BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಜೆಡಿಎಸ್ ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣಕ್ಕೆ ಖಂಡನೆ
  • ಶೀಘ್ರದಲ್ಲಿಯೇ ಆಸಕ್ತರಿಗೆ ಮಾಹಿತಿ ಹಕ್ಕು ಕಾಯ್ದೆಯ ಅರಿವು ಕಾರ್ಯಾಗಾರ
  • ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ
  • ಪ್ರತಿ ಮಗುವಿನ ಉತ್ತಮ ಆರೋಗ್ಯಕ್ಕಾಗಿ ಪೋಷಣ್ ಕಾರ್ಯಕ್ರಮ
  • ಮಳೆ ನೀರಿನೊಂದಿಗೆ ಮನೆಗಳಿಗೆ ನುಗ್ಗಿದ ಚರಂಡಿ ಕಲುಷಿತ ನೀರು
  • ಬೋರ್ ವೆಲ್ ಹೆಚ್ವು ಆಳಕ್ಕೆ ಕೊರೆಯಬೇಕೆಂದು ಗ್ರಾಮಸ್ಥರ ಒತ್ತಾಯ
  • ಜಿಲ್ಲೆಯಲ್ಲಿ ೧೫೯ ಕೋಟಿ ಬೆಳೆ ನಷ್ಟ: ಕೇಂದ್ರ ತಂಡಕ್ಕೆ ಮನವರಿಕೆ
  • ಬೃಹತ್ ಮೂರ್ತಿಯ ಮೆರವಣಿಗೆ, ಆಕರ್ಷಕ ಕಲಾ ಪ್ರದರ್ಶನ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವೀರಶೈವ ಸಮಾಜದ ಏಳಿಗೆಗೆ ಶಿವನಂಜಪ್ಪ, ಮಲ್ಲಿಕಾರ್ಜುನಯ್ಯ ಕಾರಣರು :ಮಾಜಿ ಸಂಸದ ಜಿ.ಎಸ್.ಬಸವರಾಜು
ತುಮಕೂರು ಜಿಲ್ಲಾ ಸುದ್ಧಿಗಳು

ವೀರಶೈವ ಸಮಾಜದ ಏಳಿಗೆಗೆ ಶಿವನಂಜಪ್ಪ, ಮಲ್ಲಿಕಾರ್ಜುನಯ್ಯ ಕಾರಣರು :ಮಾಜಿ ಸಂಸದ ಜಿ.ಎಸ್.ಬಸವರಾಜು

By News Desk BenkiyabaleUpdated:November 28, 2018 5:19 pm

 ತುಮಕೂರು:

      ಜಿಲ್ಲೆಯಲ್ಲಿ ವೀರಶೈವ ಸಮುದಾಯ ಇಷ್ಟು ಉತ್ತುಂಗಕ್ಕೆರಲು ಕಾರಣರಾದವರು ದಿವಂಗತರಾದ ಜಿ.ಎಸ್.ಶಿವನಂಜಪ್ಪ ಮತ್ತು ಮಲ್ಲಿಕಾರ್ಜುನಯ್ಯ ಅವರುಗಳನ್ನು ಸಮುದಾಯ ಎಂದಿಗೂ ಮರೆಯುವಂತಿಲ್ಲ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.

       ನಗರದ ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದಲ್ಲಿ ಮಾಜಿ ಶಾಸಕ ಜಿ.ಎಸ್.ಶಿವನಂಜಪ್ಪ ಅವರು 90ನೇ ಹುಟ್ಟು ಹಬ್ಬದ ಅಂಗವಾಗಿ ಸಿದ್ದರಾಮೇಶ್ವರ್ ಸಹಕಾರಿ ಬ್ಯಾಂಕು, ಗುರುಕುಲ ವಿದ್ಯಾರ್ಥಿನಿಲಯ ಹಾಗೂ ಗುರುಕುಲ ವಿವಿದೋದ್ದೇಶ ಸಹಕಾರಿ ಸಂಘ,ಬೆಂಗಳೂರಿನ ಅಪಲೋ ಆಸ್ಪತ್ರೆಯ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಹಳ್ಳಿಗಾಡಿನಿಂದ ನಗರಕ್ಕೆ ಬಂದಂತಹ ವೀರಶೈವ ಸಮುದಾಯ ಜನರು, ನಗರದಲ್ಲಿ ನೆಲೆಗೊಳ್ಳಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಅಂದಿನ ಕಾಲದಲ್ಲಿ ಈ ಇಬ್ಬರು ಮಹನೀಯರು ಮಾಡಿದ ಪರಿಣಾಮ, ಇಂದು ನಗರದಲ್ಲಿ ವೀರ ಶೈವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಲು ಸಾಧ್ಯವಾಗಿದೆ ಎಂದರು.

Displaying DSC_8519.JPG

      ಆರೋಗ್ಯ ಇಂದು ಎಲ್ಲರಿಗೂ ಬೇಕಾಗಿದೆ.ಮನುಷ್ಯನಿಗೆ ಅತಿ ಅಗತ್ಯವಿರುವ ವ್ಯವಸ್ಥೆಗಳಲ್ಲಿ ಆರೋಗ್ಯ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತದೆ. ನಂತರದ ಸ್ಥಾನದಲ್ಲಿ ಶಿಕ್ಷಣ,ಆಹಾರ ಬರುತ್ತದೆ.ಒತ್ತಡದ ಬದುಕಿನಲ್ಲಿ ಹಣಗಳಿಕೆಗೆ ಹೆಚ್ಚು ಒತ್ತು ನೀಡಿದ ಪರಿಣಾಮ ಆರೋಗ್ಯ ಸಮಸ್ಯೆಗಳು ಅತಿ ಚಿಕ್ಕ ವಯಸ್ಸಿಗೆ ತಲೆದೊರುತ್ತಿದೆ.ಇಂದಿಗೂ ಹಳ್ಳಿಗಾಡಿನಲ್ಲಿ ಮನುಷ್ಯನಿಗೆ ಬರುವ ಕಾಯಿಲೆಗೂ ದೇವರು,ದಿಂಡಿರು ಕಾರಣ ಎಂಬ ಮೂಢನಂಬಿಕೆ ಬಿತ್ತಲಾಗುತ್ತಿದೆ. ಇದರಿಂದ ಹೊರಬರುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಇದನ್ನು ಮಾಡುವವನೇ ನಿಜವಾದ ಜನನಾಯಕ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ನುಡಿದರು.

      ಹೃದ್ರೋಗದ ಬಗ್ಗೆ ಉಪನ್ಯಾಸ ನೀಡಿದ ಬೆಂಗಳೂರಿನ ಅಪಲೋ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ವೆಂಕಟೇಶ್,ಇತ್ತೀಚಿನ ದಿನಗಳಲ್ಲಿ ಮಾನವನ ಜೀವನ ಶೈಲಿಯಿಂದ ಅತಿ ಚಿಕ್ಕವಯಸ್ಸಿನ ಮಕ್ಕಳಲ್ಲಿಯೇ ಹಾರ್ಟ್ ಅಟ್ಯಾಕ್, ಹಾರ್ಟ್ ಪೇಲ್ಯೂರ್ ನಂತಹ ಕಾಯಿಲೆಗಳು ಹೆಚ್ಚುತಿದ್ದು, ಇವುಗಳ ಬಗ್ಗೆ ಹೆಚ್ಚಿನ ನಿಗಾವಹಿಸುವ ಅವಶ್ಯಕತೆ ಇದೆ.ಹೃದಯ ಸ್ತಂಭನ,ಕ್ಯಾನ್ಸರ್‍ಗಿಂತಲೂ ಅತ್ಯಂತ ಅಪಾಯಕಾರಿ ರೋಗ.ಧೂಮಪಾನ, ಮಧ್ಯಪಾನ ಮಾಡುವವ ವ್ಯಕ್ತಿಗಳಲ್ಲಿ ಇಂತಹ ರೋಗ ಕಾಣಿಸಿಕೊಂಡರೆ ಬದುಕುಳಿಯುವ ಸಾಧ್ಯತೆ ಅತ್ಯಂತ ಕಡಿಮೆ.ದೈಹಿಕ ಚಲನವಲನದಿಂದ ಕೂಡಿದ ಜೀವನ ಶೈಲಿ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಕಾಲ ಬದುಕುವಂತೆ ಸಲಹೆ ನೀಡಿದರು.

Displaying DSC_8535.JPG

 

      ಮೂಳೆ ಮತ್ತು ಕೀಲು ರೋಗ ತಜ್ಞ ಡಾ.ಯೋಗೀಶ್ ಮಾತನಾಡಿ,ಇತ್ತೀಚಿನ ದಿನಗಳಲ್ಲಿ ಅಸ್ಟಿಯಾ ಪೋರಸಿಸ್ ಎಂಬ ಖಾಯಿಲೆ ಚಿಕ್ಕ ವಯಸ್ಸಿನವರನ್ನು ಕಾಡುತ್ತಿದೆ.ಇದಕ್ಕೆ ಪ್ರಮುಖ ಕಾರಣ.ದೇಹಕ್ಕೆ ಮಿಟಮಿನ್ ಡಿ ಅಂಶದ ಕೊರತೆ.ಬೆಳಗಿನ ವೇಳೆ ದೊರೆಯುವ ಎಳೆ ಬೀಸಿಲಿನಲ್ಲಿ ಮನುಷ್ಯನ ದೇಹಕ್ಕೆ ಮಿಟಮಿನ್ ಡಿ ಪುಕ್ಕಟ್ಟೆಯಾಗಿ ದೊರೆಯುತ್ತದೆ.ಬೆಳಗಿನ ಹೊತ್ತು ಬೇಗ ಎದ್ದು,ವಾಯುವಿಹಾರ ಮಾಡುವುದರಿಂದ ಮೂಳೆಗಳ ಸವೇತದಂತಹ ಕಾಯಿಲೆಯಿಂದ ಹೊರಬರಬಹುದೆಂದು ಸಲಹೆ ನೀಡಿದರು. Displaying _DSC0736.JPG

      ಶ್ರೀಸಿದ್ದರಾಮೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ,ಶಿವನಂಜಪ್ಪ ಅವರು ರಾಜಕೀಯವಾಗಿ, ಸಾಮಾಜಿಕವಾಗಿ ಸಮುದಾಯದ ಬಗ್ಗೆ ಕಾಳಜಿ ಹೊಂದಿದ್ದವರು.ಅಂತಹವರ ಹೆಸರಿನಲ್ಲಿ ನಡೆಯುತ್ತಿರುವ ಈ ಆರೋಗ್ಯ ಶಿಬಿರ ಹೆಚ್ಚು ಜನರಿಗೆ ಉಪಯೋಗಕಾರಿಯಾಗಲಿ ಎಂದರು.

      ವೇದಿಕೆಯಲ್ಲಿ ಶ್ರೀಸಿದ್ದರಾಮೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪಿ.ಎನ್.ಶಿವರುದ್ರಯ್ಯ,ಉಪಾಧ್ಯಕ್ಷರಾದ ಬಿ.ಬಿ.ಮಹದೇ ವಯ್ಯ,ನಿರ್ದೇಶಕರಾದ ಶ್ರೀಮತಿ ಬಿ.ಎಸ್.ಜೋತಿಲಕ್ಷ್ಮಿ,ಗುರುಕುಲ ವಿವಿದೋದ್ದೇಶ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮಲ್ಲಿಕಾರ್ಜು ನಯ್ಯ,ಸಕ್ಕರೆ ರೋಗ ತಜ್ಞರಾದ ಡಾ.ಧೀರಜ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

      ಶಿಬಿರದಲ್ಲಿ ಹೃದ್ರೋಗ,ಮೂಳೆ ಮತ್ತು ಕೀಲು,ಮಧುಮೇಹ, ರಕ್ತದೊತ್ತಡ ಹಾಗೂ ಇನ್ನಿತರ ಕಾಯಿಲೆ ಬಗ್ಗೆ ಅಪಲೋ ಆಸ್ಪತ್ರೆಯ ತಜ್ಞ ವೈದ್ಯರು ರೋಗಿಗಳನ್ನು ಪರೀಕ್ಷಿಸಿ, ಸಲಹೆ, ಸೂಚನೆ ಜೊತೆಗೆ,ಔಷಧ ವಿತರಿಸಿದರು. ಶಿಬಿರದಲ್ಲಿ 500ಕ್ಕೂ ಹೆಚ್ಚು ಜನರ ಭಾಗವಹಿಸಿದ್ದರು.(ಫೊಟೋ ಇದೆ)

(Visited 29 times, 1 visits today)
Previous Articleಮೋರಿಗೆ ಬಿದ್ದ ಟಾಟ ಏಸ್ : 20 ಜನರಿಗೆ ಗಾಯ
Next Article ಡಿ.02 ರಿಂದ ಕನಿಷ್ಠವೇತನ ,ಸೇವೆ ಖಾಯಂಗೆ ಒತ್ತಾಯಿಸಿ ಬಿಸಿಯೂಟ ನೌಕರರ ಮುಷ್ಕರ
News Desk Benkiyabale

Related Posts

ಜೆಡಿಎಸ್ ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣಕ್ಕೆ ಖಂಡನೆ

October 05, 2026 5:34 pm news

ಶೀಘ್ರದಲ್ಲಿಯೇ ಆಸಕ್ತರಿಗೆ ಮಾಹಿತಿ ಹಕ್ಕು ಕಾಯ್ದೆಯ ಅರಿವು ಕಾರ್ಯಾಗಾರ

October 05, 2026 5:07 pm news

ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ

October 05, 2026 5:05 pm news
ತಾಜಾ ಸುದ್ಧಿಗಳು
news

ಜೆಡಿಎಸ್ ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣಕ್ಕೆ ಖಂಡನೆ

October 05, 2026 5:34 pm
news

ಶೀಘ್ರದಲ್ಲಿಯೇ ಆಸಕ್ತರಿಗೆ ಮಾಹಿತಿ ಹಕ್ಕು ಕಾಯ್ದೆಯ ಅರಿವು ಕಾರ್ಯಾಗಾರ

October 05, 2026 5:07 pm
news

ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ

October 05, 2026 5:05 pm
news

ಪ್ರತಿ ಮಗುವಿನ ಉತ್ತಮ ಆರೋಗ್ಯಕ್ಕಾಗಿ ಪೋಷಣ್ ಕಾರ್ಯಕ್ರಮ

October 05, 2026 6:00 pm
news

ಮಳೆ ನೀರಿನೊಂದಿಗೆ ಮನೆಗಳಿಗೆ ನುಗ್ಗಿದ ಚರಂಡಿ ಕಲುಷಿತ ನೀರು

October 05, 2026 5:00 pm
news

ಬೋರ್ ವೆಲ್ ಹೆಚ್ವು ಆಳಕ್ಕೆ ಕೊರೆಯಬೇಕೆಂದು ಗ್ರಾಮಸ್ಥರ ಒತ್ತಾಯ

October 03, 2026 5:36 pm
Our Youtube Channel
Our Picks

ಜೆಡಿಎಸ್ ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣಕ್ಕೆ ಖಂಡನೆ

October 05, 2026 5:34 pm

ಶೀಘ್ರದಲ್ಲಿಯೇ ಆಸಕ್ತರಿಗೆ ಮಾಹಿತಿ ಹಕ್ಕು ಕಾಯ್ದೆಯ ಅರಿವು ಕಾರ್ಯಾಗಾರ

October 05, 2026 5:07 pm

ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ

October 05, 2026 5:05 pm

ಪ್ರತಿ ಮಗುವಿನ ಉತ್ತಮ ಆರೋಗ್ಯಕ್ಕಾಗಿ ಪೋಷಣ್ ಕಾರ್ಯಕ್ರಮ

October 05, 2026 6:00 pm

ಮಳೆ ನೀರಿನೊಂದಿಗೆ ಮನೆಗಳಿಗೆ ನುಗ್ಗಿದ ಚರಂಡಿ ಕಲುಷಿತ ನೀರು

October 05, 2026 5:00 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಜೆಡಿಎಸ್ ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣಕ್ಕೆ ಖಂಡನೆ

By News Desk BenkiyabaleOctober 05, 2026 5:34 pm

ಪಾವಗಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಡಿಎಸ್ ಹಾಗೂ ಬಿಜೆಪಿ ವತಿಯಿಂದ ಸೋಮವಾರ ಪಾವಗಡ ಪಟ್ಟಣದಲ್ಲಿ  ಬೃಹತ್ ಪ್ರತಿಭಟನೆ ನಡೆಸಲಾಯಿತು.…

ಶೀಘ್ರದಲ್ಲಿಯೇ ಆಸಕ್ತರಿಗೆ ಮಾಹಿತಿ ಹಕ್ಕು ಕಾಯ್ದೆಯ ಅರಿವು ಕಾರ್ಯಾಗಾರ

October 05, 2026 5:07 pm

ರಾತ್ರಿ ಅಂಗಡಿ ಮುಗ್ಗಟ್ಟುಗಳ ಕಾರ್ಯಾಚರಣೆ ಸಮಯ ನಿಗದಿ

October 05, 2026 5:05 pm

ಪ್ರತಿ ಮಗುವಿನ ಉತ್ತಮ ಆರೋಗ್ಯಕ್ಕಾಗಿ ಪೋಷಣ್ ಕಾರ್ಯಕ್ರಮ

October 05, 2026 6:00 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.