ತುಮಕೂರು: ವಾರಕ್ಕೆ ಐದು ದಿನಗಳ ಬ್ಯಾಂಕಿ0ಗ್ ಸೇವೆಯನ್ನು ಜಾರಿ ಮಾಡಬೇಕೆಂದು ಆಗ್ರಹಿಸಿ ರಾಷ್ಟಾçದ್ಯಂತ ೮ ಲಕ್ಷಕ್ಕೂ ಹೆಚ್ಚು ಜನ ಬ್ಯಾಂಕ್ ಉದ್ಯೋಗಿಗಳು ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದು, ತುಮಕೂರಿನಲ್ಲೂ ಸಹ ಯುಎಫ್‌ಬಿಯು ಸಂಘಟನೆ ಪ್ರತಿಭಟನೆ ನಡೆಸಿದೆ. ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ವಾರದಲ್ಲಿ ೫ ದಿನಗಳ ಬ್ಯಾಂಕಿ0ಗ್ ಸೇವೆಗೆ ಅನುಮೋದನೆಯನ್ನು ನೀಡದೆ ವಿಳಂಬ ನೀತಿ ಅನುಸರಿಸುತ್ತಿರುವುದು ಇಂದಿನ ಮುಷ್ಕರಕ್ಕೆ ಎಡೆಮಾಡಿಕೊಟ್ಟಿದೆ ಎಂದು ಯುಎಫ್‌ಬಿಯು ಸಂಚಾಲಕ ಕೆ.ಎನ್. ವಾದಿರಾಜ ಹೇಳಿದರು.
ಏನಿದು ವಿವಾದ.?
ಬ್ಯಾಂಕಿ0ಗ್ ಕ್ಷೇತ್ರದಲ್ಲಿ ೨೦೧೫ರಲ್ಲಿ ವಾರಕ್ಕೆ ಆರು ದಿನ ಕೆಲಸ ನಿರ್ವಹಿಸಲಾಗುತ್ತಿದ್ದರು. ಆಗಲೇ ವಾರಕ್ಕೆ ೫ ದಿನಗಳ ಸೇವೆಯನ್ನು ಜಾರಿ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಮನವಿಯನ್ನು ಪರಿಷ್ಕರಣೆ ಮಾಡಿ ೨೦೧೮ರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ಬ್ಯಾಂಕಿ0ಗ್ ಗೆ ರಜೆಯನ್ನು ನೀಡಿ ಉಳಿದ ಶನಿವಾರಗಳಂದು ಸಂಪೂರ್ಣ ಸೇವೆಯನ್ನು ಒದಗಿಸುವಂತೆ ಅನುಮೋದಿಸಲಾಗಿತ್ತು. ಇದುವರೆವಿಗೂ ಅದರ ಪ್ರಕಾರವೇ ಬ್ಯಾಂಕಿ0ಗ್ ಕೆಲಸ ನಿರ್ವಹಿಸುತ್ತಿದ್ದು, ಈ ಮಧ್ಯೆ ಉಳಿದ ಶನಿವಾರಗಳನ್ನೂ ರಜೆಯನ್ನಾಗಿ ಪರಿವರ್ತನೆ ಮಾಡಿ ವಾರಕ್ಕೆ ಐದು ದಿನಗಳ ಬ್ಯಾಂಕಿ0ಗ್ ಸೇವೆಯನ್ನು ಜಾರಿ ಮಾಡಬೇಕೆಂದು ಹಲವಾರು ಬಾರಿ ಮನವಿ ಮಾಡಿದರೂ ಕೂಡ, ಮುಂದಿನ ವೇತನ ಪರಿಷ್ಕರಣೆಯಲ್ಲಿ ಜಾರಿ ಮಾಡುತ್ತೇವೆ ಎಂಬ ಸುಳ್ಳು ಭರವಸೆಯನ್ನು ಮಾತ್ರ ನೀಡಿ ಇಂದಿನ ದಿನದವರೆಗೂ ಕೂಡ ಬ್ಯಾಂಕ್ ಉದ್ಯೋಗಿಗಳಿಗೆ ಸೌಲಭ್ಯಗಳನ್ನು ನೀಡಿಲ್ಲ. ಹಾಗಾಗಿ ದೇಶಾದ್ಯಂತ ೮ ಲಕ್ಷಕ್ಕೂ ಅಧಿಕ ಬ್ಯಾಂಕ್ ಉದ್ಯೋಗಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ಪ್ರತಿಭಟನೆಯ ಹಾದಿ..
ವಾರಕ್ಕೆ ೫ ದಿನಗಳ ಬ್ಯಾಂಕಿ0ಗ್ ಸೇವೆಯ ವಿಚಾರವಾಗಿ ಇದುವರೆಗೂ ಇಂಡಿಯನ್ ಬ್ಯಾಂಕರ್ಸ್ ಅಸೋಸಿಯೇಷನ್ ಹಾಗೂ ಯು ಎಫ್ ಬಿ ಯು ನಡುವೆ ಆಗಿರುವ ಎಂ ಓ ಯು ತಿಳುವಳಿಕೆ ಪತ್ರ ಜಾರಿಯಾಗಿರುವುದಿಲ್ಲ. ಎಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಈ ಒಂದು ಬೇಡಿಕೆಯನ್ನು ಮುಂದೂಡುತ್ತಲೇ ಬಂದಿದ್ದಾರೆ. ಇನ್ನು ೨೦೨೦ ರಲ್ಲಿ ಕೋವಿಡ್ ಇದ್ದಿದ್ದರಿಂದ ಬೇಡಿಕೆ ಈಡೇರಿಕೆಗಾಗಿ ಯು ಎಫ್ ಬಿ ಯು ಕೂಡ ಒತ್ತಾಯಿಸಲಿಲ್ಲ. ದೇಶದ ಪರಿಸ್ಥಿತಿ ಆಗ ಬೇರೆಯಾಗಿತ್ತು, ಆದರೆ ನಂತರ ೨೦೨೨ ರಲ್ಲಿ ಈ ಮನವಿಯನ್ನು ಪರಿಗಣನೆ ಮಾಡುತ್ತೇವೆ ಎಂದು ಹೇಳಿದ್ದ ಐಬಿಎ ಮತ್ತು ಡಿಎಫ್‌ಎಸ್ ನಮ್ಮ ಮುಷ್ಕರಕ್ಕೆ ಡೆಫರ್ ಮಾಡಿಸಿದರು. ಇದರ ವಿರುದ್ದ ಮುಷ್ಕರ ಕೈಗೊಳ್ಳುವುದಾಗಿ ತಿಳಿಸಿದ್ದರೂ ಕೂಡ ೫ ದಿನಗಳ ಬ್ಯಾಂಕಿ0ಗ್ ಸೇವೆಗೆ ಅನುಮೋದನೆ ಸಿಗಲಿಲ್ಲ. ಈ ಮಧ್ಯೆ ೨೦೨೨ ರ ಸೆಪ್ಟೆಂಬರ್ ನಲ್ಲಿ ಮತ್ತೆ ಸಭೆ ನಡೆಸಿ ಪ್ರತಿನಿತ್ಯ ೩೦ ನಿಮಿಷಗಳ ಹೆಚ್ಚಿನ ಬ್ಯಾಂಕಿ0ಗ್ ಸೇವೆಯನ್ನು ನೀಡಲು ತಿಳಿಸಿದರು. ೨೦೨೩ ಜನವರಿಯಲ್ಲಿ ನಾವು ಮುಷ್ಕರಕ್ಕೆ ಆಹ್ವಾನ ಕೊಟ್ಟಾಗ ಸಭೆ ನಡೆಸಿ ಪ್ರತಿನಿತ್ಯ ೪೫ ನಿಮಿಷಗಳ ಅಧಿಕ ಸೇವೆ ನೀಡಿ ಎಂದು ಹೇಳಿದರು, ಅದನ್ನೂ ಕೂಡ ನಾವು ಒಪ್ಪಿಕೊಂಡಿದ್ದೇವೆ. ನಂತರ ಜನವರಿ ೨೮, ೨೦೨೩ ರಂದು ೪೫ ನಿಮಿಷಗಳ ಬದಲಾಗಿ ೪೦ ನಿಮಿಷಕ್ಕೆ ಒಪ್ಪಂದವಾಯಿತು ಈ ವಿಚಾರವನ್ನು ಐಬಿಎ(ಇಂಡಿಯನ್ ಬ್ಯಾಂಕರ್ಸ್ ಅಸೋಸಿಯೇಷನ್) ಮತ್ತು ಡಿಎಫ್‌ಎಸ್ (ಡಿಪಾರ್ಟೆ್ಮಂಟ್ ಆಫ್ ಫೈನಾನ್ಸಿಯಲ್ ಸರ್ವಿಸ್) ರವರು ಕೇಂದ್ರ ಸರ್ಕಾರಕ್ಕೆ ಈ ಒಂದು ಅನುಮೋದನೆಯನ್ನು ಮಾಡಲು ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ. ನಂತರ ೨೦೨೪ರ ಮಾರ್ಚಿನಲ್ಲಿ ವೇತನ ಪರಿಷ್ಕರಣೆ ಆದಾಗ, ಐದು ದಿನಗಳ ಬ್ಯಾಂಕಿ0ಗ್ ಸೇವೆಗ ಅನುಮೋದನೆ ನೀಡದಿದ್ದರೆ ನಾವು ವೇತನ ಪರಿಷ್ಕರಣೆಗೆ ಸಹಿ ಹಾಕುವುದಿಲ್ಲ ಎಂದು ಒತ್ತಾಯಿಸಿದಾಗ ನಮ್ಮ ಬೈಪಾಟ್ಲೆಟ್ ಸೆಟಲ್ಮೆಂಟ್ ಹಾಗೂ ಜಾಯಿಂಟ್ ನೋಟ್ ನಲ್ಲಿ ವಾರಕ್ಕೆ ಐದು ದಿನಗಳ ಬ್ಯಾಂಕಿ0ಗ್ ಸೇವೆಯನ್ನು ಮಾಡೇ ಮಾಡುತ್ತೇವೆ ಎಂಬ ಒಂದು ಒಡಂಬಡನೆಯನ್ನು ಕೂಡ ಮಾಡಿದ್ದಾರೆ.
ಸಭೆಗಳಿಗಿಲ್ಲ ಕಿಮ್ಮತ್ತು..
ಅಂದಿನಿAದಲೂ ಐಬಿಎ ಮತ್ತು ಸಿ ಎಲ್ ಸಿ ಜೊತೆಗೆ ಮಾತನಾಡುತ್ತಿದ್ದರೂ ಕೂಡ ಅನೇಕ ಮೀಟಿಂಗ್ ಗಳು ವಿಫಲವಾಗಿ ನಾವು ಈ ದಿನ ಮುಷ್ಕರವನ್ನು ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿಯನ್ನ ಕೇಂದ್ರ ಸರ್ಕಾರ ನಿರ್ಮಾಣ ಮಾಡಿದೆ. ಬ್ಯಾಂಕಿ0ಗ್ ಉದ್ಯೋಗಿಗಳ ೧೦ ವರ್ಷಗಳ ಬೇಡಿಕೆ ಇನ್ನೂ ಈಡೇರದೆ ಇದ್ದಿದ್ದರಿಂದ ಇಂದು ನಾವು ಮುಷ್ಕರಕ್ಕೆ ಬಂದಿದ್ದೇವೆ. ಪ್ರಸ್ತುತ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಜಿಐಸಿ ಗೌರ್ಮೆಂಟ್ಸ್ ಇವುಗಳಿಗೆ ಈ ಸೌಲಭ್ಯವನ್ನು ಈಗಾಗಲೇ ವಿಸ್ತರಿಸಿದ್ದಾರೆ. ನಾವು ಬ್ಯಾಂಕಿ0ಗ್ ನವರು ಯಾಕೆ ಈ ಸೌಲಭ್ಯವನ್ನು ಪಡೆಯಬಾರದು ಇದು ನಮ್ಮ ಲೆಜಿಟಿವಿಟ ಆಗಿದೆ ಈ ಒಂದು ಮುಷ್ಕರದ ಅಂಗವಾಗಿ ಕಳೆದ ಈ ತಿಂಗಳಿನಲ್ಲಿ ಟ್ವಿಟ್ಟರ್ ಕ್ಯಾಂಪೇನ್, ಪ್ರೆಸ್ ಕಾನ್ಫರೆನ್ಸಸ್ ಗಳನ್ನು ಮಾಡಿದ್ದು ಎಲ್ಲರೂ ಕೂಡ ನಮ್ಮ ಪರವಾಗಿ ನಿಂತಿದ್ದಾರೆ.
ಬ್ಯಾಂಕ್ ಬಂದ್ ಗ್ರಾಹಕರಿಗೇನು ಎಫೆಕ್ಟ್.?
ಬ್ಯಾಂಕಿ0ಗ್ ಕ್ಷೇತ್ರದಲ್ಲಿ ಡಿಜಿಟಲೈಜೇಷನ್ ಆಗಿರುವುದರಿಂದ ಯಾವುದೇ ರೀತಿಯ ತೊಂದರೆ ಗ್ರಾಹಕರಿಗೆ ಆಗುವುದಿಲ್ಲ ಈಗಾಗಲೇ ೮೦ ಶೇಕಡ ಗ್ರಾಹಕರು ಬ್ಯಾಂಕಿ0ಗ್ ಅನ್ನ ಮಾಡುತ್ತಿದ್ದರಿಂದ ಗ್ರಾಹಕರಿಗೆ ಯಾವುದೇ ತೊಂದರೆ ಇರುವುದಿಲ್ಲ ಎಂಬುದು ಬ್ಯಾಂಕ್ ಉದ್ಯೋಗಿಗಳ ಮಾತು.
ಕೆಲಸದ ಒತ್ತಡ ಉದ್ಯೋಗಿಗಳಲ್ಲಿ ಹೆಚ್ಚಿದ ಆತಂಕ.!
ಅಗತ್ಯ ಸಿಬ್ಬಂದಿಗಳ ನೇಮಕಾತಿ ಆಗದೇ ಇರುವುದು, ಮಾನಸಿಕವಾಗಿ ಮತ್ತು ದೈಹಿಕವಾಗಿ ಉದ್ಯೋಗಿಗಳಲ್ಲಿ ನಿರಾಸಕ್ತಿ, ವರ್ಕ್ ಲೈಫ್ ಇಂಬ್ಯಾಲೆನ್ಸ್ ಆಗಿರುವುದು, ಇದರಿಂದಾಗಿ ನೋ ಪ್ರೊಡಕ್ಟಿವಿಟಿ, ಮನುಷ್ಯರಾದ ನಾವು ಮಷೀನ್ ಗಳ ಹಾಗೆ ಕೆಲಸವನ್ನು ನಿರ್ವಹಿಸುತ್ತಿರುವುದು ಮತ್ತು ಕುಟುಂಬದವರೊ0ದಿಗೆ ತಮ್ಮ ಸಮಯವನ್ನು ಕಳೆಯಿದೆ ಇರುವಂತದ್ದು , ಈ ಎಲ್ಲಾ ತೊಂದರೆಗಳು ಉದ್ಯೋಗಿಗಳ ಮಾನಸಿಕ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇತ್ತೀಚಿನ ನಿದರ್ಶನಗಳನ್ನು ನೋಡಿದಾಗ ೩೦ ರಿಂದ ೪೦ ವರ್ಷದ ಅನೇಕ ಬ್ಯಾಂಕ್ ಉದ್ಯೋಗಿಗಳು ಹಾರ್ಟ್ ಅಟ್ಯಾಕ್ ಮತ್ತು ಇನ್ನಿತರ ಹೃದಯ ಸಂಬ0ದಿತ ರೋಗಗಳಿಂದ ಮರಣವನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ತಾರತಮ್ಯ ಮಾಡಿದ ನಮ್ಮ ಬ್ಯಾಂಕಿ0ಗ್ ಉದ್ಯೋಗಿಗಳಿಗೆ ಏಕೈಕ ಪ್ರಮುಖ ಬೇಡಿಕೆಯಾಗಿರುವ ವಾರಕ್ಕೆ ಐದು ದಿನಗಳ ಬ್ಯಾಂಕಿ0ಗ್ ಸೇವೆಯನ್ನು ಜಾರಿ ಮಾಡುವಂತೆ ರಾಷ್ಟಾçದ್ಯಂತ ಈ ಮುಷ್ಕರವನ್ನ ಹಮ್ಮಿಕೊಳ್ಳಲಾಗಿದೆ.
ಈ ಮುಷ್ಕರದಲ್ಲಿ ಯುಎಫ್‌ಬಿಯು ಸಂಚಾಲಕ ಕೆ.ಎನ್. ವಾದಿರಾಜ, ಎಸ್ ಬಿ ಐ ಆಫೀಸರ್ ಅಸೋಸಿಯೇಷನ್ ಶಂಕರಪ್ಪ, ಎಸ್‌ಬಿಐ ಯೂನಿಯನ್ ನಿಂದ ಸರ್ವಮಂಗಳ ರವಿ, ಕೆನರಾ ಬ್ಯಾಂಕಿನ ಸತೀಶ್ ರಾಮ್, ಕರ್ನಾಟಕ ಬ್ಯಾಂಕಿನ ನಾರಾಯಣ್, ಅಜಯ್ ಮತ್ತು ಉಳಿದ ಎಲ್ಲಾ ಬ್ಯಾಂಕಿನ ಪ್ರತಿನಿಧಿಗಳು ಹಾಗೂ ಸಂಗಾತಿಗಳು ಭಾಗವಹಿಸಿದ್ದರು.

 

(Visited 1 times, 1 visits today)