ತುಮಕೂರು:

ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಪುರ ಗ್ರಾಮದ 22 ವರ್ಷದ ಅಜಿತ್ ಕುಮಾರ್ ಕಾಣೆಯಾಗಿದ್ದು, ಈತನ ಪತ್ನಿ ಶ್ವೇತ ಎನ್.ಜೆ. ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯು ಅಂಗಡಿಗೆ ಹೋಗಿ ಬರುವುದಾಗಿ ಮನೆಯಿಂದ ಹೋದವನು ಮರಳಿ ಬಂದಿಲ್ಲದಿರುವುದರಿಂದ ಈತನ ಸ್ನೇಹಿತ ಹರ್ಷನಿಗೆ ಕರೆ ಮಾಡಿದರೂ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಈತನ ಬಗ್ಗೆ ಸುಳಿವು ಸಿಕ್ಕಿರುವುದಿಲ್ಲ.
ಕಾಣೆಯಾದ ವ್ಯಕ್ತಿಯು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ, ಮನೆಯಿಂದ ಹೋಗುವಾಗ ಕಪ್ಪು ಮತ್ತು ನೀಲಿಯ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಈತನು ತೆಲುಗು ಮತ್ತು ತಮಿಳು ಭಾಷೆ ಮಾತನಾಡುತ್ತಾನೆ.
ಈತನ ಬಗ್ಗೆ ಮಾಹಿತಿ ಸಿಕ್ಕವರು ದೂ.ವಾ. 08132-225229/220294, 0816-2278000 ಅಥವಾ ಮೊ.ಸಂ. 9480802963/36/00ಯನ್ನು ಸಂಪಕಿಸಬಹುದೆಂದು ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಮನವಿ ಮಾಡಿದ್ದಾರೆ.

(Visited 10 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp