
ತುಮಕೂರು: ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಬದಲಾವಣೆ ಮಾಡುತ್ತಿರುವುದು ಸಮಾಜವನ್ನು ಮುಂದೆ ಕೊಂಡು ಹೋಗುವ ಬದಲು ಹಿಮ್ಮುಖವಾಗಿ ಸಾಗಿ ಮತ್ತೆ ಗುಲಾಮಿ ಪದ್ದತಿಯನ್ನು ಸೃಷ್ಟಿಸುವ ನಿಟ್ಟಿನಲ್ಲಿದೆ ಎಂದು ಹಿರಿಯ ಹೈಕೋರ್ಟ ವಕೀಲರಾದ ಶ್ರೀ ಮುರಳಿಧರ ಪೇಶ್ವೆ ಅವರು ಅಭಿಪ್ರಾಯ ಪಟ್ಟರು. ಮುಂದುವರಿದು ಮಾತನಾಡಿದ ಅವರು ದುಡಿವ ಜನರ ಆರೋಗ್ಯ -ಸಾಮಾಜಿಕ ಜೀವನ ಗಳ ಬಗ್ಗೆ ಹೆಚ್ಚು ಒತ್ತು ನೀಡುವುದನ್ನು ಕೈಬಿಟ್ಟಿರುವ ಸರ್ಕಾರವು ಕಾರ್ಪೊರೇಟ್ ಲಾಭವನ್ನು ಖಾತರಿ ಪಡಿಸುವ ಮತ್ತು ಅದಕ್ಕೆ ಯಾವುದೇ ಅಡೆ ತಡೆಗಳು ಅಗದಂತೆ , ಕಾರ್ಮಿಕರಿಗೆ ಇರುವ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಕಾರ್ಮಿಕ ವರ್ಗ ಎಚ್ಚೆತ್ತು ಹಕ್ಕುಗಳ ರಕ್ಷಣೆಗೆ ಮುಂದಾವುದು ಅತ್ಯಗತ್ಯ ಎಂದರು.
ಭಾನುವಾರ ಮಧ್ಯಾನ್ನ ತುಮಕೂರು ನಗರದ ಜನ ಚಳುವಳಿ ಕೇಂದ್ರದಲ್ಲಿ ಸಿಐಟಿಯು – ಪ್ರಗತಿ ಕಾನೂನು ಕೇಂದ್ರ ಜಂಟಿಯಾಗಿ ಅಯೋಜಿಸಿದ್ದ “ಕಾರ್ಮಿಕ ಕಾನೂನುಗಳ ಬದಲಾವಣೆ- ಕಾರ್ಮಿಕರಿಗೆ ಇರುವ ಸವಾಲುಗಳು” ಕುರಿತು ಉಪನ್ಯಾಸವನ್ನು ನೀಡಿದರು. ಸರಳೀಕರಣದ ಹೆಸರಲ್ಲಿ ಕಾರ್ಮಿಕ ಕಾನೂನುಗಳ ಮೂಲ ತಿರುಳನ್ನು ತಿರುಚಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡುವ ಅಶಯವನ್ನು ಈ ತಿದ್ದುಪಡಿ ಸ್ವಷ್ಟವಾಗಿ ಹೊಂದಿದೆ ಎಂದು ಅವರು ಅರೋಪಿಸಿದರು. ಕಾರ್ಮಿಕರಲ್ಲಿ ರಾಜಕೀಯ ಅರಿಯು ಮೂಡದೆ ಇರುವುದರ ಪ್ರತೀಕ ಪರಿಸ್ಥಿತಿ ಹೀಗಿದೆ. ಕಾರ್ಮಿಕ ವರ್ಗ ರಾಜಕೀಯ ಅರಿವು ಪಡೆದು ತನ್ನ ಪರ ನೀತಿಗಳನ್ನು ಜಾರಿಮಾಡದೆ ಇರುವ ಶಕ್ತಿಗಳಿಗೆ ಬೆಂಬಲಿಸದೆ ಇರುವ ನಡೆಗಳು ಅಗತ್ಯ ಎಂದರು.
ವೇದಿಕೆಯಲ್ಲಿ ಭೋದಕೇತರ ನೌಕರರ ಸಂಘದ ಟಿ.ಜಿ ಶಿವಲಿಂಗಯ್ಯ, ತುಮಕೂರು ಪೌರ ಕಾರ್ಮಿಕರ ಸಂಘದ ನಟರಾಜು, ಹಿರಿಯ ವಕೀಲರಾದ ಸತ್ಯನಾರಾಯಣ, ಪೀಟ್ ವೇಲ್ ಕಾರ್ಮಿಕರ ಸಂಘದ ಸುಜೀತ್ ನಾಯಕ್, ಭಿಮರಾಜು,ಮುನಿಸಿಪಲ್ ಕಾರ್ಮಿಕರ ಸಂಘದ ಶ್ರೀನಿವಾಸ್ ಅವರು ಇದ್ದರು. ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಸೈಯದ್ ಮುಜೀಬ್ ಅಧ್ಯಕ್ಷತೆ ವಹಿಸಿದ್ದರು. ಅರಂಭದಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಎ.ಲೊಕೇಶ್ ಅವರು ಸ್ವಾಗತಿಸಿ, ಎನ್. ಕೆ. ಸುಬ್ರಮಣ್ಯ ವಂದಿಸಿದರು



