BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ
  • ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ
  • ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದಿರಿ: ಪ್ರಸಾದ್
  • ಗಿರಿನಗರ ಶಾಲೆ ಅಭಿವೃದ್ಧಿಗೆ ೧ ಲಕ್ಷ ರೂ ನೆರವು
  • ತುಮಕೂರಿನಲ್ಲಿ ಅದ್ಧೂರಿಯಾಗಿ ನೆರವೇರಿದ ಬೃಹತ್ ತಿರಂಗಾ ಯಾತ್ರೆ
  • ಜಿಲ್ಲಾಡಳಿತದಿಂದ ಸ್ವಾತಂತ್ರ ದಿನಾಚರಣೆ
  • ಡಿಸಿಎಂಯಿದ ಭಾರತ್ ಜೋಡೋ ಯುವ ಮಿಷನ್ ನೋಂದಣಿ ದೃಢೀಕರಣ ಪತ್ರ ವಿತರಣೆ
  • ಐಸಿಎಚ್-೫ ತಳಿಯ ಹರಳು ಬೆಳೆದರೆ ಕೈ ತುಂಬ ದುಡ್ಡು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದಿರಿ: ಪ್ರಸಾದ್
news

ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದಿರಿ: ಪ್ರಸಾದ್

By News Desk BenkiyabaleUpdated:August 14, 2026 5:41 pm

ತುರುವೇಕೆರೆ: ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದೆ ಮುಂದಿನ ಪೀಳಿಗೆಗೆ ಹಿಂದಿನ ಸಂಸ್ಕಾರಗಳು, ಪರಂಪರೆ ಹಾಗೂ ಇತಿಹಾಸದ ಬಗ್ಗೆ ಅರಿವು ಮೂಡಿಸುವಂತಹ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ಸಾಹಿತಿ ತುರುವೇಕೆರೆ ಪ್ರಸಾದ್ ಹೇಳಿದರು.
ಪಟ್ಟಣದ ಗ್ಲೋಬಲ್ ಎಂಬಸ್ಸಿ ಶಾಲಾ ಆವರಣದಲ್ಲಿ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಛದ್ಮವೇಷಣ ಸ್ಪರ್ಧೆ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಒಂದು ಮಗು ಒಬ್ಬ ವ್ಯಕ್ತಿಯ ವೇಷಭೂಷಣ ತೊಟ್ಟ ಸಂಧರ್ಭದಲ್ಲಿ ಆ ವ್ಯಕ್ತಿಯ ಬಗ್ಗೆ ಅಂತಹ ಮಕ್ಕಳಿಗೆ ಪ್ರೇರಣೆಯಾಗುವಂತಿರಬೇಕು. ಹೊಸ ಹೊಸ ಪಾತ್ರಗಳನ್ನು ಹುಡುಕಿ ಮಕ್ಕಳನ್ನು ತಯಾರಿ ಮಾಡುವ ಸಂಧರ್ಭದಲ್ಲಿ ನಮ್ಮಲ್ಲೊಬ್ಬ ಆದರ್ಶ ಪುರುಷನಿರಬೇಕು. ಗಾಂಧಿ, ಬುದ್ದ, ನೆಹರು, ವಿವೇಕಾನಂದ, ಝಾನ್ಸಿ ಯಂತ ಮಹಾನ್ ಹೋರಾಟಗಾರರ ವೇಷ ತೊಡಿಸಿದ ತಾಯಂದಿರು ಅವರ ಬಗ್ಗೆ ಅರಿವು ಮೂಡಿಸುವ ಮೂಲಕ ಮಕ್ಕಳಿಗೆ ಸ್ಪೂರ್ತಿ ತುಂಬಬೇಕು. ಅಲ್ಲದೆ ಗಾಂಧಿ ಬುದ್ದ ಹೊರತುಪಡಿಸಿ ಎಲೆಮರೆ ಕಾಯಿಯಂತೆ ಹೋರಾಡಿದ ಅದೆಷ್ಟೋ ಸಾಧಕರಿದ್ದು ಅಂತಹವರನ್ನು ಸಹಾ ಗುರ್ತಿಸುವಂತಹ ಕೆಲಸವಾಗಬೇಕೆಂದರು.
ಗ್ಲೋಬಲ್ ಎಂಬಸ್ಸಿ ಶಾಲೆಯ ಮುಖ್ಯಸ್ಥರಾದ ಗಂಗಾಧರ ದೇವರಮನೆ ಮಾತನಾಡಿ ರೋಟರಿ ಸಂಘಸAಸ್ಥೆಗಳು ಛದ್ಮವೇಷದಂತಹ ಹತ್ತು ಹಲವು ಹೊಸ ಹೊಸ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇಂದಿನ ಮಕ್ಕಳಲ್ಲಿ ಸ್ಪೂರ್ತಿ ತುಂಬುವAತಹ ಕೆಲಸವನ್ನು ರೋಟರಿ ಸಂಸ್ಥೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ರೋಟರಿ ಕ್ಲಬ್ ಅಧ್ಯಕ್ಷರಾದ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಬಿಎಮ್ ಎಸ್ ಉಮೇಶ್, ಕಾರ್ಯದರ್ಶಿ ಉಪೇಂದ್ರ ಕುಮಾರ್, ಖಜಾಂಚಿ ಸುನಿಲ್, ಟ್ರಸ್ಟ್ ಅಧ್ಯಕ್ಷ ಸಾ.ಶಿ.ದೇವರಾಜು, ಸದಸ್ಯರಾದ ಪ್ರಸನ್ನಕುಮಾರ್, ಜಿಲನ್ ಬೇಗ್, ರಾಮಚಂದ್ರು, ಗಂಗಾಧರಯ್ಯ, ಶಿವರಾಜು, ಅಶ್ವಿನ್, ದಯಾನಂದ್ ಪ್ರಾಯೋಜಕರಾದ ಲೋಹಿತ್‌ಆನೇಕೆರೆ ಮತ್ತು ಭಾನುಪ್ರಕಾಶ್, ಮುಖ್ಯ ಶಿಕ್ಷಕಿ ಶರಿತದೇವರಮನೆ, ಮೇಘಸಂತೋಷ್ ಸೇರಿದಂತೆ ಕ್ಲಬ್ ಸದಸ್ಯರು ಮತ್ತು ಪೋಷಕರು ಹಾಗೂ ವೇಷಭೂಷಣ ತೊಟ್ಟ ಮಕ್ಕಳು ಪಾಲ್ಗೊಂಡಿದ್ದರು. ತೀರ್ಪುಗಾರರಾಗಿ ಲೋಕೇಶ್, ಜಯಶೀಲಾ, ನೇತ್ರಾ ಪಾಲ್ಗೊಂಡಿದ್ದರು.

(Visited 1 times, 1 visits today)
kannada news karnataka local news tumakur tumkur tumkur news turuvekere ತುರುವೇಕೆರೆ
Previous Articleಗಿರಿನಗರ ಶಾಲೆ ಅಭಿವೃದ್ಧಿಗೆ ೧ ಲಕ್ಷ ರೂ ನೆರವು
Next Article ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ
News Desk Benkiyabale

Related Posts

ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ

August 14, 2026 5:45 pm news

ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ

August 14, 2026 5:42 pm news

ಗಿರಿನಗರ ಶಾಲೆ ಅಭಿವೃದ್ಧಿಗೆ ೧ ಲಕ್ಷ ರೂ ನೆರವು

August 14, 2026 5:40 pm news
ತಾಜಾ ಸುದ್ಧಿಗಳು
news

ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ

August 14, 2026 5:45 pm
news

ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ

August 14, 2026 5:42 pm
news

ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದಿರಿ: ಪ್ರಸಾದ್

August 14, 2026 5:41 pm
news

ಗಿರಿನಗರ ಶಾಲೆ ಅಭಿವೃದ್ಧಿಗೆ ೧ ಲಕ್ಷ ರೂ ನೆರವು

August 14, 2026 5:40 pm
news

ತುಮಕೂರಿನಲ್ಲಿ ಅದ್ಧೂರಿಯಾಗಿ ನೆರವೇರಿದ ಬೃಹತ್ ತಿರಂಗಾ ಯಾತ್ರೆ

August 14, 2026 5:39 pm
news

ಜಿಲ್ಲಾಡಳಿತದಿಂದ ಸ್ವಾತಂತ್ರ ದಿನಾಚರಣೆ

August 13, 2026 5:40 pm
Our Youtube Channel
Our Picks

ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ

August 14, 2026 5:45 pm

ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ

August 14, 2026 5:42 pm

ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದಿರಿ: ಪ್ರಸಾದ್

August 14, 2026 5:41 pm

ಗಿರಿನಗರ ಶಾಲೆ ಅಭಿವೃದ್ಧಿಗೆ ೧ ಲಕ್ಷ ರೂ ನೆರವು

August 14, 2026 5:40 pm

ತುಮಕೂರಿನಲ್ಲಿ ಅದ್ಧೂರಿಯಾಗಿ ನೆರವೇರಿದ ಬೃಹತ್ ತಿರಂಗಾ ಯಾತ್ರೆ

August 14, 2026 5:39 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ

By News Desk BenkiyabaleAugust 14, 2026 5:45 pm

ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ ೨೮ರ ಹರವೆಲೆ ಭಾಗದಲ್ಲಿರುವ ಗೆದ್ದಲಹಳ್ಳಿ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ…

ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ

August 14, 2026 5:42 pm

ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದಿರಿ: ಪ್ರಸಾದ್

August 14, 2026 5:41 pm

ಗಿರಿನಗರ ಶಾಲೆ ಅಭಿವೃದ್ಧಿಗೆ ೧ ಲಕ್ಷ ರೂ ನೆರವು

August 14, 2026 5:40 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.