BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ
  • ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ
  • ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್
  • ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ
  • ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್
  • ಭೂಸ್ವಾಧೀನಕ್ಕೆ ಹಣದ ಬದಲು ಬದಲಿ ಭೂಮಿ ನೀಡಿ
  • ಪಂಚಾಯತಿ ಅಧಿಕಾರಿಗಳು ದಲಿತ ವಿರೋಧಿಗಳು: ಸಿದ್ದು ಸೂರನಹಳ್ಳಿ
  • ಶಿರಾ ತಾಲ್ಲೂಕಿಗೆ ಜಿಪಂ ಸಿಇಒ ಭೇಟಿ: ಕಾಮಗಾರಿಗಳ ಪರಿಶೀಲನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ದಲಿತರಲ್ಲಿ ಅರಿವಿನ ಕಿಡಿ ಹೊತ್ತಿಸಿದ ಮಹಾಡ್ ಅತ್ಯಗ್ರಹ: ಡಾ.ನಾಗಭೂಷಣ್ ಬಗ್ಗನಡು ಹೇಳಿಕೆ
ತುಮಕೂರು

ದಲಿತರಲ್ಲಿ ಅರಿವಿನ ಕಿಡಿ ಹೊತ್ತಿಸಿದ ಮಹಾಡ್ ಅತ್ಯಗ್ರಹ: ಡಾ.ನಾಗಭೂಷಣ್ ಬಗ್ಗನಡು ಹೇಳಿಕೆ

By News Desk BenkiyabaleUpdated:March 21, 2025 4:19 pm

ತುಮಕೂರು: ಮಹಾಡ್ ಕೆರೆ ನೀರು ಮುಟ್ಟಿದ ದಿನ, ದಲಿತರ ಅರಿವಿನ ಪ್ರಜ್ಞೆ ವಿಸ್ತರಣೆಯಾದ ದಿನ ಎಂದು ತುಮಕೂರು ವಿವಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು ಅಭಿಪ್ರಾಯಪಟ್ಟರು.

ತುಮಕೂರು ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ರ‍್ನಾಟಕ ದಲಿತ ಸಂರ‍್ಷ ಸಮಿತಿ(ರಿ), ಅಂಬೇಡ್ಕರ್ ವಾದ ತುಮಕೂರು ಜಿಲ್ಲಾ ಸಮಿತಿ, ರಾಜ್ಯ ಸಮಿತಿಯ ಸದಸ್ಯರಾದ ಕುಂದೂರು ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಭಾರತದ ಅಸ್ಪೃಷ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ್ ಸತ್ಯಾಗ್ರಹ ನೆನಪು ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾಡ್ ಸತ್ಯಾಗ್ರಹದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ರಕ್ತ ರಹಿತ ಕ್ರಾಂತಿಯ ಮೂಲಕ ಪ್ರಕೃತಿಯ ಮೇಲೆ ದಲಿತ ಸಮುದಾಯದ ಹಕ್ಕು ಪ್ರತಿಪಾದಿಸಿದರು. ಭಾರತದ ದಲಿತರ ಪಾಲಿಗೆ ೧೯೨೭ರ ಮರ‍್ಚ್ ೨೦ ರಂದು ಮಹಾಡ್‌ನ ಚೌದರ ಕೆರೆ ನೀರು ಮುಟ್ಟುವುದು ಮತ್ತು ಡಿಸೆಂಬರ್ ೨೭ ರಂದು ಮನುಸೃತಿಯನ್ನು ಸುಟ್ಟು ಹಾಕುವ ಮೂಲಕ ಭೌತಿಕವಾಗಿ ಮತ್ತು ಬೌದ್ಧಿಕವಾಗಿ ದಲಿತರನ್ನು ಎಚ್ಚರಿಸಿದ ರ‍್ಷವಾಗಿದೆ.ಈ ಘಟನೆ ನಡೆದು ಸುಮಾರು ೯೮ ರ‍್ಷಗಳು ಸಂದಿವೆ. ಇಂದು ದಲಿತರ ಸ್ಥಿತಿಗತಿ ಏನಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ದಿನವಾಗಿದೆ ಎಂದರು.

ಚರಕ ಆಸ್ಪತ್ರೆಯ ವೈದ್ಯರಾದ ಡಾ.ಬಸವರಾಜು ಮಾತನಾಡಿ ಸಂಪ್ರದಾಯ, ಕಟ್ಟುಪಾಡುಗಳ ಹೆಸರಿನದಲ್ಲಿ ಈ ನೆಲದ ದಲಿತರನ್ನು ಪ್ರಾಣಿ, ಪಕ್ಷಿಗಳಿಗಿಂತಲೂ ಕೀಳಾಗಿ ಕಾಣುತ್ತಿದ್ದ ಚರ‍್ತುರ‍್ಣದ ವ್ಯವಸ್ಥೆಯ ವಿರುದ್ದ ಮೊದಲ ಹೋರಾಟವೇ ಮಹಾಡ್‌ನ ಚೌಧ‌ರ್ ಕೆರೆ ನೀರು ಮುಟ್ಟುವ ಐತಿಹಾಸಿಕ ಚಳವಳಿಯಾಗಿದೆ ಎಂದರು.

ಹಣಬಲ, ತೋಳ್ಳಲಗಳಿಂತ,ಬುದ್ದಿಬಲದ ಮೂಲಕವೇ ಪ್ರಕೃತಿಯಲ್ಲಿನ ಎಲ್ಲಾ ವಸ್ತುಗಳ ಮೇಲೆ ದಲಿತರಿಗೂ ಸಮಾನ ಹಕ್ಕಿದೆ ಎಂದು ಪ್ರತಿಪಾದಿಸಿದ ಮಹತ್ವದ ದಿನವಿದು.ಇದರ ಜೊತೆಗೆ,ಈ ಅಸಮಾನತೆಗೆ ಕಾರಣವಾದ ಮನುಸೃತಿಯನ್ನು ಸುಡುವ ಮಹತ್ವದ ಕ್ರಾಂತಿಗೆ ಮುನ್ನುಡಿ ಬರೆದ ದಿನ ಹಾಗಾಗಿಯೇ ಇಂದು ಜರ‍್ತುರ‍್ಣದ ಮೂಲವಾದ ಮನುಸೃತಿಯನ್ನು ಸುಟ್ಟು,ಸಮಾನತೆಯ ಸಂಕೇತವಾದ ಪ್ರಕೃತಿಗೆ ನೀರೇರುವ ಮೂಲಕ ಈ ದಿನವನ್ನು ನೆನಪು ಮಾಡಿಕೊಂಡಿದ್ದೇವೆ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ೧೯೨೭ರ ಮರ‍್ಚ್ ೨೦ರಂದು ಸಾಂಕೇತಿಕವಾಗಿ ಚೌದರ್ ಕೆರೆಯ ನೀರನ್ನು ಮುಟ್ಟುವ ಮೂಲಕ ಪಂಚಭೂತಗಳಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ ಎಂದು ಪ್ರತಿಪಾದಿಸಿ ಹಂಚಿದ ಹಣತೆ ಇಂದು ದೊಡ್ಡ ಬೆಳಕುಗಳಾಗಿ, ದಲಿತರಲ್ಲಿ ಹಲವಾರು ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ.ಆದರೆ ಕಾನೂನಿನ ಮೂಲಕ ರಕ್ಷಣೆ ಇದ್ದರೂ, ಕೊಳಕು ಮನಸ್ಥಿತಿಗಳಲ್ಲಿ ಬದಲಾವಣೆ ಕಾಣದೆ, ಇಂದಿಗೂ ಜಾತಿಯ ಹೆಸರಿನಲ್ಲಿ ದರ‍್ಜನ್ಯ ದಬ್ಬಾಳಿಕೆಗಳ ನಡೆಯುತ್ತಿವೆ.ದಲಿತರು ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ ಅವರನ್ನು ದೇವರಾಗಿಸಲು ಹೊರಟ್ಟಿದ್ದು, ಅವರ ವಿಚಾರಗಳನ್ನು ಪಸರಿಸುವ ಮೂಲಕ ಅವರನ್ನು ವಿಶ್ವಮಾನವರನ್ನಾಗಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಡಾ.ಬಸವರಾಜು ವಿಷಾದ ವ್ಯಕ್ತ ಪಡಿಸಿದರು.

ಸಾಮಾಜಿಕ ಹೋರಾಟಗಾರ ವಿ.ಎಲ್.ನರಸಿಂಹಮರ‍್ತಿ ಮಾತನಾಡಿ, ಚೌದ‌ರ್ ಕೆರೆಯ ನೀರು ಮುಟ್ಟುವ ಮೂಲಕ ನಡೆದ ದಲಿತರ ಹಕ್ಕು ಪ್ರತಿಪಾದನಾ ಚಳವಳಿ ನಡೆದು ಶತಮಾನಗಳಾಗುತ್ತಾ ಬಂದಿದ್ದರೂ ಇಂದಿಗೂ ದಲಿತರು ತಮ್ಮ ಹಕ್ಕುಗಳನ್ನು ಸ್ಥಾಪಿಸಲು ಮುಂದಾದಾಗ ದರ‍್ಜನ್ಯ ದಬ್ಬಾಳಿಕೆಗಳಿಗೆ ಒಳಗಾಗುತ್ತಲೇ ಇದ್ದಾರೆ. ನೀರು, ಆಹಾರ, ಭೂಮಿ, ಸ್ಮಶಾನದಂತಹ ವಿಚಾರಗಳಲ್ಲಿ ಇಂದಿಗೂ ರ‍್ಷಣೆಗಳು ನಡೆಯುತ್ತಲೇ ಇವೆ.ಅದಕ್ಕೆ ಅಂಬೇಡ್ಕರ್ ಏಕಕಾಲಕ್ಕೆ ಬ್ರಿಟಿಷ್ ಸರಕಾರದಲ್ಲಿ ದಲಿತರಿಗೆ ಸಮಾನ ಅವಕಾಶ,ಮೇಲ್ರ‍್ಗದ ಜನರಲ್ಲಿ ಸಾಮಾಜಿಕ ಸಮಾನತೆ ಹಾಗೂ ದಲಿತರಲ್ಲಿ ಕೀಳಿರಿಮೆ ತೊಡೆದುಕೊಳ್ಳುವ ಬೇಡಿಕೆಗಳನ್ನು ಮುಂದಿಟ್ಟಿದ್ದರು.ಆದರೆ ಇದುವರೆಗೂ ನಮ್ಮನ್ನು ಆಳಿದ ಯಾವ ರಾಜಕೀಯ ಪಕ್ಷಗಳು ಸಾಮಾಜಿಕ ಬದಲಾವಣೆಯ ಬಗ್ಗೆ ಮಾತನಾಡುವುದಿಲ್ಲ.ಅವುಗಳನ್ನು ಮುಂದುವರೆಸಿಕೊಂಡು ಹೋಗುವ ಮನಸ್ಥಿತಿಯಲ್ಲಿಯೇ ಇವೆ ಎಂದರು.

ಕರ‍್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಸಂರ‍್ಷ ಸಮಿತಿ ಅಂಬೇಡ್ಕ‌ರ್ ವಾದದ ರಾಜ್ಯ ಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ ವಹಿಸಿದ್ದರು.

ಗುಬ್ಬಿ ತಾಲೂಕು ದಲಿತ ಸಂರ‍್ಷ ಸಮಿತಿ ತಾಲೂಕು ಸಂಚಾಲಕರು ಹಾಗೂ ಭೂ ನ್ಯಾಯ ಮಂಡಳಿ ನಾಮಿನಿ ಸದಸ್ಯರಾದ ಚೇಳೂರು ಶಿವನಂಜಪ್ಪ ಹಾಗೂ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರು ಹಾಗೂ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ನಾಮ ನರ‍್ದೇಶಿತ ಸದಸ್ಯರಾದ ಕುದ್ದೂರು ಶ್ರೀಧ‌ರ್ ಅವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ದಸಂಸ ಸಂಚಾಲಕ ವಿರೂಪಾಕ್ಷ ಡ್ಯಾಗೇರಹಳ್ಳಿ, ಉಮಾಪ್ರಗತಿ ಪ್ರಥಮರ‍್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆಂಪರಾಜು,ಕೆಇಬಿ ದಲಿತ ನೌಕರರ ಒಕ್ಕೂಟದ ಸೋಮಶೇಖ‌ರ್ ಮತ್ತಿಹಳ್ಳಿ, ರ‍್ನಾಟಕ ಲಲಿತ ಕಲಾ ಆಕಾಡೆಮಿಯ ಮನುಚಕ್ರರ‍್ತಿ,ದಸಂಸ ಜಿಲ್ಲಾ ಸಂಚಾಲಕ ಕುಂದೂರು ಮುರುಳಿ, ಕೆ.ಹೆಚ್.ರಂಗನಾಥ ಕಂಟಲಗೆರೆ, ಶ್ರೀನಿವಾಸ್ ಹೆಗ್ಗೆರೆ,ಮಂಚಲದೊರೆ ಭಾಗ್ಯಮ್ಮ ಶಿವಮ್ಮ ಬಿ.ಹೆಚ್.ಕಾವಲ್ ಅವರುಗಳು ಉಪಸ್ಥಿತರಿದ್ದರು.

(Visited 1 times, 1 visits today)
Ambedkar BJP Congress Jds pavagada tumkur ಜಿಲ್ಲಾಧಿಕಾರಿ ಶುಭ ಕಲ್ಯಾಣ್
Previous ArticlePrevious Post
Next Article ಸಾಹೇ ವಿವಿಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ: ರಾಷ್ಟಿçÃಯ ತಾಂತ್ರಿಕ ಶಿಕ್ಷಣ ಅಭಿವೃದ್ಧಿ ಕಲಿಕೆಯಲ್ಲಿ ಮಹತ್ತರ ಸಾಧನೆ
News Desk Benkiyabale

Related Posts

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm news

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm news

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm news
ತಾಜಾ ಸುದ್ಧಿಗಳು
news

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm
news

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm
news

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm
news

ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ

October 16, 2026 4:52 pm
news

ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್

October 15, 2026 6:04 pm
news

ಭೂಸ್ವಾಧೀನಕ್ಕೆ ಹಣದ ಬದಲು ಬದಲಿ ಭೂಮಿ ನೀಡಿ

October 15, 2026 6:02 pm
Our Youtube Channel
Our Picks

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm

ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ

October 16, 2026 4:52 pm

ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್

October 15, 2026 6:04 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

By News Desk BenkiyabaleOctober 16, 2026 5:16 pm

ತುಮಕೂರು: ಜಾಗತೀಕರಣದ ಪ್ರಭಾವದಿಂದ ಪ್ರಾದೇಶಿಕ ಅಸ್ಮಿತೆಗಳು ಅಳಿಸಿಹೋಗುವ ಆತಂಕ ಎದುರಾಗಿರುವ ಇಂದಿನ ಸಂದರ್ಭದಲ್ಲಿ ನಾಟಕಗಳು, ವಿವಿಧ ರಂಗರೂಪಗಳು ನಮ್ಮ ಮೂಲ…

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm

ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ

October 16, 2026 4:52 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.