BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಗೂಬೆಹಳ್ಳಿ ಗ್ರಾಮದಲ್ಲಿ ಆರ್ಥಿಕ ಸೇರ್ಪಡೆ ಕಾರ್ಯಕ್ರಮ
  • ಅಪ್ಪು ನಮ್ಮೊಂದಿಗೆ ಸದಾ ಅಜರಾಮರ: ಅಭಿಮಾನಿಗಳ ಭಾವಪೂರ್ಣ ನುಡಿ
  • ಪತ್ರಿಕೋದ್ಯಮದಲ್ಲಿ ಭಾಷಾಂತರ ಕೌಶಲ್ಯಕ್ಕೆ ಮಹತ್ವ
  • ದಸೂಡಿ ಪಂಚಾಯಿತಿ ಮುತ್ತಿಗೆ ಹಾಕಿದ ಗ್ರಾಮಸ್ಥರು
  • ಏಕೀಕರಣಕ್ಕೆ ಶ್ರಮಿಸಿದ ಮಹನೀಯರು ಸ್ಮರಣೀಯ: ಜ್ಯೋತಿಗಣೇಶ್
  • ಕನಿಷ್ಠ ಕೂಲಿ ಜಾರಿಗೇಕೆ ನ್ಯಾಯಾಂಗ ಅಡ್ಡಿ
  • ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ
  • 2028ರ ವಿಧಾನಸಭಾ ಚುನಾವಣೆಯಲ್ಲೂ ಎನ್‍ಡಿಎ ಸರ್ಕಾರ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವಿಕಲಚೇತನರು ಆತ್ಮಬಲ, ಸಾಧನೆ ಛಲ ರೂಡಿಸಿಕೊಳ್ಳಿ
ಕರ್ನಾಟಕ ಸುದ್ಧಿಗಳು

ವಿಕಲಚೇತನರು ಆತ್ಮಬಲ, ಸಾಧನೆ ಛಲ ರೂಡಿಸಿಕೊಳ್ಳಿ

By News Desk BenkiyabaleUpdated:December 10, 2024 6:35 pm

ತುಮಕೂರು: ವಿಕಲ ಚೇತನರು ತಮ್ಮ ವಿಕಲತೆಯನ್ನು ಮೆಟ್ಟಿನಿಂತು ಆತ್ಮಬಲ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಛಲ ರೂಢಿಸಿಕೊಳ್ಳಿ. ತಮ್ಮ ಅಂಗವೈಫಲ್ಯವನ್ನು ಸವಾಲಾಗಿ ಸ್ವೀಕರಿಸಿ ಸಾಧಿಸಿರಿ. ಈ ಪ್ರಯತ್ನದಲ್ಲಿ ಹಲವರು ಯಶಸ್ವಿಯಾಗಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಮಹಾಲಕ್ಷಿö್ಮ ಬಡಾವಣೆಯ ದಾರಿದೀಪ ಟ್ರಸ್ಟ್ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ದೇವರು ಒಂದನ್ನು ಕಿತ್ತುಕೊಂಡರೆ ಇನ್ನೊಂದನ್ನು ಕೊಡುತ್ತಾನೆ ಎನ್ನುವಂತೆ ವಿಕಲಚೇತನರ ಅಂಗವನ್ನು ಕಿತ್ತುಕೊಂಡರೆ ಅವರಲ್ಲಿ ಅಗಾಧವಾದ ಬುದ್ಧಿಶಕ್ತಿ, ನೈತಿಕ ಬಲವನ್ನು ನೀಡಿರುತ್ತಾನೆ. ಅದರ ಮೂಲಕ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ವಿಕಲ ಚೇತನರು ಯಾರಿಗೂ ಹೊರೆಯಲ್ಲ, ಅವರಿಂದ ಸಮಸ್ಯೆಯೂ ಇಲ್ಲ. ಆದರೆ ಎಲ್ಲಾ ಅಂಗಗಳು ಚೆನ್ನಾಗಿದ್ದು ಮನಸನ್ನು ವಿಕೃತಗೊಳಿಸಿಕೊಂಡಿರುವ ಮನೋವಿಕಲರಿಂದ ಸಮಾಜಕ್ಕೆ ಅಪಾಯವೇ ಹೆಚ್ಚು. ಅನುಕೂಲ ಇರುವವರು ವಿಕಲಚೇತನರಿಗೆ ನೆರವಾಗಬೇಕು. ತುಮಕೂರಿನಲ್ಲಿ ಸಹಾಯಾಸ್ತ ಚಾಚುವವರಿಗೆ ಕೊರತೆಯಿಲ್ಲ, ಸಹಾಯದ ಮೂಲಕ ಅವರ ಆತ್ಮವಿಶ್ವಾಸ ಹೆಚ್ಚಿಸಲಿ, ಪರಸ್ಪರ ನೆರವಾಗುವ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಪ್ರೀತಿ, ವಿಶ್ವಾಸ ಬೆಳೆಸಿಕೊಳ್ಳಬೇಕು. ಧರ್ಮದ ಸಿದ್ಧಾಂತವೂ ಇದೇ ಆಗಿದೆ ಎಂದು ಹೇಳಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ದಾರಿದೀಪ ಟ್ರಸ್ಟ್ನ ಸೇವಾಕಾರ್ಯ ಶ್ಲಾಘನೀಯ, ವಿಕಲಚೇತನರಾಗಿದ್ದರೂ ಆತ್ಮವಿಶ್ವಸದಿಂದ ಬದುಕು ಕಟ್ಟಿಕೊಂಡು ಸಂಸ್ಥೆ ಸ್ಥಾಪಿಸಿ ಅಂಧರ ಬದುಕಿಗೆ ಬೆಳಕಾಗಿರುವ ಸಂಸ್ಥೆಯ ಡಾ.ಶಿವಕುಮಾರ್ ಮತ್ತು ಅವರ ಬಳಗದ ಸೇವೆ ಶ್ಲಾಘನೀಯ. ಸಂಸ್ಥೆ ನಡೆಯುತ್ತಿರುವ ಈ ಕಟ್ಟಡವನ್ನು ಖರೀದಿಸಿ ಟ್ರಸ್ಟ್ ಹೆಸರಿಗೆ ನೀಡಬೇಕು, ಇದಕ್ಕೆ ದಾನಿಗಳು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸಂಸ್ಥೆಯ ಮಕ್ಕಳಿಗೆ ಪಠ್ಯಪರಿಕರ ಹಾಗೂ ವಿವಿಧ ಸಾಮಗ್ರಿಗಳನ್ನು ದಾನಿಗಳು ನೀಡಿ ನೆರವಾದರು. ಜೊತೆಗೆ ಈ ಸಾಲಿನಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ವಿವಿಧ ಸಹಕಾರ ಸಂಘಗಳ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು. ನಗರಪಾಲಿಕೆ ಮಾಜಿ ಸದಸ್ಯೆ ಗಿರಿಜಾ ಧನಿಯಾಕುಮಾರ್, ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಪರಿಸರ ಪ್ರೇಮಿ ಬೇವಿನಮರದ ಪ್ರೊ.ಸಿದ್ದಪ್ಪ, ನೇತಾಜಿ ಯುವಕರ ಸಂಘದ ಅಧ್ಯಕ್ಷ ನೇತಾಜಿ ಶ್ರೀಧರ್, ಭಗತ್ ಕ್ರಾಂತಿ ಸೇನೆಯ ಚೇತನ್, ಸಿದ್ಧಗಂಗಾ ಅಂಧರ ಮಕ್ಕಳ ಶಾಲೆಯ ಚಂದ್ರಶೇಖರಯ್ಯ, ಮುಖಂಡರಾದ ಜಯರಾಮೇಗೌಡ, ಭಾಗವಹಿಸಿದ್ದರು.

(Visited 1 times, 1 visits today)
ಕನ್ನಡ ಸೇನೆ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ದಾರಿದೀಪ ಟ್ರಸ್ಟ್ನ
Previous Articleರಾಮಾಯಣ ಮರುಹುಟ್ಟುಗಳ ಮಹಾಕಾವ್ಯ: ಪ್ರೊ. ಬರಗೂರು ರಾಮಚಂದ್ರಪ್ಪ
Next Article ಎಸ್‌ಎಂಕೆ ನಿಧನಕ್ಕೆ ಸಂತಾಪ
News Desk Benkiyabale

Related Posts

ಗೂಬೆಹಳ್ಳಿ ಗ್ರಾಮದಲ್ಲಿ ಆರ್ಥಿಕ ಸೇರ್ಪಡೆ ಕಾರ್ಯಕ್ರಮ

October 30, 2026 5:44 pm news

ಅಪ್ಪು ನಮ್ಮೊಂದಿಗೆ ಸದಾ ಅಜರಾಮರ: ಅಭಿಮಾನಿಗಳ ಭಾವಪೂರ್ಣ ನುಡಿ

October 30, 2026 5:43 pm news

ಪತ್ರಿಕೋದ್ಯಮದಲ್ಲಿ ಭಾಷಾಂತರ ಕೌಶಲ್ಯಕ್ಕೆ ಮಹತ್ವ

October 30, 2026 5:41 pm news
ತಾಜಾ ಸುದ್ಧಿಗಳು
news

ಗೂಬೆಹಳ್ಳಿ ಗ್ರಾಮದಲ್ಲಿ ಆರ್ಥಿಕ ಸೇರ್ಪಡೆ ಕಾರ್ಯಕ್ರಮ

October 30, 2026 5:44 pm
news

ಅಪ್ಪು ನಮ್ಮೊಂದಿಗೆ ಸದಾ ಅಜರಾಮರ: ಅಭಿಮಾನಿಗಳ ಭಾವಪೂರ್ಣ ನುಡಿ

October 30, 2026 5:43 pm
news

ಪತ್ರಿಕೋದ್ಯಮದಲ್ಲಿ ಭಾಷಾಂತರ ಕೌಶಲ್ಯಕ್ಕೆ ಮಹತ್ವ

October 30, 2026 5:41 pm
news

ದಸೂಡಿ ಪಂಚಾಯಿತಿ ಮುತ್ತಿಗೆ ಹಾಕಿದ ಗ್ರಾಮಸ್ಥರು

October 30, 2026 5:39 pm
news

ಏಕೀಕರಣಕ್ಕೆ ಶ್ರಮಿಸಿದ ಮಹನೀಯರು ಸ್ಮರಣೀಯ: ಜ್ಯೋತಿಗಣೇಶ್

October 30, 2026 5:38 pm
news

ಕನಿಷ್ಠ ಕೂಲಿ ಜಾರಿಗೇಕೆ ನ್ಯಾಯಾಂಗ ಅಡ್ಡಿ

October 30, 2026 5:36 pm
Our Youtube Channel
Our Picks

ಗೂಬೆಹಳ್ಳಿ ಗ್ರಾಮದಲ್ಲಿ ಆರ್ಥಿಕ ಸೇರ್ಪಡೆ ಕಾರ್ಯಕ್ರಮ

October 30, 2026 5:44 pm

ಅಪ್ಪು ನಮ್ಮೊಂದಿಗೆ ಸದಾ ಅಜರಾಮರ: ಅಭಿಮಾನಿಗಳ ಭಾವಪೂರ್ಣ ನುಡಿ

October 30, 2026 5:43 pm

ಪತ್ರಿಕೋದ್ಯಮದಲ್ಲಿ ಭಾಷಾಂತರ ಕೌಶಲ್ಯಕ್ಕೆ ಮಹತ್ವ

October 30, 2026 5:41 pm

ದಸೂಡಿ ಪಂಚಾಯಿತಿ ಮುತ್ತಿಗೆ ಹಾಕಿದ ಗ್ರಾಮಸ್ಥರು

October 30, 2026 5:39 pm

ಏಕೀಕರಣಕ್ಕೆ ಶ್ರಮಿಸಿದ ಮಹನೀಯರು ಸ್ಮರಣೀಯ: ಜ್ಯೋತಿಗಣೇಶ್

October 30, 2026 5:38 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಗೂಬೆಹಳ್ಳಿ ಗ್ರಾಮದಲ್ಲಿ ಆರ್ಥಿಕ ಸೇರ್ಪಡೆ ಕಾರ್ಯಕ್ರಮ

By News Desk BenkiyabaleOctober 30, 2026 5:44 pm

ಹುಳಿಯಾರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಕೇಂದ್ರ ಜಂಟಿಯಾಗಿ ಬೆಳಗುಲಿ ಗ್ರಾಮ ಪಂಚಾಯಿತಿ…

ಅಪ್ಪು ನಮ್ಮೊಂದಿಗೆ ಸದಾ ಅಜರಾಮರ: ಅಭಿಮಾನಿಗಳ ಭಾವಪೂರ್ಣ ನುಡಿ

October 30, 2026 5:43 pm

ಪತ್ರಿಕೋದ್ಯಮದಲ್ಲಿ ಭಾಷಾಂತರ ಕೌಶಲ್ಯಕ್ಕೆ ಮಹತ್ವ

October 30, 2026 5:41 pm

ದಸೂಡಿ ಪಂಚಾಯಿತಿ ಮುತ್ತಿಗೆ ಹಾಕಿದ ಗ್ರಾಮಸ್ಥರು

October 30, 2026 5:39 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.