿ ಸಾರ್ವಜನಿಕರಿಗೆ ಲಕ್ಷಾಂತರ ಪಂಗನಾಮ!

By News Desk BenkiyabaleUpdated:September 05, 2020 6:55 pm

ತುಮಕೂರು : 

      ಬಿಡಿಎ ಅಧಿಕಾರಿಗಳು ಎಂದು ಜನರನ್ನು ನಂಬಿಸಿ ಟೂಡಾಕ್ಕೆ ಸೇರಿದ ಖಾಲಿ ಜಾಗಗಳನ್ನು ಹರಾಜಗಿಂತ ಮುಂಚೆಯೇ ಕಡಿಮೆ ದರಕ್ಕೆ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿ ಟೂಡಾ ಆಯುಕ್ತರ ಹೆಸರಿನಲ್ಲಿ ಡಿಡಿಗಳನ್ನು ಪಡೆದು ಲಕ್ಷಾಂತರ ಹಣವನ್ನು ವಂಚಿಸಿರುವ ಕತರ್ನಾಕ್ ಗ್ಯಾಂಗನ್ನು ತಿಲಕ್ ಪಾರ್ಕ್ ಪೊಲೀಸರು ಪತ್ತೆ ಹಚ್ಚಿ ಮಾಲು ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

      10 ಲಕ್ಷ ನಗದು 6 ಲಕ್ಷ ಬೆಲೆಬಾಳುವ ಕಾರು ಎರಡು ಲಕ್ಷ ಬೆಲೆಬಾಳುವ ಬುಲೆಟ್ ಸಮೇತ ಬಂಧಿಸಿದ್ದಾರೆ.
ಬಂಧಿತರಲ್ಲಿ ಮಧುಕುಮಾರ್ ಆಲಿಯಾಸ್ ಮಧು( 40) ತುಮಕೂರಿನ ಹೊರಭಾಗದಲ್ಲಿರುವ ಶಿರಾಗೇಟ್ ಬಳಿಯಿರುವ ಸಾಡೆಪುರ ಗ್ರಾಮದ ನಿವಾಸಿಯಾದ ಈತ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾನೆ. ಈತನ ದಂದೆಯ ಪ್ರಮುಖ ರೂವಾರಿಯಾಗಿದ್ದಾನೆ.
ಗುರು ಪ್ರಸಾದ್ (36) ಬನಶಂಕರಿ ಬಡಾವಣೆಯ ವಿನಾಯಕ ಆಸ್ಪತ್ರೆಯ ಪಕ್ಕದಲ್ಲಿರುವ ಹರಳ ಶೆಟ್ಟಿಕೆರೆಪಾಳ್ಯ ನಿವಾಸಿಯಾದ ಈತ ಬ್ಯಾಂಕಿನಲ್ಲಿ ಎಸ್‍ಡಿಸಿ ಕೆಲಸ ನಿರ್ವಹಿಸುತ್ತಿದ್ದಾನೆ.

      ಶ್ರೀನಿವಾಸ್ ಅಲಿಯಾಸ್ ಗುಂಡ (48) ಈತ ಬಸ್ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಮೂಲತಃ ಮಧುಗಿರಿ ತಾಲೂಕಿನ ಪುರವರ ಗ್ರಾಮದ ನಿವಾಸಿಯಾಗಿದ್ದು ತುಮಕೂರಿನ ಎಸ್‍ಎಸ್ ಪುರಂನಲ್ಲಿ ಸುನಿತಾ ಹೋಟೆಲ್ ಪಕ್ಕ ಇರುವ ಮನೆಯೂಂದರಲ್ಲಿ ವಾಸಿಸುತ್ತಿದ್ದಾನೆ. ಅಯಾಜ್ ಆಹಮದ್ ಆಲಿಯಾಸ್ ಹೈದರಾಲಿ (32)

     ತುಮಕೂರಿನ ಮರಳೂರು ದಿಣ್ಣೆ ಗ್ರಾಮದ ನಿವಾಸಿಯಾಗಿದ್ದು ಈತ ಲಾರಿಯ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ.
ಲೋಕೇಶ್ (39) ಈತ ಚೆಕ್ ಡಿಸ್ಕೌಂಟ್ ಕೆಲಸ ಮಾಡಿಸುವ ಪ್ರಮುಖ ರೂವಾರಿ ಆಗಿದ್ದು, ಈತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಣ್ಣೂರಹಳ್ಳಿ ಕಾವೇರಿ ಬಡಾವಣೆಯ ನಿವಾಸಿಯಾಗಿದ್ದಾನೆ.

      ಮಂಜುನಾಥ್ (54) ಈತನು ಚೆಕ್ಕುಗಳನ್ನು ಡಿಸ್ಕೌಂಟ್ ಮಾಡಿಸುವ ಕೆಲಸ ಮಾಡುವವನು. ಈತ ಬೆಂಗಳೂರಿನ ಪ್ಲೊರ್ ಇಂಡ್ ವಿನ್ ರಿಜಿಯೋ ಅಪಾಟ್ರ್ಮೆಂಟ್ ಕ್ಲಾಸಿನೋ ಲೇವಟ್‍ನಲ್ಲಿ ವಾಸವಾಗಿದ್ದಾನೆ. ಇವರನ್ನ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ತೀವ್ರ ವಿಚಾರಣೆಗೊಳಪಡಿಸಿದಾಗ ವಂಚಕರ ಜಾಲ ಬಯಲಾಗಿದೆ.

     ಬಿಡಿಎ ಅಧಿಕಾರಿಗಳು ಎಂದು ಜನರನ್ನು ನಂಬಿಸಿ ಟೂಡಾಕ್ಕೆ ಸೇರಿದ ಖಾಲಿ ಜಾಗಗಳನ್ನು ಗುರುತಿಸಿ ಇವು ಹರಾಜುಗಿಂತ ಮುಂಚೆಯೇ ಕಡಿಮೆ ದರಕ್ಕೆ ನಿಮಗೆ ಮಾಡಿಸಿಕೊಳ್ಳುತ್ತೇವೆ ಎಂದು ಅಮಾಯಕ ಜನರನ್ನು ನಂಬಿಸಿ ಅವರಿಂದ ಯಾವುದೇ ಅನುಮಾನ ಬಾರದಂತೆ ಟೂಡಾ ಆಯುಕ್ತರ ಹೆಸರಿಗೆ ಡಿಡಿಯನ್ನು ಕೊಡಿ ಎಂದು ಹೇಳುವ ಮೂಲಕ ಜನರಿಗೆ ಯಾವುದೇ ಅನುಮಾನ ಬಾರದಂತೆ ಡಿಡಿಗಳನ್ನು ಪಡೆದು ಹಣವನ್ನ ಡ್ರಾ ಮಾಡಿಕೊಂಡು ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್‍ನ್ನು ತಿಲಕ್‍ಪಾರ್ಕ್ ಪೊಲೀಸರುಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ:

      ತುಮಕೂರು ನಗರದ ಸದಾಶಿವನಗರದ ವಾಸಿ ಅನ್ವರ್ ಅಹಮದ್ ಖಾನ್ ಎಂಬುವರಿಗೆ ಟೂಡಾದಲ್ಲಿ ಖಾಲಿ ಇರುವ ಸೈಟ್‍ಗಳನ್ನು ಹರಾಜಾಗುವ ಮುನ್ನವೇ ಕಡಿಮೆ ದರಕ್ಕೆ ಮಾಡಿಸಿ ಕೊಡುತ್ತೇವೆ ಎಂದು ನಂಬಿಸಿ ಅವರಿಂದ ನಗದು ಹಾಗೂ ಡಿಡಿಯನ್ನು ಪಡೆದ ಗ್ಯಾಂಗ್ ಕೆಲವು ದಿನಗಳ ನಂತರ ನಾಪತ್ತೆಯಾಗಿದ್ದಾರೆ. ಡಿಡಿಯನ್ನು ತೆಗೆದುಕೊಟ್ಟ ನಂತರ ಹಲವು ದಿನಗಳು ಕಳೆದರೂ ಯಾರೂ ಕೈಗೆ ಸಿಕ್ಕಿರಲಿಲ್ಲ ಆಗ ಅನ್ವರ್ ಅಹಮದ್ ಎಂಬುವರು ಟೂಡಾ ಆಯುಕ್ತರನ್ನು ಭೇಟಿ ಮಾಡಿ 40 ಲಕ್ಷದ ಡಿಡಿಯನ್ನು ನಿಮ್ಮ ಹೆಸರಿಗೆ ನೀಡಿದ್ದೇವೆ ಎಂದು ಅವರ ಗಮನ ಸೆಳೆದಾಗ ಡಿಡಿಯನ್ನು ಪರಿಶೀಲಿಸಿದ ಆಯುಕ್ತರು ಇದು ನಿಮಗೆ ಯಾರು ವಂಚಿಸಿದ್ದಾರೆ. ನಮ್ಮಲ್ಲಿ ಯಾವುದೇ ಕಾಲಿ ನಿವೇಶನಗಳು ಇಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರಿಂದ ಆತಂಕಗೊಂಡ ಅವರು ತಿಲಕ್‍ಪಾರ್ಕ್ ಪೆÇಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ದೂರು ನೀಡಿದ ನಂತರ ಇಲ್ಲಿನ ಸಬ್‍ಇನ್ಸ್ಪೆಕ್ಟರ್ ನವೀನ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದರು.

     ತನಿಖೆ ಕೈಗೊಂಡ ಪೊಲೀಸರು ಈ ಜಾಲವನ್ನು ಕಂಡು ಬೆಚ್ಚಿ ಬಿದ್ದಿದ್ದರು. ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಆಧಾರದ ಮೇಲೆ ಇಲ್ಲಿನ ಪೊಲೀಸರು ತನಿಖೆ ಕೈಗೊಂಡಾಗ ಇದರಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಇರುವವರು ಶಾಮೀಲಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ವಿಷಯವನ್ನು ಇಲ್ಲಿನ ವೃತ್ತನಿರೀಕ್ಷಕ ಮುನಿರಾಜು ಅವರ ಗಮನಕ್ಕೆ ತರುತ್ತಾರೆ. ತನಿಖೆ ಕೈಗೊಂಡ ಪೊಲೀಸರಿಗೆ ಇದು ಭಾರಿ ಜಾಲವಾಗಿದೆ ಇದರಲ್ಲಿ ಅಮಾಯಕ ಜನರು ಮೋಸಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದು ಸಂಪೂರ್ಣ ವಿವರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೋನಂ ವಂಶಿಕೃಷ್ಣ ಅವರ ಗಮನಕ್ಕೆ ತರುತ್ತಾರೆ. ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅವರು ತನಿಖೆ ಮಾಡಲು ವಿಶೇಷ ತಂಡವನ್ನು ರಚಿಸುತ್ತಾರೆ.

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಂಶಿಕೃಷ್ಣ ಅವರ ನಿರ್ದೇಶನದ ಮೇರೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಉದ್ದೇಶ ಡಿವೈಎಸ್ಪಿ, ತಿಪ್ಪೇಸ್ವಾಮಿ, ಡಿ.ಸಿ.ಆರ್ ಬಿ, ಡಿವೈಎಸ್ಪಿ ಸೂರ್ಯನಾರಾಯಣ್, ತಿಲಕ್ ಪಾರ್ಕ್ ವೃತ್ತನಿರೀಕ್ಷಕ ಮುನಿರಾಜು, ಸಬ್‍ಇನ್ಸ್ಪೆಕ್ಟರ್ ನವೀನ್, ಸಿಬ್ಬಂದಿಗಳಾದ ಸೈಮನ್‍ವಿಕ್ಟರ್, ಮುನಾವರ್ ಪಾಷ, ಶಾಂತರಾಜು ಹನುಮರಂಗಯ್ಯ ನರಸಿಂಹಮೂರ್ತಿ ,ರಂಗಸ್ವಾಮಿ ಇವರುಗಳ ವಿಶೇಷ ತಂಡವನ್ನು ರಚಿಸುತ್ತಾರೆ.

       ವಿಶೇಷ ತಂಡ ವಿವಿಧ ಕಡೆ ಸಂಚರಿಸಿ ಪ್ರಮುಖ ರೂವಾರಿಯನ್ನ ಖೆಡ್ಡಾಕ್ಕೆ ಕೆಡವುವಲ್ಲಿ ಸಫಲಾದರು.  ಬಿಡಿಎ ಅಧಿಕಾರಿಗಳು ಎಂದು ಜನರನ್ನು ವಂಚಿಸಿ ಖಾಲಿ ಜಾಗವನ್ನು ತೋರಿಸಿ ಅದು ಟೂಡಾಕ್ಕೆ ಸೇರಿದ ಜಾಗವಾಗಿದೆ ಕಡಿಮೆ ದರಕ್ಕೆ ನಿಮ್ಮ ಮಾಡಿಸಿಕೊಡುತ್ತೇನೆ ಹರಾಜಾಗುವ ಮುನ್ನ ನೀವು ಖರೀದಿ ಮಾಡಿಕೊಳ್ಳಿ ಎಂದು ಈ ಪ್ರಕರಣದ ಪ್ರಮುಖ ರೂವಾರಿ ಮಧುಕುಮಾರ್ ಆಲಿಯಾಸ್ ಮಧು ಹಾಗೂ ಇತರರು ಸೇರಿಕೊಂಡು ನೀವು ನಮ್ಮ ಮೇಲೆ ನಂಬಿಕೆ ಇಡುವುದು ಬೇಡ ನೀವು ನೇರವಾಗಿಯೇ ಸರ್ಕಾರಿ ಅಧಿಕಾರಿಗಳಾದ ಟೂಡಾದ ಆಯುಕ್ತರ ಹೆಸರಿಗೆ ಡಿಡಿಯನ್ನು ತೆಗೆದು ಕೊಡಿ ಎಂದು ನಂಬಿಸಿ ಅವರಿಗೆ ಟೋಪಿ ಹಾಕಿ ನಂತರ ಪರಾರಿಯಾಗುವ ಮೂಲಕ ಜನರಿಗೆ ಲಕ್ಷಾಂತರ ಹಣವನ್ನು ಟೋಪಿ ಹಾಕಿ ಪರಾರಿಯಾಗುತ್ತಿದ್ದರು. ಈ ಪ್ರಮುಖ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.

ಪೊಲೀಸರ ಖೆಡ್ಡಕ್ಕೆ ಆರೋಪಿಗಳು:

       ಮಧುಕುಮಾರ್ ಆಲಿಯಾಸ್ ಮಧು ಎಂಬವನು ತುಮಕೂರು ಮೂಲದ ವ್ಯಕ್ತಿಯೊಬ್ಬರಿಗೆ ಹಣ ಬೇಕೆಂದು ಡಿಮ್ಯಾಂಡ್ ಮಾಡಿರುತ್ತಾನೆ. ವಿಶೇಷ ಪೊಲೀಸ್ ತಂಡ ಇದರ ಸುಳಿವನ್ನು ಅರಿತು ಇವರ ಮೂಲಕ ಮಧುಕುಮಾರ್ ಗೆ ಹಣ ನೀಡುತ್ತೇವೆ ನಾವು ಹೇಳಿದ ಸ್ಥಳಕ್ಕೆ ಬಾ ಎಂದು ಸೂಚಿಸುತ್ತಾನೆ. ಈತ ಹೆಚ್ಚಾಗಿ ಜನರಿಗೆ ವಂಚಿಸಿದ ಹಣವನ್ನು ತೆಗೆದುಕೊಂಡು ಉತ್ತರ ಪ್ರದೇಶ, ಜಾರ್ಖಂಡ್, ಹಿಮಾಚಲ ಪ್ರದೇಶ, ಹಿಮಾಲಯ ಪರ್ವತಗಳು, ಇರುವ ಸ್ಥಳಕ್ಕೆ ತೆರಳಿ ಕಾಲ ಕಳೆಯುತ್ತಿರುತ್ತಾನೆ. ಹಣ ಕಾಲಿ ಆದಾಗ ತನಗೆ ಬೇಕಾದ ಅವರಿಗೆ ದೂರವಾಣಿ ಕರೆ ಮಾಡಿ ಹಣವನ್ನು ತರಿಸಿಕೊಳ್ಳುತ್ತಾನೆ. ಇದರ ಮಾಹಿತಿ ಹರಿತ ವಿಶೇಷ ತಂಡ ಮಧುಕುಮಾರ್‍ಗೆ ದೂರವಾಣಿ ಕರೆ ಮಾಡಿಸಿ ನಾನು ಹಣ ಕೊಡುತ್ತೇನೆ. ನಾನು ಹೇಳಿದ ಸ್ಥಳಕ್ಕೆ ಬಾಯೆಂದು ಮಾಹಿತಿ ಕೊಡಿಸುತ್ತಾರೆ.
ಪಾವಗಡದ ಬೆಟ್ಟದ ತಪ್ಪಲಿಗೆ ಬರುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸದರಿ ಸ್ಥಳದಲ್ಲಿ ಪೊಲೀಸರು ಬಂಧಿಸುತ್ತಾರೆ.

      ಈ ಪ್ರಕರಣದ ಪ್ರಮುಖ ರೂವಾರಿಯಾದ ಮಧುಕುಮಾರನನ್ನ ಪಾವಗಡದ ಸಮೀಪವಿರುವ ಬೆಟ್ಟದ ಸಾಲಿಗೆ ಬಂದರೆ ಹಣ ನೀಡುತ್ತೇವೆ ಎಂದು ಸೂಚಿಸಿರುತ್ತಾರೆ. ಅದರಂತೆ ಮಧುಕುಮಾರ್ ಬಂದಾಗ ವಿಶೇಷ ತಂಡದ ಪೊಲೀಸರು ಮಧುಕುಮಾರನನ್ನ ಬಂಧಿಸಿ ವಿಚಾರಣೆಯನ್ನು ತೀವ್ರಗೊಳಿಸುತ್ತಾರೆ.

     ಬಯಲಾದ ವಂಚಕರ ಜಾಲ- ಬೆಚ್ಚಿಬಿದ್ದ ಪೊಲೀಸರು:

     ಮಧುಕುಮಾರನನ್ನ ವಿಶೇಷ ಪೊಲೀಸ್ ತಂಡ ವಶಕ್ಕೆ ತೆಗೆದುಕೊಂಡು ವಿಚಾರಣೆ ತೀವ್ರಗೊಳಿಸಿದಾಗ ಇದರಲ್ಲಿ ಒಟ್ಟು 10 ಕ್ಕೂ ಹೆಚ್ಚು ಮಂದಿ ಈ ದಂಧೆಯಲ್ಲಿ ಭಾಗಿಗಳಾಗಿ ಮೂವತ್ತಕ್ಕೂ ಹೆಚ್ಚು ಜನರಿಗೆ ವಂಚಿಸಿರುವುದು ಅಲ್ಲದೆ ಸುಮಾರು 35 ಡಿಡಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಎಲ್ಲಾ ಡಿಡಿಗಳನ್ನು ತುಮಕೂರಿನ ಟೂಡಾ ಆಯುಕ್ತರ ಹೆಸರಿಗೆ ತೆಗೆದುಕೊಂಡು ಅವುಗಳನ್ನು ಬೆಂಗಳೂರು ಕೋಲಾರ ಚಾಮರಾಜನಗರ ಚನ್ನರಾಯಪಟ್ಟಣ ಸೇರಿದಂತೆ ವಿವಿಧ ಕಡೆ ಇರುವ ಕೋ ಅಪರೆಟೀವ್ ಸೊಸೈಟಿಗಳ ಕೆಲವು ವ್ಯವಸ್ಥಾಪಕರುಗಳ ಜೊತೆ ಪರ್ಸೆಂಟೇಜ್ ಹಣಕ್ಕೆ ಮಾತುಕತೆ ನಡೆಸಿ ಡಿಡಿಗಳನ್ನು ಡ್ರಾ ಮಾಡಿಸಿಕೊಂಡು ನಂತರ ಆ ಹಣವನ್ನು ಸಮಾನವಾಗಿ ಹಂಚಿಕೆ ಮಾಡಿಕೊಳ್ಳುತ್ತಿದ್ದೆವು ಎಂದು ತನಿಖೆಯಲ್ಲಿ ಹೇಳಿದ್ದಾರೆ.

ಈ ದಂಧೆಯ ಮತ್ತಿಬ್ಬರು ಪ್ರಮುಖ ರುವಾರಿಗಳು ಎಸ್ಕೇಪ್:

     ಮಧುಕುಮಾರನ ಹೆಂಡತಿ ಶೈಲಶ್ರೀ ಹಾಗೂ ಟೂಡಾ ಶ್ರೀನಿವಾಸ್ ಎಂಬುವ ಪ್ರಮುಖರು ಪರಾರಿಯಾಗಿದ್ದಾರೆ .ಇವರ ಬಂಧನಕ್ಕೆ ವಿಶೇಷ ತಂಡ ಬಲೆ ಬೀಸಿದೆ.

     ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾದವ ವಂಶ ಕೃಷ್ಣ ಅವರು ಪತ್ರಿಕೆಯೊಂದಿಗೆ ಮಾತನಾಡಿ ತುಮಕೂರು ಬೆಂಗಳೂರು ಸೇರಿದಂತೆ ವಿವಿಧ ಕಡೆಯ ಗ್ರಾಹಕರಿಗೆ ಟೊಡಾದ ನಿವೇಶನಗಳು ಇವು ಎಂದು ಖಾಲಿ ನಿವೇಶನಗಳನ್ನು ತೋರಿಸಿ ಈ ನಿವೇಶನಗಳು ಹರಾಜ್ ಆಗಿಲ್ಲ. ನಿಮಗೆ ಕಡಿಮೆ ಹಣಕ್ಕೆ ಮಾಡಿಸಿ ಕೊಡುತ್ತೇವೆ ಎಂದು ವಂಚಿಸುತ್ತಿದ್ದ ವಂಚಕರ ಗ್ಯಾಂಗನ್ನು ನಮ್ಮ ವಿಶೇಷ ಪೊಲೀಸ್ ತಂಡ ಬಂಧಿಸಿದೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಅವರಿಗೆ ಬಹುಮಾನವನ್ನು ನೀಡಲಾಗುತ್ತದೆ ಎಂದ ಅವರು ಈ ಪ್ರಕರಣವನ್ನು ಸೈಬರ್ ಕ್ರೈಂ ಗೆ ವರ್ಗಾಯಿಸಲಾಗುತ್ತದೆ. ಅದರ ತನಿಖೆಯನ್ನು ಸೈಬರ್ ಕ್ರೈಮ್ ನ ಪೊಲೀಸರು ಮಾಡಬೇಕಾಗಿದೆ. ಹಾಗಾಗಿ ಪ್ರಕರಣವನ್ನು ಅವರಿಗೆ ವರ್ಗಾಯಿಸಲಾಗುತ್ತದೆ. ಇದರಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದಾರೆ ಅವರನ್ನು ಸದ್ಯದಲ್ಲೇ ಬಂಧಿಸಲಾಗುತ್ತದೆ. ಇಂತಹ ವಂಚಕರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಎಸ್ಪಿ ತಿಳಿಸಿರುತ್ತಾರೆ.

(Visited 24 times, 1 visits today)
Previous Articleರೈತರ ಒಪ್ಪಿಗೆಯೇ ಪಡೆಯದೇ ಕೃಷಿಭೂಮಿ ಭೂಸ್ವಾಧೀನ
Next Article ಮೃತ ತಹಸೀಲ್ದಾರ್ ಸಹಿ ದುರುಪಯೋಗ : ನಕಲಿ ದಾಖಲೆ ಸೃಷ್ಟಿಸಿ ಜಮೀನು ಗುಳುಂ
News Desk Benkiyabale

Related Posts

ಹುಳಿಯಾರು ಬಂದ್‌ಗೆ ಕರೆ ಕೊಡಲು ನಿರ್ಧಾರ

October 18, 2025 1:53 pm ತುಮಕೂರು

ಜಿಲ್ಲೆಯಲ್ಲಿ ನೀರಿನ ಜೈವಿಕ ಪರೀಕ್ಷೆ

October 17, 2025 12:04 pm ತುಮಕೂರು

ತಿಪಟೂರಿಗೆ ಮುಂಜಾನೆ ಬಸ್ ಇಲ್ಲದೆ ಪರದಾಟ

October 16, 2025 1:03 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ರೈತರ ಬಗ್ಗೆ ಕಾಳಜಿ ಇಲ್ಲದ ಕುರುಡು ರಾಜ್ಯ ಸರ್ಕಾರ: ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ

October 29, 2025 2:01 pm
ಇತರೆ ಸುದ್ಧಿಗಳು

ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ

October 29, 2025 1:50 pm
ಇತರೆ ಸುದ್ಧಿಗಳು

ಕನ್ನೇರಿ ಪೂಜ್ಯರು ಮಠಾಧೀಶರ ವಿರುದ್ಧ ಬಳಸಿದ ಪದಗಳು ಸರಿ ಇಲ್ಲ: ಶ್ರೀ ಚಂದ್ರಶೇಖರಸ್ವಾಮಿಜಿ ಹೇಳಿಕೆ

October 29, 2025 1:49 pm
ಇತರೆ ಸುದ್ಧಿಗಳು

ರೈತಾಪಿ ವರ್ಗದವರಿಗೆ ಸಹಾಯ ಮಾಡುವ ಶಕ್ತಿ ಸಹಕಾರಿ ಆಂದೋಲನಕ್ಕೆ ಇದೆ: ಶಾಸಕ ಕೆ.ಎನ್. ರಾಜಣ್ಣ ಹೇಳಿಕೆ

October 29, 2025 1:48 pm
ಇತರೆ ಸುದ್ಧಿಗಳು

ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಲಿ

October 27, 2025 1:23 pm
ಇತರೆ ಸುದ್ಧಿಗಳು

ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

October 24, 2025 1:30 pm
Our Youtube Channel
Our Picks

ರೈತರ ಬಗ್ಗೆ ಕಾಳಜಿ ಇಲ್ಲದ ಕುರುಡು ರಾಜ್ಯ ಸರ್ಕಾರ: ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ

October 29, 2025 2:01 pm

ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ

October 29, 2025 1:50 pm

ಕನ್ನೇರಿ ಪೂಜ್ಯರು ಮಠಾಧೀಶರ ವಿರುದ್ಧ ಬಳಸಿದ ಪದಗಳು ಸರಿ ಇಲ್ಲ: ಶ್ರೀ ಚಂದ್ರಶೇಖರಸ್ವಾಮಿಜಿ ಹೇಳಿಕೆ

October 29, 2025 1:49 pm

ರೈತಾಪಿ ವರ್ಗದವರಿಗೆ ಸಹಾಯ ಮಾಡುವ ಶಕ್ತಿ ಸಹಕಾರಿ ಆಂದೋಲನಕ್ಕೆ ಇದೆ: ಶಾಸಕ ಕೆ.ಎನ್. ರಾಜಣ್ಣ ಹೇಳಿಕೆ

October 29, 2025 1:48 pm

ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಲಿ

October 27, 2025 1:23 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ರೈತರ ಬಗ್ಗೆ ಕಾಳಜಿ ಇಲ್ಲದ ಕುರುಡು ರಾಜ್ಯ ಸರ್ಕಾರ: ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ

By News Desk BenkiyabaleOctober 29, 2025 2:01 pm

ತುರುವೇಕೆರೆ: ರೈತರ ಬಗ್ಗೆ ಕಾಳಜಿ ಇಲ್ಲದ ಕುರುಡು ರಾಜ್ಯ ಸರ್ಕಾರ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು. ಪಟ್ಟಣದ ಎಪಿಎಂಸಿ…

ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ

October 29, 2025 1:50 pm

ಕನ್ನೇರಿ ಪೂಜ್ಯರು ಮಠಾಧೀಶರ ವಿರುದ್ಧ ಬಳಸಿದ ಪದಗಳು ಸರಿ ಇಲ್ಲ: ಶ್ರೀ ಚಂದ್ರಶೇಖರಸ್ವಾಮಿಜಿ ಹೇಳಿಕೆ

October 29, 2025 1:49 pm

ರೈತಾಪಿ ವರ್ಗದವರಿಗೆ ಸಹಾಯ ಮಾಡುವ ಶಕ್ತಿ ಸಹಕಾರಿ ಆಂದೋಲನಕ್ಕೆ ಇದೆ: ಶಾಸಕ ಕೆ.ಎನ್. ರಾಜಣ್ಣ ಹೇಳಿಕೆ

October 29, 2025 1:48 pm
News by Date
October 2025
M T W T F S S
 12345
6789101112
13141516171819
20212223242526
2728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.