ಹುಳಿಯಾರು: ಕ್ರಾಂತಿಕಾರಿ ವಿಚಾರದ ವ್ಯಕ್ತಿಯಾದ ಬಸವಣ್ಣನವರು ಜಗತ್ತಿನಲ್ಲಿ ಸಮಾನತೆಯನ್ನು ಸ್ಥಾಪಿಸಲು ಶ್ರಮಿಸಿದ ಶಕ್ತಿ ಹಾಗೂ ಲಿಂಗ ತಾರತಮ್ಯವನ್ನು ವಿರೋಧಿಸಿದ ಮೊದಲ ವ್ಯಕ್ತಿಯಾಗಿ ಜಗತ್ತಿಗೇ ಜ್ಯೋತಿಯಾದವರು ಎಂದು ತಿಮ್ಲಾಪುರ ಗ್ರಾಪಂ ಸದಸ್ಯ ನಂದಿಹಳ್ಳಿ ದೇವರಾಜು ತಿಳಿಸಿದರು.
ಹುಳಿಯಾರು ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್À ಅಸೋಸಿಯೇಷನ್ ವತಿಯಿಂದ ಬುಧವಾರ ಆಯೋಜಿಸಿದ್ದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುಮಾರು ೮೦೦ ವರ್ಷಗಳ ಹಿಂದೆ ಸಮಾಜದಲ್ಲಿ ಅಸಮಾನತೆ ತಾಂಡವಾಡುತ್ತಿದ್ದಾಗ ಅದನ್ನು ತೊಡೆದುಹಾಕಲು ಅವಿರತವಾಗಿ ಶ್ರಮಿಸಿದವರು. ತಮ್ಮ ತತ್ವ, ವಚನಗಳ ಮೂಲಕ ಉತ್ತಮ ಸಂದೇಶವನ್ನು ಸಮಾಜಕ್ಕೆ ನಿರಂತರವಾಗಿ ನೀಡಿದರು. ಅವುಗಳನ್ನು ನಾವು ನಿಜಜೀವನದಲ್ಲಿ ಅಳವಡಿಸಿಕೊಂಡರೆ ಬಸವಣ್ಣನವರು ಕಂಡ ಸುಂದರ ಸಮಾಜ ನಿರ್ಮಿಸಬಹುದು ಎಂದರು.
ಜಯಕರ್ನಾಟಕ ಸಂಘಟನೆಯ ಮೋಹನ್‌ಕುಮಾರ್ ರೈ ಮಾತನಾಡಿ ಬಸವ ಜಯಂತಿಯAದು ಮಾತ್ರ ಬಸವಣ್ಣನವರನ್ನು ನೆನಪಿಸಿ ಕೊಂಡರೆ ಸಾಲದು. ನಿತ್ಯ ಬದುಕಿನಲ್ಲಿ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಕಾಯಕದಲ್ಲಿಯೆ ಭಗವಂತನನ್ನು ಕಾಣುವ ಗುಣವನ್ನು ನಾವು ಬೆಳೆಸಿ ಕೊಳ್ಳಲು ಪ್ರಯತ್ನಿಸಬೇಕು ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಪ್ರಕಾಶ್, ಅಸೋಸಿಯೇಷನ್‌ನ ರುದ್ರಪ್ಪ, ನಂದಿಹಳ್ಳಿ ಶಿವು, ಮಂಜು, ಹೋಟಲ್ ದೇವರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

(Visited 1 times, 1 visits today)