BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ
  • ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!
  • ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು
  • ಹಾಸ್ಟೆಲ್ ಮಕ್ಕಳಿಗೆ ಸಮಸ್ಯೆಯಾದರೆ ಅಧಿಕಾರಿಗಳ ಮೇಲೆ ಕ್ರಮ
  • ಅಪ್ರತಿಮ ಧೈರ್ಯ, ಶೌರ್ಯದ ವನಿತೆ ರಾಣಿ ಲಕ್ಷಿ÷್ಮÃಭಾಯಿ
  • ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗೆ ಕಾರಣವಾದ ನೀಟ್
  • ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಕೊರಿಯಾ ನಿಯೋಗದ ಭೇಟಿ ವೀಕ್ಷಣೆ
  • ಅರ್ಹ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ 
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಇಂದು ಮನೆ – ಮನೆಗಳಲ್ಲಿ ಕನ್ನಡ ಭಾವುಟ ಅಭಿಯಾನ
ಇತರೆ ಸುದ್ಧಿಗಳು

ಇಂದು ಮನೆ – ಮನೆಗಳಲ್ಲಿ ಕನ್ನಡ ಭಾವುಟ ಅಭಿಯಾನ

By News Desk BenkiyabaleUpdated:October 31, 2022 5:41 pm

ತುಮಕೂರು


ಪ್ರತಿ ವರ್ಷದಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ನವೆಂಬರ್ 1 ರಿಂದ ಮನೆ-ಮನೆಗಳಲ್ಲಿ ಕನ್ನಡ ಭಾವುಟ ಎನ್ನುವ ಅಭಿಯಾನ ಕೈಗೊಳ್ಳಲು ಜಾತ್ಯಾತೀತ ಜನತಾ ದಳ ನಿರ್ಧಾರ ಕೈಗೊಂಡಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪ ತಿಳಿಸಿದರು.
ಇಲ್ಲಿನ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಅಭಿಯಾನದ ಅಡಿಯಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರು ಮತ್ತು ಬೆಂಬಲಿಗರ ಮನೆಗಳ ಮೇಲೆ ಕನ್ನಡ ಭಾವುಟ ಮತ್ತು ಪಕ್ಷದ ಭಾವುಟಗಳನ್ನು ಹಾರಿಸಬೇಕು ಎಂದರು.
ತಮ್ಮ ಕ್ಷೇತ್ರದಲ್ಲಿರುವ ನೆರೆ-ಹೊರೆಯವರ ಮನೆ ಮೇಲೆ ಕೂಡ ಕನ್ನಡ ಭಾವುಟ ಹಾರಿಸಲು ಭಾವುಟ ನೀಡುವುದು ಮತ್ತು ನೆರೆ-ಹೊರೆಯವರನ್ನು ಸಹ ಪಕ್ಷದ ಭಾವುಟವನ್ನು ಹಾರಿಸಲು ಮನವೊಲಿಸಬೇಕು. ಆದರೆ, ಒತ್ತಾಯ ಮತ್ತು ಬಲವಂತದಿಂದ ಬಾವುಟಗಳನ್ನು ಹಾರಿಸಲು ಪ್ರಯತ್ನ ಮಾಡಬಾರದು ಎಂದು ಹೇಳಿದರು.
ಪಕ್ಷದ ವತಿಯಿಂದ ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ಇಡೀ ನವೆಂಬರ್ ತಿಂಗಳಲ್ಲಿ ಕನ್ನಡ ರಾಜೋತ್ಸವ ಆಚರಣೆ ಮಾಸವೆಂದು ಆಚರಿಸಲು ನಿರ್ಧರಿಸಲಾಗಿದೆ. ಹಾಗಾಗಿ ಜೆಡಿಎಸ್ ಪಕ್ಷದ ಎಲ್ಲ ತಾಲ್ಲೂಕು ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ತಮ್ಮ ಮನೆಗಳ ಮೇಲೆ ಕನ್ನಡ ಬಾವುಟವನ್ನು ಹಾರಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಳ್ಳಿ ಲೋಕೇಶ್, ಪ್ರತಿ ವರ್ಷದಂತೆ ಈ ವರ್ಷವು ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ರಾಜ್ಯದಲ್ಲಿ ಮತ್ತು ರಾಜ್ಯದ ಗಡಿನಾಡು ಭಾಗದಲ್ಲಿ ಹಾಗೂ ಹೊರ ರಾಜ್ಯ ಮತ್ತು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ, ಜಗತ್ತಿನಾದ್ಯಂತ ರಾಷ್ಟ್ರಗಳು ಪ್ರಾದೇಶಿಕತೆ ಮತ್ತು ಭಾಷೆಯ ಬಗ್ಗೆ ಸಾರ್ವಭೌಮತ್ಯ ಸ್ಥಾಪಿಸಿವೆ ಎಂದರು.
ಭಾರತ ಒಂದು ಒಕ್ಕೂಟ ರಾಷ್ಟ್ರ, ರಾಷ್ಟ್ರದಲ್ಲಿ, ಒಟ್ಟು 22 ಪ್ರಾದೇಶಿಕ ಭಾಷೆಗಳಿವೆ. ಪ್ರಾದೇಶಿಕತೆಯಲ್ಲಿ ವೈವಿದ್ಯತೆ ಇದೆ. ಭಾಷಾವಾರು ವಿಂಗಡಣೆ ಆಗಿರುವ ರಾಜ್ಯಗಳು ತನ್ನ ಪ್ರಾದೇಶಿಕತೆಗೆ ಮೆರಗು ಕೊಡುವುದರೊಂದಿಗೆ ನೆಲ, ಜಲ ಮತ್ತು ಭಾಷೆಯ ಬಗ್ಗೆ ತಮ್ಮ ಇರುವಿಕೆಗಾಗಿ ಶ್ರಮಿಸುತ್ತಿವೆ. ಯಾವುದೇ ರಾಷ್ಟ್ರ ಅಥವಾ ರಾಜ್ಯದ ಅಸ್ತಿತ್ವಕ್ಕೆ, ಆ ರಾಷ್ಟ್ರ ಅಥವಾ ರಾಜಕೀಯ ಸ್ಥಿರತೆ ಮತ್ತು ಸಂಸ್ಕೃತಿ ಪ್ರತಿಬಿಂಬಿಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡಿನ ಅಸ್ಮಿತೆ, ಪ್ರಾದೇಶಿಕತೆ, ನೆಲ-ಜಲ ಮತ್ತು ಭಾಷೆಯ ಬಗ್ಗೆ ಕನ್ನಡ ನಾಡಿನ ಜನತೆಗೆ ಅರಿವು ಮತ್ತು ಅಭಿಲಾಷೆ ಮೂಡಿಸುವುದು ಸಹ ಅತ್ಯವಶ್ಯಕವಾಗಿದೆ ಎಂದರು.
ಕನ್ನಡ ರಾಜೋತ್ಸವ ಮಾಸಾಚರಣೆ ಅಭಿಯಾನದಲ್ಲಿ, ಕನ್ನಡ ನಾಡಿನ ನೆಲ, ಜಲ ನುಡಿಗೆ ಶ್ರಮಿಸಿದ ಮಹನೀಯರನ್ನು ನೆನೆಯುವುದು ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಅಭಿಯಾನದಲ್ಲಿ ಶಾಲಾ-ಕಾಲೇಜುಗಳು, ಯುವಕ ಸಂಘಗಳು, ಶಕ್ತಿ, ಸಂಘಗಳು, ಸಾರ್ವಜನಿಕ, ಖಾಸಗಿ ಸಂಘ-ಸಂಸ್ಥೆಗಳಲೂ, ಕನ್ನಡ ರಾಜೋತ್ಸವ ಆಚರಣೆಯನ್ನು ಪಕ್ಷದ ಮುಖಂಡರು ಕೈಗೊಳ್ಳಬೇಕು ಎಂದರು.
ಮುಖಂಡ ಗೋವಿಂದರಾಜು ಮಾತನಾಡಿ, ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡಿನ ಪ್ರಸಿದ್ಧ ಕವಿಗಳು, ಕಲಾವಿದರು, ನಾಡು ಒಗ್ಗೂಡಿಕೆಗೆ ಶ್ರಮಿಸಿದ ರಾಜಕೀಯ ಮುತ್ಸದ್ಧಿಗಳ ಬಗ್ಗೆ ನೆನೆದು ಅವರ ಸೇವೆಯನ್ನು ಸ್ಮರಿಸುವುದು ಅತ್ಯವಶ್ಯಕ ಎಂದರು.
ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನೀತಿಯನ್ನು ಬಲವಂತವಾಗಿ ಖಂಡಿಸಬೇಕು. ಕೇಂದ್ರ ಸರ್ಕಾರದ ನಾಗರಿಕ ಸೇವೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ಒತ್ತಾಯ ಮಾಡಬೇಕು. ಅದರಲ್ಲೂ ರೈಲ್ವೆ, ಸೈನ್ಯ, ಬ್ಯಾಂಕಿಂಗ್ ಕ್ಷೇತ್ರಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಹೋರಾಟ ಅಗತ್ಯ ಎನ್ನುವುದನ್ನು ಕನ್ನಡ ಜನತೆಗೆ ಮನದಟ್ಟು ಮಾಡಿಕೊಡುವ ಕೆಲಸವಾಗಬೇಕು ಎಂದರು.
ಸಭೆಯಲ್ಲಿ ಉಪಮೇಯರ್ ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ಧರಣೇಂದ್ರಕುಮಾರ್, ಶ್ರೀನಿವಾಸ್, ಮಂಜುನಾಥ್, ಮಹಾಲಿಂಗಪ್ಪ, ಕೃಷ್ಣಮೂರ್ತಿ, ಬಿ.ಎನ್. ಜಗದೀಶ್, ತಹೇರಾ ಕುಲ್ಸಮ್, ಲೀಲಾವತಿ, ಲಕ್ಷ್ಮಮ್ಮ ವೀರಣ್ಣಗೌಡ, ಪ್ರೆಸ್ ರಾಜಣ್ಣ, ಮೆಡಿಕಲ್ ಮಧು, ರಂಗಪ್ಪ, ಹೊನ್ನೇಗೌಡ, ದೇವರಾಜು, ಗಂಗಣ್ಣ, ಅಬ್ದುಲ್ ಖಾದರ್ ಮತ್ತಿತರರು ಪಾಲ್ಗೊಂಡಿದ್ದರು.

(Visited 1 times, 1 visits today)
tumkur
Previous Articleಇಂದಿರಾ ಗಾಂಧಿ ಪುಣ್ಯ ಸ್ಮರಣೆ
Next Article ಪುನೀತ್ ಸ್ಮರಣೆ : ಮೌನಾಚರಣೆ – ಅನ್ನ ಸಂತರ್ಪಣಾ ಕಾರ್ಯಕ್ರಮ
News Desk Benkiyabale

Related Posts

ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ

June 20, 2026 5:11 pm news

ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!

June 20, 2026 5:08 pm news

ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು

June 20, 2026 5:06 pm news
ತಾಜಾ ಸುದ್ಧಿಗಳು

ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ

June 20, 2026 5:11 pm

ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!

June 20, 2026 5:08 pm

ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು

June 20, 2026 5:06 pm

ಹಾಸ್ಟೆಲ್ ಮಕ್ಕಳಿಗೆ ಸಮಸ್ಯೆಯಾದರೆ ಅಧಿಕಾರಿಗಳ ಮೇಲೆ ಕ್ರಮ

June 20, 2026 5:03 pm

ಅಪ್ರತಿಮ ಧೈರ್ಯ, ಶೌರ್ಯದ ವನಿತೆ ರಾಣಿ ಲಕ್ಷಿ÷್ಮÃಭಾಯಿ

June 19, 2026 4:59 pm

ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗೆ ಕಾರಣವಾದ ನೀಟ್

June 19, 2026 4:51 pm
Our Youtube Channel
Our Picks

ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ

June 20, 2026 5:11 pm

ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!

June 20, 2026 5:08 pm

ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು

June 20, 2026 5:06 pm

ಹಾಸ್ಟೆಲ್ ಮಕ್ಕಳಿಗೆ ಸಮಸ್ಯೆಯಾದರೆ ಅಧಿಕಾರಿಗಳ ಮೇಲೆ ಕ್ರಮ

June 20, 2026 5:03 pm

ಅಪ್ರತಿಮ ಧೈರ್ಯ, ಶೌರ್ಯದ ವನಿತೆ ರಾಣಿ ಲಕ್ಷಿ÷್ಮÃಭಾಯಿ

June 19, 2026 4:59 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumkur news tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ

By News Desk BenkiyabaleJune 20, 2026 5:11 pm

ತುಮಕೂರು: ನಗರದ ೩೧ನೇ ವಾರ್ಡಿನ ಜಯನಗರ ಪಶ್ಚಿಮ ಬಡಾವಣೆಯ ೧ನೇ ಮುಖ್ಯರಸ್ತೆಯ ೩ನೇ ಅಡ್ಡರಸ್ತೆಯಲ್ಲಿರುವ ಪಾರ್ಕ್ (ಉದ್ಯಾನವನ) ಜಾಗದಲ್ಲಿ ‘ನಮ್ಮ…

ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!

June 20, 2026 5:08 pm

ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು

June 20, 2026 5:06 pm

ಹಾಸ್ಟೆಲ್ ಮಕ್ಕಳಿಗೆ ಸಮಸ್ಯೆಯಾದರೆ ಅಧಿಕಾರಿಗಳ ಮೇಲೆ ಕ್ರಮ

June 20, 2026 5:03 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.