BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ
  • ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!
  • ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು
  • ಹಾಸ್ಟೆಲ್ ಮಕ್ಕಳಿಗೆ ಸಮಸ್ಯೆಯಾದರೆ ಅಧಿಕಾರಿಗಳ ಮೇಲೆ ಕ್ರಮ
  • ಅಪ್ರತಿಮ ಧೈರ್ಯ, ಶೌರ್ಯದ ವನಿತೆ ರಾಣಿ ಲಕ್ಷಿ÷್ಮÃಭಾಯಿ
  • ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗೆ ಕಾರಣವಾದ ನೀಟ್
  • ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಕೊರಿಯಾ ನಿಯೋಗದ ಭೇಟಿ ವೀಕ್ಷಣೆ
  • ಅರ್ಹ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ 
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಊರುಕೆರೆ ಗ್ರಾ.ಪಂ. ಗೆ ಬೇಕಿದೆ ಮೇಜರ್ ಸರ್ಜರಿ
ಇತರೆ ಸುದ್ಧಿಗಳು

ಊರುಕೆರೆ ಗ್ರಾ.ಪಂ. ಗೆ ಬೇಕಿದೆ ಮೇಜರ್ ಸರ್ಜರಿ

By News Desk BenkiyabaleUpdated:July 15, 2023 4:29 pm

ತುಮಕೂರು


ಮಹಾನಗರದಿಂದ ಕೂಗಳೆತೆ ದೂರದಲ್ಲಿರುವ ಊರುಕೆರೆ ಗ್ರಾಮವು ಇತ್ತೀಚೆಗೆ ಬಹು ವೇಗವಾಗಿ ಬೆಳೆಯುತ್ತಿರುವ ಗ್ರಾಮವಾಗಿದೆ, ಈ ಗ್ರಾಮಕ್ಕೆ ಕಳೆದ ಎರಡು ಮೂರು ವರ್ಷಗಳಿಂದ ನಗರದ ಜನರು ಈ ಭಾಗದಲ್ಲಿ ಸೈಟುಗಳನ್ನು ಕೊಂಡು ಇಲ್ಲೇ ಮನೆಗಳನ್ನು ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿದ್ದು, ಸೈಟುಗಳ ಬೆಲೆಯೂ ಸಹ ಗಗನಕ್ಕೇರಿದೆ. ಮೊದಲು ಈ ಭಾಗದಲ್ಲಿ ಕೇಳುವವರೇ ಇಲ್ಲದ ಜಾಗಗಳು ಇದೀಗ ಅವುಗಳಿಗೆ ಚಿನ್ನದ ಬೆಲೆ ಬಂದಿದೆ, ಅದಕ್ಕೆ ಕಾರಣ ವಸಂತನರಸಾಪುರ ಕೈಗಾರಿಕಾ ವಲಯ, ಏಕೆಂದರೆ ವಸಂತನರಸಾಪುರ ಮತ್ತು ತುಮಕೂರು ಮಧ್ಯದಲ್ಲಿ ಇರುವ ಈ ಗ್ರಾಮ ಎರಡಕ್ಕೂ ಸಂಪರ್ಕ ಸೇತುವೆಯಾಗಿದೆ.
ಹೀಗಿರುವಲ್ಲಿ ಈ ಗ್ರಾಮ ಪಂಚಾಯಿತಿ ಕಾರ್ಯವೈಖರಿ ಮಾತ್ರ ಶೂನ್ಯ ಎಂಬುದು ಇಲ್ಲಿನ ಹೊಸ ನಿವಾಸಿಗಳ ಆಗ್ರಹವಾಗಿದೆ, ಏಕೆಂದರೆ ಈ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಮನೆಗಳು ಎಲ್ಲಾ ಊರುಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿವೆ, ಪ್ರತಿಯೊಂದು ಸಂಪರ್ಕ ಪಡೆಯಲು ಗ್ರಾಮ ಪಂಚಾಯಿತಿಯ ಅನುಮೋದನೆ ಪಡೆದೇ ಮಾಡಬೇಕಾಗಿದೆ, ಜೊತೆಗೆ ಇಂತಿಷ್ಟು ತೆರಿಗೆಯನ್ನು ಸಹ ಕಟ್ಟಿಯೇ ಅವರು ಅಂಕಿತ ನೀಡುತ್ತಿದ್ದಾರೆ, ಜೊತೆಗೆ ನೂತನ ಗ್ರಾಮ ಪಂಚಾಯಿತಿ ಕಾರ್ಯಲಯವು ಸಹ ತುಂಬಾ ಚೆನ್ನಾಗಿದ್ದು, ಸಕಲ ಸೌಕರ್ಯವನ್ನು ಹೊಂದಿದೆ.
ಇನ್ನು ಈ ಗ್ರಾಮ ಪಂಚಾಯಿತಿಯ ಸದಸ್ಯರು, ಅಧ್ಯಕ್ಷರು ಮಾತ್ರ ಕಣ್ಣಿದ್ದರೂ ಕುರುಡರಂತೆ ವರ್ತಿಸುತ್ತಿರುವುದು ಮಾತ್ರ ಶೋಚನೀಯ ಸಂಗತಿ, ಏಕೆಂದರೆ ಗ್ರಾಮ ಪಂಚಾಯಿತಿಯ ಎದುರುಗಡೆಯೇ ಅವ್ಯವಸ್ಥೆಯ ಗೂಡಾಗಿದೆ, ಇದರಿಂದ ಊರುಕೆರೆಯ ಹೊಸ ಬಡಾವಣೆಗಳ ನಿವಾಸಿಗಳಿಗೆ ಬೇಸರ ಮೂಡಿಸಿರುವುದಲ್ಲದೇ ಪಂಚಾಯಿತಿಯ ಮೇಲೆ ಅಸಹ್ಯ ಹುಟ್ಟಿಸುವಂತೆ ಮಾಡಿದೆ, ಜೊತೆಗೆ ದಿನನಿತ್ಯ ಪಂಚಾಯಿತಿಗೆ ಶಾಪ ಹಾಕಿಕೊಂಡು, ಒಳಗೊಳಗೆ ಬೈದಾಡಿಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದೆ.
ಹೌದು ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರೇ ಕೆಸರು ಗದ್ದೆಯಂತಾಗಿದೆ, ಈ ಭಾಗದಲ್ಲಿ ಓಡಾಡುವ ಜನರು ಇಲ್ಲಿರುವ ಗುಂಡಿಗಳಿAದ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಹ ಸ್ಥಿತಿ ಬಂದಿದೆ, ಇನ್ನು ಇದೀಗ ಮಳೆಗಾಲ ಶುರುವಾಗಿದೆ, ಈಗಲಂತೂ ಈ ಗುಂಡಿಗಳಲ್ಲಿ ನೀರು ತುಂಬಿರುತ್ತದೆ, ಯಾವ ಗುಂಡಿ ಎಷ್ಟು ಆಳ ಇದೆ ಎಂಬುದೇ ಗೊತ್ತಾಗದ ಹಾಗೆ ಇರುತ್ತದೆ ಇನ್ನು ಎಷ್ಟೋ ಜನ ಈ ಗುಂಡಿಗಳೊಳಗೆ ಬಿದ್ದು ಎದ್ದು ಪಂಚಾಯಿತಿಗೆ ಶಾಪಾ ಹಾಕಿಕೊಂಡು ಓಡಾಡುತ್ತಿದ್ದಾರೆ, ರಾತ್ರಿಯೊತ್ತಂತೂ ಈ ಗುಂಡಿಗಳು ಯಮ ಕಿಂಕರರAತೆ ಗೋಚರಿಸುತ್ತವೆ, ಏಕೆಂದರೆ ಈ ಭಾಗಗಳಲ್ಲಿ ಸರಿಯಾದ ಬೀದಿ ದೀಪದ ವ್ಯವಸ್ಥೆಯಾಗಲೀ, ರಸ್ತೆ (ಪಕ್ಕಾ ರಸ್ತೆಯಲ್ಲದೇ ಹೋದರೂ ಕಚ್ಛಾ ರಸ್ತೆಯೂ ಇರುವುದಿಲ್ಲ) ಯಮ ಸ್ವರೂಪಿಯಾದ ಈ ಗುಂಡಿಗಳು ತಮ್ಮ ಬಲಿಗಾಗಿ ಬಾಯಿ ತೆರೆದು ನಿಂತಿರುತ್ತವೆ.
ಇನ್ನು ಈ ಪಂಚಾಯಿತಿಗೆ ಹಲವಾರು ಜನ ಸಾರ್ವಜನಿಕರು ರಸ್ತೆ ಮತ್ತು ಮೂಲ ಸೌಕರ್ಯಗಳಿಗಾಗಿ ಮೌಖಿಕವಾಗಿ, ಲಿಖಿತ ರೂಪವಾಗಿ ಸಾಕಷ್ಟು ಭಾರಿ ಮನವಿ ಮಾಡಿದ್ದರೂ ಸಹ ಪ್ರಯೋಜನವಾಗಿಲ್ಲ, ಜೊತೆಗೆ ಹಾಲಿ ಅಧ್ಯಕ್ಷರು ಸಿದ್ಧಲಿಂಗಸ್ವಾಮಿಯವರು ನವ ಉತ್ಸಾಹಿ ಯುವಕ ಎಂದೇ ಬಿಂಬಿತವಾಗಿದ್ದರು (ಈ ಮೊದಲು), ಆದರೆ ಆತ ಅಧ್ಯಕ್ಷನಾದ ಮೇಲೆ ಉತ್ಸಾಹ ಕಡಿಮೆ ಆಯಿತೇನೋ ಗೊತ್ತಿಲ್ಲ, ಏಕೆಂದರೆ ಸ್ವಾಮಿ ಅಧ್ಯಕ್ಷನಾದ ಹೊಸದರಲ್ಲಿ ತಾನು ಈ ಭಾಗವನ್ನು ಸಂಪೂರ್ಣವಾಗಿ ಬದಲಾವಣೆ ಮಾಡುತ್ತೇನೆ, ತಾನೊಬ್ಬ ಮಾದರಿ ಅಧ್ಯಕ್ಷನಾಗುತ್ತೇನೆ ಎಂತೆಲ್ಲಾ ಹೇಳಿದ್ದೂ ಸಹ ಉಂಟು ಆದರೆ ಅದೆಲ್ಲ ಪೊಳ್ಳು ಭರವಸೆಯಾಗಿಯೇ ಉಳಿದಿದೆ.
ಈ ಹಿಂದೆ ಅಂದರೆ ಕಳೆದ ಎರಡು ಮೂರು ವರ್ಷಗಳಿಂದ ಕೆಲವು ಸದಸ್ಯರು ಹೇಳುತ್ತಾ ಬಂದಿದ್ದು ಏನೆಂದರೆ ಊರುಕೆರೆ ಪಂಚಾಯಿತಿಯು ಬಿಜೆಪಿ ಪಕ್ಷದ ಬೆಂಬಲಿತ ಪಂಚಾಯಿತಿಯಾಗಿದೆ, ಗ್ರಾಮಾಂತರ ಶಾಸಕರು ಜೆಡಿಎಸ್ ಪಕ್ಷದವರಾಗಿದ್ದು, ಅವರು ಈ ಭಾಗಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ, ನಾವು ಏನು ಮಾಡೋದು, ಪಂಚಾಯಿತಿಯಲ್ಲಿಯೂ ಸಹ ಹಣವಿಲ್ಲ ಎಲ್ಲಿಂದ ತರೋಣ ಎಂದು ಹೇಳುತ್ತಿದ್ದರು, ಆದರೆ ಇದೀಗ ಬಿಜೆಪಿ ಅಭ್ಯರ್ಥಿಯಾದ ಸುರೇಶ್ ಗೌಡ ಅವರೇ ಗ್ರಾಮಾಂತರ ಶಾಸಕರಾಗಿ ಆಡಳಿತಕ್ಕೆ ಬಂದಿದ್ದಾರೆ ಅವರನ್ನು ಕೇಳಿ ಅನುದಾನ ಹಾಕಿಸಿಕೊಳ್ಳಿ ಎಂದು ಕೇಳಿದರೆ ಏನೇನೋ ಕುಂಟು ನೆಪಗಳನ್ನು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ.
ಇನ್ನು ಈ ಕುರಿತು ಹಾಲಿ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮಿಯವರು ಏನು ಹೇಳ್ತಾರೆ ಅಂದರೆ ಪಂಚಾಯಿತಿಯಲ್ಲಿ ದುಡ್ಡು ಇಲ್ಲ ನಾವು ಹೇಗೆ ಮಾಡಿಸೋಣ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ, ಒಮ್ಮೆ ಇದೇ ಅಧ್ಯಕ್ಷರು ಮನಸ್ಸು ಮಾಡಿದರೆ ಅವರದೇ ಸ್ವಂತ ಕ್ರಷರ್ ಇದೆ, ಆ ಕ್ರಷರ್‌ನಲ್ಲಿ ಸಂಗ್ರಹವಾಗಿರುವ ವೇಸ್ಟ್ ಆಗಿರುವ ಮಣ್ಣನ್ನು ಇಲ್ಲಿ ತಂದು ಸುರಿಸಿದ್ದರೂ ಸಹ ಈ ಭಾಗದ ಗುಂಡಿಗಳು ಎಂದೋ ಮುಚ್ಚಿ ಹೋಗುತ್ತಿದ್ದವು, ಅವರಿಗೆ ಕೆಲಸ ಮಾಡುವ ಹುಮ್ಮಸ್ಸು ಇಲ್ಲ, ಬರೀ ಅಧಿಕಾರದ ದಾಹ ಎಂಬAತೆ ಕಾಣುತ್ತಿದೆ.
ಎಲ್ಲರಿಗೂ ಅಧಿಕಾರ ಬೇಕೇ ಹೊರತು, ಜನರಿಗೆ ಕೆಲಸ ಮಾಡಿಕೊಡಬೇಕು ಎನ್ನುವ ಹಂಬಲವಿಲ್ಲ, ಜನರ ತೆರಿಗೆ ಹಣವನ್ನು ತಮ್ಮ ಖರ್ಚಿಗೆ ಬೇಕೇ ಹೊರತು, ಜನರಿಗಾಗಿ ಒಳಿತು ಮಾಡಬೇಕು ಎನ್ನುವ ಹುಮ್ಮಸ್ಸು ಇಲ್ಲ, ಜನರ ವೋಟು ಬೇಕೇ ಹೊರತು, ಜನರ ಹಿತಕಾಪಾಡುವ ಮನಸ್ಸು ಇಲ್ಲ. ಇಂತಹ ದುರಾಡಳಿತದಲ್ಲಿ ನಾವುಗಳು ಜೀವನ ಮಾಡಬೇಕಾಗಿದೆ.

(Visited 1 times, 1 visits today)
tumkur
Previous Articleಜೈನಮುನಿ ಹತ್ಯೆ : ಹಂತಕರನ್ನು ಬಂಧಿಸಲು ಪ್ರತಿಭಟನೆ
Next Article ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು
News Desk Benkiyabale

Related Posts

ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ

June 20, 2026 5:11 pm news

ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!

June 20, 2026 5:08 pm news

ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು

June 20, 2026 5:06 pm news
ತಾಜಾ ಸುದ್ಧಿಗಳು

ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ

June 20, 2026 5:11 pm

ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!

June 20, 2026 5:08 pm

ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು

June 20, 2026 5:06 pm

ಹಾಸ್ಟೆಲ್ ಮಕ್ಕಳಿಗೆ ಸಮಸ್ಯೆಯಾದರೆ ಅಧಿಕಾರಿಗಳ ಮೇಲೆ ಕ್ರಮ

June 20, 2026 5:03 pm

ಅಪ್ರತಿಮ ಧೈರ್ಯ, ಶೌರ್ಯದ ವನಿತೆ ರಾಣಿ ಲಕ್ಷಿ÷್ಮÃಭಾಯಿ

June 19, 2026 4:59 pm

ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗೆ ಕಾರಣವಾದ ನೀಟ್

June 19, 2026 4:51 pm
Our Youtube Channel
Our Picks

ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ

June 20, 2026 5:11 pm

ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!

June 20, 2026 5:08 pm

ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು

June 20, 2026 5:06 pm

ಹಾಸ್ಟೆಲ್ ಮಕ್ಕಳಿಗೆ ಸಮಸ್ಯೆಯಾದರೆ ಅಧಿಕಾರಿಗಳ ಮೇಲೆ ಕ್ರಮ

June 20, 2026 5:03 pm

ಅಪ್ರತಿಮ ಧೈರ್ಯ, ಶೌರ್ಯದ ವನಿತೆ ರಾಣಿ ಲಕ್ಷಿ÷್ಮÃಭಾಯಿ

June 19, 2026 4:59 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumkur news tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ

By News Desk BenkiyabaleJune 20, 2026 5:11 pm

ತುಮಕೂರು: ನಗರದ ೩೧ನೇ ವಾರ್ಡಿನ ಜಯನಗರ ಪಶ್ಚಿಮ ಬಡಾವಣೆಯ ೧ನೇ ಮುಖ್ಯರಸ್ತೆಯ ೩ನೇ ಅಡ್ಡರಸ್ತೆಯಲ್ಲಿರುವ ಪಾರ್ಕ್ (ಉದ್ಯಾನವನ) ಜಾಗದಲ್ಲಿ ‘ನಮ್ಮ…

ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!

June 20, 2026 5:08 pm

ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು

June 20, 2026 5:06 pm

ಹಾಸ್ಟೆಲ್ ಮಕ್ಕಳಿಗೆ ಸಮಸ್ಯೆಯಾದರೆ ಅಧಿಕಾರಿಗಳ ಮೇಲೆ ಕ್ರಮ

June 20, 2026 5:03 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.