ತುಮಕೂರು: ಜಿಲ್ಲೆಯಾದ್ಯಂತ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಸಂದರ್ಭದಲ್ಲಿ ಗ್ರಾಮೀಣಭಾಗದ ಕಾರ್ಯ ನಿರತ ಪತ್ರಕರ್ತರನ್ನು ಪರಿಗಣಿಸುವಂತೆ ಜಿಲ್ಲಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ನಿರ್ದೇಶನ ನೀಡಿದರು.
ನಗರದಲ್ಲಿ ಸೋಮವಾರ ಕೆಯುಡಬ್ಲೂಜೆ ಜಿಲ್ಲಾಧ್ಯಕ್ಷ ಎಲ್​.ಯೋಗೇಶ್​ ನೇತೃತ್ವದ ನಿಯೋಗವು ಜಿಲ್ಲೆಯ ಗ್ರಾಮೀಣಭಾಗದ ಕಾರ್ಯನಿರತ ಪತ್ರಕರ್ತರಿಗೆ ಆಶ್ರಯ ಯೋಜನೆ ಅಡಿ ನಿವೇಶನ ಹಂಚುವ ವೇಳೆ ಪರಿಗಣಿ ಸಬೇಕೆಂಬ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವ್ಯಾಪ್ತಿಗೆ ಒಳಪಡುವ ಸದಸ್ಯರಿದ್ದು, ಅವರನ್ನು ಗುರುತಿಸಿ ನಿವೇಶನ ನೀಡುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ಗೆ ಸೂಚಿಸಿದರು.
ಸಂಘವು ಒದಗಿಸುವ ತಾಲೂಕುವಾರು ಪತ್ರಕರ್ತರ ಪಟ್ಟಿಯನ್ನು ಜಿಲ್ಲಾಡಳಿತ ಗಮನದಲ್ಲಿರಿಸಿಕೊಂಡು ಆದ್ಯತೆ ಮೇರೆಗೆ ನಿವೇಶನ ನೀಡಬೇಕು. ಜಿಲ್ಲಾ ಕೇಂದ್ರದಲ್ಲಿ ನಿವೇಶನ ನೀಡಲು ಸಾಧ್ಯವಿಲ್ಲ. ಹಾಗಾಗಿ, ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪತ್ರಕರ್ತರ ಹೆಸರನ್ನು ಗ್ರಾಮಸಭೆ ಮುಂದಿಡುವ ಪಟ್ಟಿಯಲ್ಲಿ ಸೇರಿಸಿ ಕ್ರಮವಹಿಸಲು ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಜಯನುಡಿ ಜಯಣ್ಣ, ಪ್ರಧಾನ ಕಾರ್ಯದರ್ಶಿ ಟಿ.ಇ.ರುಘುರಾಮ್​, ಕಾರ್ಯದರ್ಶಿ ಯಶಸ್​ ಪದ್ಮನಾಭ್​ ಹಾಗೂ ನಿರ್ದೇಶಕರಿದ್ದರು.

(Visited 1 times, 1 visits today)