BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’
  • ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ
  • ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ
  • ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ಕೆಲಸ ಮಾಡಿ
  • ಹತ್ತು ವರ್ಷಗಳಿಂದ ಈಡೇರದ ಬೇಡಿಕೆ
  • ಕೆಮಿಕಲ್ ಮೇವು ತಿಂದ ೬೨ ಕುರಿಗಳು ಸ್ಥಳದಲ್ಲಿಯೇ ಸಾವು
  • ಸಂಭ್ರಮದ ಸ್ವಾತಂತ್ರೊತ್ಸವಕ್ಕೆ ಸಿದ್ಧತೆ
  • ಶಾಲಾ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ನಿರಾಸಕ್ತಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪ್ರತಿ ಮನೆಯಲ್ಲೂ ಅಂಬೇಡ್ಕರ್ ಜನಿಸಬೇಕು
ಕರ್ನಾಟಕ ಸುದ್ಧಿಗಳು

ಪ್ರತಿ ಮನೆಯಲ್ಲೂ ಅಂಬೇಡ್ಕರ್ ಜನಿಸಬೇಕು

By News Desk BenkiyabaleUpdated:December 06, 2024 6:26 pm

ತುಮಕೂರು : ವಿಶ್ವಕ್ಕೆ ಮಾನವೀಯತೆ ಮತ್ತು ಸಮಾನತೆಯ ಸಂದೇಶ ಸಾರಿದ ಡಾ: ಬಿ.ಆರ್. ಅಂಬೇಡ್ಕರ್ ಅವರ ಆದರ್ಶ ಗುಣಗಳುಳ್ಳ ವ್ಯಕ್ತಿಗಳು ಪ್ರತಿ ಮನೆಯಲ್ಲೂ ಜನಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿAದು ಜರುಗಿದ ಡಾ.ಬಿ.ಆರ್. ಅಂಬೇಡ್ಕರ್ ಅವರ 68ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯಂತ ಕಡು ಬಡತನದಲ್ಲಿ ಹುಟ್ಟಿ ಅಸ್ಪೃಶ್ಯತೆ, ಅಸಮಾನತೆ, ಮಹಿಳಾ ಅಸಮಾನತೆ ವಿರುದ್ಧ ಹೋರಾಡಿ ಸಮ ಸಮಾಜ ನಿರ್ಮಾಣ ಮಾಡಲು ತಮ್ಮ ಜೀವನವನ್ನೇ ಸವೆಸಿ ದನಿ ಇಲ್ಲದವರಿಗೆ ದನಿಯಾಗಿದ್ದ ಅಂಬೇಡ್ಕರ್ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ದಿನ-ದಲಿತರಿಗೆ, ನೊಂದವರಿಗೆ ಪ್ರತ್ಯಕ್ಷ ದೇವರಾಗಿ ಕಾಣುವ ಮೂಲಕ ಅವರ ಪುಣ್ಯ ಸ್ಮರಣೆಯನ್ನು ಪರಿನಿರ್ವಾಣ ದಿನವೆಂದು ಆಚರಿಸಲಾಗುತ್ತದೆ. ಏಷ್ಯದ ಉಪ ಖಂಡದAತಿರುವ ನಮ್ಮ ದೇಶದಲ್ಲಿ ಹಲವು ವೈವಿಧ್ಯತೆಗಳನ್ನು ಏಕೀಕರಣಗೊಳಿಸಿ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದ್ದಾರೆ. ತಮ್ಮ ಅನುಭವದ ರಸಗಟ್ಟಿಯಿಂದ ಸಂವಿಧಾನದಲ್ಲಿ ಮಾನವೀಯ ಮೌಲ್ಯಗಳಿಗೆ ಒತ್ತು ನೀಡುವ ಮೂಲಕ ಪ್ರತಿ ಭಾರತೀಯ ಪ್ರಜೆಗೆ ಆತ್ಮ ವಿಶ್ವಾಸ ತಂದುಕೊಟ್ಟಿದ್ದಾರೆ. ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ಮತ್ತು ಸಮಾಜದಿಂದ ಹಿಂದೆ ಉಳಿದುಕೊಂಡಿದ್ದ ಅನೇಕ ಸಮುದಾಯಗಳು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿAದ ಬದುಕನ್ನು ಕಟ್ಟಿಕೊಂಡಿವೆ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ ಮಾತನಾಡಿ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿAದ ನಾವೆಲ್ಲರೂ ಸಮಾಜದಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದೇವೆ. ಪ್ರತಿಯೊಬ್ಬರಿಗೂ ಸಮಾನ ನ್ಯಾಯವನ್ನು ಒದಗಿಸುವುದು, ಎಲ್ಲರಿಗೂ ನ್ಯಾಯವನ್ನು ದೊರಕಿಸಿಕೊಡುವುದೇ ಸಂವಿಧಾನದ ಆಶಯವಾಗಿದೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ ತಲಾ ತಲಾಂತರದಿAದ ಬಂದ ಅನಿಷ್ಟ ಪದ್ಧತಿಗಳನ್ನು ಸಮಾಜದಿಂದ ಕಿತ್ತೊಗೆಯಲು ಇಡೀ ವ್ಯವಸ್ಥೆಯನ್ನೇ ಎದುರು ಹಾಕಿಕೊಳ್ಳುವ ಮೂಲಕ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವಂತೆ ಮಾಡಿದವರು ಡಾ: ಬಿ.ಆರ್. ಅಂಬೇಡ್ಕರ್. ಭಾರತದ ಧಾರ್ಮಿಕ ವ್ಯವಸ್ಥೆ, ಜಾತಿ ವ್ಯವಸ್ಥೆ ಮತ್ತು ಪುರುಷ ಪ್ರಧಾನ ವ್ಯವಸ್ಥೆಯಿಂದ ಸ್ವತಂತ್ರವಾಗಿ ಉಸಿರಾಡಲು ಸಹ ಆಗದ ಸ್ಥಿತಿಯಲ್ಲಿ ಸಿಲುಕಿದ್ದ ಜನರನ್ನು ಸಂಕೋಲೆಯಿAದ ಬಿಡಿಸಿದ ಅವರ ಮಾನವೀಯತೆಯ ವಿಚಾರಧಾರೆಗಳು ಪ್ರಪಂಚಕ್ಕೆ ಪಸರಿಸಿವೆ. ಸಂವಿಧಾನದ ಮೂಲಕ ಸರ್ವರಿಗೂ ಸಮಬಾಳು ಸಮಪಾಲು ಎಂಬ ನ್ಯಾಯವನ್ನು ಒದಗಿಸಿದ ಅವರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸದೆ, ಅವರ ವಿಚಾರಧಾರೆಗಳನ್ನು ಅರಿತು ಬಾಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ನಿರಂಜನ್, ನಿರೂಪಣಾಧಿಕಾರಿ ದಿನೇಶ್, ಸೇರಿದಂತೆ ದಲಿತ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

(Visited 1 times, 1 visits today)
68ನೇ ಪುಣ್ಯ ಸ್ಮರಣೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ಬಿ.ಆರ್. ಅಂಬೇಡ್ಕರ್
Previous Articleಮುಗಿಯದ ಶೌಚಾಲಯ ಕಾಮಗಾರಿ: ಆಕ್ರೋಶ
Next Article ಸಮಾನತೆಯಿಲ್ಲದ ದೇಶ ಎಂದಿಗೂ ಸ್ವತಂತ್ರವಲ್ಲ’
News Desk Benkiyabale

Related Posts

ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’

July 17, 2026 5:21 pm news

ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ

July 17, 2026 5:19 pm news

ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ

July 17, 2026 5:18 pm news
ತಾಜಾ ಸುದ್ಧಿಗಳು

ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’

July 17, 2026 5:21 pm

ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ

July 17, 2026 5:19 pm

ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ

July 17, 2026 5:18 pm

ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ಕೆಲಸ ಮಾಡಿ

July 17, 2026 5:26 pm

ಹತ್ತು ವರ್ಷಗಳಿಂದ ಈಡೇರದ ಬೇಡಿಕೆ

July 17, 2026 5:01 pm

ಕೆಮಿಕಲ್ ಮೇವು ತಿಂದ ೬೨ ಕುರಿಗಳು ಸ್ಥಳದಲ್ಲಿಯೇ ಸಾವು

July 17, 2026 4:59 pm
Our Youtube Channel
Our Picks

ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’

July 17, 2026 5:21 pm

ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ

July 17, 2026 5:19 pm

ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ

July 17, 2026 5:18 pm

ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ಕೆಲಸ ಮಾಡಿ

July 17, 2026 5:26 pm

ಹತ್ತು ವರ್ಷಗಳಿಂದ ಈಡೇರದ ಬೇಡಿಕೆ

July 17, 2026 5:01 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’

By News Desk BenkiyabaleJuly 17, 2026 5:21 pm

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯವನ್ನು ರಾಷ್ಟçಮಟ್ಟದಲ್ಲಿ ಕೀರ್ತಿಯ ಶಿಖರಕ್ಕೆ ಏರಿಸಿರುವ ಪ್ರೊ. ಎಂ. ವೆಂಕಟೇಶ್ವರಲು ಅವರ ಕಾರ್ಯ ವೈಖರಿ ಹೆಮ್ಮೆಯ ವಿಚಾರ.…

ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ

July 17, 2026 5:19 pm

ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ

July 17, 2026 5:18 pm

ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ಕೆಲಸ ಮಾಡಿ

July 17, 2026 5:26 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.