BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ
  • ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು
  • ಮದರ್ ಥೆರೆಸಾರವರ ಜನ್ಮದಿನಾಚರಣೆ
  • ಮೈಸೂರಿನಿಂದ ಶಿರಡಿಗೆ ೧,೦೦೦ ಕಿ.ಮೀ ಸುದೀರ್ಘ ಯಾತ್ರೆ
  • ಅಪಘಾತವಲ್ಲ, ಅದು ಪೂರ್ವಯೋಜಿತ ಕೊಲೆ: ಗ್ರಾಮಸ್ಥರಿಂದ ಪ್ರತಿಭಟನೆ
  • ಬೆಂಗಳೂರಿನಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವ
  • ಅಡಿಕೆ ತೋಟದಲ್ಲಿ ಕಿಡಿಗೇಡಿಗಳ ಅಟ್ಟಹಾಸ: ಗಿಡಗಳು ನೆಲಸಮ
  • ಗ್ರಾಮ ದೇವತೆ ಅಮ್ಮನವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ರೈತರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬೇಕು
ತುಮಕೂರು ಜಿಲ್ಲಾ ಸುದ್ಧಿಗಳು

ರೈತರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬೇಕು

By News Desk BenkiyabaleUpdated:December 25, 2018 5:55 pm

ತುಮಕೂರು :

      ರೈತರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಒಳ್ಳೆಯ ಬೆಳೆ ಬೆಳೆದು ಆರ್ಥಿಕ ಮಟ್ಟ ಸುಧಾರಣೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಉಪಾಧ್ಯಕ್ಷ ರಂಗಸ್ವಾಮಯ್ಯ ತಿಳಿಸಿದರು.

      ತಾಲ್ಲೂಕಿನ ಕಂಬಳಾಪುರದಲ್ಲಿ ಐಡಿಎಫ್ ಸಂಸ್ಥೆ, ಕೊಲ್ಲಾಪುರದಮ್ಮ ರೈತ ಉತ್ಪಾದಕರ ಕಂಪನಿಯ ಹೆಬ್ಬೂರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಬರದ ಹಿನ್ನೇಲೆಯಲ್ಲಿ ಸರ್ಕಾರ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೂನ್ಯ ಬಂಡವಾಳ ಕೃಷಿ, ಕೃಷಿ ಯಂತ್ರಧಾರೆ, ಸಾವಯವ ಕೃಷಿ, ಕೃಷಿ ಭಾಗ್ಯ, ಇಸ್ರೇಲ್ ಮಾದರಿ ಕೃಷಿ ಹೀಗೆ ರೈತರಿಗೆ ಹತ್ತು ಹಲವು ಯೋಜನೆಗಳನ್ನ ಜಾರಿಗೆ ತಂದಿದ್ದು ಇವುಗಳ ಸದ್ಬಳಕೆಯನ್ನು ಪ್ರತಿಯೊಬ್ಬ ರೈತರು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವಲ್ಲಿ ಪ್ರಯತ್ನ ಮಾಡುವಲ್ಲಿ ಮುಂದಾಗಬೇಕು ಎಂದರು.

      ಕೊಲ್ಲಾಪುರದಮ್ಮ ರೈತ ಉತ್ಪಾದಕರ ಕಂಪನಿಯ ವ್ಯವಸ್ಥಾಪಕ ಡಿ.ಲೋಕೇಶ್ ಮಾತನಾಡಿ ಅವರು, ನೈಸರ್ಗಿಕ ಮತ್ತು ಸಾವಯವ ಕೃಷಿಯಿಂದ ರೈತರು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಜತೆಗೆ ಹೆಚ್ಚು ಆದಾಯವನ್ನು ಪಡೆಯಬಹುದು. ಐಡಿಎಫ್ ಸಂಸ್ಥೆಯು ಸುಸ್ಥಿರ ಮತ್ತು ಸಾವಯವ ಕೃಷಿಯ ಬಗ್ಗೆ ರೈತ ಕ್ಷೇತ್ರ ಪಾಠಶಾಲೆ ಮತ್ತು ವಿಡಿಯೋ ಚಿತ್ರಗಳ ಮೂಲಕ ರೈತರಿಗೆ ನಿರಂತರ ಮಾಹಿತಿ ನೀಡುತ್ತಾ ಬಂದಿದೆ. ರೈತರಿಗೆ ಹೈನುಗಾರಿಕೆ ಮತ್ತು ಕೃಷಿಗೆ ಪೂರಕವಾಗುವ ನಿಟ್ಟಿನಲ್ಲಿ ಕೆಲವು ನಾಟಿ ತಳಿ ಬಿತ್ತನೆ ಬೀಜ, ಕೃಷಿ ಉಪಕರಣ ಮತ್ತು ಪಶು ಆಹಾರವನ್ನು ಒದಗಿಸುತ್ತಿದ್ದು ರೈತರು ಇದರ ಉಪಯೋಗವನ್ನು ಮಾಡಿಕೊಂಡು ವ್ಯವ್ಯಸಾಯ ಮಾಡಬೇಕು ಎಂದರು.

     ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ರಂಗರಾಮಯ್ಯ, ಹಾಲು ಉತ್ಪಾದಕರ ಸಂಘ ಬ್ಯಾಟರಾಯಪ್ಪ, ರೈತ ಮುಖಂಡರಾದ ಗಂಗಣ್ಣ, ವೆಂಕಟರಂಗಯ್ಯ, ಕ್ಷೇತ್ರಾಧಿಕಾರಿಗಳಾದ ಕೆ.ಮಧುಸೂಧನ್, ಸಿ.ಮೋಹನ್‍ಕುಮಾರ್, ಹೆಚ್.ನರಸಿಂಹಮೂರ್ತಿ ಹಾಗೂ ಕೃಷಿಕರ ಸಂಘದ ಸದಸ್ಯರು ಭಾಗವಹಿಸಿದ್ದರು.

 

(Visited 41 times, 1 visits today)
Previous Articleಸಿದ್ದಗಂಗ ಶ್ರೀ ಗಳ ಬಗ್ಗೆ ಅಟಲ್‍ಜೀ ರವರಿಗೆ ಅಪಾರ ಗೌರವ – ಜಿ.ಎಸ್.ಬಸವರಾಜು
Next Article ಸೂಲಗಿತ್ತಿ ನರಸಮ್ಮ ನಿಧನ
News Desk Benkiyabale

Related Posts

ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ

August 28, 2026 5:44 pm news

ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು

August 28, 2026 5:12 pm news

ಮದರ್ ಥೆರೆಸಾರವರ ಜನ್ಮದಿನಾಚರಣೆ

August 28, 2026 5:11 pm news
ತಾಜಾ ಸುದ್ಧಿಗಳು
news

ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ

August 28, 2026 5:44 pm
news

ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು

August 28, 2026 5:12 pm
news

ಮದರ್ ಥೆರೆಸಾರವರ ಜನ್ಮದಿನಾಚರಣೆ

August 28, 2026 5:11 pm
news

ಮೈಸೂರಿನಿಂದ ಶಿರಡಿಗೆ ೧,೦೦೦ ಕಿ.ಮೀ ಸುದೀರ್ಘ ಯಾತ್ರೆ

August 28, 2026 5:09 pm
news

ಅಪಘಾತವಲ್ಲ, ಅದು ಪೂರ್ವಯೋಜಿತ ಕೊಲೆ: ಗ್ರಾಮಸ್ಥರಿಂದ ಪ್ರತಿಭಟನೆ

August 28, 2026 5:08 pm
news

ಬೆಂಗಳೂರಿನಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವ

August 28, 2026 5:06 pm
Our Youtube Channel
Our Picks

ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ

August 28, 2026 5:44 pm

ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು

August 28, 2026 5:12 pm

ಮದರ್ ಥೆರೆಸಾರವರ ಜನ್ಮದಿನಾಚರಣೆ

August 28, 2026 5:11 pm

ಮೈಸೂರಿನಿಂದ ಶಿರಡಿಗೆ ೧,೦೦೦ ಕಿ.ಮೀ ಸುದೀರ್ಘ ಯಾತ್ರೆ

August 28, 2026 5:09 pm

ಅಪಘಾತವಲ್ಲ, ಅದು ಪೂರ್ವಯೋಜಿತ ಕೊಲೆ: ಗ್ರಾಮಸ್ಥರಿಂದ ಪ್ರತಿಭಟನೆ

August 28, 2026 5:08 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ

By News Desk BenkiyabaleAugust 28, 2026 5:44 pm

ತುಮಕೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ.ಬಿ.ವಿ ಅವರು ಜಿಲ್ಲಾ ಪಂಚಾಯತಿಯಲ್ಲಿAದು ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್…

ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು

August 28, 2026 5:12 pm

ಮದರ್ ಥೆರೆಸಾರವರ ಜನ್ಮದಿನಾಚರಣೆ

August 28, 2026 5:11 pm

ಮೈಸೂರಿನಿಂದ ಶಿರಡಿಗೆ ೧,೦೦೦ ಕಿ.ಮೀ ಸುದೀರ್ಘ ಯಾತ್ರೆ

August 28, 2026 5:09 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.