BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ
  • ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ
  • ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ
  • ಸಕಾಲಕ್ಕೆ ಮಳೆ ಇಲ್ಲದೇ ರೈತರು ಕಂಗಾಲು
  • ಪರಿಶಿಷ್ಟ ಪಂಗಡದ ಮೀಸಲಾತಿ ಕೈಬಿಟ್ಟಿರುವುದನ್ನ ಖಂಡಿಸಿದ ಗ್ರಾಮಸ್ಥರು ಮತದಾನದಿಂದ ದೂರವಿರುವುದಾಗಿ ಎಚ್ಚರಿಕೆ
  • ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಮನವಿ
  • ಗೃಹಬಳಕೆ ಸಿಲಿಂಡರ್‌ಗಳ ವಾಣಿಜ್ಯ ಬಳಕೆಗೆ ಕಾನೂನು ಕ್ರಮ
  • ತಂಬಾಕು ಮುಕ್ತ ಗ್ರಾಮಗಳನ್ನಾಗಿಸಲು ಎಡಿಸಿ ಸೂಚನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ದೇಶದ ಭದ್ರತೆ, ಭವಿಷ್ಯಕ್ಕಾಗಿ ಇಂದಿನ ವಿದ್ಯಾರ್ಥಿಗಳು ಸಂಶೋಧನೆಗಳನ್ನು ನಡೆಸಬೇಕಿದೆ: ತಜ್ಞರ ಅಭಿಮತ
ಇತರೆ ಸುದ್ಧಿಗಳು

ದೇಶದ ಭದ್ರತೆ, ಭವಿಷ್ಯಕ್ಕಾಗಿ ಇಂದಿನ ವಿದ್ಯಾರ್ಥಿಗಳು ಸಂಶೋಧನೆಗಳನ್ನು ನಡೆಸಬೇಕಿದೆ: ತಜ್ಞರ ಅಭಿಮತ

By News Desk BenkiyabaleUpdated:December 12, 2025 3:29 pm

ತುಮಕೂರು: ತಾಂತ್ರಿಕವಾಗಿ ದೇಶ ಬೆಳೆಯುತ್ತಿದ್ದು “ಕೃತಕ ಬುದ್ಧಿಮತ್ತೆ’  ತಂತ್ರಜ್ಞಾನದಿ0ದಾಗಿ ಇನ್ಮಿಲ್ಲದ ಸಂಶೋಧ ನೆಗಳನ್ನು ನಡೆಯುತ್ತಿವೆ. ಬಾಹ್ಯಕಾಶ, ಆರೋಗ್ಯ, ತಂತ್ರಜ್ಞಾನ ಸೇರಿದಂತೆ ದೇಶದ ಭದ್ರತೆ ಮತ್ತು ಭವಿಷ್ಯಕ್ಕಾಗಿ ಇಂದಿನ ವಿದ್ಯಾರ್ಥಿ ಗಳು ಸಂಶೋಧನಾತ್ಮಕ ಅಧ್ಯಯನಗಳನ್ನು ನಡೆಸಬೇಕಾಗಿದೆ ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ಶ್ರೀನಿವಾಸ ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾ ನಿಕ್ ಅಂಡ್ ಟೆಲಿಕಮ್ಯುನಿಕೇಶನ್ ವಿಭಾಗ ಮತ್ತು ಬೆಂಗಳೂರಿನ  ಸಹಾಯೋಗದೊಂದಿಗೆ ಬುಧುವಾರದಂದು ಹಮ್ಮಿಕೊಳ್ಳಲಾಗಿದ್ದ ೫ನೇ ಅಂತರಾಷ್ಟ್ರೀಯ ಮೊಬೈಲ್ ನೆಟ್ವರ್ಕ್ ಅಂಡ್ ಟೆಲಿ ಕಮ್ಯುನಿಕೇಷನ್ಸ್-೨೦೨೫ ಸಮ್ಮೇಳನದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು, ದೇಶದಲ್ಲಿ ತಂತ್ರಜ್ಞಾನ ಬೆಳೆಯುತ್ತಿದ್ದರೂ ಅದರಲ್ಲಿನ ಲೋಪ ದೋಷಗಳು ಮತ್ತು ಸಮಸ್ಯೆ ಸವಾಲುಗಳು ಎದುರಾಗುತ್ತಿವೆ. ಸೈಬೈರ್ ಕ್ರೈಂ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಸುರಕ್ಷತಾ ಹಾದಿಯನ್ನು ಕಂಡುಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳು ಕಲಿಯುವ ಹಂತದಲ್ಲಿಯೇ ಸಂಶೋಧನಾತ್ಮಕವಾಗಿ ಅಧ್ಯಯನಶೀಲರಾದರೆ ಮುಂದಿನ ದಿನಗಳಲ್ಲಿ ಅಂತಾರಾಷ್ಟಿಯ ಮಟ್ಟದಲ್ಲಿ ದೇಶೀಐ ತಂತ್ರಜ್ಞಾನವನ್ನು ಮುಂಚೂಣಿಗೆ ತರಬಹುದು ಎಂದರು.
ಸಂಸ್ಥೆಯ ಉಪಾಧ್ಯಕ್ಷರಾದ ಡಾ.ಚಂಗಪ್ಪ ಎಂ.ಆರ್ ಅವರು ಮಾತನಾಡಿ, ತಂತ್ರಜ್ಞಾನ ಹಲವು ಮಜಲುಗಳಲ್ಲಿ ಬೆಳೆಯುತ್ತಿದೆ. ವೈಯಕ್ತಿಕ ಮತ್ತು ಭದ್ರತಾ ಗೌಪ್ಯತೆಗಳನ್ನು ಕಾಪಾಡಲು ಮೊಬೈಲ್ ನೆಟ್ವರ್ಕ್ ಹಾಗೂ ರಿಸರ್ಚ್ ಟೆಲಿ ಕಮ್ಯು ನಿಕೇಷನ್ ಅಗತ್ಯವಿದೆ ಎಂದರು.
ಅಬುದಾಬಿಯ ಮೊಹಮ್ಮದ್ ಬಿನ್ ಜೆಯೆಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನವೀನ್ ಕುಮಾರ್ ಮಾತನಾಡಿ ತಾಂತ್ರಿಕವಾಗಿ ಹೊರಹೊಮ್ಮುವ ವಿದ್ಯಾರ್ಥಿಗಳಿಗೆ ಇಂದು ಸಾಧಿಸಬೇಕಾದಷ್ಟು ಅವಕಾಶಗಳನ್ನು ತಂತ್ರಜ್ಞಾನ ಒದಗಿಸುತ್ತಿದೆ. ದೇಶ-ವಿದೇಶ ತಿರುಗಿ ನೋಡುವಂತಹ ಸಾಧನೆಯನ್ನು ನಾವು ಮಾಡಬೇಕಾಗಿದೆ. ತಾಂತ್ರಿಕವಾಗಿ ಉಪಯೋಗವಾಗುವ ಕಾರ್ಯಗಾರಗಳಲ್ಲಿ ವಿದ್ಯಾ ರ್ಥಿಗಳು ಭಾಗವಹಿಸುವುದರಿಂದ ಅವರ ಬೌದ್ಧಿಕ ಬುದ್ಧಿ ಮಟ್ಟ ಹೆಚ್ಚಾಗಿ, ಹೊಸ ಹೊಸ ಆವಿಷ್ಕಾರದ ಗುಂಗು ತಲೆಯಲ್ಲಿ ಹೊಳೆ ಯುತ್ತದೆ ಎಂದರು.
ಸಾಹೇ ವಿವಿಯ ಡಾ.ಕೆ.ಬಿ.ಲಿಂಗೇಗೌಡ ಅವರು ಮಾತನಾಡಿ, ಸಿದ್ಧಾರ್ಥ ಶಿಕ್ಷಣ ಸಂಸ್ಥೆ ದೇಶದ ವಿದೇಶಗಳು ಮೆಚ್ಚುವಂತ0ಹ ಉನ್ನತ ಶಿಕ್ಷಣ ವ್ಯವಸ್ಥೆಗಳನ್ನು ಹೊಂದಿದ್ದು, ಸಂಸ್ಥೆ ರೂವಾರಿ ಡಾ.ಎಚ್. ಎಂ. ಗಂಗಾಧರಯ್ಯ ಅವರ ಆದರ್ಶ ಮತ್ತು ಆಶಯದಂತೆ ಸಂಸ್ಥೆಯ ವಿದ್ಯಾರ್ಥಿಗಳು ವಿದೇಶದಲ್ಲಿ ಸಾಧನೆ ಮಾಡಿದ್ದಾರೆ. ಸಂಸ್ಥೆಯಲ್ಲಿ ತಂತ್ರಜ್ಞಾನ ಕಲಿಕೆ ವಿಫುಲವಾದ ಅವಕಾಶ ಕಲ್ಪಿಸುತ್ತಿದ್ದು, ಇದನ್ನ ಬಳಸಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡಬಹುದು ಎಂದರು.
ಸಾಹೇ ರಿಜಿಸ್ಟರ್ ಡಾ. ಅಶೋಕ್ ಮೆಹ್ತಾ ಮಾತನಾಡಿ, ಇಂದಿನ ಜಗತ್ತಿನಲ್ಲಿ ಆಲೋಚನೆಗಳು ದಿನ ದಿನಕ್ಕೆ ಸುಧಾರಿಸಬೇಕು. ಇಂದಿನ ಕೃತಕ ಬುದ್ಧಿಮತ್ತೆ ಪ್ರಪಂಚದಲ್ಲಿ ಜೀವಿಸಲು ಕಷ್ಟ ಹಾಗೂ ಎಐ ಕೌಶಲ್ಯಗಳನ್ನು ಬದಲಾಯಿಸಬಹುದು. ಹಾಗಾಗಿ ವಿದ್ಯಾರ್ಥಿಗಳು ದಿನದಿಂದ ದಿನಕ್ಕೆ ಜ್ಞಾನವನ್ನು ಗಳಿಸಬೇಕು ಮತ್ತು ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಟಲಿಯ ವಿವಿ ವಿದ್ಯುತ್ ಮತ್ತು ಮಾಹಿತಿ ಎಂಜಿನಿಯರಿ0ಗ್‌ನ ಪ್ರಾಧ್ಯಾಪಕರಾದ ಪ್ರೊ. ಲೂಸಿಯಾನೊ ಮೆಸ್ಸಿಯಾ, ಪೋರ್ಚುಗಲ್‌ನ ಪೋರ್ಚುಕಲೆನ್ಸ್ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಫರ್ನಾಂಡೊ ಮೊರೈರಾ, ಇಟಲಿ ರೋಮ್ ವಿಶ್ವವಿದ್ಯಾಲಯದ ಡಾ. ಅಲೆ ಸ್ಸಾಂಡ್ರೊ ವಿಝಾರಿ ಅವರುಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಕಾರ್ಯಗಾರದಲ್ಲಿ ಸೀನಿಯರ್ ಇಂಜಿನಿಯರ್ ಮ್ಯಾನೇಜರ್ ಚಂದ್ರಶೇಖರ್ ಬಿ.ಎಸ್, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿ ದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್, ಅಂತಾರಾಷ್ಟಿ ಮಟ್ಟದ ಸಮ್ಮೇಳನದ ಸಂಘಟನಾ ಅಧ್ಯಕ್ಷರು ಹಾಗೂ ಎಲೆಕ್ಟ್ರಾನಿಕ್ ಅಂಡ್ ಟೆಲಿ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರು ಆದ ಡಾ.ಸವಿತಾ ಡಿ ತೋರವಿ ಸೇರಿದಂತೆ ಇಂಜಿನಿಯರಿ0ಗ್ ವಿಭಾಗದ ವಿವಿಧ ಮುಖ್ಯಸ್ಥರುಗಳು, ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

(Visited 1 times, 1 visits today)
Previous Articleಸಿದ್ಧಲಿ0ಗೇಶ್ವರ ಸಮಗ್ರವಚನ ಸಾಹಿತ್ಯ ಲೋಕಾರ್ಪಣೆ
Next Article ಸವಿತಾ ಸಮಾಜದಿಂದ ವಧು-ವರರ ಅನ್ವೇಷಣಾ ಕೇಂದ್ರ ಉದ್ಘಾಟನೆ
News Desk Benkiyabale

Related Posts

ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ

August 06, 2026 6:24 pm news

ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ

August 06, 2026 6:22 pm news

ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ

August 06, 2026 6:19 pm news
ತಾಜಾ ಸುದ್ಧಿಗಳು
news

ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ

August 06, 2026 6:24 pm
news

ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ

August 06, 2026 6:22 pm
news

ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ

August 06, 2026 6:19 pm
news

ಸಕಾಲಕ್ಕೆ ಮಳೆ ಇಲ್ಲದೇ ರೈತರು ಕಂಗಾಲು

August 06, 2026 6:15 pm
news

ಪರಿಶಿಷ್ಟ ಪಂಗಡದ ಮೀಸಲಾತಿ ಕೈಬಿಟ್ಟಿರುವುದನ್ನ ಖಂಡಿಸಿದ ಗ್ರಾಮಸ್ಥರು ಮತದಾನದಿಂದ ದೂರವಿರುವುದಾಗಿ ಎಚ್ಚರಿಕೆ

August 06, 2026 6:14 pm
news

ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಮನವಿ

August 06, 2026 6:12 pm
Our Youtube Channel
Our Picks

ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ

August 06, 2026 6:24 pm

ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ

August 06, 2026 6:22 pm

ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ

August 06, 2026 6:19 pm

ಸಕಾಲಕ್ಕೆ ಮಳೆ ಇಲ್ಲದೇ ರೈತರು ಕಂಗಾಲು

August 06, 2026 6:15 pm

ಪರಿಶಿಷ್ಟ ಪಂಗಡದ ಮೀಸಲಾತಿ ಕೈಬಿಟ್ಟಿರುವುದನ್ನ ಖಂಡಿಸಿದ ಗ್ರಾಮಸ್ಥರು ಮತದಾನದಿಂದ ದೂರವಿರುವುದಾಗಿ ಎಚ್ಚರಿಕೆ

August 06, 2026 6:14 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ

By News Desk BenkiyabaleAugust 06, 2026 6:24 pm

ಕೊರಟಗೆರೆ: ತಾಲೂಕಿನ ಸಿದ್ದರ ಬೆಟ್ಟದ ಅರಣ್ಯ ಇಲಾಖೆ ನರ್ಸರಿ ತಿರುವಿನಲ್ಲಿ ಭೀಕರ ಅಪಘಾತದಲ್ಲಿ ಪಟ್ಟಣದ ಅಂಬೇಡ್ಕರ್ ವಸತಿ ಶಾಲೆಯ ಕಾಲೇಜು…

ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ

August 06, 2026 6:22 pm

ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ

August 06, 2026 6:19 pm

ಸಕಾಲಕ್ಕೆ ಮಳೆ ಇಲ್ಲದೇ ರೈತರು ಕಂಗಾಲು

August 06, 2026 6:15 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.