ತುಮಕೂರು:


ಕ್ರಿಯೇಟಿವ್ ೫ ಇವೆಂಟ್ಸ್ ಕಂಪೆನಿಯ ಹೆಸರನ್ನು ದುರುಪಯೋಗ ಪಡಿಸಿಕೊಂಡು, ಆಡಿಷನ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದವರ ಮೇಲೆ ತಿಲಕ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕ್ರಿಯೇಟಿವ್ ೫ ಇವೆಂಟ್ಸ್ ಸಂಸ್ಥೆಯನ್ನು ಪತ್ರಕರ್ತ ಧನಂಜಯ್ ಅವರನ್ನು ನೋಂದಣಿ ಮಾಡಿಸಿದ್ದು, ಲೇಬಲ್ ರಿಜಿಸ್ಟೆçÃಷನ್ ಟ್ರೇಡ್ ಮಾರ್ಕ್ ಹಾಗೂ ಲೋಗೊ ರಿಜಿಸ್ಟೆçÃಷನ್ ಆಗಿದ್ದರು ಸಹ, ಸಂಸ್ಥೆಯ ಲೋಗೋ ಹಾಗೂ ಹೆಸರನ್ನು ದುರುಪಯೋಗಪಡಿಸಿಕೊಂಡು ಬೆಂಗಳೂರು ಮೂಲದ ಅರ್ಪಿತಾ ದೇವ್ ಜೈನ್, ತುಮಕೂರಿನ ದಿವ್ಯಾನಿ ಜೈನ್ ಫಾನೇಶ್ ಮತ್ತು ಇತರರು ಫ್ಯಾಷನ್ ಶೋ ಆಡಿಷನ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಬೆAಗಳೂರಿನಲ್ಲಿ ಆಡಿಷನ್ ಮಾಡುವ ಮೂಲಕ ಸಂಸ್ಥೆಯ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದು, ೦೭/೦೪/೨೦೨೪ರಂದು ನಗರದ ಹಟ್ ಹೋಟೇಲ್‌ನಲ್ಲಿ ಫ್ಯಾಷನ್ ಶೋ ಆಡಿಷನ್ ಕರೆದಿದ್ದು, ಇನ್‌ಸ್ಟಾ, ಫೇಸ್‌ಬುಕ್ ಮೂಲಕ ಪ್ರಚಾರ ಮಾಡಿ, ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡಿ ಅದನ್ನು ಸಂಸ್ಥೆಯ ಮೇಲೆ ಹೊರಿಸಲು ಕುತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅರ್ಪಿತಾ ದೇವ್ ಜೈನ್, ತುಮಕೂರಿನ ದಿವ್ಯಾನಿ ಜೈನ್, ಜ್ಞಾನೇಶ್ ಮತ್ತು ಇತರರ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕೆಂದು ತಿಲಕ್‌ಪಾರ್ಕ್ ಠಾಣೆಗೆ ನೀಡಿರುವ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

(Visited 1 times, 1 visits today)
FacebookTwitterInstagramFacebook MessengerEmailSMSTelegramWhatsapp