ತಿಪಟೂರು: ನಗರದ ಕಾಸ್ಮೋಪಾಲಿಟನ್ ಕ್ಲಬ್‌ವತಿ ಯಿಂದ ೭೭ನೇ ಗಣರಾಜ್ಯೋತ್ಸವದ ಪ್ರಯುಕ್ತ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.
ಭಾರತೀಯ ಸೇನೆಯಲ್ಲಿ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತ ಯೋಧರಾದ ಮಾಚಕಟ್ಟೆ ತಾಂಡ್ಯದ ತುಳಸಿರಾಮ್ ನಾಯಕ್ ಹಾಗೂ ತಿಪಟೂರು ನಗರದ ಟಿ. ಆರ್. ಚಿದಾನಂದ ಅವರನ್ನು ಕ್ಲಬ್‌ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಸ್ಮೋಪಾಲಿಟನ್ ಕ್ಲಬ್ ಅಧ್ಯಕ್ಷ ಗಂಗಾಧರಯ್ಯ ಮಾತನಾಡಿ ದೇಶರಕ್ಷಣೆಗೆ ತಮ್ಮ ಜೀವನವನ್ನು ಸಮರ್ಪಿಸಿದ ಯೋಧರ ಸೇವೆ ಅಮೂಲ್ಯ ವಾಗಿದ್ದು, ಇಂತಹ ಸನ್ಮಾನಗಳು ಯುವ ಪೀಳಿಗೆಗೆ ದೇಶಭಕ್ತಿಯ ಪ್ರೇರಣೆಯಾಗ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಮಾದಿಹಳ್ಳಿ ಸಿದ್ದರಾಮಣ್ಣ ಮಾತನಾಡಿ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ದೂರ ದೃಷ್ಟಿ ಮತ್ತು ಅಪಾರ ಬೌದ್ಧಿಕ ಶ್ರಮದಿಂದ ರಚಿಸಿ ೧೯೫೦ರ ಜನವರಿ ೨೬ರಂದು ಭಾರತವು ತನ್ನದೇ ಆದ ಸಂವಿಧಾನದ ಮೂಲಕ ಪ್ರಜೆಗಳೇ ಪ್ರಭುಗಳು ಎಂಬ ತತ್ವವನ್ನು ಅಧಿಕೃ ತವಾಗಿ ಅಂಗೀಕರಿಸಿದ್ದು, ಸಂವಿಧಾನವು ಕೇವಲ ಹಕ್ಕುಗ ಳನ್ನು ಮಾತ್ರವಲ್ಲದೆ ಕರ್ತವ್ಯಗಳ ಹೊಣೆಗಾರಿಕೆಯನ್ನು ಸಹ ನಾಗರೀಕರಿಗೆ ನೀಡಿದೆ.
ಸ್ವಾತಂತ್ರ‍್ಯವು ಭಗತ್‌ಸಿಂಗ್, ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧೀಜಿ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಅನೇಕ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗದ ಫಲವಾಗಿದ್ದು, ಅವರ ಕನಸಿನ ಭಾರತವು ಭಯವಿಲ್ಲದ, ಹಸಿವು ಇಲ್ಲದ ಹಾಗೂ ಅನ್ಯಾಯಕ್ಕೆ ಮಣಿಯದ ರಾಷ್ಟ್ರವಾಗಿತ್ತು ಎಂದು ಸ್ಮರಿಸಿದರು.
ಭಾಷೆ, ಸಂಸ್ಕೃತಿ ಹಾಗೂ ಧರ್ಮಗಳಲ್ಲಿ ವೈವಿಧ್ಯವಿದ್ದರೂ ಭಾರತವನ್ನು ಒಂದಾಗಿ ಕಟ್ಟಿ ಹಿಡಿದಿರುವ ಶಕ್ತಿ ಸಂವಿಧಾ ನವೇ ಆಗಿದೆ. ಗಡಿಯಲ್ಲಿ ದೇಶ ಕಾಯುವ ಸೈನಿಕರ ಧೈರ್ಯ, ರೈತರ ಬೆವರು, ಕಾರ್ಮಿಕರ ಶ್ರಮ ಹಾಗೂ ವಿಜ್ಞಾನಿಗಳ ನವೀನ ಚಿಂತನೆಗಳು ಭಾರತವನ್ನು ಮುನ್ನಡೆಸಲು ಕಾರಣ ವಾಗಿವೆ. ಗಣರಾಜ್ಯೋತ್ಸವವು ಸಾಧನೆಗಳ ಹೆಮ್ಮೆಯಷ್ಟೇ ಅಲ್ಲ, ಸ್ವಪರಿಶೀಲನೆಯ ಸಮಯವೂ ಹೌದು ಎಂದು ಅಭಿಪ್ರಾಯಪಟ್ಟರು.
೭೭ ವರ್ಷಗಳಾದರೂ ಜಾತಿ ವ್ಯವಸ್ಥೆ ಮತ್ತು ಅಸಮಾನ ತೆಗಳಂತಹ ಸಮಸ್ಯೆಗಳು ಮುಂದುವರಿದಿರುವುದು ಆತಂಕಕಾರಿಯಾಗಿದೆ. ಭಾರತ ಅಭಿವೃದ್ಧಿಯಾಗಿದ್ದರೂ ಅಸಮಾನತೆ ಹೆಚ್ಚಾಗಿದೆ. ಇದನ್ನು ನಿವಾರಿಸುವ ಏಕೈಕ ಮಾರ್ಗ ಶಿಕ್ಷಣವಾಗಿದ್ದು, ಶಿಕ್ಷಣ, ಕೌಶಲ್ಯ ಮತ್ತು ತಂತ್ರಜ್ಞಾನಗಳ ಮೂಲಕ ಪ್ರತಿಯೊಬ್ಬರೂ ತಮ್ಮ ಜೀವನ ಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕು, ದೂರುವ ಬದಲು ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ವೈಯಕ್ತಿಕ ಪ್ರಗತಿಯ ಮೂಲಕ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಬೇಕಾಗಿದೆ ಎಂದರು.
ಸ0ವಿಧಾನದ ೫೧(ಅ)ನೇ ವಿಧಿಯಲ್ಲಿ ಉಲ್ಲೇಖಿಸಿರುವ ಮೂಲ ಕರ್ತವ್ಯಗಳನ್ನು ಪಾಲಿಸುವ ಮೂಲಕ ಸಂವಿಧಾ ನವನ್ನು ಗೌರವಿಸುವುದು, ರಾಷ್ಟ್ರದ ಏಕತೆಯನ್ನು ಕಾಪಾಡು ವುದು ಹಾಗೂ ಅನ್ಯಾಯದ ವಿರುದ್ಧ ಧೈರ್ಯವಾಗಿ ನಿಲ್ಲು ವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು.
ಉಪಾಧ್ಯಕ್ಷ ಮನೋಜ್ ಕುಮಾರ್, ಖಜಾಂಚಿ ನಿಜಗುಣ, ಸಹ ಕಾರ್ಯದರ್ಶಿ ಪ್ರೀತಂ. ಕೃಷಿಕ ಸಮಾ ಜದ ತಾಲೂಕು ಅಧ್ಯಕ್ಷ ಯೋಗೀಶ್, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಂ.ಕೆ.ಪ್ರಕಾಶ್, ಮಾಜಿ ನಗರಸಭಾ ಸದಸ್ಯ ಸಂಗಮೇಶ್, ನಿರ್ಧೇಶಕ ತೋಂಟರಾಧ್ಯ, ಉಮಾಶಂಕರ್, ಚಂದ್ರಣ್ಣ, ದಿನೇಶ್, ಅಜಯ್, ಅಭಿಜಿತ್, ಹಾಗೂ ಕ್ಲಬ್‌ನ ಸದಸ್ಯರು ಹಾಜರಿದ್ದರು.
ನಗರದ ಕಾಸ್ಮೋಪಾಲಿಟನ್ ಕ್ಲಬ್‌ವತಿಯಿಂದ ೭೭ನೇ ಗಣರಾಜ್ಯೋತ್ಸವ ಆಚರಣೆ.

(Visited 1 times, 1 visits today)