
ತುರುವೇಕೆರೆ: ತಾಲ್ಲೂಕಿನ ಸೂಳೇಕೆರೆ ಗ್ರಾಮದ ಇತಿಹಾಸ ಪ್ರಸಿದ್ದ ಭದ್ರಕಾಳಿ ಮತ್ತು ವೀರಭದ್ರಸ್ವಾಮಿಯ ಅಗ್ನಿಕೊಂಡ ಜಾತ್ರಾ ಮಹೋತ್ಸವವು ಸಾವಿ ರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಬೆಳ ಗಿನ ಜಾವದಲ್ಲಿ ಬಹಳ ವಿಜೃಂಭಣೆಯಿAದ ನಡೆ ಯಿತು.
ಅಗ್ನಿಕೊಂಡದ ಅಂಗವಾಗಿ ಮಂಗಳವಾರ ಸಂಜೆ ಮೂಲದೇವರಿಗೆ ಅಕ್ಕಿಪೂಜೆ ಜರುಗಿತು. ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆಯೊAದಿಗೆ ಕಳಸ ಪೂಜೆ, ಗಂಗಾಪೂಜೆ, ಮಡಿ ಸಂತರ್ಪಣೆ ನೆರವೇರಿತು.
ವೀರಭದ್ರ ಸ್ವಾಮಿಗೆ ಬೆಳ್ಳಿ ಕಿರೀಟಧಾರಣೆಯನ್ನು ಧಾರ್ಮಿಕ ವಿದಿವಿಧಾನಗಳೊಂದಿಗೆ ಭಕ್ತರು ನೆರ ವೇರಿಸಿದರು. ನಂತರ ವಿದ್ಯುತ್ ದೀಪಗಳಿಂದ ಅಲಂಕೃತವಾದ ಮುತ್ತಿನ ಪಲ್ಲಕ್ಕಿಯಲ್ಲಿ ದೇವರನ್ನು ಕೂರಿಸಿ ಧ್ವಜಕುಣಿತ, ಲಿಂಗದ ವೀರರ ಕುಣಿತ, ವೀರಗಾಸೆ, ಕಹಳೆವಾದ್ಯ ಸೇರಿದಂತೆ ವಿಭಿನ್ನ ಜಾನಪದ ಕಲಾ ತಂಡಗಳೊAದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯನ್ನು ಅದ್ದೂ ರಿಯಿಂದ ಸಾಗಿಸಲಾಯಿತು.
ಬುಧವಾರ ಮುಂಜಾನೆ ೫ ಗಂಟೆಗೆ ಅಗ್ನಿಕೊಂಡ ಪ್ರಾರಂಭವಾಗಿ ಮೊದಲು ವೀರಭ ದ್ರಸ್ವಾಮಿ ಹಾಗೂ ಭದ್ರಕಾಳಿದೇವಿಯನ್ನು ಸಾವಿರಾರು ಭಕ್ತರ ಜಯಘೋಷದೊಂದಿಗೆ ಅಗ್ನಿಕೊಂಡ ಹಾಯಿಸಲಾಯಿತು.
ಅಗ್ನಿಕೊಂಡ ಮಹೋತ್ಸವಕ್ಕೆ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರಿಂದ ಸಾವಿರಾರು ಭಕ್ತರು ಶಾಂತಿಯುತವಾಗಿ ಸರದಿಯಲ್ಲಿ ನಿಂತು ಕೊಂಡಹಾಯ್ದರು.
ಸ್ಥಳದಲ್ಲಿ ಅಗ್ನಿಶಾಮಕ ದಳ, ಆಂಬುಲೆನ್ಸ್ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು ಯಾವುದೇ ಅಹಿತಕರ ಘಟನೆಗೆ ಆಸ್ಪದವಿಲ್ಲದಂತೆ ಶಾಂತಿಯುತವಾಗಿ ನೆರವೇರಿತು. ನೂರಾರು ತೆಂಗಿನಕಾಯಿ ಹೊಡೆಯುವ ಮೂಲಕ ಭಕ್ತರು ತಮ್ಮ ಹರಕೆ ತೀರಿಸಿದರು. ಎಲ್ಲಾ ಭಕ್ತರಿಗೂ ಅನ್ನಧಾನ ಹಾಗೂ ಬೆಳಗಿನ ಪ್ರಸಾದದ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎನ್.ಎ. ಕುಂಞ ಅಹಮದ್, ಜನಪ್ರತಿನಿಧಿಗಳು, ಮುಖಂ ಡರು, ಸೂಳೇಕೆರೆ ಮತ್ತು ಸೂಳೇಕೆರೆ ಪಾಳ್ಯ ಗ್ರಾಮಸ್ಥರು, ಪಟ್ಟಣದ ಭಕ್ತರು ಅಗ್ನಿ ಕೊಂಡದಲ್ಲಿ ಪಾಲ್ಗೊಂಡಿದ್ದರು.



