ತುಮಕೂರು: ಶುಶ್ರೂಷಕಿಯರ ಕೆಲಸ ಜಗತ್ತಿನಲ್ಲೇ ಬಹಳ ಅತ್ಯುತ್ತಮವಾದ ಕೆಲಸವಾಗಿದೆ, ಶುಶ್ರೂಷಕಿಯರು ನೀಡುವ ನಿಸ್ವಾರ್ತ ಸೇವಾಮನೋಭಾವ ಎಲ್ಲರೂ ಮೆಚ್ಚುವಂತಹ ಕೆಲಸವಾಗಿದೆ ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಟ್ರಷ್ಟಿಗಳಾದ ಶ್ರೀಮತಿ ಕನ್ನಿಕಾ ಪರಮೇಶ್ವರಿಯವರು ತಿಳಿಸಿದರು.
ನಗರದ ಹೊರವಲಯದ ಅಗಲಕೋಟೆಯ ಶ್ರೀ ಸಿದ್ಧಾ ರ್ಥ ವೈದ್ಯಕೀಯ ಮಹಾವಿದ್ಯಾಲಯದ ಡಾ. ಹೆಚ್.ಎಂ ಗಂಗಾದರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ಸಿದ್ಧಾರ್ಥ ನರ್ಸಿಂಗ್ ಕಾಲೇಜಿನ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶುಶ್ರೂಷಕಿಯರು ಪ್ರತಿನಿತ್ಯ ಅಧ್ಯಯನವನ್ನು ಮಾಡುತ್ತಾ ತಮ್ಮ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ಅರಿಯುತ್ತಿರಬೇಕು. ತಮ್ಮ ಕೌಶಲ್ಯಗಳನ್ನು ಉತ್ತಮಗೊಳಿಸಿಕೊಳ್ಳುತ್ತಿರಬೇಕು. ಒಬ್ಬ ರೋಗಿ ಗುಣಮುಖವಾಗಲು ಶುಶ್ರೂಷಕಿಯ ಪಾತ್ರ ಬಹಳಾ ಮುಖ್ಯವಾಗಿರುತ್ತದೆ. ಶ್ರುಶ್ರೂಷಕಿಯರು ಮಾನವೀಯ ಗುಣಗಳನ್ನು ಬೆಳೆಸಿಕೊಂಡು ರೋಗಿಗಳಿಗೆ ಉತ್ತಮ ಸೇವೆಯನ್ನು ನೀಡಿದಾಗ ಮಾತ್ರ ತಾವು ಮಾಡುತ್ತಿರುವ ಕೆಲಸಕ್ಕೆ ಒಂದು ಬೆಲೆ ಸಿಕ್ಕಂತಾಗುತ್ತದೆ. ಶುಶ್ರೂಷಕಿಯರಿಗೆ ರೋಗಿಯೊಂದಿಗೆ ಉತ್ತಮ ಸಂವಹನ ನಡೆಸಲು ನಾಲ್ಕೆöÊದು ಭಾಷೆಯ ಅರಿವಿರಬೇಕು. ಇದರಿಂದ ರೋಗಿಯೊಂದಿಗೆ ಸ್ನೇಹ ಸಂಬ0ದ ಉತ್ತಮವಾಗಿ ರೋಗಿಯು ಗುಣಮುಖನಾಗುತ್ತಾನೆ ಎಂದು ತಿಳಿಸಿದರು.
ಮುಖ್ಯ ಅಥಿತಿಗಳಾದ ಬೆಂಗಳೂರು ಎಚ್‌ಸಿಜಿ ಎಂಟರ್ ಪ್ರೆöÊಸಸ್ ಲಿಮಿಟೆಡ್‌ನ ಕಾರ್ಪೊರೇಟ್ ನಸಿಂಗ್‌ನ ಸಹ ಉಪಾಧ್ಯಕ್ಷರಾದ ಪುನಿತಾ ಸಿಂಗ್‌ರವರು ಮಾತನಾಡಿ ಶುಶ್ರೂಷಕಿಯರ ಸೇವೆ ಅತ್ಯಂತ ನಿಸ್ವಾರ್ತ ಹಾಗೂ ನಿಸ್ಕಲ್ಮಷ ಸೇವೆಯಾಗಿದೆ. ಶುಶ್ರೂಷಕಿಯಾಗಿ ಸೇವೆ ಮಾಡಲು ಅಪಾರವಾದ ಜ್ಞಾನ ಮತ್ತು ತಾಳ್ಮೆಯನ್ನು ಹೊಂದಿರಬೇಕು. ರೋಗಿಗಳ ಸೇವೆ ಮಾಡುವಾಗ ಶುಶ್ರೂಷಕಿಯರ ಜವಾಬ್ದಾರಿ ವೈದ್ಯರಿಗಿಂದ ಹೆಚ್ಚಾಗಿರುತ್ತದೆ. ಹಾಗಾಗಿ ಶುಶ್ರೂಷಕಿಯರು ಪ್ರತಿನಿತ್ಯದ ಅಧ್ಯಯನ ಪ್ರಮುಖವಾಗಿರುತ್ತದೆ. ಶುಶ್ರೂಷಕಿಯರ ಕೈಗಳು ರೋಗಿಯ ದೇಹವನ್ನು ಗುಣಪಡಿಸಿದರೆ. ಶುಶ್ರೂಷ ಕಿಯರ ಹೃದಯ ರೋಗಿಯ ಮನಸ್ಸನ್ನು ಗುಣಪಡಿಸುತ್ತದೆ. ಶುಶ್ರೂಷಕಿಯರು ಯಾವಾಗಲೂ ಸೃಜನಶೀಲ ಯೋಚನೆಯನ್ನು ಮಾಡುತ್ತಾ ಉತ್ತಮ ಸೇವೆಯನ್ನು ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ಧಾರ್ಥ ನರ್ಸಿಂಗ್ ಕಾಲೇಜಿನ ಮೊದಲ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳು ನರ್ಸಿಂಗ್ ಪ್ರಾಧ್ಯಾಪಕರಿಂದ ಜ್ಯೋತಿಯನ್ನು ಪಡೆದುಕೊಂಡು ಪ್ರಮಾಣ ವಚನ ಸ್ವೀಕರಿಸಿದರು. ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸಿದ್ಧಾರ್ಥ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ. ಸಾಣಿಕೊಪ್ಪ, ಉಪಪ್ರಾಂಶು ಪಾಲರಾದ ಡಾ. ಪ್ರಭಾಕರ್, ವೈದ್ಯಕೀಯ ವಿಭಾಗದ ಅಧೀಕ್ಷ ಕರುಗಳಾದ ಡಾ. ವೆಂಕಟೇಶ್, ಡಾ. ರಾಜೇಶ್ವರಿ, ಸಾಹೇ ಕುಲಪತಿಗಳ ಸಲಹೆಗಾರರಾದ ಡಾ.ವಿವೇಕ್‌ವೀರಯ್ಯ, ದಂತವೈ ದ್ಯಕೀಯ ವಿಭಾಗದ ಪ್ರಾಂಶುಪಾಲರಾದ ಡಾ.ಪ್ರವೀಣ್ ಕುಡುವ, ಹಾಗೂ ನಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಸುಜಾತ ಹಾಗೂ ನರ್ಸಿಂಗ್ ವಿಭಾಗದ ಎಲ್ಲಾ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಆಡಳಿತ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು.

(Visited 1 times, 1 visits today)