
ತಿಪಟೂರು: ತ್ರಿವಿಧ ದಾಸೋಹದ ಮೂಲಕ ಸಮಾಜದ ಎಲ್ಲಾ ವರ್ಗಗಳ ಜನರ ಮತ್ತು ಮಕ್ಕಳ ಶೈಕ್ಷಣಿಕ ಕಲ್ಯಾಣಕ್ಕಾಗಿ ಹಗಲಿರುಳು ದುಡಿದು ದಣಿವರಿಯದ ದೇವರೆನಿಸಿಕೊಂಡು, ವ್ರತನಿಷ್ಠ ಕಾಯಕಯೋಗಿಗಳಾಗಿ, ಆಧುನಿಕ ಬಸವಣ್ಣನೆನಿಸಿಕೊಂಡು ಶತಾಯುಷಿಗಳಾಗಿ ಆದರ್ಶಪ್ರಾಯವಾದವರೇ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳೆಂದು ಎಸ್.ವಿ.ಪಿ. ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ತಿಳಿಸಿದರು.
ನಗರದ ಎಸ್.ವಿ.ಪಿ.ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸಿದ್ಧಗಂಗಾ ಶ್ರೀಗಳ ಏಳನೇ ಪುಣ್ಯಸ್ಮರಣೆ ಪ್ರಯುಕ್ತ ಏರ್ಪಡಿಸಿ ಕೊಂಡಿದ್ದ ದಾಸೋಹದಿನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು
ಸಿದ್ಧಗಂಗಾಶ್ರೀಗಳು ತಮ್ಮ ಗುರುಗಳಾದ ಉದ್ಧಾಮ ಶಿವಯೋ ಗಿಗಳ ಆಶಯದಂತೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಯಾ, ವಾಚಾ, ಮನಸಾ ಜೋಳಿಗೆ ಹಿಡಿದು, ಭಿಕ್ಷಾಟನೆ ಮಾಡುತ್ತಾ, ದಾಸೋಹ ಸೇವೆಮಾಡಿ ಮಕ್ಕಳಹಸಿವನ್ನು ನೀಗಿಸಿದ ದೇವರೆನಿಸಕೊಂಡಿದ್ದರು. ಗುರು, ಲಿಂಗ, ಜಂಗಮಗಳೆAಬ ತ್ರಿವಿಧಗಳ ಮೂಲಕ ತ್ರಿಕರಣ ಪೂರ್ವಕವಾಗಿ ಬಸವಣ್ಣನವರ ತತ್ವದಂತೆ ಕಾಯಕವೇ ಕೈಲಾಸವೆಂಬ ನುಡಿಗೆ ಅನ್ವರ್ಥರಾಗಿ ಸೇವೆಮಾಡುತ್ತಾ ನಡೆದಾಡುವ ದೇವರೆನಿಸಿಕೊಂಡಿದ್ದರು. ನಾಡಿನ ಲಕ್ಷಾಂತರ ಮಂದಿಗೆ ಜ್ಞಾನಜ್ಯೋತಿಯನ್ನು, ಸಂಸ್ಕಾರದ ದೀಕ್ಷೆಯನ್ನು, ಸಹಬಾಳ್ವೆಯ ಸಂಕಲ್ಪದ ಭಾವನೆಗಳನ್ನು ಬೆಳೆಸುತ್ತ್ತಾ, ಪ್ರೀತಿ, ವಿಶ್ವಾಸ, ಸಹನೆ, ಕರುಣೆ, ವಾತ್ಸಲ್ಯಗಳೆಂಬ ಬೀಜಗಳನ್ನು ಬಿತ್ತುತ್ತಾ “ದಯವೇ ಧರ್ಮದ ಮೂಲಮಂತ್ರ”ದ ಮೂರ್ತರೂಪವಾಗಿದ್ದರು. ನೊಂದವರ, ಅನಾಥರ, ನಿರ್ಗತಿಕರ, ವಂಚಿತರ, ಶೋಷಿತರ, ದು:ಖಿತರ ಬಾಳಿಗೆ ಬೆಳಕಾಗಿ ಅವರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬುತ್ತಾ ಏಕಾಗ್ರತೆಯನ್ನು ಭೋದಿಸುತ್ತಿದ್ದರು.
ನುಡಿದಂತೆ ನಡೆದು, ನಡೆದಂತೆ ನುಡಿದು, ಕೊನೆಯುಸಿರಿರುವವರೆಗೂ ದುಡಿದು, ಅನ್ನವೇ ದೇವರು, ದಾಸೋಹವೇ ನಿಜವಾದ ಸೇವೆ ಎಂಬ ತತ್ವಗಳನ್ನು ಚಾಚೂತಪ್ಪದೆ ಪರಿಪಾಲಿಸುತ್ತಾ ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ಶ್ರೀಮಠದ ಕೀರ್ತಿಯನ್ನ ಮತ್ತು ಕಾಯಕದ ಮಹತ್ವವನ್ನು ಪ್ರಜ್ವಲಿಸುವಂತೆ ಮಾಡಿದ್ದರು. ಅವರ ಕಾಯಕನಿಷ್ಠೆ, ತಾಯಿ ಮಮತೆ, ಜ್ಞಾನದ ಕಾಳಜಿ, ಸಾಧನೆ ಮತ್ತು ಸೇವೆಗಳನ್ನು ಸರ್ಕಾರ ಗುರುತಿಸಿ, “ದಾಸೋಹ ದಿನ”ವನ್ನಾಗಿ ಆಚರಿಸುವ ಮೂಲಕ ಗೌರವ ಸಲ್ಲಿಸುತ್ತಿರುವುದು. ಎಲ್ಲರು ಮೆಚ್ಚಲೇ ಬೇಕಾದ ಸಂಗತಿಯಾಗಿದೆ. ಇವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯನ್ನು ಕಂಡುಕೊಳ್ಳಬೇಕಾಗಿದೆಯೆAದು ತಿಳಿಸಿದರು.
ದೈಹಿಕ ಶಿಕ್ಷಣ ಶಿಕ್ಷಕ ಬಿ.ಆರ್. ಉದಯಶಂಕರ್ ಮಾತ ನಾಡಿ, ಸಿದ್ಧಗಂಗಾ ಶ್ರೀಗಳ ಸೇವೆ ಆಧುನಿಕ ಕಾಲದಲ್ಲಿ ಅವಿಸ್ಮರಣೀ ಯವಾದದ್ದು, ಅನ್ನ, ಆಶ್ರಯ, ಅಕ್ಷರಗಳಿಗೆ ಹೆಚ್ಚು ಅವಕಾಶವನ್ನು ಕೊಟ್ಟು ಮಕ್ಕಳನ್ನು ಸಂಸ್ಕಾರವAತರನ್ನಾಗಿ ಮಾಡಿ, ಸುಂದರವಾದ ಬದುಕನ್ನು ಕಟ್ಟಿಕೊಳ್ಳುವ ಕಡೆಗೆ ಅವರನ್ನು ತಯಾರು ಮಾಡುತ್ತಿದ್ದದ್ದು ನಿಜಕ್ಕೂ ಬೇರೆಯಾರಿಂದಲು ಮಾಡಲು ಸಾಧ್ಯವಾಗದೇ ಇರುವ ಕೆಲಸವು ಇದಾಗಿದೆ ಎಂದು ಬಣ್ಣಿಸಿದರು.
ಸಹ ಶಿಕ್ಷಕ ಶಿವಕುಮಾರ್ ಮಾತನಾಡಿ ಸಿದ್ಧಗಂಗಾ ಶ್ರೀಗಳು ಶ್ರೀಮಠದ ಶ್ರೇಯೋಭಿವೃದ್ಧಿಗೆ ಶಿಕ್ಷಣ, ಅಧ್ಯಾತ್ಮ ಮತ್ತು ಕೃಷಿ ಪ್ರಮುಖವಾಗಿ ಕಾರಣವಾಗಿರುವ ಅಂಶಗಳನ್ನು ಮನಗಂಡು ಅದರಂತೆ ಕಾಯಕ ಮಾಡುತ್ತಾ ಬಂದರು. ಎಲ್ಲಾ ಜನಾಂಗಗಳ ಮಕ್ಕಳಿಗೆ ಶ್ರೀಮಠದಲ್ಲಿ ಅನುಕೂಲವನ್ನು ಮಾಡಿಕೊಟ್ಟು ಶಿಕ್ಷಣ ವಂತರನ್ನಾಗಿ ಮಾಡುವಲ್ಲಿ ಅವರು ಅಪಾರವಾಗಿ ಶ್ರಮಿಸುತ್ತಾ ಬಂದಿದ್ದರು. ಇವರ ಸೇವೆಗಳನ್ನು ಗುರುತಿಸಿ ಸರ್ಕಾರ ಹಲವಾರು ಉನ್ನತವಾದ ಬಿರುದುಗಳನ್ನು ನೀಡಿ ಗೌರವನ್ನು ಸಲ್ಲಿಸಿದೆ ಎಂದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ಹಿರಿಯ ಸಹಶಿಕ್ಷಕರಾದ ವಿಜಯಕುಮಾರ್, ಎಂ ಅರ್ಕಚಾರಿ, ವಿಜಯಕುಮಾರಿ ಹಾಗೂ ಮುಖ್ಯಶಿಕ್ಷಕರುಗಳಾದ ಎನ್.ಬಿಂದು, ಹೇಮಲತಾ ಕೆ.ಪಿ. ಶಿಕ್ಷಕರುಗಳಾದ ಪಿ.ಪದ್ಮ, ಸಿ.ಓ.ಸಂತೋಷ್, ಸಿ.ಎನ್.ಸಿದ್ದೇಶ್, ಪಿ.ವೀರೇಶ್, ಮುಂತಾದವರು ಭಾಗವಹಿಸಿದ್ದರು.



