BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತುಮಕೂರು ಜಿಲ್ಲೆಗೆ ಭವ್ಯವಾದ ಸಾಹಿತ್ಯದ ಇತಿಹಾಸವಿದೆ
  • ತುರುವೇಕೆರೆ: ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ
  • ಜಿಪಂ, ತಾಪಂ, ಬಿಬಿಎಂಪಿ ಚುನಾವಣೆಗಳನ್ನು ನಡೆಸಲು ಸರ್ಕಾರ ನಿರ್ಧಾರ ಕೈಗೊಳ್ಳಲಿ
  • ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ
  • ಲಯನ್ಸ್ ಭವನಕ್ಕೆ ೧೦ ಲಕ್ಷ ಅನುದಾನ ನೀಡುವುದಾಗಿ ಶಾಸಕ ಬರವಸೆ
  • ನೀಲಕಂಠೇಶ್ವರಸ್ವಾಮಿಯ ೧೦೬ನೇ ವೈಭವದ ಜಾತ್ರೋತ್ಸವ
  • ಕಾರ್ಯ ದಕ್ಷತೆಗೆ ತರಬೇತಿಗಳು ಅಗತ್ಯ
  • ಕೆ.ಎನ್.ರಾಜಣ್ಣರ ಅಮೃತ ಮಹೋತ್ಸವ ಯಶಸ್ಸಿಗೆ ನಿರ್ಧಾರ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜಾತಿ, ಧರ್ಮದ ಹೆಸರಿನಲ್ಲಿ ಒಡೆದು ಆಳುವ ನೀತಿ ಬೇಡ: ಹಿರೇಹಳ್ಳಿ ಮಹೇಶ್
ಇತರೆ ಸುದ್ಧಿಗಳು

ಜಾತಿ, ಧರ್ಮದ ಹೆಸರಿನಲ್ಲಿ ಒಡೆದು ಆಳುವ ನೀತಿ ಬೇಡ: ಹಿರೇಹಳ್ಳಿ ಮಹೇಶ್

By News Desk BenkiyabaleUpdated:July 26, 2022 4:52 pm

ತುಮಕೂರು:


ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಡಿ.ಕೊರಟಗೆರೆಯಲ್ಲಿ ಫ್ಲೆಕ್ಸ್ ಅಳವಡಿಸುವ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದಂತಹ ಗಲಭೆಯನ್ನೇ ಮಾಜಿ ಶಾಸಕ ಬಿ.ಸುರೇಶ್‍ಗೌಡ ಮತ್ತು ಅವರ ಬೆಂಬಲಿಗರು ಹಿಂದು-ಮುಸ್ಲಿಂ ಗಲಾಟೆ, ಲಿಂಗಾಯಿತ-ಒಕ್ಕಲಿಗರ ನಡುವೆ ಗಲಾಟೆ ಎಂಬಂತೆ ಬಿಂಬಿಸಲು ಹೊರಟಿರುವುದು ಖಂಡನೀಯ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸ್ಕಲ್ ಗ್ರಾಪಂ ವ್ಯಾಪ್ತಿ ಡಿ.ಕೊರಟಗೆರೆ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ನಡೆಯಿತು, ಈ ಪ್ರಯುಕ್ತ ಫ್ಲೆಕ್ಸ್ ಬ್ಯಾನರ್ ಕಟ್ಟುವ ವಿಚಾರದಲ್ಲಿ ಬಿಜೆಪಿ ಕಿಡಿಗೇಡಿಗಳು ಜಗಳ ತೆಗೆದು ಕೆಟ್ಟ ಹೆಸರು ತರುವ ಹುನ್ನಾರ ಮಾಡಿದ್ದಾರೆ, ಜೆಡಿಎಸ್ ಶಾಸಕರ ಮೇಲಿನ ಅಭಿಮಾನದಿಂದ ಪಕ್ಷದ ಕಾರ್ಯಕರ್ತರು ಬ್ಯಾನರ್ ಕಟ್ಟಲು ಹೋದಾಗ ಜೆಡಿಎಸ್ ಕಾರ್ಯಕರ್ತರನ್ನು ಮಸ್ಕಲ್ ಗ್ರಾಪಂ ಅಧ್ಯಕ್ಷರು ತಡೆಯುತ್ತಾರೆ. ನಮ್ಮ ಮನೆ ಮುಂದೆ ಕಟ್ಟಬೇಡಿ ಎಂದಾಗ ನಾವು ಸುಮ್ಮನಾಗುತ್ತೇವೆ. ಬೇರೆ ಕಡೆ ಕಟ್ಟಲು ಮುಂದಾದಾಗ ಬ್ಯಾನರ್ ಹರಿದು ಹಲ್ಲೆ ಮಾಡಿದ್ದಾರೆ.ಆದರೆ ಸತ್ಯ ಮರೆಮಾಚುವ ಕೆಲಸಕ್ಕೆ ಮುಂದಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಯಕರ್ತರ ನಡುವಿನ ಗಲಾಟೆಯನ್ನೇ ನೆಪ ಮಾಡಿಕೊಂಡ ಬಿಜೆಪಿ ಕೆಲ ಮುಖಂಡರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ, ಕೋಮು ಗಲಭೆ ಎಂಬೆಲ್ಲಾ ಮಾತನಾಡುತ್ತಿದ್ದಾರೆ,ಮಾಜಿ ಜಿಪಂ ಸದಸ್ಯರು ಮಾತನಾಡಿ ಶಾಸಕ ಗೌರಿಶಂಕರ್ ವೀರಶೈವ ವಿರೋಧಿ ಎಂದು ಆರೋಪ ಮಾಡುತ್ತಾರೆ. ಸಿ.ಚನ್ನಿಂಗಪ್ಪ ಕುಟುಂಬ ಸಿದ್ದಗಂಗಾ ಮಠದ ನಡುವಿನ ಬಾಂಧವ್ಯ ಇದೆ ಎಂಬುದನ್ನು ತಿಳಿಯಲಿ.ಕೊರೊನಾ ಸಂದರ್ಭದಲ್ಲಿ ಶಾಸಕರು ಏನು ಕೆಲಸ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಆಗ ಮಾಜಿ ಶಾಸಕರು ಎಲ್ಲಿ ಹೋಗಿದ್ದರು.ನಾಲ್ಕು ವರ್ಷದಿಂದ ಕಾಣೆಯಾಗಿದ್ದ ಮಾಜಿ ಶಾಸಕರು ಚುನಾವಣೆ ಹತ್ತಿರ ಬಂದಿರುವಾಗ ಈಗ ಬೇಳೆ ಬೇಯಿಸಿಕೊಳ್ಳಲು ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ ಎಂದರು.
ನಮ್ಮ ಶಾಸಕರಾದ ಗೌರಿಶಂಕರ್ ಲಿಂಗಾಯಿತ ವಿರೋಧಿ ಎಂದು ಹೇಳುವ ಮಾಜಿ ಶಾಸಕ ಸುರೇಶ್‍ಗೌಡ ಅವರ ಅನುಯಾಯಿಗಳು, ಕಳೆದ 10 ವರ್ಷಗಳ ಕಾಲ ಅವರು ಗ್ರಾಮಾಂತರ ಕ್ಷೇತ್ರದಿಂದ ಎಷ್ಟು ಜನ ಲಿಂಗಾಯಿತರಿಗೆ ಸಹಾಯ ಮಾಡಿದ್ದಾರೆ ಎಂದು ಪಟ್ಟಿ ಬಿಡುಗಡೆ ಮಾಡಲಿ, ಪಕ್ಷದಲ್ಲಿ ಯಾವ ಹುದ್ದೆ ನೀಡಿದ್ದಾರೆ ಎಂದು ತಿಳಿಸಲಿ,ನಾವೆಲ್ಲರೂ ನಡೆದಾಡುವ ದೇವರು ಎಂದು ತಿಳಿದಿರುವ ಡಾ.ಶ್ರೀಶಿವಕುಮಾರಸ್ವಾಮಿಜಿಗಳ ಬಗ್ಗೆ ಕೀಳಾಗಿ ಮಾತನಾಡಿದ ಕೀರ್ತಿ ನಿಮ್ಮ ಶಾಸಕರದ್ದು ಎಂದು ಹಿರೇಹಳ್ಳಿ ಮಹೇಶ್ ದೂರಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಲ್ಲಾ ಜಾತಿಯವರು, ಧರ್ಮದವರು ಅಣ್ಣ ತಮ್ಮಂದಿರಂತೆ ಬದುಕುತಿದ್ದೇವೆ. ಅವರನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆದು ಆಳಲು ಮಾಜಿ ಶಾಸಕರು ಪ್ರಯತ್ನಿಸಬಾರದು. ಮುಂದೆಯೂ ಇಂತಹ ಕೀಳು ರಾಜಕೀಯಕ್ಕೆ ಇಳಿದರೆ, ಅವರನ್ನು ಕ್ಷೇತ್ರದಿಂದಲೇ ಬಹಿಷ್ಕರಿಸುವಂತೆ ಹೋರಾಟ ನಡಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು,ತುಮಕೂರು ಗ್ರಾಮಾಂತರಕ್ಕೆ ಸೇರಿದ ಪೊಲೀಸ್ ಠಾಣೆಯಲ್ಲಿ ಶಾಸಕರಾಗಿರುವ ಗೌರಿಶಂಕರ್ ಅವರ ಮಾತಿಗಿಂತ, ಸರಕಾರವಿದೆ ಎಂಬ ಕಾರಣಕ್ಕೆ ಮಾಜಿ ಶಾಸಕರ ಮಾತಿಗೆ ಅಧಿಕಾರಿಗಳು ಹೆಚ್ಚು ಮನ್ನಣೆ ನೀಡುತ್ತಿದ್ದಾರೆ. ಆ ಕಾರಣದಿಂದಲೇ ನಮ್ಮ ಪಕ್ಷದ ಮುಖಂಡರು, ಸಮಾಜ ಸೇವಕರು ಆಗಿರುವ ಪಾಲನೇತ್ರಯ್ಯ ಅವರು, ಹೆಬ್ಬೂರು ಪೊಲೀಸರು ಪಕ್ಷಪಾತಿಗಳು ಎಂದು ಹೇಳಿದ್ದಾರೆ. ಇದರಲ್ಲಿ ಯಾವುದೇ ತಪ್ಪು ಇಲ್ಲ.ಗ್ರಾಮಾಂತರಕ್ಕೆ ಸೇರಿದ ಹೆಬ್ಬೂರು,ಕ್ಯಾತ್ಸಂದ್ರ ಪೊಲೀಸರ ನಡವಳಿಕೆ ಹಾಗೆಯೇ ಇದೆ ಎಂದು ಪಾಲನೇತ್ರಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಈ ವೇಳೆ ಜಿ.ಪಂ.ಮಾಜಿ ಸದಸ್ಯ ರಾಮಚಂದ್ರಪ್ಪ, ಮುಖಂಡರಾದ ಬೆಳಗುಂಬ ವೆಂಕಟೇಶ್, ಉಮೇಶ್, ಸುವರ್ಣಗಿರಿ ಕುಮಾರ್, ವಿಜಯಕುಮಾರ್, ರುದ್ರೇಶ್, ಕೆಂಪರಂಗಣ್ಣ, ಸ್ವಾಮಿ ಚಿಕ್ಕಹಳ್ಳಿ, ಮಹದೇವ, ಹರೀಶ್ ನರಸಾಪುರ, ರವೀಶ್, ಬೋಜರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 3 times, 1 visits today)
tumkur
Previous Articleಜೆಡಿಎಸ್‍ನ ಪಾಲನೇತ್ರಯ್ಯ ವಿರುದ್ಧ ಕ್ರಮಕ್ಕೆ ಒತ್ತಾಯ
Next Article ‘ಜನತೆಯನ್ನು ಅಡವಿಡುತ್ತಿರುವ ಶಾಸಕರು’: ಕಾಂಗ್ರೆಸ್ ಮುಖಂಡ
News Desk Benkiyabale

Related Posts

ತುಮಕೂರು ಜಿಲ್ಲೆಗೆ ಭವ್ಯವಾದ ಸಾಹಿತ್ಯದ ಇತಿಹಾಸವಿದೆ

June 16, 2025 3:18 pm ತುಮಕೂರು

ತುರುವೇಕೆರೆ: ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ

June 16, 2025 3:00 pm ತುಮಕೂರು

ಜಿಪಂ, ತಾಪಂ, ಬಿಬಿಎಂಪಿ ಚುನಾವಣೆಗಳನ್ನು ನಡೆಸಲು ಸರ್ಕಾರ ನಿರ್ಧಾರ ಕೈಗೊಳ್ಳಲಿ

June 16, 2025 2:50 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ತುಮಕೂರು ಜಿಲ್ಲೆಗೆ ಭವ್ಯವಾದ ಸಾಹಿತ್ಯದ ಇತಿಹಾಸವಿದೆ

June 16, 2025 3:18 pm
ತುಮಕೂರು

ತುರುವೇಕೆರೆ: ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ

June 16, 2025 3:00 pm
ತುಮಕೂರು

ಜಿಪಂ, ತಾಪಂ, ಬಿಬಿಎಂಪಿ ಚುನಾವಣೆಗಳನ್ನು ನಡೆಸಲು ಸರ್ಕಾರ ನಿರ್ಧಾರ ಕೈಗೊಳ್ಳಲಿ

June 16, 2025 2:50 pm

ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ

June 16, 2025 2:21 pm
ತುಮಕೂರು

ಲಯನ್ಸ್ ಭವನಕ್ಕೆ ೧೦ ಲಕ್ಷ ಅನುದಾನ ನೀಡುವುದಾಗಿ ಶಾಸಕ ಬರವಸೆ

June 16, 2025 2:16 pm
ತುಮಕೂರು

ನೀಲಕಂಠೇಶ್ವರಸ್ವಾಮಿಯ ೧೦೬ನೇ ವೈಭವದ ಜಾತ್ರೋತ್ಸವ

June 16, 2025 2:07 pm
Our Youtube Channel
Our Picks

ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ

June 16, 2025 2:21 pm

ಶೋಷಿತರಲ್ಲಿ ಹೋರಾಟದ ಕಿಚ್ಚು ಹತ್ತಿಸಿದವರು ಪ್ರೊ.ಬಿ.ಕೃಷ್ಣಪ್ಪ

June 16, 2025 1:56 pm

ಸಾರ್ವಜನಿಕರು ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ

June 05, 2025 2:29 pm

ನಗರದಲ್ಲಿ ಪ್ರಾದೇಶಿಕ ತೆಂಗು ಅಭಿವೃದ್ಧಿ ಮಂಡಳಿ ಕಚೇರಿ ತೆರೆಯಿರಿ

May 31, 2025 3:29 pm

ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿ

May 29, 2025 4:18 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ತುಮಕೂರು ಜಿಲ್ಲೆಗೆ ಭವ್ಯವಾದ ಸಾಹಿತ್ಯದ ಇತಿಹಾಸವಿದೆ

By News Desk BenkiyabaleJune 16, 2025 3:18 pm

ತುಮಕೂರು: ಜಿಲ್ಲೆಯು ಪ್ರಾಚೀನ ಇತಿಹಾಸ ಮತ್ತು ಸಾಹಿತ್ಯಿಕ ಇತಿಹಾಸದಿಂದಲೂ ತುಂಬಾ ಪ್ರಸಿದ್ಧವಾಗಿದೆ. ಕೈದಾಳದಲ್ಲಿರುವ ಶಾಸನ ವಿಭಿನ್ನ ಧರ್ಮದ ಸೌಹಾರ್ಧತೆಯನ್ನು ಬಿಂಬಿಸುವAತಿದೆ.…

ತುರುವೇಕೆರೆ: ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ

June 16, 2025 3:00 pm

ಜಿಪಂ, ತಾಪಂ, ಬಿಬಿಎಂಪಿ ಚುನಾವಣೆಗಳನ್ನು ನಡೆಸಲು ಸರ್ಕಾರ ನಿರ್ಧಾರ ಕೈಗೊಳ್ಳಲಿ

June 16, 2025 2:50 pm

ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ

June 16, 2025 2:21 pm
News by Date
June 2025
M T W T F S S
 1
2345678
9101112131415
16171819202122
23242526272829
30  
« May    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.