ತುರುವೇಕೆರೆ: ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ಬಸವ ಜಯಂತಿಯನ್ನು ಆ ಚರಿಸಲಾಯಿತು.
ಶಾಸಕ ಎಂ.ಟಿ.ಕೃಷ್ಣಪ್ಪನವರು ಬಸವಣ್ಣನವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ಸಮಾಜದ ವಿವಿಧ ಸ್ತರದ ಜನರು ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುವ ಮೂಲಕ ಅದರಲ್ಲೇ ಆಧ್ಯಾತ್ಮಿಕ ನೆಲೆಯನ್ನು ಕಂಡುಕೊಳ್ಳುವAತೆ ಮಾಡಿದ ಮಹಾನ್ ಜ್ಞಾನಿಯಾಗಿದ್ದರು.
ನಡೆ ನುಡಿಗಳು ಒಂದಾದಾಗ ಮಾತ್ರ ವ್ಯಕ್ತಿತ್ವ ಪರಿಪೂರ್ಣಗೊಳ್ಳಲು ಸಾದ್ಯವಿದೆ ಎಂದು ನಂಬಿದ್ದವರು. ‘ಇವನಾರವ ಇವನಾರವ ಎನ್ನದೆ, ಇವ ನಮ್ಮವ’ ಎನ್ನುವ ಮೂಲಕ ಸಮಾಜದಲ್ಲಿ ಮೇಲು ಕೀಳು ಎಂಬ ಬೇಧಬಾವ ಬಿಡಬೇಕು. ಸಾಮಾಜಿಕ, ಧಾರ್ಮಿಕವಾಗಿ ಎಲ್ಲರೂ ಸಮಾಜದಲ್ಲಿ ಸರಿಸಮಾನತೆ ಜೀವನ ನಡೆಸ ಬೇಕು. ಢಾಂಬಿಕತೆ ತೊರೆದು ನಿಷ್ಕಲ್ಮಶ ಭಕ್ತಿಯನ್ನು ಹೊಂದ ಬೇಕು. ಹೆಣ್ಣು, ಗಂಡಿನ ನಡುವೆ ಯಾವುದೇ ಬೇಧ ತೊರಬಾರದು ಇಬ್ಬರ ಸಮಾನರು. ಮಹಿಳೆಗೆ ಶಿಕ್ಷಣದ ಜೊತೆಗೆ ಧಾರ್ಮಿಕ ಸ್ವಾತಂತ್ರ‍್ಯವನ್ನು ನೀಡಬೇಕು ಎಂದು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ ಎಂದರು.
ತಹಶೀಲ್ದಾರ್ ಎನ್.ಎ.ಕುಂಞಅಹಮದ್ ಮಾತನಾಡಿ, ಬಸವಾಧಿ ಶರಣರ ವಚನಗಳು ಮನುಷ್ಯನ ಜೀವನಕ್ಕೆ ಕೈಗನ್ನಡಿ ಇದ್ದಂತೆ ಹಾಗಾಗಿ ವಚನಗಳಲ್ಲಿನ ಮೌಲ್ಯವು ಎಲ್ಲ ಕಾಲಕ್ಕೂ ಸಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಅಖಿಲಭಾರತ ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಅಧ್ಯಕ್ಷ ಕುಮಾರ ಸ್ವಾಮಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಶಿರಸ್ಥೆದಾರ್ ಸುನಿಲ್ ಕುಮಾರ್, ಸಮುದಾಯದ ಮುಖಂಡರಾದ ದೇವಮ್ಮ, ದಂಡಿನಶಿವರ ಕುಮಾರ್, ಮಲ್ಲೂರ್ ತಿಮ್ಮೇಶ್, ಬೋರಪ್ಪ, ಕಸಬಾ ಕಂದಾಯ ಅಧಿಕಾರಿ ಶಿವಕುಮಾರ್, ಸಿಬ್ಬಂದಿ ವತ್ಸಲಾ, ಇನ್ನಿತರರು ಪಾಲ್ಗೊಂಡಿದ್ದರು.
(Visited 1 times, 1 visits today)