ಗುಬ್ಬಿ
ಪಕ್ಷದಿಂದ ಉಚ್ಛಾಟಿಸಿದಾಗ ಯಾವ ಮುಖಂಡರುಗಳು ಇದರ ಬಗ್ಗೆ ಚಕಾರವೆತ್ತದೆ ಚುನಾವಣಾ ಸಮೀಪಿಸುತ್ತಿರುವಾಗ ಸಂಧಾನ ಪ್ರಕ್ರಿಯೆ ಎಷ್ಟು ಸಮಂಜಸ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಡಬ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಈಗಾಗಲೇ ಸಾಕಷ್ಟು ಸಿ.ಸಿ.ರಸ್ತೆ ಬಾಕ್ಸ್ ಚರಂಡಿಗಳನ್ನು ಮಾಡಿದ್ದು ಮಳೆ ಬಿದ್ದ ಕಾರಣ ರಸ್ತೆಗಳು ಹಾಳಾಗಿದ್ದು ನಿಟ್ಟೂರು ಮತ್ತು ಚೇಳೂರು ರಸ್ತೆಗೆ ಹಣ ಹಾಕಿದ್ದು ವ್ಯರ್ಥವಾಗುತ್ತಿದೆ ಹಾಗಾಗಿ ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತೇನೆ. ಸ್ಲಂಬೋರ್ಡ್‍ನಿಂದ ಕಡುಬಡವರಿಗೆ ನಿವೇಶನಗಳನ್ನು ಕಟ್ಟಿಕೊಳ್ಳಲು ಹಣ ಬಿಡುಗಡೆಯಾಗಿದ್ದು ಕೇವಲ ಸೀಮಿತ ಏರಿಯಾಕ್ಕೆ ಮಾತ್ರ ಹಣ ನೀಡಿದ್ದು ಹಾಗಾಗಿ ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲೂ ತಳಮಟ್ಟದ ಜನರನ್ನು ಗುರುತಿಸಿ ನಿವೇಶನಗಳನ್ನು ಕಟ್ಟಿಕೊಳ್ಳಲು ಮನವಿ ಸಲ್ಲಿಸಿದ್ದೇನೆ. ಬಿ.ಜೆ.ಪಿ. ಸರ್ಕಾರವು ವಿದ್ಯೆಗೆ ಒತ್ತು ನೀಡಲು ಸರ್ಕಾರವು ಹಣವನ್ನು ಈ ಬಾರಿಯೇ ಅತಿ ಹೆಚ್ಚಿನ ಮೀಸಲನ್ನು ಇಟ್ಟಿರುವುದಾಗಿ ತಿಳಿಸಿದರು.
ಗುದ್ದಲಿ ಪೂಜೆಯಲ್ಲಿ ತಾ.ಪಂ. ಮಾಜಿ ಸದಸ್ಯರುಗಳು ಹಾಗೂ ಎಲ್ಲಾ ಕಡಬ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.



