ಮಧುಗಿರಿ:


2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಧುಗಿರಿಯ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರು ಬೆಂಬಲಿಗರ ಸಭೆಯಲ್ಲಿ ಮಾತನಾಡುತ್ತಾ, ‘ಶೋಕಿಗೆ ರಾಜಕಾರಣ ಮಾಡ್ಬೇಡಿ, ನಾನೇ ಎಂಎಲ್‍ಗೆ ಸ್ಪರ್ಧೆ ಮಾಡ್ತಿನಿ ಅಂತ ತಿಳ್ಕೊಂಡು ಕೆಲಸ ಮಾಡಿ, ನಾನು ಎಂಎಲ್‍ಎ ಆದ್ರೆ ನೀವೆಲ್ಲಾ ಎಂಎಲ್‍ಎಗಳು ಇದ್ದಂಗೆ’ ಎಂದು ಬೆಂಬಲಿಗರಿಗೆ ಹೇಳಿದ್ದಾರೆ.
ಅಭಿವೃದ್ಧಿ ಕೆಲಸಗಳ ಬಗ್ಗೆ ಕೇಳೋ ಶಕ್ತಿ ನಿಮಗೆ ಇರಬೇಕು. ಆಗ ಮಾತ್ರ ನಾವು ಗೆಲ್ಲೋಕೆ ಸಾಧ್ಯ. ಇದು ನನ್ನ ಕೊನೆಯ ಚುನಾವಣೆ ಆಮೇಲೆ ನಿಂತ್ಕೋ ಅಂದ್ರು ನಾನು ನಿಲ್ಲಲ್ಲ. ನನಗೆ ಈಗ 72 ವರ್ಷ ಮುಂದಿನ ಚುನಾವಣೆ ಅಂದ್ರೆ 77 ವರ್ಷ ಆಗುತ್ತೆ. ಅಷ್ಟೊತ್ತಿಗೆ ನನ್ನ ಕೈಕಾಲು ಎಲ್ಲ ಅಲ್ಲಾಡುತ್ತಿರುತ್ತೆ. ಅದರಿಂದ ಇದು ನನಗೆ ಕಡೆ ಚುನಾವಣೆ ಎಂದರಲ್ಲದೆ ಕಾಂಗ್ರೆಸ್ ಸರ್ಕಾರ ಬಂದ್ರೆ ನೂರಕ್ಕೆ ನೂರು ನಾನು ಮಂತ್ರಿ ಆಗ್ತಿನಿ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

(Visited 27 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp