BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ
  • ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ
  • ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ
  • ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು
  • ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ
  • ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ
  • ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ
  • ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರು : BH ರಸ್ತೆಗೆ ಶಿವಕುಮಾರ ಶ್ರೀಗಳ ಹೆಸರು ನಾಮಕರಣ
Trending

ತುಮಕೂರು : BH ರಸ್ತೆಗೆ ಶಿವಕುಮಾರ ಶ್ರೀಗಳ ಹೆಸರು ನಾಮಕರಣ

By News Desk BenkiyabaleUpdated:March 31, 2022 7:12 pm

ತುಮಕೂರು :

      ಕಾಯಕ ಯೋಗಿ, ತ್ರಿವಿಧ ದಾಸೋಹಿ, ಪದ್ಮಭೂಷಣ, ಕರ್ನಾಟಕ ರತ್ನ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತಿ ಸವಿನೆನಪಿಗಾಗಿ ನಗರದ ರಾಷ್ಟ್ರೀಯ ಹೆದ್ದಾರಿ-206 ರ ಬಟವಾಡಿ ಮಿರ್ಜಿ ಪೆಟ್ರೋಲ್ ಬಂಕ್‍ನಿಂದ ಗುಬ್ಬಿ ಗೇಟ್ ವರೆಗಿನ ರಸ್ತೆಗೆ ಮಹಾನಗರ ಪಾಲಿಕೆ ವತಿಯಿಂದ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ರಸ್ತೆ ಎಂದು ನಾಮಕರಣ ಮಾಡಲಾಯಿತು.
ನಗರದ ಬಟವಾಡಿಯಲ್ಲಿಂದು ಬೆಳಿಗ್ಗೆ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸಂಸದ ಜಿ.ಎಸ್. ಬಸವರಾಜು ಅವರು ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ರಸ್ತೆ ನಾಮಫಲಕವನ್ನು ಉದ್ಘಾಟಿಸಿದರು.


ನಂತರ ಮಾತನಾಡಿದ ಜಿ.ಎಸ್. ಬಸವರಾಜು, ಇಂದು ಸುದಿನ, ಶ್ರೀಗಳ 115ನೇ ವರ್ಷದ ಜಯಂತಿ ಸವಿನೆನಪಿಗಾಗಿ ಬಟವಾಡಿಯಿಂದ ಗುಬ್ಬಿಗೇಟ್ ವರೆಗಿನ ರಾಷ್ಟ್ರೀಯ ಹೆದ್ದಾರಿ-206ಕ್ಕೆ ಶ್ರೀಗಳ ಹೆಸರು ನಾಮಕರಣ ಮಾಡಲಾಗಿದೆ. ಈ ಹೆಸರು ಯಾವಾಗಲೂ ಚಿರಾಯು ಆಗಿರಬೇಕು ಎಂದರು.
ನಗರಕ್ಕೆ ಆಗಮಿಸುವ ಪ್ರತಿಯೊಬ್ಬರೂ ಶ್ರೀಗಳ ಪುತ್ಥಳಿಯನ್ನು ನೋಡಿಕೊಂಡೆ ತೆರಳುವಂತೆ ಮಾಡುವ ಸಲುವಾಗಿ ಬಟವಾಡಿ ಬಳಿಯೇ ಶ್ರೀಗಳ ಬೃಹತ್ ಪುತ್ಧಳಿ ನಿರ್ಮಾಣ ಮಾಡುವ ಸಂಬಂಧವೂ ಚಿಂತನೆಯಿದೆ. ಈ ಸಂಬಂಧ ಮಹಾನಗರ ಪಾಲಿಕೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.
ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮಹಾನಗರ ಪಾಲಿಕೆ ವತಿಯಿಂದ ಬಿ.ಹೆಚ್. ರಸ್ತೆಗೆ ಪರಮಪೂಜ್ಯರ ಹೆಸರನ್ನು ಅಧಿಕೃತವಾಗಿ ಇಂದು ನಾಮಕರಣ ಮಾಡಲಾಗಿದೆ. ಈ ಕಾರ್ಯಕ್ಕೆ ಶಾಸಕರು, ಸಂಸದರು, ಮಹಾನಗರ ಪಾಲಿಕೆಯ ಮೇಯರ್, ಎಲ್ಲ ಸದಸ್ಯರು ಹಾಗೂ ಆಯುಕ್ತರ ಅಪಾರ ಶ್ರಮ ಇದೆ ಎಂದರು.
ನಗರಕ್ಕೆ ಆಗಮಿಸುವ ಪ್ರತಿಯೊಬ್ಬರ ಮನಸ್ಸಿನಲ್ಲೂ ಪರಮಪೂಜ್ಯರ ಹೆಸರು ಚಿರಾಯು ಆಗಿ ಉಳಿಯುವಂತಹ ಕೆಲಸ ಇದಾಗಿದೆ ಎಂದು ಅವರು ಹೇಳಿದರು.
ಶಾಸಕ ಜ್ಯೋತಿಗಣೇಶ್ ಮಾತನಾಡಿ, ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಹೆಸರನ್ನು ಬಟವಾಡಿಯಿಂದ ಗುಬ್ಬಿಗೇಟ್ ವರೆಗಿನ ರಾಷ್ಟ್ರೀಯ ಹೆದ್ದಾರಿಗೆ ಶ್ರೀಗಳ ಹೆಸರು ನಾಮಕರಣ ಮಾಡಿ ನಾಮಫಲಕವನ್ನು ಉದ್ಘಾಟಿಸಲಾಗಿದೆ. ಅದೇ ರೀತಿ ತುಮಕೂರು ಪ್ರವೇಶಿಸುವ ಬಟವಾಡಿಯಲ್ಲೇ ಶ್ರೀಗಳ ಬೃಹತ್ ಪುತ್ಥಳಿ ನಿರ್ಮಾಣವಾದರೆ ಅದೊಂದು ಉತ್ತಮ ಕಾರ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ಬಿ.ಜಿ. ಕೃಷ್ಣಪ್ಪ, ಪಾಲಿಕೆ ಸದಸ್ಯರಾದ ಚಂದ್ರಕಲಾ ಪುಟ್ಟರಾಜು, ಗಿರಿಜಾ ಧನಿಯಕುಮಾರ್, ನಯಾಜ್ ಅಹಮದ್, ಮಹೇಶ್, ಆಯುಕ್ತೆ ರೇಣುಕಾ ಮತ್ತಿತರರು ಉಪಸ್ಥಿತರಿದ್ದರು.

(Visited 19 times, 1 visits today)
Previous Articleಸ್ವಾಮೀಜಿ ಜಯಂತೋತ್ಸವ : ಸಿದ್ದತೆ ಪರಿಶೀಲಿಸಿದ ಸಿಎಂ
Next Article ಮುದ್ದಹನುಮೇಗೌಡರ ಮುನಿಸು ; ರಾಹುಲ್ ಗಾಂಧಿಗೆ ಇರಿಸು – ಮುರಿಸು…!?
News Desk Benkiyabale

Related Posts

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm news

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm news

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm news
ತಾಜಾ ಸುದ್ಧಿಗಳು
news

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm
news

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm
news

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm
news

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm
news

ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ

September 09, 2026 5:34 pm
news

ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ

September 08, 2026 5:26 pm
Our Youtube Channel
Our Picks

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm

ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ

September 09, 2026 5:34 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

By News Desk BenkiyabaleSeptember 09, 2026 5:41 pm

ಪಾವಗಡ: ಮಹರ್ಷಿ ವಾಲ್ಮೀಕಿ ಆಶ್ರಮ, ವಾಲ್ಮೀಕಿ ಜಾಗೃತಿ ವೇದಿಕೆ, ನಿಡಗಲ್ಲು ಗ್ರಾಮಸ್ಥರು ಮತ್ತು ದುರ್ಗದ ಅಭಿಮಾನಿಗಳ ವತಿಯಿಂದ ೧೦ನೇ ವರ್ಷದ…

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.