BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಮಾಲೀಕ ರಾಜೂಗೌಡ, ಕೈ ಕಟ್ಟಿ ಮಾರಾಂತಿಕ ಹಲ್ಲೆ
  • ಶ್ರೀರಾಮ್ ಫೈನಾನ್ಸ್ನಿಂದ ೧೫೦೦ ಮಕ್ಕಳಿಗೆ ವಿದ್ಯಾರ್ಥಿವೇತನ
  • ಸ್ಮೋಕಿಂಗ್ ಜೋನ್ ಆದ ಟಿ ಅಂಗಡಿಗಳು
  • ಪತ್ರಿಕೆಯ ವರದಿಯ ಫಲವಾಗಿ ಬಡವರ ಹಸಿವು ನೀಗಿಸಲು ಮುಂದಾದ ಆಡಳಿತ
  • ಧರ್ಮಸ್ಥಳ ಸಂಸ್ಥೆ ವ್ಯಸನಮುಕ್ತಗೊಳಿಸಿ ಮನೆಯ ದೀಪ ಬೆಳಗುತ್ತಿದೆ
  • ಕನ್ನಡ ರಾಜ್ಯೋತ್ಸವ: ಕನ್ನಡಾಂಬೆ ಭುವನೇಶ್ವರಿ ದೇವಿಯ ಮೆರವಣಿಗೆಗೆ ಡಿಸಿ ಸೂಚನೆ
  • ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ
  • ಕ್ರೀಡೆಯಿ0ದ ಶಿಸ್ತು, ಛಲ, ಸಮರ್ಪಣೆ ಬೆಳೆಸಿಕೊಳ್ಳಿ: ತಹಶೀಲ್ದಾರ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸಭೆ, ಸಮಾರಂಭಗಳಲ್ಲಿ ನೀರು, ಮಜ್ಜಿಗೆ ನೀಡಲು ಮಾತ್ರ ಅವಕಾಶ
ಇತರೆ ಸುದ್ಧಿಗಳು

ಸಭೆ, ಸಮಾರಂಭಗಳಲ್ಲಿ ನೀರು, ಮಜ್ಜಿಗೆ ನೀಡಲು ಮಾತ್ರ ಅವಕಾಶ

By News Desk BenkiyabaleUpdated:April 04, 2023 4:43 pm

ತುಮಕೂರು


ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳು ಸಭೆ/ಸಮಾರಂಭಗಳನ್ನು ಏರ್ಪಡಿಸುವ ಮುನ್ನ ಕಡ್ಡಾಯವಾಗಿ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಸಭೆ/ಸಮಾರಂಭಗಳಲ್ಲಿ ಕುಡಿಯುವ ನೀರು/ಮಜ್ಜಿಗೆ ನೀಡಲು ಮಾತ್ರ ಅವಕಾಶವಿದೆ. ಆಹಾರ ನೀಡಿದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ಸಂಜೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಯು ಅನುಮತಿ ಪಡೆದು ಬಹಿರಂಗ ಸಭೆ, ಸಮಾರಂಭ ನಡೆಸಲು ಅವಕಾಶವಿದೆ. ನಾಮಪತ್ರಕ್ಕಿಂತ ಪೂರ್ವದಲ್ಲಿ ಕೇವಲ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳು ಚುನಾವಣಾಧಿಕಾರಿಗಳ ಅನುಮತಿ ಪಡೆದು ಪಕ್ಷದ ಪರವಾಗಿ ಪ್ರಚಾರ ಮಾಡಬಹುದಾಗಿದೆ. ಆದರೆ ಒಬ್ಬ ಅಭ್ಯರ್ಥಿ ಪರವಾಗಿ ಕಾರ್ಯಕ್ರಮ ಮಾಡಿದರೆ ಅದರ ಸಂಪೂರ್ಣ ವೆಚ್ಚವನ್ನು ಅಭ್ಯರ್ಥಿಯ ವೆಚ್ಚದ ಖಾತೆಗೆ ದಾಖಲು ಮಾಡಲಾಗುವುದು. ಸಭೆ/ಸಮಾರಂಭ/ರ್ಯಾಲಿಗಳನ್ನು ಸಾರ್ವಜನಿಕ/ಖಾಸಗಿ ಸ್ಥಳಗಳಲ್ಲಿ ಕೈಗೊಳ್ಳಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಚುನಾವನಾ ಪ್ರಚಾರಕ್ಕಾಗಿ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸಲು ಅವಕಾಶವಿಲ್ಲ. ಚುನಾವಣಾ ಪ್ರಚಾರದ ಅವಧಿ ಮುಗಿದ ನಂತರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ವಿಧಾನಸಭಾ ಕ್ಷೇತ್ರದ ಮತದಾರರಲ್ಲದವರು ಚುನಾವಣಾ ಮುಕ್ತಾಯವಾಗುವ 48 ಗಂಟೆಗಳ ಮುಂಚೆ ಕ್ಷೇತ್ರವನ್ನು ತೊರೆಯಬೇಕು ಎಂದು ತಿಳಿಸಿದರು.
ಚುನಾವಣೆಯ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಒಬ್ಬ ಅಭ್ಯರ್ಥಿ 3 ವಾಹನಗಳನ್ನು ಮಾತ್ರ ಬಳಸಲು ಅವಕಾಶವಿದೆ. ನಾಮಪತ್ರ ಸಲ್ಲಿಕೆಯಾದ ನಂತರ ಅನುಮತಿ ಪಡೆದು ತಮ್ಮ ಇಚ್ಛೆಯನುಸಾರ ವಾಹನಗಳನ್ನು ಬಳಸಬಹುದು. ಆದರೆ ವಾಹನ ಬಳಸುವ ಬಗ್ಗೆ ಅಭ್ಯರ್ಥಿಗಳು ಚುನಾವಣಾ ವೆಚ್ಚ ತಂಡಕ್ಕೆ ಮಾಹಿತಿ ನೀಡಬೇಕು. ಅನುಮತಿ ಮೇರೆಗೆ ಚುನಾವಣಾ ಪ್ರಚಾರಕ್ಕೆ ರಿಕ್ಷಾ ಮತ್ತು ಬೈಸಿಕಲ್‍ಗಳನ್ನು ಬಳಸಲು ಅವಕಾಶವಿದೆ ಎಂದು ತಿಳಿಸಿದರಲ್ಲದೆ, ಚುನಾವಣೆ ದಿನದಂದು ಅಭ್ಯರ್ಥಿ ಉಪಯೋಗಕ್ಕಾಗಿ 1, ಅಭ್ಯರ್ಥಿಯ ಚುನಾವಣಾ ಏಜೆಂಟ್ ಉಪಯೋಗಕ್ಕಾಗಿ 1 ಹಾಗೂ ಅಭ್ಯರ್ಥಿಯ ಕಾರ್ಯಕರ್ತರ ಉಪಯೋಗಕ್ಕಾಗಿ 1 ವಾಹನ ಸೇರಿದಂತೆ 3 ವಾಹನಗಳನ್ನು ಬಳಸಲು ಅವಕಾಶವಿದೆ ಎಂದು ಹೇಳಿದರು.
ಅಭ್ಯರ್ಥಿಯು ನಾಮಪತ್ರ ಸಲ್ಲಿಸಿದ ನಂತರ ವಿಡಿಯೋ ವ್ಯಾನ್ ಬಳಸಲು ಜಿಲ್ಲಾ ಮಟ್ಟದ ಎಂಸಿಎಂಸಿ(ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ) ತಂಡದಿಂದ ವೀಡಿಯೋದಲ್ಲಿನ ಮಾಹಿತಿ ಕುರಿತು ಅನುಮತಿ ಪಡೆದು ನಂತರ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದು ತಿಳಿಸಿದರು.
ಮುದ್ರಣಾಲಯದವರು ಚುನಾವಣಾ ಕರಪತ್ರ ಮುದ್ರಿಸುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕಲ್ಲದೆ, ಚುನಾವಣಾ ಕರಪತ್ರದಲ್ಲಿ ಮುದ್ರಕರ ಹೆಸರು, ಪ್ರಕಾಶಕರ ಹೆಸರು, ಮುದ್ರಣ ಮಾಡಿದ ಪ್ರಮಾಣದ ವಿವರಗಳನ್ನು ನಮೂದಿಸಬೇಕು ಹಾಗೂ 4 ಪ್ರತಿಗಳಲ್ಲಿ ಅಪೆಂಡಿಕ್ಸ್-ಎ ಮತ್ತು ಬಿ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಚುನಾವಣಾ ಕರಪತ್ರದಲ್ಲಿ ವಿಷಯಗಳನ್ನು ಮುದ್ರಣ ಮಾಡಬೇಕಾದ ಸಂದರ್ಭದಲ್ಲಿ ಕಡ್ಡಾಯವಾಗಿ ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಯಿಂದ ಅನುಮತಿ ಪಡೆಯಬೇಕು. ಅಭ್ಯರ್ಥಿಗಳು ತಮ್ಮ ಅಥವಾ ಯಾವುದೇ ದೇವರ ಫೋಟೋ ಹೊಂದಿರುವ ಡೈರಿ, ಕ್ಯಾಲೆಂಡರ್, ಸ್ಟಿಕರ್‍ಗಳ ಮುದ್ರಣ ಹಾಗೂ ಹಂಚಿಕೆ ಮಾಡುವಂತಿಲ್ಲ.
ಚುನಾವಣಾ ಪ್ರಚಾರಕ್ಕಾಗಿ ಚುನಾವಣಾಧಿಕಾರಿಗಳ ಅನುಮತಿ ಪಡೆದು ಪಕ್ಷ/ ಅಭ್ಯರ್ಥಿಗಳಿಗೆ ತಾತ್ಕಾಲಿಕ ಕಚೇರಿ ತೆರೆಯಲು ಅವಕಾಶವಿದೆ. ಯಾವುದೇ ಧಾರ್ಮಿಕ ಸ್ಥಳ/ಶೈಕ್ಷಣಿಕ ಸ್ಥಳ/ ಆಸ್ಪತ್ರೆ/ ಮತಗಟ್ಟೆ ಸಮೀಪ 200 ಮೀ. ಒಳಗೆ ಕಚೇರಿ ತೆರೆಯಲು ಅವಕಾಶವಿಲ್ಲ. ಪ್ರಚಾರ ಸಂದರ್ಭದಲ್ಲಿ ಕ್ಯಾಪ್, ಮಾಸ್ಕ್, ಸ್ಕಾರ್ಫ್ ವಿತರಿಸಲು ಅವಕಾಶವಿದ್ದು, ಅದರ ವೆಚ್ಚವನ್ನು ಅಭ್ಯರ್ಥಿಯ ವೆಚ್ಚಕ್ಕೆ ದಾಖಲಿಸಲಾಗುವುದು. ಆದರೆ ಸೀರೆ/ಟೀ-ಷರ್ಟ್/ ಶರ್ಟ್ ನೀಡಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚೆಕ್‍ಪೋಸ್ಟ್‍ಗಳಲ್ಲಿ ಈವರೆಗೂ ಸಿಸಿ ಟಿವಿ ಅಳವಡಿಸದೆ ಇರುವವರು ಕೂಡಲೇ ಅಳವಡಿಸಬೇಕು. ಏಪ್ರಿಲ್ 11ರಂದು ಎಲ್ಲಾ ಕ್ಷೇತ್ರಗಳಲ್ಲಿ ಚುನಾವಣಾ ಅಧಿಕಾರಿ/ಸಿಬ್ಬಂದಿಗಳಿಗೆ ತರಬೇತಿ ನೀಡಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದರಲ್ಲದೆ, ಸ್ಟ್ರಾಂಗ್‍ರೂಂನಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಬೇಕು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪವಿಭಾಗಾಧಿಕಾರಿ ಹೆಚ್. ಶಿವಪ್ಪ, ಪಾಲಿಕೆ ಆಯುಕ್ತ ಹೆಚ್.ವಿ.ದರ್ಶನ್, ತುಮಕೂರು ವಿವಿ ಕುಲ ಸಚಿವೆ ನಹೀದಾ ಜಂಜಂ, ತಹಶೀಲ್ದಾರ್ ಸಿದ್ದೇಶ್, ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

(Visited 3 times, 1 visits today)
tumkur
Previous Articleಭಗವಾನ್ ಮಹಾವೀರರ ಜಯಂತಿ ಆಚರಣೆ
Next Article ದೊಡ್ಡಕಾಯಪ್ಪ ದೇವಾಲಯಕ್ಕೆ ಅರ್ಚಕರಿಂದ ಬೀಗ
News Desk Benkiyabale

Related Posts

ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಮಾಲೀಕ ರಾಜೂಗೌಡ, ಕೈ ಕಟ್ಟಿ ಮಾರಾಂತಿಕ ಹಲ್ಲೆ

October 10, 2026 6:10 pm news

ಶ್ರೀರಾಮ್ ಫೈನಾನ್ಸ್ನಿಂದ ೧೫೦೦ ಮಕ್ಕಳಿಗೆ ವಿದ್ಯಾರ್ಥಿವೇತನ

October 10, 2026 6:08 pm news

ಸ್ಮೋಕಿಂಗ್ ಜೋನ್ ಆದ ಟಿ ಅಂಗಡಿಗಳು

October 10, 2026 6:07 pm news
ತಾಜಾ ಸುದ್ಧಿಗಳು

ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಮಾಲೀಕ ರಾಜೂಗೌಡ, ಕೈ ಕಟ್ಟಿ ಮಾರಾಂತಿಕ ಹಲ್ಲೆ

October 10, 2026 6:10 pm
news

ಶ್ರೀರಾಮ್ ಫೈನಾನ್ಸ್ನಿಂದ ೧೫೦೦ ಮಕ್ಕಳಿಗೆ ವಿದ್ಯಾರ್ಥಿವೇತನ

October 10, 2026 6:08 pm
news

ಸ್ಮೋಕಿಂಗ್ ಜೋನ್ ಆದ ಟಿ ಅಂಗಡಿಗಳು

October 10, 2026 6:07 pm
news

ಪತ್ರಿಕೆಯ ವರದಿಯ ಫಲವಾಗಿ ಬಡವರ ಹಸಿವು ನೀಗಿಸಲು ಮುಂದಾದ ಆಡಳಿತ

October 09, 2026 5:43 pm
news

ಧರ್ಮಸ್ಥಳ ಸಂಸ್ಥೆ ವ್ಯಸನಮುಕ್ತಗೊಳಿಸಿ ಮನೆಯ ದೀಪ ಬೆಳಗುತ್ತಿದೆ

October 09, 2026 5:41 pm
news

ಕನ್ನಡ ರಾಜ್ಯೋತ್ಸವ: ಕನ್ನಡಾಂಬೆ ಭುವನೇಶ್ವರಿ ದೇವಿಯ ಮೆರವಣಿಗೆಗೆ ಡಿಸಿ ಸೂಚನೆ

October 09, 2026 5:39 pm
Our Youtube Channel
Our Picks

ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಮಾಲೀಕ ರಾಜೂಗೌಡ, ಕೈ ಕಟ್ಟಿ ಮಾರಾಂತಿಕ ಹಲ್ಲೆ

October 10, 2026 6:10 pm

ಶ್ರೀರಾಮ್ ಫೈನಾನ್ಸ್ನಿಂದ ೧೫೦೦ ಮಕ್ಕಳಿಗೆ ವಿದ್ಯಾರ್ಥಿವೇತನ

October 10, 2026 6:08 pm

ಸ್ಮೋಕಿಂಗ್ ಜೋನ್ ಆದ ಟಿ ಅಂಗಡಿಗಳು

October 10, 2026 6:07 pm

ಪತ್ರಿಕೆಯ ವರದಿಯ ಫಲವಾಗಿ ಬಡವರ ಹಸಿವು ನೀಗಿಸಲು ಮುಂದಾದ ಆಡಳಿತ

October 09, 2026 5:43 pm

ಧರ್ಮಸ್ಥಳ ಸಂಸ್ಥೆ ವ್ಯಸನಮುಕ್ತಗೊಳಿಸಿ ಮನೆಯ ದೀಪ ಬೆಳಗುತ್ತಿದೆ

October 09, 2026 5:41 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಮಾಲೀಕ ರಾಜೂಗೌಡ, ಕೈ ಕಟ್ಟಿ ಮಾರಾಂತಿಕ ಹಲ್ಲೆ

By News Desk BenkiyabaleOctober 10, 2026 6:10 pm

ತುರುವೇಕೆರೆ: ತಾಲೂಕಿನ ಕೋಳಘಟ್ಟ ಗ್ರಾಮದ ಮಂಜುನಾಥ ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಕ್ರಷರ್ ಮಾಲೀಕ ರಾಜೂಗೌಡ ಕೈ ಕಟ್ಟಿ ಮಾರಾಂತಿಕ ಹಲ್ಲೆ…

ಶ್ರೀರಾಮ್ ಫೈನಾನ್ಸ್ನಿಂದ ೧೫೦೦ ಮಕ್ಕಳಿಗೆ ವಿದ್ಯಾರ್ಥಿವೇತನ

October 10, 2026 6:08 pm

ಸ್ಮೋಕಿಂಗ್ ಜೋನ್ ಆದ ಟಿ ಅಂಗಡಿಗಳು

October 10, 2026 6:07 pm

ಪತ್ರಿಕೆಯ ವರದಿಯ ಫಲವಾಗಿ ಬಡವರ ಹಸಿವು ನೀಗಿಸಲು ಮುಂದಾದ ಆಡಳಿತ

October 09, 2026 5:43 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.