ತುಮಕೂರು: ಅಖಿಲ ಭಾರತ ದಲಿತಾ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಮೇ ೧ ಕಾರ್ಮಿಕರ ದಿನಾಚರಣೆಯನ್ನು ಜಿಲ್ಲಾ ಕಛೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕಾರ್ಮಿಕರ ಕಾರ್ಯಕ್ಷಮತೆಯನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ ಪ್ರಪಂಚದಾದ್ಯAತ ಕಾರ್ಮಿಕರು ವಿವಿಧ ರೀತಿಯ ಕೆಲಸ ಕಾರ್ಯಗಳನ್ನು ನಿರ್ವಹಣೆ ಮಾಡುತ್ತಾ, ತಮ್ಮದೇ ಆದ ಕೊಡುಗೆಗಳನ್ನು ಈ ಭೂಮಿಗೆ ನೀಡುತ್ತಿದ್ದಾರೆ, ಆದರೆ ಕಾರ್ಮಿಕ ವರ್ಗವನ್ನು ಈ ಜಗತ್ತು ನೋಡುವ ದೃಷ್ಠಿಯೇ ಬೇರೆ, ಸಂಬಳ-ವೇತನ ಪಡೆದು ಕೆಲಸ ನಿರ್ವಹಣೆ ಮಾಡುವ ಪ್ರತಿಯೊಬ್ಬರೂ ಸಹ ಕಾರ್ಮಿಕರೇ ಎಂಬುದು ನನ್ನ ಭಾವನೆ, ಏಕೆಂದರೆ ಕಾರ್ಮಿಕ ಮಾಡುವ ಕೆಲಸ ಕಾರ್ಯಗಳು ವಿಭಿನ್ನವಾಗಿರುತ್ತವೆ, ಅವರವರ ಕಾರ್ಯಕ್ಷಮತೆ, ಬುದ್ಧಿಕ್ಷಮತೆ, ಬಲದ ಆಧಾರದ ಮೇಲೆ ಕಾರ್ಮಿಕರು ತಮ್ಮ ಕೆಲಸಗಳನ್ನು ನಿರ್ವಹಿಸುತ್ತಾರೆ, ಕಾರ್ಮಿಕರಲ್ಲದ ಭೂಮಿಯನ್ನು ಊಹಿಸಿಕೊಳ್ಳಲು ಅಸಾಧ್ಯವೆಂಬುದು ನನ್ನ ಭಾವನೆ ಎಂದು ತಿಳಿಸಿದರು.
ನಂತರ ಕಾರ್ಮಿಕ ಘಟಕದ ಅಧ್ಯಕ್ಷರಾದ ಟೈಲರ್ ಜಗದೀಶ್ ಮಾತನಾಡುತ್ತಾ ಕಾರ್ಮಿಕರಿಗೆ ತಮ್ಮ ಇಂತಿಷ್ಟ ಕಾನೂನುಗಳನ್ನು ನೀಡಿದ್ದಲ್ಲದೇ, ಕಾರ್ಮಿಕರ ಜೀವನೋದ್ಧಾರಕ್ಕಾಗಿ ಹಲವಾರು ನೀತಿ-ನಿಯಮಗಳನ್ನು ರೂಪಿಸಿಕೊಟ್ಟ ಡಾ. ಬಿ.ಆರ್.ಅಂಬೇ ಡ್ಕರ್‌ರವರನ್ನು ಈ ಸಂದರ್ಭದಲ್ಲಿ ನೆನೆಯುವುದು ಅತ್ಯವಶ್ಯಕ ಏಕೆಂದರೆ ಕಾರ್ಮಿಕರು ಇಂತಿಷ್ಟು ಗಂಟೆಗಳ ದುಡಿಯಬೇಕು, ಅವರ ಮಾಡುವಂತಹ ಕಾರ್ಯಗಳಿಗೆ ತಕ್ಕಂತೆ ವೇತನ ಸಂಬಳ ಪಡೆಯಬೇಕು ಸೇರಿದಂತೆ ಇನ್ನಷ್ಟು ಮಾರ್ಗಸೂಚಿಗಳನ್ನು ನೀಡಿದವರೇ ಅಂಬೇಡ್ಕರ್ ಎಂದು ಹೇಳಿದರೆ ತಪ್ಪಾಗಲಾರದು ಎಂದರು, ಆದರೆ ಕಾರ್ಮಿಕ ಕಾನೂನುಗಳನ್ನು ಕಾರ್ಮಿಕ ಸಮುದಾಯವೇ ಅರಿಯದಿರುವುದು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡುತ್ತ ಕಾರ್ಮಿಕರಿಗೆ ಕೇವಲ ೮ ಗಂಟೆಯ ದುಡಿಮೆ, ನಿಗದಿತ ಸಂಬಳ, ಅಧಿಕ ದುಡಿಮೆಗೆ ಅಧಿಕ ವೇತನ, ಸಂಬಳ ಸಹಿತ ರಜೆ, ಮಹಿಳಾ ಕಾರ್ಮಿಕರಿಗೂ ಸಮಾನ ವೇತನ, ಹೆರಿಗೆ ಭತ್ಯ, ಸಂಬಳ ಸಹಿತ ಹೆರಿಗೆ ರಜಾ, ಇ.ಎಸ್.ಐ, ಮತ್ತೆ ಪಿ.ಎಫ್, ಕಾರ್ಮಿಕರ ಕಲ್ಯಾಣ ನಿಧಿ, ಕಾರ್ಮಿಕರಿಗಾಗಿ ವಿಶೇಷ ಆಸ್ಪತ್ರೆ, ವಿಶೇಷ ಭತ್ಯೆ, ಉದ್ಯೋಗ ಭದ್ರತೆ, ಉಚಿತ ವಿಮೆ, ಕಾರ್ಮಿಕ ಮಕ್ಕಳ ಕಲ್ಯಾಣ ನಿಧಿ ಹೀಗೇ ಹೇಳುತ್ತಾ ಹೋದರೆ ಒಂದೇ ಎರಡೇ ಬಾಬಾ ಸಾಹೇಬರು ಬ್ರಿಟೀಷ್ ಸರ್ಕಾ ರದಲ್ಲಿ “ಕಾರ್ಮಿಕ ಸಚಿವರಾಗಿ” ಬಹುದೊಡ್ಡ ಕ್ರಾಂತಿಯನ್ನೇ ಮಾಡಿ ದಂತಹ ವ್ಯಕ್ತಿ ಎಂದರು, ಇಂದು ಕೈಗಾರಿಕೆಗಳಲ್ಲಿ, ಸರ್ಕಾರಿ, ಅರೆಸರ್ಕಾರಿ, ಖಾಸಗಿ ಮತ್ತು ಕೃಷಿ ಹೀಗೆ ಯಾವುದೇ ಕ್ಷೇತ್ರದ ಉದ್ಯೋಗಿಗಳು ಆನಂದದಿAದ ಅನುಭವಿಸುತ್ತಿರುವ ಎಲ್ಲಾ ಕೊಡುಗೆಗಳು ಬಾಬಾ ಸಾಹೇಬರ ಋಣ ಎಂಬುದನ್ನು ಮರೆತಿದ್ದಾರೆ ಎಂದರು. ಕಾರ್ಮಿಕರು ಯಾವ ಜಾತಿ, ಯಾವ ಧರ್ಮ, ಯಾವ ಕುಲ ಎಂದು ಯಾವುದನ್ನೂ ನೋಡದೇ ಬಾಬಾ ಸಾಹೇಬರು ತಮ್ಮ ಶಕ್ತಿ ಬದ್ದತೆಗಳನ್ನು ಕಾರ್ಮಿಕ ಕಲ್ಯಾಣಕ್ಕಾಗಿ ಮೀಸಲಿಟ್ಟರು. ಆದರೆ ಕೃತಘ್ನ ಮತ್ತು ಜಾತಿರೋಗದ ಕಾರ್ಮಿಕರಿಗೆ ಬಾಬಾಸಾಹೇಬರು ಅಸ್ಪöÈಶ್ಯರಾಗಿಯೇ ಕಂಡರು.
ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರು ಎನ್.ಕೆ.ನಿಧಿ ಕುಮಾರ್, ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷರು ಟೈಲರ್ ಜಗದೀಶ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಕಾರ್ಯಧ್ಯಕ್ಷರು ಕೆಸ್ತೂರು ನರಸಿಂಹಮೂರ್ತಿ, ಜಿಲ್ಲಾ ಉಪಾಧ್ಯಕ್ಷರು ಲಕ್ಷಿ÷್ಮನಾರಾಯಣ ಎಸ್, ಅಂಬೇಡ್ಕರ್ ಪ್ರಚಾರ ಸಮಿತಿ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರು ಕಿರಣ್ ವೈ ಎಸ್, ತುಮಕೂರು ನಗರ ಅಧ್ಯಕ್ಷರು ಮನು ಟಿ.ಎಲ್, ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಕಾರ್ಮಿಕ ಘಟಕದ ತುಮಕೂರು ತಾಲೂಕು ಅಧ್ಯಕ್ಷರು ಶಿವಣ್ಣ, ಅಂಬೇಡ್ಕರ್ ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷರು ರಂಗಸೋಮಯ್ಯ ಕೆ.ಎಸ್., ಪದಾ ಧಿಕಾರಿಗಳಾದ ದರ್ಶನ್ ಬಿ.ಆರ್. ಗೋವಿಂದರಾಜ್, ಒಕ್ಕೋಡಿ ಮಹೇಶ್, ಸಿದ್ದಲಿಂಗಯ್ಯ ಕೆ.ಎನ್, ಹನುಮನರಸಯ್ಯ, ವಾಸು ಇನ್ನು ಮುಂತಾದವರು ಉಪಸ್ಥಿತರಿದ್ದರು.

(Visited 1 times, 1 visits today)
FacebookTwitterInstagramFacebook MessengerEmailSMSTelegramWhatsapp