BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತುಮಕೂರು-ಅರಸೀಕೆರೆ ರೈಲು ಪ್ರಯಾಣಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಆದ್ಯತೆ
  • ಮುಂಬರುವ ವಿಧಾನಸಭೆ, ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಗೆಲ್ಲಬೇಕು
  • ಮೇವು ಬ್ಯಾಂಕ್, ಆಧಾರ್ ಕೇಂದ್ರ ಸ್ಥಾಪನೆಗೆ ಮನವಿ
  • ತುಮಕೂರು ದಸರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ಪೂರ್ವಸಿದ್ಧತೆಗೆ ಜಿಲ್ಲಾಧಿಕಾರಿ ಚಾಲನೆ
  • ಪ್ರಜಾ ಸೇವಾ ಅಭಿಯಾನದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಆದ್ಯತೆ
  •  ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವ ರೇಬಿಸ್ ದಿನಾಚರಣೆಯ ಗುರಿ
  • ಮಹಿಳೆಯರಿಗಾಗಿ ವಿಶೇಷ ಸೀರತ್ ಪ್ರವಚನ ಕಾರ್ಯಕ್ರಮ
  • ಕನಿಷ್ಠ ಕೂಲಿ, ಗುತ್ತಿಗೆ ಕಾರ್ಮಿಕರ ಖಾಯಂಮಾತಿ ಶಾಸನಕ್ಕೆ ಒತ್ತಾಯಿಸಿ ಶಾಸಕರಿಗೆ ಮನವಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಲೆಕ್ಕಾಧಿಕಾರಿ ಇನ್ನು ಮುಂದೆ ಗ್ರಾಮ ಆಡಳಿತ ಅಧಿಕಾರಿ
ಇತರೆ ಸುದ್ಧಿಗಳು

ಲೆಕ್ಕಾಧಿಕಾರಿ ಇನ್ನು ಮುಂದೆ ಗ್ರಾಮ ಆಡಳಿತ ಅಧಿಕಾರಿ

By News Desk BenkiyabaleUpdated:December 10, 2022 4:28 pm

ತುಮಕೂರು


ಸರಕಾರ ಹಂತ ಹಂತವಾಗಿ ಗ್ರಾಮ ಲೆಕ್ಕಾಧಿಕಾರಿಗಳ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆ. ಅಲ್ಲದೆ ಇದುವರೆಗೂ ಇದ್ದ ಗ್ರಾಮ
ಲೆಕ್ಕಾಧಿಕಾರಿಯ ಬದಲಾಗಿದೆ ಗ್ರಾಮ ಆಡಳಿತ ಅಧಿಕಾರಿ ಎಂಬ ಪದನಾಮ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನಸ್ನೇಹಿಯಾಗಿ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ನಗರದ ಗಾಜಿನಮನೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘ ಹಾಗೂ ತುಮಕೂರು ಜಿಲ್ಲಾ ಘಟಕ ಆಯೋಜಿಸಿದ್ದ ಕನ್ನಡ ರಾಜೋತ್ಸವ,2023ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ,ವಿಚಾರಸಂಕಿರಣ ಹಾಗೂ ರಾಜ್ಯ ಸಂಘದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ನೀವು ನೀಡುವ ಸೇವೆಯಿಂದ ಜನರ ಬಾಯಲ್ಲಿ ಸರಕಾರ ಒಳ್ಳೆಯ ಕೆಲಸ ಮಾಡಿದೆ ಎಂಬ ಹೆಸರು ಬರುವಂತಾಗಬೇಕು.ಆಗ ನಿಮ್ಮ ಪದನಾಮ ಬದಲಾಗಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.
ನಮ್ಮ ಸರಕಾರ ಅನೇಕ ಜನರ ಪರ ಯೋಜನಗಳನ್ನು ರೂಪಿಸುತ್ತಾ ಬಂದಿದೆ.ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ,72 ಗಂಟೆಗಳಲ್ಲಿ ಪಿಂಚಿಣಿ ಸೌಲಭ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.ಇವುಗಳು ಸಮರ್ಪಕವಾಗಿ ಜನರ ಬಾಗಿಲಿಗೆ ಮುಟ್ಟಿದರೆ ಅದಕ್ಕಿಂತ ಉತ್ತಮ ಕಾರ್ಯ ಮತ್ತೊಂದಿಲ್ಲ.ಕೇವಲ ಯೋಜನೆಗಳಿಂದ ಉಪಯೋಗವಾಗುವುದಿಲ್ಲ. ಯೋಜನೆಗಳ ಜನರ ಮನೆ ಬಾಗಿಲಿಗೆ ಮುಟ್ಟಬೇಕು.ಈ ನಿಟ್ಟನಲ್ಲಿ ಜನರು ಮತ್ತು ಸರಕಾರದ ನಡುವೆ ಕೊಂಡಿಯಾಗಿರುವ ಅಧಿಕಾರಿಗಳು ಮತ್ತಷ್ಟು ಪಾರದರ್ಶಕವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ.ಈಗಾಗಲೇ ವೃಂದ ನೇಮಕಾತಿಗೆ ತಿದ್ದುಪಡಿ ತರಲಾಗಿದೆ.ಇಂದು ಗ್ರಾಮಲೆಕ್ಕಾಧಿಕಾರಿಯ ಬದಲಾಗಿ ಗ್ರಾಮ ಆಡಳಿತ ಅಧಿಕಾರಿ ಪದನಾಮ ಬದಲಾವಣೆಗೆ ಅಂಕಿತ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ನೀವು ನೀಡಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇವೆ ಎಂದು ಆರ್.ಅಶೋಕ್ ಗ್ರಾಮ ಆಡಳಿತ ಅಧಿಕಾರಿಗಳ ಸಂಘಕ್ಕೆ ಭರವಸೆ ನೀಡಿದರು.
ನಮ್ಮ ಸರಕಾರ ಬಂದ ಮೇಲೆ ಕಂದಾಯ ಇಲಾಖೆಯಲ್ಲಿ ಬಹಳಷ್ಟು ಸುಧಾರಣೆಗಳನ್ನು ತರಲಾಗಿದೆ.ಸುಮಾರು 40 ವರ್ಷಗಳಿಂದ ಆಗದ ಹಲವು ಆದೇಶಗಳನ್ನು ಮಾಡಲಾಗಿದೆ.ಎಲ್ಲಾ ಕೃಷಿಕರಿಗೂ ಭೂಮಿ ಸಿಗಬೇಕು ಎಂಬ ಉದ್ದೇಶದಿಂದ ಫಾರಂ 57 ಸಲ್ಲಿಸಲು ಒಂದು ವರ್ಷ ಕಾಲಾವಕಾಶ ನೀಡಲಾಗಿದೆ.ಅಲ್ಲದೆ ಸೇಂದಿವನಗಳಲ್ಲಿ ಉಳುಮೆ ಮಾಡುತ್ತಿದ್ದ ರೈತರಿಗೂ 50-57 ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.ಇದರ ಜೊತೆಗೆ ಒತ್ತುವರಿಯಾಗಿರುವ ಸುಮಾರು 1 ಲಕ್ಷ ಎಕರೆ ಕಾಪಿತೋಟವನ್ನು ಕಾಪಿಬೆಳೆಗಾರರಿಗೆ ಲೀಸ್ ನೀಡಲು ನಿರ್ಧರಿಸಲಾಗಿದೆ.ಈ ಎಲ್ಲಾ ಯೋಜನೆಗಳ ಜಾರಿಗೆ ಬರಬೇಕಾದರೆ ನಿಮ್ಮಗಳ ಸಹಕಾರ ಅಗತ್ಯ ಎಂದು ಕಂದಾಯ ಸಚಿವರು ತಿಳಿಸಿದರು.
ಒಂದು ಸರಕಾರದ ವಿರುದ್ದ ಟೀಕೆಗಳ ಸಹಜ.ಆದರೆ ಅವರು ಅಧಿಕಾರದಲ್ಲಿ ಇದ್ದಾಗ ಜನಪರವಾಗಿ ಕೆಲಸ ಮಾಡದೆ, ಒಂದು ಜನಪರ ಸರಕಾರದ ವಿರುದ್ದ ಟೀಕೆ ಸರಿಯಲ್ಲ. ಸರಕಾರಿ ನೌಕರರಿಗೆ ಏನು ಮಾಡದ ವಿರೋಧಪಕ್ಷಗಳು, ಇನ್ನೂ ಜನರಿಗೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಆರ್.ಅಶೋಕ್,ಸರಕಾರಿ ನೌಕರರು ಸರಕಾರ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು. ಮಾಧ್ಯಮಗಳಿಗಿಂತ ಬಾಯಿ, ಬಾಯಿಗೆ ಸರಕಾರ ಕಾರ್ಯಕ್ರಮಗಳು ಹರಡಿದಾಗ, ಜನರಲ್ಲಿ ಸರಕಾರದ ಬಗ್ಗೆ ಒಳ್ಳೆಯ ಭಾವನೆ ಮೂಡುತ್ತದೆ.ಸರಕಾರಕ್ಕೆ ವರುಣನ ಕೃಪೆಯ ಜೊತೆಗೆ, ಅದಾಯವೂ ನಿರೀಕ್ಷೆಗೆ ಮೀರಿ ಹೆಚ್ಚಾಗಿದೆ. ಮಳೆಯಿಂದ ಬೆಳೆಕಳೆದುಕೊಂಡ ಜಿಲ್ಲೆಯ 11165 ರೈತರಿಗೆ 9.88 ಕೋಟಿ ರೂ,ಕೋವಿಡ್‍ನಿಂದ ಸಂತಸ್ಥರಾದವರಿಗೆ 22 ಕೋಟಿ ರೂಗಳ ಪರಿಹಾರ ನೀಡಲಾಗಿದೆ.ಮುಂದಿನ 2023ರ ಬಜೆಟ್ ಮತ್ತಷ್ಟ ಜನಪರವಾಗಲಿದೆ ಎಂದು ಆರ್.ಅಶೋಕ್ ನುಡಿದರು.
ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ,ಸರಕಾರಿ ನೌಕರರ ಮನವಿ ಸಲ್ಲಿಸಿದ ಒಂದು ತಿಂಗಳ ಒಳಗೆ 7ನೇ ವೇತನ ಪರಿಷ್ಕರಣೆ ಆಯೋಗ ನೇಮಕ ಮಾಡಿದ ಯಾವುದಾದರೂ ಸರಕಾರವಿದ್ದರೆ ಅದು ಬಸವರಾಜ ಬೊಮ್ಮಾಯಿಯವರ ಸರಕಾರ. ಸರಕಾರಿ ನೌಕರರ ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದ್ದಾರೆ. ಇದಕ್ಕೆ ನಿಮ್ಮಲ್ಲರೂ ನೀಡಿದ ಸಹಕಾರ ಮುಖ್ಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೇಡಿಕೆಗಳಿಗೆ ಸರಕಾರದಿಂದ ಅನುಮೋದನೆ ದೊರೆಯಲಿದೆ ಎಂದರು.
ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ,ಸರಕಾರಿ ನೌಕರರು ಇಂದು ನೆಮ್ಮದಿಯಿಂದ ಇರಲು ಸಂಘದ ರಾಜ್ಯಾಧ್ಯಕ್ಷರಾಗಿರುವ ಸಿ.ಎಸ್.ಷಡಾಕ್ಷರಿ ಅವರ ದಿಟ್ಟ ಮತ್ತು ಪ್ರಾಮಾಣಿಕ ಹೋರಾಟವೇ ಕಾರಣ.ಡಿ.ಎ.,ಹೆರಿಗೆ ರಜೆ, ಗಳಿಕೆ ರಜೆ ನಗಧೀಕರಣ ಸೇರಿದಂತೆ ನೌಕರರ ಎಲ್ಲಾ ಬೇಡಿಕೆಗಳನ್ನು ಸರಕಾರದ ಮುಂದೆ ಸಮರ್ಥವಾಗಿ ಮಂಡಿಸಿ, ಅದಕ್ಕೆ ಅನುಮೋಧನೆ ಪಡೆಯುವ ಮೂಲಕ ಯಶಸ್ವಿ ಸಂಘಟಕರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ದೇವರಾಜು ಮಾತನಾಡಿ,ರಾಜ್ಯದ 30 ಜಿಲ್ಲೆಗಳ 226 ತಾಲೂಕುಗಳಲ್ಲಿಯೂ ನಮ್ಮ ಸಂಘಟನೆ ಇದೆ.ಸುಮಾರು 10 ಸಾವಿರ ಸದಸ್ಯರಿದ್ದು,ಸರಕಾರಕ್ಕೆ ನೀಡಿದ್ದ 9 ಪ್ರಮುಖ ಬೇಡಿಕೆಗಳಲ್ಲಿ 7 ನ್ನು ಅನುಮೋದಿಸಿ, ಸರಕಾರಕ್ಕೆ ಕಂದಾಯ ಸಚಿವರು ಕಳುಹಿಸಿದ್ದಾರೆ.ಈಗಾಗಲೇ ವೃಂದ ಬದಲಾವಣೆ,ಪದನಾಮ ಬದಲಾವಣೆ ಆಗಿದೆ.ಮುಂದಿನ ದಿನಗಳಲ್ಲಿ ಕೋವಿಡ್ ಪರಿಹಾರ, ಪ್ರತ್ಯೇಕ ಕೊಠಡಿ,ಹುದ್ದೆ ಮೇಲ್ದರ್ಜೆಗೇರಿಸುವುದು ಸೇರಿದಂತೆ ಹಲವಾರು ಬೇಡಿಕೆಗಳು ಈಡೇರಲಿವೆ.ಪ್ರತಿ ವೃತ್ತದಲ್ಲಿಯೂ ಒಂದು ಗ್ರಾಮ ಆಡಳಿತ ಸೌಧವನ್ನು ನಿರ್ಮಾಣ ಮಾಡಬೇಕೆಂಬ ನಮ್ಮ ಬೇಡಿಕೆಯನ್ನು ಸರಕಾರ ಶೀಘ್ರವಾಗಿ ಈಡೇರಿಸಬೇಕೆಂದು ಮನವಿ ಮಾಡಿದರಲ್ಲದೆ,ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಸಚಿವರಿಗೆ “ಕಂದಾಯ ಕದಂಬ” ಎಂಬ ಬಿರುದು ನೀಡಿ ಗೌರವಿಸುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಅಧ್ಯಕ್ಷ ಬಿ.ದೊಡ್ಡಬಸಪ್ಪರೆಡ್ಡಿ ವಹಿಸಿದ್ದರು.ಶಾಸಕರಾದ ಜಿ.ಬಿ.ಜೋತಿಗಣೇಶ್, ಡಾ.ಸಿ.ಎಂ.ರಾಜೇಶಗೌಡ,ಸಂಘದ ಗೌರವಾಧ್ಯಕ್ಷ ಎನ್.ರವಿಮಾರ್, ಉಪಾಧ್ಯಕ್ಷ ಯಮನೂರ, ಪ್ರಧಾನ ಕಾರ್ಯದರ್ಶಿ ಭಕ್ತವತ್ಸಲ, ಖಜಾಂಚಿ ಹೆಚ್.ಜೆ.ಮೋಹನ್‍ಕುಮಾರ್,ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಎಲ್, ಸಹ ಕಾರ್ಯದರ್ಶಿ ವಿ.ರಾಘವೇಂದ್ರಸ್ವಾಮಿ, ಸಂಘಟನಾ ಕಾರ್ಯದರ್ಶಿ ಭಾನುಪ್ರಕಾಶ್ ಸೇರಿದಂತೆ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ಸಚಿವ ಆರ್.ಅಶೋಕ್ ಗೋಪೂಜೆ ನೆರವೇರಿಸಿ, ಗೋವಿಗೆ ಬೆಲ್ಲ, ಬಾಳೆಹಣ್ಣು ತಿನ್ನಿಸಿ, ಶುಭ ಹಾರೈಸಿದರು.

(Visited 1 times, 1 visits today)
tumkur
Previous Articleಗುಬ್ಬಿ ಶ್ರೀನಿವಾಸ್ ವಿರುದ್ಧ ಕಾಂಗ್ರೆಸಿಗರ ಆಕ್ರೋಶ
Next Article ವಸತಿ ಶಾಲೆಗಳ ಸದುಪಯೋಗ ಪಡೆಯಬೇಕು: ಸಚಿವ
News Desk Benkiyabale

Related Posts

ತುಮಕೂರು-ಅರಸೀಕೆರೆ ರೈಲು ಪ್ರಯಾಣಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಆದ್ಯತೆ

September 29, 2026 5:00 pm news

ಮುಂಬರುವ ವಿಧಾನಸಭೆ, ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಗೆಲ್ಲಬೇಕು

September 29, 2026 4:58 pm news

ಮೇವು ಬ್ಯಾಂಕ್, ಆಧಾರ್ ಕೇಂದ್ರ ಸ್ಥಾಪನೆಗೆ ಮನವಿ

September 29, 2026 4:56 pm news
ತಾಜಾ ಸುದ್ಧಿಗಳು
news

ತುಮಕೂರು-ಅರಸೀಕೆರೆ ರೈಲು ಪ್ರಯಾಣಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಆದ್ಯತೆ

September 29, 2026 5:00 pm
news

ಮುಂಬರುವ ವಿಧಾನಸಭೆ, ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಗೆಲ್ಲಬೇಕು

September 29, 2026 4:58 pm
news

ಮೇವು ಬ್ಯಾಂಕ್, ಆಧಾರ್ ಕೇಂದ್ರ ಸ್ಥಾಪನೆಗೆ ಮನವಿ

September 29, 2026 4:56 pm
news

ತುಮಕೂರು ದಸರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ಪೂರ್ವಸಿದ್ಧತೆಗೆ ಜಿಲ್ಲಾಧಿಕಾರಿ ಚಾಲನೆ

September 29, 2026 4:54 pm
news

ಪ್ರಜಾ ಸೇವಾ ಅಭಿಯಾನದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಆದ್ಯತೆ

September 29, 2026 4:53 pm
news

 ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವ ರೇಬಿಸ್ ದಿನಾಚರಣೆಯ ಗುರಿ

September 28, 2026 5:12 pm
Our Youtube Channel
Our Picks

ತುಮಕೂರು-ಅರಸೀಕೆರೆ ರೈಲು ಪ್ರಯಾಣಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಆದ್ಯತೆ

September 29, 2026 5:00 pm

ಮುಂಬರುವ ವಿಧಾನಸಭೆ, ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಗೆಲ್ಲಬೇಕು

September 29, 2026 4:58 pm

ಮೇವು ಬ್ಯಾಂಕ್, ಆಧಾರ್ ಕೇಂದ್ರ ಸ್ಥಾಪನೆಗೆ ಮನವಿ

September 29, 2026 4:56 pm

ತುಮಕೂರು ದಸರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ಪೂರ್ವಸಿದ್ಧತೆಗೆ ಜಿಲ್ಲಾಧಿಕಾರಿ ಚಾಲನೆ

September 29, 2026 4:54 pm

ಪ್ರಜಾ ಸೇವಾ ಅಭಿಯಾನದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಆದ್ಯತೆ

September 29, 2026 4:53 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ತುಮಕೂರು-ಅರಸೀಕೆರೆ ರೈಲು ಪ್ರಯಾಣಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಆದ್ಯತೆ

By News Desk BenkiyabaleSeptember 29, 2026 5:00 pm

ತುಮಕೂರು: ಪ್ರಸ್ತುತ ಸಂದರ್ಭದಲ್ಲಿ ತುಮಕೂರು ಅರಸೀಕೆರೆ ಮಾರ್ಗದಲ್ಲಿ ಪ್ರಯಾಣಿಸುವ ರೈಲು ಪ್ರಯಾಣಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳ ನಿವಾರಣೆಗೆ ವೇದಿಕೆ…

ಮುಂಬರುವ ವಿಧಾನಸಭೆ, ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಗೆಲ್ಲಬೇಕು

September 29, 2026 4:58 pm

ಮೇವು ಬ್ಯಾಂಕ್, ಆಧಾರ್ ಕೇಂದ್ರ ಸ್ಥಾಪನೆಗೆ ಮನವಿ

September 29, 2026 4:56 pm

ತುಮಕೂರು ದಸರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ಪೂರ್ವಸಿದ್ಧತೆಗೆ ಜಿಲ್ಲಾಧಿಕಾರಿ ಚಾಲನೆ

September 29, 2026 4:54 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.