
ಹುಳಿಯಾರು: ಮಹಿಳೆಯರು ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ತಮ್ಮ ತಮ್ಮಲ್ಲಿ ಉಳಿತಾಯ ಮಾಡಿ ರಾಷ್ಟಿçÃಕೃತ ಬ್ಯಾಂಕಿನಲ್ಲಿಟ್ಟು ತಮ್ಮ ಉಳಿತಾಯ ಹಣದ ಅನುಗುಣವಾಗಿ ೨೦ ಲಕ್ಷ ರೂಗಳವರೆಗೆ ಆಧಾರ ರಹಿತ ಸಾಲ ಪಡೆಯಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಆರ್ಥಿಕ ಸೇರ್ಪಡೆ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ವಿ.ಹರಿಪ್ರಸಾದ್ ತಿಳಿಸಿದರು.
ಹಂದನಕೆರೆ ವಾಲ್ಮೀಕಿ ಭವನದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕ್ಷೇತ್ರ ಮಟ್ಟದ ಹಣಕಾಸು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಎಲ್ಲ ರಂಗಗಳಲ್ಲೂ ಮುಂದಿದ್ದು ದೇಶದ ಆರ್ಥಿಕತೆಗೆ ತಮ್ಮ ಮಹತ್ತರವಾದ ಕೊಡುಗೆಗಳನ್ನು ಕೊಟ್ಟಿದ್ದಾರೆ ಎಂದರು.
ತುಮಕೂರು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕರಾದ ಚೈತನ್ಯ ಕಂಚಿಬೈಲು ಮಾತನಾಡಿ ಆರ್‌ಬಿಐನ ಕ್ಷೇತ್ರ ಮಟ್ಟದ ಆರ್ಥಿಕ ಸೇರ್ಪಡೆ ಕಾರ್ಯಕ್ರಮವು ನಮ್ಮ ತುಮಕೂರು ಜಿಲ್ಲೆಯಲ್ಲಿ ಅದರಲ್ಲೂ ಹಿಂದುಳಿದ ಹೋಬಳಿಯಾದ ಹಂದನಕೆರೆಯಲ್ಲಿ ಮಾಡುತ್ತಿರುವುದು ನಮ್ಮ ನಿಮ್ಮೆಲ್ಲ ರ ಸೌಭಾಗ್ಯ ಎಂದು ತಿಳಿಸಿದರು.
ಭಾರತೀಯ ರಿಸರ್ವ್ ಬ್ಯಾಂಕಿನ ಆರ್ಥಿಕ ಸೇರ್ಪ ಡೆ ವಿಭಾಗದ ವ್ಯವಸ್ಥಾಪಕರಾದ ಅರುಣ್ ಕುಮಾರ್ ಮಾತನಾಡಿ ಮಹಿಳಾ ಸಂಘದ ಸದಸ್ಯರು ತಾವು ಪಡೆದ ಸಾಲಗಳನ್ನು ಸರಿಯಾಗಿ ಮರುಪಾವತಿ ಮಾಡುವುದರ ಜೊತೆಗೆ ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಾದ ಪ್ರಧಾನ ಮಂತ್ರಿ ಸುರ ಕ್ಷಾ ಹಾಗೂ ಜೀವನ ಜ್ಯೋತಿ ಯೋಜನೆಗಳ ಸದ್ಬಳ ಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ತುಮಕೂರು ಭಾರತೀಯ ಸ್ಟೇಟ್ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಬಾಮ್ ಶಂಕರ್ ಮಿಶ್ರ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕಿಶೋರ್, ಆರ್.ಎಂ.ಕುಮಾರಸ್ವಾಮಿ, ಮಂಜುನಾಥ್, ತಿಮ್ಮರಾಜು, ಡಿ.ರಾಮಚಂದ್ರ ಹಾಗೂ ಪ್ರೇಮಾನಂದ, ಹರೀಶ್ ಹಾಗೂ ಗ್ರಾಮೀಣ ಸೇವಾಕರ್ತರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕರಾದ ಮುನಿರಾಜ ಬ್ರಹ್ಮ, ಚಿನ್ನ, ಕೃಷ್ಣ ಸಾರಥಿ, ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸುನಿಲ್ ರಾಥೋಡ್, ಸತೀಶ್ ಮುಂತಾದವರು ಉಪಸ್ಥಿತರಿದ್ದರು.



