BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ
  • ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು
  • ಮದರ್ ಥೆರೆಸಾರವರ ಜನ್ಮದಿನಾಚರಣೆ
  • ಮೈಸೂರಿನಿಂದ ಶಿರಡಿಗೆ ೧,೦೦೦ ಕಿ.ಮೀ ಸುದೀರ್ಘ ಯಾತ್ರೆ
  • ಅಪಘಾತವಲ್ಲ, ಅದು ಪೂರ್ವಯೋಜಿತ ಕೊಲೆ: ಗ್ರಾಮಸ್ಥರಿಂದ ಪ್ರತಿಭಟನೆ
  • ಬೆಂಗಳೂರಿನಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವ
  • ಅಡಿಕೆ ತೋಟದಲ್ಲಿ ಕಿಡಿಗೇಡಿಗಳ ಅಟ್ಟಹಾಸ: ಗಿಡಗಳು ನೆಲಸಮ
  • ಗ್ರಾಮ ದೇವತೆ ಅಮ್ಮನವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರು : ದಾನಿಗಳಿಂದ 300 ಆಮ್ಲಜನಕ ಸಾಂದ್ರಕ ಕೊಡುಗೆ
ಇತರೆ ಸುದ್ಧಿಗಳು

ತುಮಕೂರು : ದಾನಿಗಳಿಂದ 300 ಆಮ್ಲಜನಕ ಸಾಂದ್ರಕ ಕೊಡುಗೆ

By News Desk BenkiyabaleUpdated:May 26, 2021 6:57 pm

ತುಮಕೂರು:

     ಕೋವಿಡ್-19 ನಿರ್ವಹಣೆ ದೃಷ್ಟಿಯಿಂದ ಕ್ವಾರಿ, ಕ್ರಷರ್, ರೈಸ್ ಮಿಲ್ ಮಾಲೀಕರು ಸುಮಾರು 300 ಆಮ್ಲಜನಕ ಸಾಂದ್ರಕಗಳ ನೆರವು ನೀಡಿದ್ದು, ಇದರಿಂದ ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 600 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆಯಾದಂತಾಗಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ತುಮಕೂರು ಮಚೆರ್ಂಟ್ ಕ್ರೆಡಿಟ್ ಕೋ-ಆಪರೇಟಿವ್, ಜಿಲ್ಲಾ ಜಲ್ಲಿ ಕ್ರಷರ್ ಆಸೋಸಿಯೇಷನ್, ಜಿಲ್ಲಾ ರೈಸ್ ಮಿಲ್ ಆಸೋಸಿಯೇಷನ್ ಹಾಗೂ ಮತ್ತಿತರ ಕೈಗಾರಿಕೆ ಮತ್ತು ಸಂಘ ಸಂಸ್ಥೆಗಳ ವತಿಯಿಂದ ನೀಡಿದ್ದ 300 ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿ ಮಾತನಾಡಿದ ಅವರು, ಆಮ್ಲಜನಕ ಸಾಂದ್ರಕಗಳ ನೆರವಿನಿಂದಾಗಿ ಕೋವಿಡ್ ನಿರ್ವಹಣೆಗೆ ಹೆಚ್ಚು ಸಹಕಾರಿಯಾಗಿದೆ ಎಂದು ತಿಳಿಸಿದರು.
ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ದೊಡ್ಡ ಮಟ್ಟದ ಸಹಕಾರ ದಾನಿಗಳಿಂದ ಬರುತ್ತಿದ್ದು, ಇದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದ ಸಚಿವರು ಜಿಲ್ಲೆಯ ಪರವಾಗಿ, ಸರ್ಕಾರದ ಪರವಾಗಿ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಿದರು.
ದುಡಿದ ಹಣದಿಂದ ಸಾರ್ವಜನಿಕ ವಲಯಕ್ಕೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ತುರುವೇಕೆರೆ ತಾಲ್ಲೂಕಿನಲ್ಲಿ ಹೈಡಾಲ್ ಬರ್ಗ್ ಸಿಮೆಂಟ್ ಕಾರ್ಖಾನೆಯು 500 ಲೀಟರ್ ಸಾಮಥ್ರ್ಯದ ಆಕ್ಸಿಜನ್ ಉತ್ಪದನಾ ಘಟಕ ಸ್ಥಾಪನೆಗೆ ಮುಂದಾಗಿದೆ. ಅದೇ ರೀತಿ ಗುಬ್ಬಿಯಲ್ಲಿಯು ರೋಟರಿ ಸಂಸ್ಥೆ ವತಿಯಿಂದ ಆಮ್ಲಜನಕ ಉತ್ಪಾದನಾ ಘಟಕ ಲಭ್ಯವಾಗುತ್ತಿದೆ. ವಿಪ್ರೋದವರು ಒಂದು ಘಟಕ ನೀಡಲಿದ್ದಾರೆ. ಇದಲ್ಲದೆ ಜಪಾನಿನ ಟಿಮ್ಯಾಕ್ ಕಂಪೆನಿಯವರು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ 2 ಕೆ.ಎಲ್. ಸಾಮಥ್ರ್ಯದ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದ್ಧಾರೆ. ನಿರೀಕ್ಷೆಗೂ ಮೀರಿ ದಾನಿಗಳಿಂದ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ನೀಗುತ್ತಿದೆ ಎಂದು ತಿಳಿಸಿದರು.
 ಸರ್ಕಾರ ಮತ್ತು ದಾನಿಗಳ ನೆರವಿನಿಂದಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳು ಸ್ಥಾಪನೆಯಾಗಲಿವೆ. ಇದರಿಂದ ಆಮ್ಲಜನಕ ಉತ್ಪಾದನೆಯಲ್ಲಿ ಜಿಲ್ಲಾಡಳಿತ ಸ್ವಯಂ ಶಕ್ತಿ ಹೊಂದಲಿದೆ ಎಂದರು.
ಆಮ್ಲಜನಕದ ಉತ್ಪಾದನೆಯಿಂದಾಗಿ ಕೋವಿಡ್ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬಹುದಾಗಿದೆ. ಕೋವಿಡ್ ಮೂರನೇ ಅಲೆ ಬಂದರು ನಿರ್ವಹಣೆ ಮಾಡುವ ಶಕ್ತಿ ಜಿಲ್ಲಾಡಳಿತಕ್ಕೆ ಇದೆ. ಈ ನಿಟ್ಟಿನಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಆಮ್ಲಜನಕ ಸಾಂದ್ರಕಗಳು ಲಭ್ಯವಿರುವಂತೆ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಟಿ.ಎಂ.ಸಿ.ಸಿ.ಬ್ಯಾಂಕ್ ನ ಜಯಕುಮಾರ್ ಅವರೂ ಸಹ ಕೋವಿಡ್ ಸಮಸ್ಯೆಯನ್ನು ಎದುರಿಸಲು ನೆರವಿನ ಹಸ್ತ ನೀಡಿದ್ದಾರೆ. ಅವರು ತುಮಕೂರಿನ ಸ್ಮಶಾನ ಭೂಮಿಯಲ್ಲಿ ಕೋವಿಡ್ ಸೋಂಕಿನಿಂದ ಮೃತ ಹೊಂದಿದವರನ್ನು ಸುಡುವ ಕಾರ್ಯಕ್ಕೆ ಆರು ಒಲೆಗಳ ನೆರವು ನೀಡಿದ್ದಾರೆ. ರುದ್ರ ಭೂಮಿಯ ವ್ಯವಸ್ಥೆಯ ನಿರ್ವಹಣೆಯನ್ನು ಅವರೇ ವಹಿಸಿಕೊಂಡಿದ್ದಾರೆ. ಇದರಿಂದ ಮೃತರಾದ ಸೋಂಕಿತರ ಸಂಸ್ಕಾರಕ್ಕೆ ಸಾಕಷ್ಟು ಅನುಕೂಲವಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿಯೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ. ನಗರದ ಕುಡಿಯುವ ನೀರು ಪೂರೈಕೆ ಸಂಬಂಧ ಸಂಸದ ಜಿ.ಎಸ್. ಬಸವರಾಜ್ ಹಾಗೂ ಶಾಸಕ ಜ್ಯೋತಿ ಗಣೇಶ್ ಒತ್ತಾಸೆ ಮೇರೆಗೆ ನಗರದ ಕುಡಿಯುವ ನೀರಿಗೆ ಮೂಲಧಾರವಾಗಿರುವ ಬುಗುಡನಹಳ್ಳಿ ಕೆರೆಗೆ ನೀರು ಹರಿಸಲು ಕ್ರಮ ವಹಿಸಲಾಗಿದೆ ಅದರಂತೆಯೇ ಜಿಲ್ಲೆಯ ಕುಡಿಯುವ ನೀರಿನ ಅಭಾವ ಇರುವ ಪ್ರದೇಶದ ಕೆರೆಗಳಿಗೆ ನೀರು ಹರಿಸಲು ಕ್ರಮ ಜರುಗಿಸಲಾಗಿದೆ. ಬುಗುಡನಹಳ್ಳಿ ಕೆರೆಗೆ 0 .4ಟಿಎಂಸಿ ಹಾಗೂ ಚಿಕ್ಕನಾಯಕನಹಳ್ಳಿ, ಶಿರಾ, ಗುಬ್ಬಿ, ತಿಪಟೂರು ತಾಲಕುಗಳ ಕೆರೆಗಳಿಗೆ 0.4ಟಿಎಂಸಿ ಸೇರಿದಂತೆ ಒಟ್ಟು 0.8 ಟಿಎಂಸಿ ನೀರು ಹರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಕುಡಿಯುವ ನೀರಿಗಾಗಿ ನಗರದ ನಾಗರಿಕರು ಆತಂಕ ಪಡುವುದು ಬೇಡ ಎಂದು ಮನವಿ ಮಾಡಿದರು.
ಸಂಸದ ಜಿ. ಎಸ್. ಬಸವರಾಜ ಮಾತನಾಡಿ, ಕೋವಿಡ್ ನಿರ್ವಹಣೆ ದೃಷ್ಟಿಯಿಂದ ಜಿಲ್ಲಾಡಳಿತಕ್ಕೆ ನೆರವಾಗಿ ಆಮ್ಲಜನಕ ಸಾಂದ್ರಕಗಳನ್ನು ಮತ್ತು ಇತರೆ ರೀತಿಯಲ್ಲಿ ಸಹಕಾರವಾದವರಿಗೆಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಟಿ.ಎಂ.ಸಿ.ಸಿ ಬ್ಯಾಂಕ್ ನ ಜಯಕುಮಾರ್ ಹಾಗೂ ಕ್ವಾರಿ, ಕ್ರಷರ್ ಮಾಲೀಕರ ತಂಡ ಸುಮಾರು ಎರಡು ಕೋಟಿ ರೂ. ವೆಚ್ಚದ ಆಮ್ಲಜನಕ ಸಾಂದ್ರಕಗಳನ್ನು ನೆರವು ನೀಡಿದೆ. ಕೋವಿಡ್ ನಿಂದ ಬಳಲುತ್ತಿರುವ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಲು ಈ ಸಾಂದ್ರಕಗಳು ಸಹಕಾರಿಯಾಗಲಿದೆ ಎಂದರು.
ಆಮ್ಲಜನಕ ಸಾಂದ್ರಕ ಹಾಗೂ ಆಮ್ಲಜನಕ ಘಟಕ ಸ್ಥಾಪನೆಗಳಿಂದಾಗಿ ಸಾಮಾನ್ಯ ಜನರಲ್ಲಿ ಮೂಡಿರುವ ಆತಂಕ ದೂರವಾಗಿದೆ. ಸಹಾಯ ಮಾಡಿರುವ ಎಲ್ಲಾ ಕ್ವಾರಿ, ಕ್ರಷರ್, ರೈಸ್ ಮೀಲ್, ಇತರೆ ಕಂಪನಿ ಮಾಲೀಕರಿಗೆ ಅಭಾರಿಯಾಗಿದ್ದೇನೆ ಎಂದು ಅವರು ತಿಳಿಸಿದರು.
ಟಿ.ಎಂ.ಸಿ.ಸಿ ಬ್ಯಾಂಕ್ ನ ಮುಖ್ಯಸ್ಥ ಜಯಕುಮಾರ್ ಮಾತನಾಡಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕರೆಗೆ ಓಗೊಟ್ಟು ಕ್ವಾರಿ, ಕ್ರಷರ್, ರೈಸ್ ಮಿಲ್, ಕೋ.ಆಪರಟಿವ್ ಬ್ಯಾಂಕ್ ಮಾಲೀಕರು ಸೇರಿ ಸಾರ್ವಜನಿಕರಿಗೆ ಸಹಾಯಕವಾಗಲೆಂದು ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದಾರೆ. ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಅಳಿಲು ಸೇವೆ ಮಾಡಲು ಅವಕಾಶ ನೀಡಿದ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸಿಇಓ ಡಾ.ಕೆ. ವಿದ್ಯಾಕುಮಾರಿ,ಎಸ್ಪಿ ಡಾ.ಕೆ. ವಂಶಿಕೃಷ್ಣ, ಡಿಹೆಚ್ ಓ ನಾಗೇಂದ್ರಪ್ಪ ಸೇರಿದಂತೆ ಕ್ರಷರ್,ಕ್ವಾರಿ, ರೈಸ್ ಮಿಲ್, ಇತರೆ ಕೈಗಾರಿಕೆಗಳ ಹಾಗೂ ಸಂಘಸಂಸ್ಥೆಗಳ ಮಾಲೀಕರು ಹಾಜರಿದ್ದರು.

(Visited 6 times, 1 visits today)
Previous Articleತುಮಕೂರು : ಬಾಲ್ಯವಿವಾಹ ಮಾಡದಂತೆ ಡಿಸಿ ಎಚ್ಚರಿಕೆ
Next Article ನಿಗಧಿಪಡಿಸಿದ ಪ್ರಮಾಣದಂತೆ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಲು ಸೂಚನೆ
News Desk Benkiyabale

Related Posts

ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ

August 28, 2026 5:44 pm news

ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು

August 28, 2026 5:12 pm news

ಮದರ್ ಥೆರೆಸಾರವರ ಜನ್ಮದಿನಾಚರಣೆ

August 28, 2026 5:11 pm news
ತಾಜಾ ಸುದ್ಧಿಗಳು
news

ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ

August 28, 2026 5:44 pm
news

ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು

August 28, 2026 5:12 pm
news

ಮದರ್ ಥೆರೆಸಾರವರ ಜನ್ಮದಿನಾಚರಣೆ

August 28, 2026 5:11 pm
news

ಮೈಸೂರಿನಿಂದ ಶಿರಡಿಗೆ ೧,೦೦೦ ಕಿ.ಮೀ ಸುದೀರ್ಘ ಯಾತ್ರೆ

August 28, 2026 5:09 pm
news

ಅಪಘಾತವಲ್ಲ, ಅದು ಪೂರ್ವಯೋಜಿತ ಕೊಲೆ: ಗ್ರಾಮಸ್ಥರಿಂದ ಪ್ರತಿಭಟನೆ

August 28, 2026 5:08 pm
news

ಬೆಂಗಳೂರಿನಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವ

August 28, 2026 5:06 pm
Our Youtube Channel
Our Picks

ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ

August 28, 2026 5:44 pm

ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು

August 28, 2026 5:12 pm

ಮದರ್ ಥೆರೆಸಾರವರ ಜನ್ಮದಿನಾಚರಣೆ

August 28, 2026 5:11 pm

ಮೈಸೂರಿನಿಂದ ಶಿರಡಿಗೆ ೧,೦೦೦ ಕಿ.ಮೀ ಸುದೀರ್ಘ ಯಾತ್ರೆ

August 28, 2026 5:09 pm

ಅಪಘಾತವಲ್ಲ, ಅದು ಪೂರ್ವಯೋಜಿತ ಕೊಲೆ: ಗ್ರಾಮಸ್ಥರಿಂದ ಪ್ರತಿಭಟನೆ

August 28, 2026 5:08 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ

By News Desk BenkiyabaleAugust 28, 2026 5:44 pm

ತುಮಕೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ.ಬಿ.ವಿ ಅವರು ಜಿಲ್ಲಾ ಪಂಚಾಯತಿಯಲ್ಲಿAದು ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್…

ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು

August 28, 2026 5:12 pm

ಮದರ್ ಥೆರೆಸಾರವರ ಜನ್ಮದಿನಾಚರಣೆ

August 28, 2026 5:11 pm

ಮೈಸೂರಿನಿಂದ ಶಿರಡಿಗೆ ೧,೦೦೦ ಕಿ.ಮೀ ಸುದೀರ್ಘ ಯಾತ್ರೆ

August 28, 2026 5:09 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.